ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

4 ಟೆಸ್ಟ್‌ಗಳಲ್ಲಿ ಭಾರತದ ಈ 3 ಆಟಗಾರರನ್ನು ಕಟ್ಟಿಹಾಕಲು ನಮ್ಮಿಂದ ಆಗಲಿಲ್ಲ: ಮಾರ್ಕ್ ವುಡ್

IND vs ENG: These 3 Indian players frustrated us during the four Tests says Mark Wood

ಸದ್ಯ ಕ್ರಿಕೆಟ್ ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಚರ್ಚೆಗೀಡಾಗಿರುವ ವಿಷಯವೆಂದರೆ ಅದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿ. ಹೌದು, ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಿರತವಾಗಿದ್ದು ಈಗಾಗಲೇ ಸರಣಿಯ 4 ಪಂದ್ಯಗಳು ಮುಗಿದಿವೆ. ಈ 4 ಪಂದ್ಯಗಳ ಪೈಕಿ ಟೀಮ್ ಇಂಡಿಯಾ 2 ಪಂದ್ಯದಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಜಯವನ್ನು ಸಾಧಿಸಿದೆ. ಈ ಮೂಲಕ ಟೀಮ್ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದ ಮುನ್ನಡೆಯನ್ನು ಸಾಧಿಸಿದ್ದು ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರ ( ಸೆಪ್ಟೆಂಬರ್ 10 ) ಆರಂಭವಾಗಲಿದೆ.

ಇಂಗ್ಲೆಂಡ್‌ಗೆ ಡ್ರಾ ಮಾಡಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂಬುದು ನಾಚಿಕೆಗೇಡು; ಕಿಡಿಕಾರಿದ ಆಂಗ್ಲ ಕ್ರಿಕೆಟಿಗ!ಇಂಗ್ಲೆಂಡ್‌ಗೆ ಡ್ರಾ ಮಾಡಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂಬುದು ನಾಚಿಕೆಗೇಡು; ಕಿಡಿಕಾರಿದ ಆಂಗ್ಲ ಕ್ರಿಕೆಟಿಗ!

ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದಾಗಿ ಯಾವುದೇ ಫಲಿತಾಂಶವಿಲ್ಲದೇ ನೀರಸ ಡ್ರಾನಲ್ಲಿ ಅಂತ್ಯವಾಗಿತ್ತು. ನಂತರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳ ಅದ್ಬುತ ಪ್ರದರ್ಶನದಿಂದ ಕೊಹ್ಲಿ ಪಡೆ 151 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ನಂತರ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಿತು, ಈ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 76 ರನ್‌ಗಳ ಇನ್ನಿಂಗ್ಸ್ ಸೋಲನ್ನು ಅನುಭವಿಸಿತು. ಇನ್ನು ಇತ್ತೀಚಿಗಷ್ಟೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 157 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ 2-1 ಅಂತರದ ಮುನ್ನಡೆಯನ್ನು ಸಾಧಿಸಿದೆ.

ಐಪಿಎಲ್ 2022ಕ್ಕೆ ಹೊಸ ತಂಡಗಳು: ಈ 6 ನಗರಗಳನ್ನು ಪಟ್ಟಿ ಮಾಡಿದ ಬಿಸಿಸಿಐಐಪಿಎಲ್ 2022ಕ್ಕೆ ಹೊಸ ತಂಡಗಳು: ಈ 6 ನಗರಗಳನ್ನು ಪಟ್ಟಿ ಮಾಡಿದ ಬಿಸಿಸಿಐ

ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕು ಟೆಸ್ಟ್ ಪಂದ್ಯಗಳು ಮುಗಿದ ನಂತರ ಸರಣಿಯ ಕುರಿತು ಮಾತನಾಡಿರುವ ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಮಾರ್ಕ್ ವುಡ್ ಟೀಮ್ ಇಂಡಿಯಾದ ಮೂವರು ಆಟಗಾರರ ಕುರಿತು ವಿಶೇಷವಾಗಿ ಪ್ರತಿಕ್ರಿಯಿಸಿದ್ದಾರೆ. ಇದುವರೆಗೂ ನಡೆದಿರುವ ಸರಣಿಯ ಎಲ್ಲಾ ಪಂದ್ಯಗಳ ಪೈಕಿ ಭಾರತದ ಈ ಮೂವರು ಆಟಗಾರರನ್ನು ಕಟ್ಟಿ ಹಾಕುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಈ ಕೆಳಕಂಡತೆ ಮಾರ್ಕ್ ವುಡ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ..

