ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಎರಡನೇ ಇನ್ನಿಂಗ್ಸ್‌ನಲ್ಲಿ ಆಸರೆಯಾದ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ

IND vs ENG third test: Team Indias fightback on Day 3

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಲೀಡ್ಸ್ ನಗರದ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಮೊದಲನೇ ಇನ್ನಿಂಗ್ಸ್‌ನಲ್ಲಿ 78 ರನ್ ಗಳಿಸಿ ಆಲ್ ಔಟ್ ಆಗುವುದರ ಮೂಲಕ ಕಳಪೆ ಆರಂಭವನ್ನು ಪಡೆದುಕೊಂಡಿತ್ತು. ಭಾರತದ ಎಲ್ಲಾ ಬ್ಯಾಟ್ಸ್‌ಮನ್‌ಗಳೂ ಸಹ ಕೈಕೊಟ್ಟ ಕಾರಣ ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತ ಅತ್ಯಂತ ಕಡಿಮೆ ಮೊತ್ತವನ್ನು ಕಲೆ ಹಾಕಿತ್ತು.

ಗಂಗೂಲಿ ಜೊತೆ ಕೊಹ್ಲಿಯನ್ನು ಹೋಲಿಕೆ ಮಾಡುವವರಿಗೆ ಸರಿಯಾದ ಉತ್ತರ ಕೊಟ್ಟ ಅಗರ್ಕರ್ಗಂಗೂಲಿ ಜೊತೆ ಕೊಹ್ಲಿಯನ್ನು ಹೋಲಿಕೆ ಮಾಡುವವರಿಗೆ ಸರಿಯಾದ ಉತ್ತರ ಕೊಟ್ಟ ಅಗರ್ಕರ್

ಕೇವಲ ಬ್ಯಾಟಿಂಗ್ ವಿಭಾಗದಲ್ಲಿ ಮಾತ್ರವಲ್ಲದೆ ಬೌಲಿಂಗ್ ವಿಭಾಗದಲ್ಲಿಯೂ ಸಹ ಭಾರತ ತಂಡ ಮೊದಲನೇ ಇನ್ನಿಂಗ್ಸ್‌ನಲ್ಲಿ ಮುಗ್ಗರಿಸಿತ್ತು. ಇಂಗ್ಲೆಂಡ್ ತಂಡದ ಆಟಗಾರರ ವಿಕೆಟ್ ಪಡೆಯಲು ಭಾರತೀಯ ಬೌಲರ್‌ಗಳು ಹರಸಾಹಸಪಟ್ಟರು. ಇಂಗ್ಲೆಂಡ್ ತಂಡದ ಅಗ್ರ ಕ್ರಮಾಂಕದ ಆಟಗಾರರು ಉತ್ತಮ ಪ್ರದರ್ಶನ ನೀಡಿದ ಕಾರಣ ಇಂಗ್ಲೆಂಡ್ ತಂಡ 432 ರನ್ ಗಳಿಸಿ 354 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತು.

ಐಪಿಎಲ್ ಆಡುತ್ತೇನೆ ಆದರೆ ಟಿ ಟ್ವೆಂಟಿ ವಿಶ್ವಕಪ್ ಅನುಮಾನ ಎಂದು ಶಾಕ್ ನೀಡಿದ ಇಂಗ್ಲೆಂಡ್‌ನ ಸ್ಟಾರ್ ಆಟಗಾರಐಪಿಎಲ್ ಆಡುತ್ತೇನೆ ಆದರೆ ಟಿ ಟ್ವೆಂಟಿ ವಿಶ್ವಕಪ್ ಅನುಮಾನ ಎಂದು ಶಾಕ್ ನೀಡಿದ ಇಂಗ್ಲೆಂಡ್‌ನ ಸ್ಟಾರ್ ಆಟಗಾರ

ಹೀಗೆ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಕಳಪೆ ಪ್ರದರ್ಶನ ತೋರಿದ ಭಾರತ ತಂಡ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದು ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. ಭಾರತ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 8 ರನ್ ಗಳಿಸಿ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ನಂತರ ಜವಾಬ್ದಾರಿಯುತ ಆಟವಾಡಿದ ರೋಹಿತ್ ಶರ್ಮಾ 59 ರನ್ ಗಳಿಸಿದರು. ನಂತರ ಹಲವಾರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಸಾಕಷ್ಟು ಟೀಕೆಗಳಿಗೆ ಒಳಗಾಗಿರುವ ಚೇತೇಶ್ವರ್ ಪೂಜಾರ ಮೂರನೆ ದಿನದಾಟದಂತ್ಯಕ್ಕೆ ಅಜೇಯ 91 ರನ್ ಮತ್ತು ನಾಯಕ ವಿರಾಟ್ ಕೊಹ್ಲಿ ಅಜೇಯ 45 ರನ್ ಗಳಿಸಿದ್ದಾರೆ. ಹೀಗೆ ರೋಹಿತ್ ಶರ್ಮಾ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿದ್ದು 139 ರನ್‌ಗಳ ಹಿನ್ನಡೆಯಲ್ಲಿದೆ.

