ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿರಿಕ್ ಮಾಡಿದ ಇಂಗ್ಲೆಂಡ್‌ನ ಆ ಆಟಗಾರನಿಗೆ ಮೈದಾನದಲ್ಲೇ ಗುದ್ದಲು ಪ್ಲಾನ್ ಮಾಡಿದ್ರು ರೋಹಿತ್-ಪಂತ್!

IND vs ENG: Rohit Sharma and Rishabh Pant hilariously planned to hit David Willey in 2nd T20

ಸದ್ಯ ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಆಯೋಜನೆಯಾಗಿರುವ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಮೊದಲನೆಯದಾಗಿ ಇದಕ್ಕೂ ಮುನ್ನ ನಡೆದ ಕಳೆದ ವರ್ಷದಿಂದ ಮುಂದೂಡಲ್ಪಟ್ಟಿದ್ದ ಐದನೇ ಟೆಸ್ಟ್ ಪಂದ್ಯದಲ್ಲಿ ಸೋತಿದ್ದ ಟೀಂ ಇಂಡಿಯಾ ಇದೀಗ ಟಿ ಟ್ವೆಂಟಿ ಸರಣಿಯನ್ನು ಕೈವಶ ಮಾಡಿಕೊಳ್ಳುವುದರ ಮೂಲಕ ಸೇಡನ್ನು ತೀರಿಸಿಕೊಂಡಿದೆ.

ಇತಿಹಾಸದಲ್ಲಿ ಯಾವ ನಾಯಕನೂ ಮಾಡಿರದ ದಾಖಲೆ ಮಾಡಿದ ರೋಹಿತ್; ಕೊಹ್ಲಿ ದಾಖಲೆಯೂ ಉಡೀಸ್!ಇತಿಹಾಸದಲ್ಲಿ ಯಾವ ನಾಯಕನೂ ಮಾಡಿರದ ದಾಖಲೆ ಮಾಡಿದ ರೋಹಿತ್; ಕೊಹ್ಲಿ ದಾಖಲೆಯೂ ಉಡೀಸ್!

ಸೌತಾಂಪ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಅಂಗಳದಲ್ಲಿ ಜುಲೈ 7ರಂದು ನಡೆದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಬರೋಬ್ಬರಿ 50 ರನ್‌ಗಳಿಂದ ಗೆಲುವನ್ನು ಕಂಡ ಟೀಮ್ ಇಂಡಿಯಾ ನಿನ್ನೆ ( ಜುಲೈ 9 ) ಎಡ್ಜ್ ಬ್ಯಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ 49 ರನ್‌ಗಳ ಜಯ ಸಾಧಿಸುವುದರ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.

ಈತನನ್ನು ಹೊರಹಾಕಿ ಕೊಹ್ಲಿಗೆ ಆರಂಭಿಕನ ಸ್ಥಾನ ಕೊಡಿ ರನ್ ಹೊಳೆ ಹರಿಯುತ್ತದೆ ಎಂದ ಇಂಗ್ಲೆಂಡ್ ಕ್ರಿಕೆಟಿಗ!ಈತನನ್ನು ಹೊರಹಾಕಿ ಕೊಹ್ಲಿಗೆ ಆರಂಭಿಕನ ಸ್ಥಾನ ಕೊಡಿ ರನ್ ಹೊಳೆ ಹರಿಯುತ್ತದೆ ಎಂದ ಇಂಗ್ಲೆಂಡ್ ಕ್ರಿಕೆಟಿಗ!

ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು ಹಾಗೂ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರವೀಂದ್ರ ಜಡೇಜಾ ಅಜೇಯ 46 ರನ್‌ಗಳ ಅಬ್ಬರದ ಪ್ರದರ್ಶನದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 171 ರನ್‌ಗಳ ಗುರಿಯನ್ನು ನೀಡಿತು. ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಇಂಗ್ಲೆಂಡ್ 17 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲ್ ಔಟ್ ಆಗಿ ಹೀನಾಯ ಸೋಲನ್ನು ಕಂಡು ಮುಖಭಂಗಕ್ಕೊಳಗಾಯಿತು. ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಬ್ಯಾಟಿಂಗ್ ಮಾಡುವ ವೇಳೆ ಎದುರಾಳಿ ಇಂಗ್ಲೆಂಡ್ ತಂಡದ ಬೌಲರ್ ಓರ್ವನ ಕುರಿತು ಮೈದಾನದಲ್ಲಿ ಚರ್ಚಿಸಿದ ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆತನಿಗೆ ಇಬ್ಬರೂ ಸಹ ಗುದ್ದಲು ಯೋಜನೆ ಸಂಭಾಷಣೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೊದಲ ಓವರ್‌ನಲ್ಲೇ ಕಿರಿಕ್

