ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೂಜಾರ ಕಳಪೆ ಬ್ಯಾಟಿಂಗ್ ಬಗ್ಗೆ ಡ್ರೆಸಿಂಗ್ ರೂಮ್‌ನಲ್ಲಿ ಆಗುತ್ತಿದ್ದ ಚರ್ಚೆಯನ್ನು ಬಹಿರಂಗಪಡಿಸಿದ ರೋಹಿತ್ ಶರ್ಮಾ

IND vs ENG: There were no concerns in dressing room over Cheteshwar Pujaras form says Rohit Sharma

ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸ ಕೈಗೊಂಡು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಿರತರಾಗಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು, ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಡ್ರಾನಲ್ಲಿ ಅಂತ್ಯಗೊಂಡಿತ್ತು. ನಂತರ ಕ್ರಿಕೆಟ್ ಕಾಶಿ ಎಂದೇ ಹೆಸರನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 151 ರನ್‌ಗಳ ಜಯ ಸಾಧಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಎಂದು ಸಾಧಿಸಿತ್ತು.

ಐಪಿಎಲ್ ಆಡುತ್ತೇನೆ ಆದರೆ ಟಿ ಟ್ವೆಂಟಿ ವಿಶ್ವಕಪ್ ಅನುಮಾನ ಎಂದು ಶಾಕ್ ನೀಡಿದ ಇಂಗ್ಲೆಂಡ್‌ನ ಸ್ಟಾರ್ ಆಟಗಾರಐಪಿಎಲ್ ಆಡುತ್ತೇನೆ ಆದರೆ ಟಿ ಟ್ವೆಂಟಿ ವಿಶ್ವಕಪ್ ಅನುಮಾನ ಎಂದು ಶಾಕ್ ನೀಡಿದ ಇಂಗ್ಲೆಂಡ್‌ನ ಸ್ಟಾರ್ ಆಟಗಾರ

ಹೀಗೆ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿರುವ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಲೀಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 78 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಮಂಕಾಗಿದ್ದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ಜವಾಬ್ದಾರಿಯುತ ಆಟವನ್ನು ಆಡುವುದರ ಮೂಲಕ ಪುಟಿದೆದ್ದಿದ್ದಾರೆ. ಅದರಲ್ಲಿಯೂ ಸಾಕಷ್ಟು ಕಳಪೆ ಪ್ರದರ್ಶನಗಳಿಂದ ಭಾರೀ ಟೀಕೆಗಳಿಗೆ ಒಳಗಾಗಿದ್ದ ಚೇತೇಶ್ವರ್ ಪೂಜಾರ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂತ್ಯಕ್ಕೆ ಅಜೇಯ 91 ರನ್ ಗಳಿಸುವುದರ ಮೂಲಕ ಭಾರತ ತಂಡಕ್ಕೆ ಆಸರೆಯಾಗಿ ಯಶಸ್ಸಿನ ಹಾದಿಗೆ ಮರಳಿದ್ದಾರೆ.

ಭಾರತ vs ಇಂಗ್ಲೆಂಡ್: ಎರಡನೇ ಇನ್ನಿಂಗ್ಸ್‌ನಲ್ಲಿ ಆಸರೆಯಾದ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿಭಾರತ vs ಇಂಗ್ಲೆಂಡ್: ಎರಡನೇ ಇನ್ನಿಂಗ್ಸ್‌ನಲ್ಲಿ ಆಸರೆಯಾದ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ

ಹೀಗೆ ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವ ಸನಿಹದಲ್ಲಿರುವ ಚೇತೇಶ್ವರ್ ಪೂಜಾರ ಕುರಿತು ಮೂರನೇ ದಿನದಾಟ ಮುಗಿದ ನಂತರ ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮಾತನಾಡಿದ್ದು ತಮ್ಮ ಅಭಿಪ್ರಾಯವನ್ನು ಈ ಕೆಳಕಂಡಂತೆ ವ್ಯಕ್ತಪಡಿಸಿದ್ದಾರೆ.

