ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಆಯ್ತು ಈಗ ಟಿ20 ಸರಣಿ ಮೇಲೆ ಕಣ್ಣು: ಭಾರತಕ್ಕೆ ಈ 3 ಸಂಗತಿಗಳೇ ತಲೆನೋವು!

Ind vs Eng: Team India Should focus on these three areas in t20 series against England

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಮುಕ್ತಾಯವಾಗುವ ಮೂಲಕ ಈಗ ವೈಟ್‌ಬಾಲ್ ಸರಣಿಗೆ ಎರಡು ತಂಡಗಳು ಸಜ್ಜಾಗಿದೆ. 2007ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರನಿ ಗೆಲ್ಲುವ ಅದ್ಭುತ ಅವಕಾಶವಿದ್ದರೂ ಭಾರತ ಅದನ್ನು ಕೈಚೆಲ್ಲಿಕೊಂಡಿದೆ. ಇದೀಗ ಟಿ20 ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಎರಡು ತಂಡಗಳು ಕೂಡ ತೀವ್ರ ಪೈಪೋಟಿಯ ಪ್ರದರ್ಶನ ನಿಡಲು ಹವಣಿಸುತ್ತಿದೆ.

ಇನ್ನು ಮೂರು ಪಂದ್ಯಗಳ ಟಿ20 ಸರಣಿ ಇದಾಗಿದ್ದು ಮೊದಲ ಪಂದ್ಯ ಸೌಥಾಂಪ್ಟನ್‌ನಲ್ಲಿ ಆಯೋಜನೆಯಾಗಲಿದೆ. ಮೊದಲ ಪಂದ್ಯದಲ್ಲಿ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿದ್ದ ಯಾವ ಆಟಗಾರರು ಕುಡ ಕಣಕ್ಕಿಳಿಯುತ್ತಿಲ್ಲ. ರೋಹಿತ್ ಶರ್ಮಾ ನೇತೃತ್ವದಲ್ಲಿ ಕಣಕ್ಕಿಳಿಯಲಿರುವ ಈ ತಂಡ ಹೆಚ್ಚು ಯುವ ಆಟಗಾರರೊಂದಿಗೆ ಆಡಲಿದೆ. ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ, ರಿಷಭ್ ಪಂತ್ ಅವರಂತಾ ಆಟಗಾರರು ಕೂಡ ಸೇರಿಕೊಳ್ಳಲಿದ್ದಾರೆ.

ಟೆಸ್ಟ್ ಕ್ರಿಕೆಟ್‍ನಲ್ಲಿ ದಾಖಲಾಗಿರುವ ದೊಡ್ಡ ರನ್ ಚೇಸ್‌ಗಳ ಪಟ್ಟಿ; ದೊಡ್ಡ ಚೇಸ್ ಮಾಡಿದ ತಂಡ ಯಾವುದು?ಟೆಸ್ಟ್ ಕ್ರಿಕೆಟ್‍ನಲ್ಲಿ ದಾಖಲಾಗಿರುವ ದೊಡ್ಡ ರನ್ ಚೇಸ್‌ಗಳ ಪಟ್ಟಿ; ದೊಡ್ಡ ಚೇಸ್ ಮಾಡಿದ ತಂಡ ಯಾವುದು?

ಈ ವರ್ಷ ನಡೆಯಲಿರುವ ವಿಶ್ವಕಪ್‌ನ ದೃಷ್ಟಿಯಿಂದಾಗಿ ಈ ಟಿ20 ಸರಣಿ ಎರಡು ತಂಡಗಳಿಗೂ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇನ್ನು ಭಾರತ ತಂಡ ಈ ಚುಟಕು ಸರಣಿಯಲ್ಲಿ ಸಾಕಷ್ಟು ಪ್ರಯೋಗಕ್ಕೆ ಸಿದ್ಧತೆ ನಡೆಸುತ್ತಿದೆ. ಹಾಗಿದ್ದರೂ ಈ ಮೂರು ಅಂಶಗಳು ಈ ಸರಣಿಯಲ್ಲಿ ಭಾರತಕ್ಕೆ ಸಾಕಷ್ಟು ಪ್ರಮುಖವಾಗಿದೆ. ಯಾವುದು ಆ ಮೂರು ಅಂಶಗಳು? ಮುಂದೆ ಓದಿ..

