ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್‌ನಲ್ಲಿ ಶತಕ ಬಾರಿಸುವುದೇ ದೊಡ್ಡ ಸಾಧನೆಯಲ್ಲ; ಸುನಿಲ್ ಗವಾಸ್ಕರ್ ಮಾತಿನ ಮರ್ಮವೇನು?

IND vs ENG: Sunil Gavaskar Parises Rohit Sharma’s knock in the second Test

ಇತ್ತೀಚೆಗಷ್ಟೇ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು 151 ರನ್‌ಗಳಿಂದ ಸೋಲಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಭಾರತ vs ಇಂಗ್ಲೆಂಡ್: ಅಶ್ವಿನ್ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ ಎಂದ ಮಾಜಿ ಕ್ರಿಕೆಟಿಗಭಾರತ vs ಇಂಗ್ಲೆಂಡ್: ಅಶ್ವಿನ್ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ ಎಂದ ಮಾಜಿ ಕ್ರಿಕೆಟಿಗ

ಲಾರ್ಡ್ಸ್ ಅಂಗಳದಲ್ಲಿ ಪಂದ್ಯ ಆರಂಭವಾದಾಗಿನಿಂದ ಕೊನೆಯ ದಿನದವರೆಗೂ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ಇಂಗ್ಲೆಂಡ್ ತಂಡ ಈ ಪಂದ್ಯವನ್ನು ಖಡಾಖಂಡಿತವಾಗಿ ಗೆಲ್ಲಲಿದೆ ಎಂದೇ ಎಲ್ಲರೂ ಊಹಿಸುತ್ತಿದ್ದರು. ಆದರೆ ಕೊನೆಯ ದಿನದಾಟದಲ್ಲಿ ಭಾರತೀಯ ಆಟಗಾರರ ಅತ್ಯದ್ಭುತ ಪ್ರದರ್ಶನದ ಮುಂದೆ ಶರಣಾದ ಇಂಗ್ಲೆಂಡ್ ಆಟಗಾರರು ಲಾರ್ಡ್ಸ್ ಅಂಗಳದಲ್ಲಿ ಹೀನಾಯ ಸೋಲನುಭವಿಸಿದರು. ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಬಾರಿಸಿದ ಭಾರತದ ಕೆಎಲ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮತ್ತು ಕೆಎಲ್ ರಾಹುಲ್ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಕೂಡ ಮೊದಲನೇ ಇನ್ನಿಂಗ್ಸ್‌ನಲ್ಲಿ 83 ರನ್ ಬಾರಿಸುವ ಮೂಲಕ ಉತ್ತಮ ಪ್ರದರ್ಶನವನ್ನು ನೀಡಿದರು.

ಐಪಿಎಲ್: ಆರ್‌ಸಿಬಿ ತಂಡ ಸೇರಿದ 3 ಹೊಸ ಆಟಗಾರರು; ವಿಶ್ವದ ನಂ.2 ಬೌಲರ್‌ ಬೆಂಗಳೂರು ತೆಕ್ಕೆಗೆಐಪಿಎಲ್: ಆರ್‌ಸಿಬಿ ತಂಡ ಸೇರಿದ 3 ಹೊಸ ಆಟಗಾರರು; ವಿಶ್ವದ ನಂ.2 ಬೌಲರ್‌ ಬೆಂಗಳೂರು ತೆಕ್ಕೆಗೆ