ಪೂಜಾರ ಕಳಪೆ ಫಾರ್ಮ್ ಕುರಿತು ಡ್ರೆಸಿಂಗ್ ರೂಮ್‌ನ ಚರ್ಚೆ ಹೀಗಿರುತ್ತಿತ್ತು

ಪೂಜಾರ ಕಳಪೆ ಫಾರ್ಮ್ ಕುರಿತು ಡ್ರೆಸಿಂಗ್ ರೂಮ್‌ನ ಚರ್ಚೆ ಹೀಗಿರುತ್ತಿತ್ತು

ಪೂಜಾರ ಉತ್ತಮ ಪ್ರದರ್ಶನವನ್ನು ಶ್ಲಾಘಿಸಿರುವ ರೋಹಿತ್ ಶರ್ಮಾ ಈ ಹಿಂದೆ ಚೇತೇಶ್ವರ್ ಪೂಜಾರ ಸಾಲುಸಾಲು ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆಹಾಕಲಾಗದೇ ಕಳಪೆ ಪ್ರದರ್ಶನ ನೀಡಿದ್ದರ ಕುರಿತು ಡ್ರೆಸಿಂಗ್ ರೂಮ್‌ನಲ್ಲಿ ಯಾರೂ ಸಹ ನಕಾರಾತ್ಮಕವಾಗಿ ಮಾತನಾಡುತ್ತಿರಲಿಲ್ಲ ಎಂದಿದ್ದಾರೆ. ಚೇತೇಶ್ವರ್ ಪೂಜಾರ ಕಳಪೆ ಪ್ರದರ್ಶನದ ಕುರಿತು ಯಾರೂ ಸಹ ಕಾಮೆಂಟ್ ಮಾಡುವುದಾಗಲಿ, ಅಥವಾ ಯೋಚಿಸುವುದಾಗಲೀ ಮಾಡುತ್ತಿರಲಿಲ್ಲ ಏಕೆಂದರೆ ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನಿಗೂ ಚೇತೇಶ್ವರ್ ಪೂಜಾರ ಯಾವ ರೀತಿಯ ಅತ್ಯುತ್ತಮ ಆಟಗಾರ ಎಂಬುದು ತಿಳಿದಿತ್ತು. ಆತನಲ್ಲಿರುವ ಬ್ಯಾಟಿಂಗ್ ಗುಣಮಟ್ಟ ಮತ್ತು ಆತನಿಗಿರುವ ಬ್ಯಾಟಿಂಗ್ ಅನುಭವದ ಬಗ್ಗೆ ತಿಳಿದಿದ್ದ ನಾವು ಎಂದಿಗೂ ಆತನ ಕಳಪೆ ಫಾರ್ಮ್ ಕುರಿತು ಟೀಕೆಗಳನ್ನು ಮಾಡಿರಲಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಟೀಕಾಕಾರರ ಬಾಯಿಮುಚ್ಚಿಸೋಕೆ ಕೊಹ್ಲಿ ಮತ್ತು ಪೂಜಾರ ಪ್ಲ್ಯಾನ್ | Oneindia Kannada
ಇತ್ತೀಚಿನ ಪಂದ್ಯಗಳಲ್ಲಿ ಆತ ಒಳ್ಳೆಯ ರನ್ ಕಲೆ ಹಾಕಿಲ್ಲ ನಿಜ..

ಇತ್ತೀಚಿನ ಪಂದ್ಯಗಳಲ್ಲಿ ಆತ ಒಳ್ಳೆಯ ರನ್ ಕಲೆ ಹಾಕಿಲ್ಲ ನಿಜ..

ಇನ್ನೂ ಮುಂದುವರೆದು ಚೇತೇಶ್ವರ್ ಪೂಜಾರಾ ಕುರಿತು ಮಾತನಾಡಿದ ರೋಹಿತ್ ಶರ್ಮಾ 'ಪ್ರದರ್ಶನದ ಕುರಿತು ಮಾತನಾಡಿದರೆ ಪೂಜಾರ ಇತ್ತೀಚಿನ ಪಂದ್ಯಗಳಲ್ಲಿ ದೊಡ್ಡ ಮೊತ್ತ ಕಲೆ ಹಾಕಿಲ್ಲ ಎಂಬುದು ನಿಜ, ಆದರೆ ಕಳೆದ ಲಾರ್ಡ್ಸ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಜೊತೆ ಚೇತೇಶ್ವರ್ ಪೂಜಾರ ಆಡಿದ ಜತೆಯಾಟ ಪ್ರಮುಖವಾದದ್ದು ಮತ್ತು ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಪೂಜಾರ ಆಡಿದ ಜವಾಬ್ದಾರಿಯುತ ಆಟವನ್ನು ಕಡೆಗಣಿಸುವ ಹಾಗಿಲ್ಲ ಎಂದು ರೋಹಿತ್ ಶರ್ಮಾ ತಿಳಿಸಿದರು.

ಇಷ್ಟು ವರ್ಷಗಳಲ್ಲಿ ಪೂಜಾರ ಮಾಡಿರುವ ಸಾಧನೆಯ ಕುರಿತು ಮಾತನಾಡಬೇಕು

ಇಷ್ಟು ವರ್ಷಗಳಲ್ಲಿ ಪೂಜಾರ ಮಾಡಿರುವ ಸಾಧನೆಯ ಕುರಿತು ಮಾತನಾಡಬೇಕು

ಚೇತೇಶ್ವರ್ ಪೂಜಾರ ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿರಬಹುದು, ಕೇವಲ ಒಂದೆರಡು ಪಂದ್ಯಗಳಲ್ಲಿ ಅಥವಾ ಒಂದೆರಡು ಸರಣಿಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಮಾತ್ರಕ್ಕೆ ಆತನ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುವುದು ತಪ್ಪು. ಈ ಹಿಂದೆ ಚೇತೇಶ್ವರ್ ಪೂಜಾರ ಟೀಮ್ ಇಂಡಿಯಾಗೆ ಎಷ್ಟೆಲ್ಲ ಉತ್ತಮ ಆಟಗಳನ್ನಾಡಿದ್ದಾರೆ ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು ಎಂದು ರೋಹಿತ್ ಶರ್ಮಾ ಚೇತೇಶ್ವರ್ ಪೂಜಾರಾ ಪರ ಬ್ಯಾಟ್ ಬೀಸಿದ್ದಾರೆ.

Story first published: Saturday, August 28, 2021, 11:22 [IST]
Other articles published on Aug 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X