ಭಾರತದ ಬಾಲಂಗೋಚಿಗಳು ಕಿರಿಕಿರಿ ಉಂಟುಮಾಡಿದರು

ಭಾರತದ ಬಾಲಂಗೋಚಿಗಳು ಕಿರಿಕಿರಿ ಉಂಟುಮಾಡಿದರು

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿಯೂ ಟೀಮ್ ಇಂಡಿಯಾದ ಶಾರ್ದೂಲ್ ಠಾಕೂರ್ ಅರ್ಧಶತಕಗಳನ್ನು ಬಾರಿಸುವುದರ ಮೂಲಕ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು. ಹಾಗೂ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳೆಲ್ಲಾ ಔಟ್ ಆಗಿ ತಂಡ ಸಂಕಷ್ಟದಲ್ಲಿದ್ದಾಗ 10ನೇ ವಿಕೆಟ್‍ಗೆ ಜತೆಯಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ 89 ರನ್‌ಗಳ ಅಜೇಯ ಜತೆಯಾಟವಾಡಿದರು. ಹೀಗೆ ಈ ಎರಡೂ ಪಂದ್ಯಗಳಲ್ಲಿ ಭಾರತದ ಕೆಳಕ್ರಮಾಂಕದ ಆಟಗಾರರನ್ನು ಕಟ್ಟಿ ಹಾಕುವಲ್ಲಿ ನಾವು ವಿಫಲವಾದೆವು ಎಂದು ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಮಾರ್ಕ್ ವುಡ್ ಹೇಳಿಕೊಂಡಿದ್ದಾರೆ.

ಹೆಡಿಂಗ್ಲೆ ಕ್ರೀಡಾಂಗಣದ ರೀತಿಯ ಆಟವನ್ನು ಓವಲ್ ಕ್ರೀಡಾಂಗಣದಲ್ಲಿ ಆಡಲಾಗಲಿಲ್ಲ

ಹೆಡಿಂಗ್ಲೆ ಕ್ರೀಡಾಂಗಣದ ರೀತಿಯ ಆಟವನ್ನು ಓವಲ್ ಕ್ರೀಡಾಂಗಣದಲ್ಲಿ ಆಡಲಾಗಲಿಲ್ಲ

ಭಾರತ ಮತ್ತು ಇಂಗ್ಲೆಂಡ್ ನಡುವೆ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 76 ರನ್‌ಗಳ ಇನ್ನಿಂಗ್ಸ್ ಜಯವನ್ನು ಸಾಧಿಸಿತ್ತು. ಇಂಗ್ಲೆಂಡ್ ಬೌಲರ್‌ಗಳ ಎದುರು ಮಂಕಾದ ಟೀಮ್ ಇಂಡಿಯಾ ಇನ್ನಿಂಗ್ಸ್ ಸೋಲನ್ನು ಅನುಭವಿಸಿತು. ಆದರೆ ನಂತರ ಓವಲ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್‌ಗಳ ಆಟ ನಡೆಯಲಿಲ್ಲ. ಈ ಕುರಿತು ಮಾತನಾಡಿರುವ ಮಾರ್ಕ್ ವುಡ್ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಾವು ಉತ್ತಮ ಪ್ರದರ್ಶನವನ್ನು ತೋರಿದೆವು ಆದರೆ ಲಾರ್ಡ್ಸ್ ಮತ್ತು ಓವಲ್ ಕ್ರೀಡಾಂಗಣದಲ್ಲಿ ವಿಫಲವಾದೆವು ಎಂದು ಹೇಳಿದ್ದಾರೆ.

Chahal ಅವರನ್ನು ಕೈಬಿಡುವ ಹಿಂದಿನ ಅಸಲಿ ಕಾರಣ | Oneindia Kannada
ಮ್ಯಾಂಚೆಸ್ಟರ್ ಪಂದ್ಯದಲ್ಲಿ ವೇಗವಾಗಿ ವಿಕೆಟ್ ಪಡೆಯುವ ಯೋಜನೆಯಲ್ಲಿದ್ದೇವೆ

ಮ್ಯಾಂಚೆಸ್ಟರ್ ಪಂದ್ಯದಲ್ಲಿ ವೇಗವಾಗಿ ವಿಕೆಟ್ ಪಡೆಯುವ ಯೋಜನೆಯಲ್ಲಿದ್ದೇವೆ

ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವೆ ಶುಕ್ರವಾರದಂದು ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ವಿಕೆಟ್‍ಗಳನ್ನು ಹೆಡಿಂಗ್ಲೆ ಪಂದ್ಯದಂತೆ ವೇಗವಾಗಿ ಪಡೆದುಕೊಳ್ಳುವ ವಿಶ್ವಾಸವನ್ನು ಮಾರ್ಕ್ ವುಡ್ ವ್ಯಕ್ತಪಡಿಸಿದ್ದು, ಐದನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಕೈವಶಪಡಿಸಿಕೊಳ್ಳಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

Story first published: Thursday, September 9, 2021, 16:30 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X