ಹೀಗೆ ಓವರ್‌ಸೀಸ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಾರೆ ಎಂದು ಆಗಾಗ ಟ್ರೋಲ್ ಆಗುತ್ತಿದ್ದ ರೋಹಿತ್ ಶರ್ಮಾ ಈ ಬಾರಿಯೂ ಸಹ ಶತಕ ಬಾರಿಸುವಲ್ಲಿ ಎಡವಿ ಟೀಕೆಗಳಿಗೆ ತುತ್ತಾದರು. ಶತಕ ವಂಚಿತರಾದ ರೋಹಿತ್ ಶರ್ಮಾ ಪರ ಬ್ಯಾಟ್ ಬೀಸಿರುವ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಟೀಕಾಕಾರರಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಹೀಗೆ ರೋಹಿತ್ ಶರ್ಮಾ ಪರ ಮಾತನಾಡಿರುವ ಸುನಿಲ್ ಗವಾಸ್ಕರ್ ಪರೋಕ್ಷವಾಗಿ ಕೆಎಲ್ ರಾಹುಲ್ ಅವರ ಕಾಲೆಳೆಯುವಂತಹ ಹೇಳಿಕೆಗಳನ್ನು ನೀಡಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್: ಸ್ಟಾರ್ ಆಟಗಾರರಿರುವ ಈ ದೊಡ್ಡ ತಂಡ ಕಳಪೆ ಪ್ರದರ್ಶನ ನೀಡಲಿದೆ ಎಂದ ಆಕಾಶ್ ಚೋಪ್ರಾಟಿ ಟ್ವೆಂಟಿ ವಿಶ್ವಕಪ್: ಸ್ಟಾರ್ ಆಟಗಾರರಿರುವ ಈ ದೊಡ್ಡ ತಂಡ ಕಳಪೆ ಪ್ರದರ್ಶನ ನೀಡಲಿದೆ ಎಂದ ಆಕಾಶ್ ಚೋಪ್ರಾ

ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಆಗಾಗ ಟೀಮ್ ಇಂಡಿಯಾ ಆಟಗಾರರ ಕುರಿತು ಮತ್ತು ಅವರ ಪ್ರದರ್ಶನಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ದಾಖಲೆ ಮತ್ತು ಮೈಲಿಗಲ್ಲುಗಳನ್ನು ಸೃಷ್ಟಿಸಿರುವ ಸುನಿಲ್ ಗವಾಸ್ಕರ್ ಹೆಚ್ಚಾಗಿ ಯಾರನ್ನೂ ಟೀಕಿಸಲು ಹೋಗುವುದಿಲ್ಲ. ಆದರೆ ಇದೀಗ ಸುನೀಲ್ ಗವಾಸ್ಕರ್ ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯವೊಂದು ಕೆಎಲ್ ರಾಹುಲ್‌ಗೆ ಪರೋಕ್ಷವಾಗಿ ಕುಟುಕಿದಂತೆ ಕಾಣುತ್ತಿದೆ.

ಲಾರ್ಡ್ಸ್‌ನಲ್ಲಿನ ರೋಹಿತ್ ಶರ್ಮಾ ಆಟವನ್ನು ಮೆಚ್ಚಿಕೊಂಡ ಸುನಿಲ್ ಗವಾಸ್ಕರ್

ಲಾರ್ಡ್ಸ್‌ನಲ್ಲಿನ ರೋಹಿತ್ ಶರ್ಮಾ ಆಟವನ್ನು ಮೆಚ್ಚಿಕೊಂಡ ಸುನಿಲ್ ಗವಾಸ್ಕರ್

ಭಾರತ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 83 ರನ್ ಗಳಿಸಿ ಲಾರ್ಡ್ಸ್ ಅಂಗಳದಲ್ಲಿ ಶತಕ ಬಾರಿಸುವ ಅವಕಾಶವನ್ನು 17 ರನ್‌ಗಳ ಅಂತರದಲ್ಲಿ ಕಳೆದುಕೊಂಡರು. ಹೀಗೆ ಓವರ್‌ಸೀಸ್ ಶತಕ ಬಾರಿಸುವ ಅವಕಾಶವನ್ನು ಸ್ವಲ್ಪದರಲ್ಲೇ ಕೈ ತಪ್ಪಿಸಿಕೊಂಡ ರೋಹಿತ್ ಶರ್ಮಾ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಆದರೆ ಸುನಿಲ್ ಗವಾಸ್ಕರ್ ಲಾರ್ಡ್ಸ್ ಅಂಗಣದಲ್ಲಿ ರೋಹಿತ್ ಶರ್ಮಾ ಆಟ ಅದ್ಭುತವಾಗಿತ್ತು ಎಂದು ಶರ್ಮಾ ಆಟವನ್ನು ಮೆಚ್ಚಿಕೊಂಡಿದ್ದಾರೆ.