ಶತಕದ ಹೊಸ್ತಿಲಲ್ಲಿ ಚೇತೇಶ್ವರ್ ಪೂಜಾರ

ಶತಕದ ಹೊಸ್ತಿಲಲ್ಲಿ ಚೇತೇಶ್ವರ್ ಪೂಜಾರ

ಅನೇಕ ಟೆಸ್ಟ್ ಪಂದ್ಯಗಳಿಂದ ಶತಕ ಬಾರಿಸದೇ ಕಳಪೆ ಪ್ರದರ್ಶನ ನೀಡುತ್ತಾ ಬಂದಿರುವ ಚೇತೇಶ್ವರ್ ಪೂಜಾರ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆಟವನ್ನಾಡಿದ್ದಾರೆ. ಮೂರನೆ ದಿನದಾಟದಂತ್ಯಕ್ಕೆ 180 ಎಸೆತಗಳಲ್ಲಿ 91 ರನ್ ಬಾರಿಸಿ ಅಜೇಯರಾಗಿ ಉಳಿದಿರುವ ಚೇತೇಶ್ವರ್ ಪೂಜಾರ ನಾಲ್ಕನೇ ದಿನದಾಟದಂದು ಶತಕ ಪೂರೈಸುವ ಯೋಜನೆಯಲ್ಲಿದ್ದಾರೆ. ಪೂಜಾರ ಈ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದರೆ 2 ವರ್ಷಗಳ ನಂತರ ಶತಕ ಬಾರಿಸಿದಂತಾಗುತ್ತದೆ. 2019 ರ ಆಗಸ್ಟ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯವೊಂದರಲ್ಲಿ ಚೇತೇಶ್ವರ್ ಪೂಜಾರ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಸಿಡಿಸಿದ್ದರು.

ಪೂಜಾರ - ಕೊಹ್ಲಿ ಅದ್ಭುತ ಜೊತೆಯಾಟ

ಪೂಜಾರ - ಕೊಹ್ಲಿ ಅದ್ಭುತ ಜೊತೆಯಾಟ

ಮೂರನೇ ವಿಕೆಟ್‍ಗೆ ಜತೆಯಾಗಿರುವ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಉತ್ತಮವಾದ ಜತೆಯಾಟವನ್ನು ನಿರ್ಮಿಸಿದ್ದಾರೆ. ಅಜೇಯ 99 ರನ್ ಜತೆಯಾಟವಾಡಿರುವ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ನಾಲ್ಕನೇ ದಿನದ ಆರಂಭದಲ್ಲಿ ಜತೆಯಾಟದ ಶತಕವನ್ನು ಪೂರೈಸಲಿದ್ದಾರೆ. ಚೇತೇಶ್ವರ ಪೂಜಾರ 180 ಎಸೆತಗಳಲ್ಲಿ ಅಜೇಯ 91 ರನ್ ಬಾರಿಸಿದರೆ ನಾಯಕ ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ ಅಜೇಯ 45 ರನ್ ಬಾರಿಸಿದ್ದಾರೆ.

Rishab Pant ಅವರ Gloves illegal ಎಂದು ಹೇಳಲು ಕಾರಣವೇನು | Oneindia Kannada
ಭಾರತದ ಆಟಗಾರರ ವಿಕೆಟ್ ಪಡೆಯಲು ಪರದಾಡಿದ ಆಂಗ್ಲರು

ಭಾರತದ ಆಟಗಾರರ ವಿಕೆಟ್ ಪಡೆಯಲು ಪರದಾಡಿದ ಆಂಗ್ಲರು

ಭಾರತ ಮತ್ತು ಇಂಗ್ಲೆಂಡ್ ನಡುವೆ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಬರದ ಬೌಲಿಂಗ್ ನಡೆಸಿದ ಆಂಗ್ಲರು ಟೀಮ್ ಇಂಡಿಯಾ ಆಟಗಾರರನ್ನು ಕೇವಲ 78 ರನ್‌ಗಳಿಗೆ ಆಲ್ ಔಟ್ ಮಾಡಿದ್ದರು. ಆದರೆ ಇದೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ವಿಕೆಟ್‍ಗಳನ್ನು ಪಡೆಯಲು ಇಂಗ್ಲೆಂಡ್ ಬೌಲರ್‌ಗಳು ಹರಸಾಹಸ ಪಟ್ಟಿದ್ದಾರೆ. ಮೂರನೇ ದಿನದಾಟದಂದು ಭಾರತದ ಕೇವಲ 2 ವಿಕೆಟ್‍ಗಳನ್ನು ಪಡೆಯಲು ಮಾತ್ರ ಆಂಗ್ಲ ಬೌಲರ್‌ಗಳು ಶಕ್ತರಾದರು. ಇಂಗ್ಲೆಂಡ್ ಪರ ಓಲ್ಲಿ ರಾಬಿನ್ಸನ್ ಮತ್ತು ಕ್ರೈಗ್ ಓವರ್‌ಟನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.

Story first published: Saturday, August 28, 2021, 9:55 [IST]
Other articles published on Aug 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X