ತಲೆನೋವಾಗಿದೆ ರೋಹಿತ್- ಕೊಹ್ಲಿ ಫಾರ್ಮ್

ತಲೆನೋವಾಗಿದೆ ರೋಹಿತ್- ಕೊಹ್ಲಿ ಫಾರ್ಮ್

ಭಾರತ ಕ್ರಿಕೆಟ್ ತಂಡದ ಪ್ರಮುಖ ಅಸ್ತ್ರಗಳೆಂದರೆ ಅದು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ. ಈ ಇಬ್ಬರು ಆಟಗಾರರು ಕೂಡ ಇತ್ತೀಚೆಗೆ ಫಾರ್ಮ್‌ನಲ್ಲಿಲ್ಲ. ಅದರಲ್ಲೂ ಕಳೆದ ಐಪಿಎಲ್‌ನಲ್ಲಿ ಇಬ್ಬರು ಆಟಗಾರರು ಕುಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಈ ಅನುಭವಿ ಆಟಗಾರರ ಬ್ಯಾಟ್‌ನಿಂದ ಸರಾಗವಾಗಿ ರನ್ ಹರಿಸುಬರುವುದು ಭಾರತ ತಂಡಕ್ಕೆ ಬಹಳಷ್ಟು ಮುಖ್ಯವಾಗಿದೆ. ಇಂಗ್ಲೆಂಡ್ ವಿರುದ್ಧದ ಈ ಟಿ20 ಸರಣಿಯಲ್ಲಿ ದಿಗ್ಗಜ ಆಟಗಾರರ ಪ್ರದರ್ಶನದ ಮೇಲೆ ಭಾರತೀಯ ಅಭಿಮಾನಿಗಳು ಚಿತ್ತ ನೆಟ್ಟಿದ್ದಾರೆ.

ಟೆಸ್ಟ್ ಸರಣಿಯ ಯಶಸ್ಸು ಮುಂದುವರಿಸಲಿದ್ದಾರಾ ಪಂತ್

ಟೆಸ್ಟ್ ಸರಣಿಯ ಯಶಸ್ಸು ಮುಂದುವರಿಸಲಿದ್ದಾರಾ ಪಂತ್

ರಿಷಭ್ ಪಂತ್ ಕೂಡ ಈ ಬಾರಿಯ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಭಾರತದ ಪರವಾಗಿಯೂ ವೈಟ್‌ಬಾಲ್ ಮಾದರಿಯಲ್ಲಿ ರಿಷಭ್ ಪಂತ್ ಅವರಿಂದ ಸ್ಮರಣೀಯ ಇನ್ನಿಂಗ್ಸ್ ಇನ್ನೂ ಬಂದಿಲ್ಲ. ಆದರೆ ಟೆಸ್ಟ್ ಮಾದರಿಯಲ್ಲಿ ಪಂತ್ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿಯೂ ಪಂತ್ ಅಮೋಘ ಆಟವಾಡುವ ಮೂಲಕ ಮಿಂಚಿದ್ದಾರೆ. ರೆಡ್‌ಬಾಲ್ ಕ್ರಿಕೆಟ್‌ನಲ್ಲಿ ತೋರಿಸಿರುವ ಈ ಫಾರ್ಮ್‌ಅನ್ನು ವೈಟ್‌ಬಾಲ್ ಮಾದರಿಯಲ್ಲಿಯೂ ಪಂತ್ ತೋರ್ಪಡಿಸುವ ಅನಿವಾರ್ಯತೆಯಿದೆ. ಟಿ20 ವಿಶ್ವಕಪ್ ಸನಿಹದಲ್ಲಿರುವ ಈ ಸಂದರ್ಭದಲ್ಲಿ ಪಂತ್ ಫಾರ್ಮ್ ಪ್ರಮುಖವಾಗಿದೆ. ಮತ್ತೊಂದೆಡೆ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವುದು ಪಂತ್ ಈ ಸ್ಪರ್ಧೆಯಲ್ಲಿ ಹಿಂದುಳಿಯುವಂತೆ ಮಾಡಿದೆ. ಹೀಗಾಗಿ ಇಂಗ್ಲೆಂಡ್‌ ವಿರುದ್ಧದ ಈ ಸರಣಿಯಲ್ಲಿ ಪಂತ್ ಮೇಲೆ ಒತ್ತಡ ಹೆಚ್ಚಾಗಿದೆ.