ಮೊದಲ ಓವರ್‌ನಲ್ಲೇ ಕಿರಿಕ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದರು. ಇಂಗ್ಲೆಂಡ್ ತಂಡದ ಡೇವಿಡ್ ವಿಲ್ಲಿ ಪಂದ್ಯದ ಮೊದಲ ಓವರ್ ಎಸೆದರು. ಈ ಓವರ್‌ನ ಎರಡನೇ ಎಸೆತಕ್ಕೆ ರೋಹಿತ್ ಶರ್ಮಾ ಸಿಂಗಲ್ ತೆಗೆದುಕೊಂಡರು ಹಾಗೂ ನಂತರ ಸ್ಟ್ರೈಕ್ ತೆಗೆದುಕೊಂಡ ರಿಷಭ್ ಪಂತ್ ಮೂರನೇ ಎಸೆತಕ್ಕೆ 1 ರನ್ ಕಲೆ ಹಾಕಿದರು. ಈ ಸಂದರ್ಭದಲ್ಲಿ ರಿಷಭ್ ಪಂತ್ ರನ್ ಓಡುವಾಗ ಬೌಲರ್ ಡೇವಿಡ್ ವಿಲ್ಲಿ ಅಡ್ಡ ಬಂದಿದ್ದಾರೆ ಹಾಗೂ ಇದನ್ನು ಸಹಿಸದ ರಿಷಭ್ ಪಂತ್ 'ಈತ ಓಡುವಾಗ ಅಡ್ಡ ಬರುತ್ತಿದ್ದಾನೆ' ಎಂದು ರೋಹಿತ್ ಶರ್ಮಾಗೆ ತಿಳಿಸಿದರು ಹಾಗೂ 'ಆತನಿಗೆ ಗುದ್ದಿ ಬಿಡಲಾ?' ಎಂದೂ ಸಹ ಇದೇ ವೇಳೆ ರಿಷಭ್ ಪಂತ್ ತಮಾಷೆಯಾಗಿ ಅನುಮತಿ ಕೇಳಿದರು.

ಖಂಡಿತವಾಗಿಯೂ ಗುದ್ದು ಎಂದ ರೋಹಿತ್!

ಖಂಡಿತವಾಗಿಯೂ ಗುದ್ದು ಎಂದ ರೋಹಿತ್!

ಹೀಗೆ ರಿಷಭ್ ಪಂತ್ ಕೇಳಿದ ತಮಾಷೆಯ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ 'ಖಂಡಿತವಾಗಿಯೂ ಗುದ್ದು, ಯಾಕಾಗಬಾರದು' ಎಂದು ಹೇಳಿದರು. ಈ ಇಬ್ಬರ ತಮಾಷೆಯ ಸಂಭಾಷಣೆ ಸ್ಟಂಪ್ ಮೈಕ್ ಮೂಲಕ ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕರ ಕಿವಿಗೆ ಬಿದ್ದಿದ್ದು, ಇಬ್ಬರ ಸಂಭಾಷಣೆ ಕೇಳಿ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದ್ದಾರೆ.

ಈ ರೀತಿ ಕ್ಯಾಚ್ ಡ್ರಾಪ್ ಮಾಡಿದ್ರೆ , ಮುಂದೆ ಹೇಗೆ!! | OneIndia Kannada
ಇಬ್ಬರು ಆರಂಭಿಕರಾಗಿ ಕಣಕ್ಕಿಳಿದದ್ದು ವಿಶೇಷ

ಇಬ್ಬರು ಆರಂಭಿಕರಾಗಿ ಕಣಕ್ಕಿಳಿದದ್ದು ವಿಶೇಷ

ಇನ್ನು ಈ ಪಂದ್ಯದಲ್ಲಿ ವಿಶೇಷವಾದ ಅಂಶವೆಂದರೆ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಇಬ್ಬರೂ ಸಹ ಆರಂಭಿಕ ಆಟಗಾರರಾಗಿ ಕಣಕ್ಕಿಳಿದದ್ದು. ಈ ಇಬ್ಬರೂ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ ಎಂದು ಯಾರೂ ಸಹ ಊಹಿಸಿರಲಿಲ್ಲ. ಇಬ್ಬರ ಜೋಡಿ 49 ರನ್‌ಗಳ ಜತೆಯಾಟವಾಡಿ ತಂಡಕ್ಕೆ ಉತ್ತಮ ಆರಂಭವನ್ನೇ ಕಟ್ಟಿಕೊಟ್ಟಿತು. ರೋಹಿತ್ ಶರ್ಮಾ 20 ಎಸೆತಗಳಲ್ಲಿ 31 ರನ್ ಗಳಿಸಿದರೆ, ರಿಷಭ್ ಪಂತ್ 15 ಎಸೆತಗಳಲ್ಲಿ 26 ರನ್ ಕಲೆ ಹಾಕಿದರು. ಈ ಮೂಲಕ ಈ ಜೋಡಿ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಪರ ಆರಂಭಿಸುವ ಭರವಸೆಯನ್ನು ಹುಟ್ಟು ಹಾಕಿದೆ.

Story first published: Sunday, July 10, 2022, 13:13 [IST]
Other articles published on Jul 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X