ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯರ ಆಟ ನಡೆಯುವುದಿಲ್ಲ; ನಾಲ್ಕನೇ ದಿನದಾಟಕ್ಕೂ ಮುನ್ನವೇ ಎಚ್ಚರಿಕೆ ನೀಡಿದ ಇಂಗ್ಲೆಂಡ್ ಆಟಗಾರ

IND vs ENG third test: Craig Overton reveals England’s plans for India on Day 4
ಟೀಂ ಇಂಡಿಯಾ ಆಟ ಇವತ್ತು ನಡಿಯೋದಿಲ್ಲ ಎಂದು ಎಚ್ಚರಿಕೆ ಕೊಟ್ಟ ಇಂಗ್ಲೆಂಡ್ ಬೌಲರ್ | Oneindia. Kannada

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು, ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ನೀರಸ ಡ್ರಾನಲ್ಲಿ ಅಂತ್ಯಗೊಂಡಿತ್ತು. ನಂತರ ಭಾರತ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಕಾಯ್ದುಕೊಂಡಿದೆ.

ಭಾರತ vs ಇಂಗ್ಲೆಂಡ್: ಎರಡನೇ ಇನ್ನಿಂಗ್ಸ್‌ನಲ್ಲಿ ಆಸರೆಯಾದ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿಭಾರತ vs ಇಂಗ್ಲೆಂಡ್: ಎರಡನೇ ಇನ್ನಿಂಗ್ಸ್‌ನಲ್ಲಿ ಆಸರೆಯಾದ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಸದ್ಯ ಲೀಡ್ಸ್ ನಗರದ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಮೂರು ದಿನಗಳ ಆಟ ಮುಕ್ತಾಯವಾಗಿದೆ. ಟೀಮ್ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದು ರೋಹಿತ್ ಶರ್ಮಾ 59 ರನ್ ಬಾರಿಸಿ ಉತ್ತಮ ಆರಂಭ ನೀಡಿದರೆ ಚೇತೇಶ್ವರ್ ಪೂಜಾರ ಅಜೇಯ 91 ಮತ್ತು ನಾಯಕ ವಿರಾಟ್ ಕೊಹ್ಲಿ ಅಜೇಯ 45 ರನ್ ಬಾರಿಸಿದ್ದಾರೆ. ಹೀಗೆ ರೋಹಿತ್ ಶರ್ಮಾ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮೂರನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡಿರುವ ಟೀಮ್ ಇಂಡಿಯಾ 212 ರನ್ ಬಾರಿಸಿದ್ದು 139 ರನ್‌ಗಳ ಹಿನ್ನಡೆಯನ್ನು ಅನುಭವಿಸಿದೆ.

ಗಂಗೂಲಿ ಜೊತೆ ಕೊಹ್ಲಿಯನ್ನು ಹೋಲಿಕೆ ಮಾಡುವವರಿಗೆ ಸರಿಯಾದ ಉತ್ತರ ಕೊಟ್ಟ ಅಗರ್ಕರ್ಗಂಗೂಲಿ ಜೊತೆ ಕೊಹ್ಲಿಯನ್ನು ಹೋಲಿಕೆ ಮಾಡುವವರಿಗೆ ಸರಿಯಾದ ಉತ್ತರ ಕೊಟ್ಟ ಅಗರ್ಕರ್

ಮೊದಲನೇ ಇನ್ನಿಂಗ್ಸ್‌ನಲ್ಲಿ 78 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಕಳಪೆ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮೂರನೇ ದಿನದಾಟವನ್ನು ಮುಗಿಸಿದ್ದು ನಾಲ್ಕನೇ ದಿನದಂದು ಉತ್ತಮ ಬ್ಯಾಟಿಂಗ್ ನಡೆಸುವ ಯೋಜನೆಯಲ್ಲಿದೆ. ಆದರೆ ಅತ್ತ ಇಂಗ್ಲೆಂಡ್ ತಂಡದ ಬೌಲರ್ ಕ್ರೈಗ್ ಓವರ್‌ಟನ್ ಮೂರನೇ ದಿನದಾಟ ಮುಗಿದ ನಂತರ ಪಂದ್ಯದ ಕುರಿತು ಮಾತನಾಡಿದ್ದು ನಾಲ್ಕನೇ ದಿನದಾಟದ ಬಗ್ಗೆ ಟೀಮ್ ಇಂಡಿಯಾ ಆಟಗಾರರಿಗೆ ಈ ಕೆಳಕಂಡಂತೆ ಎಚ್ಚರಿಕೆ ನೀಡಿದ್ದಾರೆ.