'ಲಾರ್ಡ್ಸ್ ಅಂಗಳದಲ್ಲಿ ಶತಕ ಸಾಧಿಸುವುದು ದೊಡ್ಡ ಸಾಧನೆಯಲ್ಲ!'

'ಲಾರ್ಡ್ಸ್ ಅಂಗಳದಲ್ಲಿ ಶತಕ ಸಾಧಿಸುವುದು ದೊಡ್ಡ ಸಾಧನೆಯಲ್ಲ!'

ರೋಹಿತ್ ಶರ್ಮಾ ಲಾರ್ಡ್ಸ್ ಅಂಗಳದಲ್ಲಿ ಶತಕ ಬಾರಿಸದೇ ವಿಫಲರಾದರು ಎಂದು ಟೀಕೆ ಮಾಡುವವರ ವಿರುದ್ಧ ಕಿಡಿಕಾರಿರುವ ಸುನಿಲ್ ಗವಾಸ್ಕರ್ ಲಾರ್ಡ್ಸ್ ಅಂಗಳದಲ್ಲಿ ಶತಕ ಬಾರಿಸುವುದು ದೊಡ್ಡ ಸಾಧನೆಯಲ್ಲ ಎಂದು ಪ್ರತಿಕ್ರಿಯಿಸುವ ಮೂಲಕ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಯಾಕೆಂದರೆ ರೋಹಿತ್ ಶರ್ಮಾ ಶತಕ ಬಾರಿಸಲು ವಿಫಲವಾದ ಇನ್ನಿಂಗ್ಸ್‌ನಲ್ಲಿಯೇ ಭಾರತದ ಮತ್ತೋರ್ವ ಪ್ರತಿಭಾನ್ವಿತ ಆಟಗಾರ ಕೆಎಲ್ ರಾಹುಲ್ ಶತಕ ಬಾರಿಸಿ ಮಿಂಚಿದ್ದರು. ಹೀಗಾಗಿ ರೋಹಿತ್ ಶರ್ಮಾರನ್ನು ವಹಿಸಿಕೊಂಡು ಸುನಿಲ್ ಗವಾಸ್ಕರ್ ನೀಡಿರುವ ಶತಕದ ಹೇಳಿಕೆ ಕೆಎಲ್ ರಾಹುಲ್‌ಗೆ ಪರೋಕ್ಷವಾಗಿ ಹೇಳಿದ್ದಾ ಎಂಬ ಅನುಮಾನ ಇಲ್ಲಿ ಮೂಡದೇ ಇರದು..

ಇಂಗ್ಲೆಂಡ್ ಮಾಡಿದ ತಪ್ಪನ್ನು ಎತ್ತಿ ಹಿಡಿದು ವಿರಾಟ್ ಪರ ನಿಂತ ಪನೇಸರ್ | Oneindia Kannada
ರೋಹಿತ್ ಶರ್ಮಾನಿಂದ ನಾಯಕನಿಗೆ ಮತ್ತೇನು ಬೇಕು?

ರೋಹಿತ್ ಶರ್ಮಾನಿಂದ ನಾಯಕನಿಗೆ ಮತ್ತೇನು ಬೇಕು?


ರೋಹಿತ್ ಶರ್ಮಾ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 83 ರನ್ ಬಾರಿಸಿದರು. ಹೀಗೆ ಬ್ಯಾಟ್ಸ್‌ಮನ್‌ ಒಬ್ಬ 80-90 ರನ್ ಬಾರಿಸುತ್ತಾ ಹೋದರೆ ಸರಣಿಯೊಂದರಲ್ಲಿ ಆತನ ಒಟ್ಟು ರನ್ 400-500 ಆಗಲಿದೆ. ಓರ್ವ ಬ್ಯಾಟ್ಸ್‌ಮನ್‌ನಿಂದ ತಂಡದ ನಾಯಕನಿಗೆ ಇನ್ನೇನು ಬೇಕು ಎಂದು ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.

Story first published: Saturday, August 21, 2021, 17:52 [IST]
Other articles published on Aug 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X