ಬೌಲರ್ ಆಗಿ ಮಿಂಚಬೇಕಿದೆ ಹಾರ್ದಿಕ್

ಬೌಲರ್ ಆಗಿ ಮಿಂಚಬೇಕಿದೆ ಹಾರ್ದಿಕ್

ಹಾರ್ದಿಕ್ ಪಾಂಡ್ಯ ಈ ವರ್ಷದ ಐಪಿಎಲ್‌ನಲ್ಲಿ ನಿಡಿದ ಪ್ರದರ್ಶನದಿಂದಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ನಿಜಕ್ಕೂ ಖುಷಿ ಪಟ್ಟಿದ್ದಾರೆ. ನಾಯಕನಾಗಿ ಹಾಗೂ ಬ್ಯಾಟರ್ ಆಗಿ ಪಾಂಡ್ಯ ನೀಡಿದ ಪ್ರದರ್ಶನ ಅಮೋಘವಾಗಿತ್ತು. ಆದರೆ ಬೌಲರ್‌ಆಗಿ ಹಾರ್ದಿಕ್ ಪಾಂಡ್ಯ ಅವರು ವೈಫಲ್ಯ ಅನುಭವಿಸುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿಯೂ ಫೈನಲ್ ಪಂದ್ಯದಲ್ಲಿ ಮಾತ್ರ ಅದ್ಭುತ ಪ್ರದರ್ಶನ ನಿಡಿದ್ದರೂ ಇತರ ಪಂದ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೌಲಿಂಗ್ ನಡೆಸಿರಲಿಲ್ಲ ಪಾಂಡ್ಯ. ಬೌಲಿಂಗ್ ನಡೆಸಿದ್ದರೂ ಹೆಚ್ಚಿನ ಯಶಸ್ಸು ಸಾಧಿಸಿರಲಿಲ್ಲ.

ಇನ್ನು ಅದಾದ ಬಳಿಕ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿಯೂ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದರು. ಈ ಸರಣಿಯಲ್ಲಿ ಪಾಂಡ್ಯ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಕೆಲ ಓವರ್‌ಗಳಲ್ಲಿ ಅತ್ಯಂತ ದುಬಾರಿಯಾಗಿ ಪರಿಣಮಿಸಿದ್ದರು. ಅದಾದ ಬಳಿಕ ಐರ್ಲಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗೆ ನಾಯಕನಾಗಿ ಆಯ್ಕೆಯಾದ ಹಾರ್ದಿಕ್ ಪಾಂಡ್ಯ ಈ ಸರಣಿಯಲ್ಲಿಯೂ ಬೌಲಿಂಗ್‌ನಲ್ಲಿ ಅತ್ಯಂತ ದುಬಾರಿಯಾದರು. ಎರಡು ಪಂದ್ಯಗಳ ಈ ಸರಣಿಯನ್ನು ಭಾರತ ಗೆದ್ದುಕೊಂಡಿತಾದರೂ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಕೇವಲ ಒಂದು ವಿಕೆಟ್ ಪಡೆಯಲು ಮಾತ್ರವೇ ಯಶಸ್ವಿಯಾದರು. ಅವರ ಎಕಾನಮಿ ರೇಟ್ 11ರಷ್ಟು ದುಬಾರಿಯಾಗಿತ್ತು ಎಂಬುದು ಗಮನಾರ್ಹ. ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಅದ್ಭುತ ಫಾರ್ಮ್‌ನೊಂದಿಗೆ ತಂಡಕ್ಕೆ ಮರಳಿರುವುದು ಸಕಾರಾತ್ಮಕ ಅಂಶವಾದರೂ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರಿಂದ ಮತ್ತಷ್ಟು ಉತ್ತಮ ಪ್ರದರ್ಶನ ಭಾರತ ತಂಡಕ್ಕೆ ಅಗತ್ಯವಿದೆ.

Story first published: Wednesday, July 6, 2022, 15:39 [IST]
Other articles published on Jul 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X