ಹೊಸ ಬಾಲ್ ಬಂದ ನಂತರ ವಿಕೆಟ್ ಬೀಳಲಿವೆ

ಹೊಸ ಬಾಲ್ ಬಂದ ನಂತರ ವಿಕೆಟ್ ಬೀಳಲಿವೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ಬೌಲರ್ ಕ್ರೈಗ್ ಓವರ್‌ಟನ್ ನಾಲ್ಕನೆಯ ದಿನದಂದು ಸಿಗಲಿರುವ ಎರಡನೇ ಹೊಸ ಬಾಲ್ ಕುರಿತು ವಿಶ್ವಾಸದ ಮಾತುಗಳನ್ನಾಡಿದ್ದಾರೆ. ನಾಲ್ಕನೇ ದಿನದಾಟ ಆರಂಭವಾಗುತ್ತಾ ಇದ್ದಂತೆ ನೂತನ ಬಾಲ್ ಲಭಿಸಲಿದ್ದು, ಹೊಸ ಬಾಲ್ ಸಿಕ್ಕಿದ ಮೊದಲನೇ ಎಸೆತದಿಂದಲೇ ವಿಕೆಟ್ ಪಡೆಯುವತ್ತ ಕಣ್ಣಿಡುತ್ತೇವೆ ಎಂದು ಕ್ರೈಗ್ ಓವರ್‌ಟನ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಹೊಸ ಬಾಲ್ ಬಂದ ನಂತರ 2-3 ವಿಕೆಟ್‍ಗಳನ್ನು ವೇಗವಾಗಿ ಪಡೆದುಕೊಳ್ಳಲಿದ್ದೇವೆ ಎಂದು ವಿಶ್ವಾಸ ವ್ಯಕ್ತ ಪಡಿಸುವುದರ ಮೂಲಕ ಭಾರತೀಯ ಆಟಗಾರರಿಗೆ ಕ್ರೈಗ್ ಓವರ್‌ಟನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಪಂದ್ಯದಲ್ಲಿ ಕ್ರೈಗ್ ಓವರ್‌ಟನ್ ಉತ್ತಮ ಪ್ರದರ್ಶನ

ಪಂದ್ಯದಲ್ಲಿ ಕ್ರೈಗ್ ಓವರ್‌ಟನ್ ಉತ್ತಮ ಪ್ರದರ್ಶನ

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಬಗ್ಗೆ ಭಾರತೀಯ ಆಟಗಾರರಿಗೆ ಎಚ್ಚರಿಕೆ ನೀಡಿರುವ ಇಂಗ್ಲೆಂಡ್ ಬೌಲರ್ ಕ್ರೈಗ್ ಓವರ್‌ಟನ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದು ಮಿಂಚಿದ್ದರು. ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅವರ ವಿಕೆಟ್ ಪಡೆದುಕೊಳ್ಳುವುದರ ಮೂಲಕ ಒಂದು ವಿಕೆಟ್‍ನ್ನು ತಮ್ಮ ಖಾತೆಗೆ ತೆಗೆದುಕೊಂಡಿದ್ದಾರೆ.

ಭಾರತೀಯರ ಸಾಮರ್ಥ್ಯ ಗೊತ್ತಿದೆ

ಭಾರತೀಯರ ಸಾಮರ್ಥ್ಯ ಗೊತ್ತಿದೆ

ಇನ್ನೂ ಮುಂದುವರೆದು ಮಾತನಾಡಿರುವ ಕ್ರೈಗ್ ಓವರ್‌ಟನ್ ಟೀಮ್ ಇಂಡಿಯಾ ಆಟಗಾರರು ಸಾಮಾನ್ಯರಲ್ಲ ಅವರು ಒಂದು ತಂಡವಾಗಿ ಯಾವ ರೀತಿಯ ಪ್ರದರ್ಶನವನ್ನು ನೀಡಬೇಕು ಎಂಬುದನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವುದರ ಮೂಲಕ ನಮಗೆ ಕಷ್ಟದ ಸ್ಥಿತಿಯನು ತರಬಲ್ಲಂತಹ ಆಟವನ್ನು ಆಡಿದ್ದಾರೆ ಎಂದು ಟೀಮ್ ಇಂಡಿಯಾ ಆಟಗಾರರ ಸಾಮರ್ಥ್ಯದ ಕುರಿತು ಕ್ರೈಗ್ ಓವರ್‌ಟನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Saturday, August 28, 2021, 8:15 [IST]
Other articles published on Aug 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X