ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ತನ್ನ ಆ ಗುಣವನ್ನು ಬಿಟ್ಟರೆ ಹೆಚ್ಚು ರನ್ ಗಳಿಸಬಹುದು; ಕೊಹ್ಲಿಯ ಸಮಸ್ಯೆಯನ್ನು ಬಿಚ್ಚಿಟ್ಟ ಇರ್ಫಾನ್ ಪಠಾಣ್

IND vs ENG: Virat Kohli’s aggressive nature is causing him problems says Irfan Pathan

ಸದ್ಯ ವಿರಾಟ್ ಕೊಹ್ಲಿ ಪಡೆ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಿರತವಾಗಿದೆ. ಈ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿದ್ದು ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡೂ ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ 1-1 ಸಮಬಲವನ್ನು ಸಾಧಿಸಿವೆ. ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸದೇ ಸರಣಿಯಲ್ಲಿ ಹಿನ್ನಡೆಯನ್ನು ಅನುಭವಿಸಿದ್ದ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಸರಣಿ ಸಹಿತ 76 ರನ್‌ಗಳ ಜಯವನ್ನು ಸಾಧಿಸಿ ಸರಣಿಯಲ್ಲಿ ಸಮಬಲವನ್ನು ಸಾಧಿಸಿದೆ.

ಸತತ ಕಳಪೆ ಪ್ರದರ್ಶನ ನೀಡಿದರೂ ತಂಡದಲ್ಲಿ ಸ್ಥಾನ; ಆ ಒಬ್ಬ ಆಟಗಾರನನ್ನು ನಂಬಿ ಬೆನ್ನಿಗೆ ನಿಂತ ಕೊಹ್ಲಿಸತತ ಕಳಪೆ ಪ್ರದರ್ಶನ ನೀಡಿದರೂ ತಂಡದಲ್ಲಿ ಸ್ಥಾನ; ಆ ಒಬ್ಬ ಆಟಗಾರನನ್ನು ನಂಬಿ ಬೆನ್ನಿಗೆ ನಿಂತ ಕೊಹ್ಲಿ

ಇನ್ನು ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಅಕ್ಷರಶಃ ವಿಫಲರಾದರು. ಮೊದಲನೇ ಇನ್ನಿಂಗ್ಸ್‌ನಲ್ಲಿ ಕೇವಲ 78 ರನ್‌ಗಳಿಗೆ ಆಲ್ ಔಟ್ ಆದ ಟೀಮ್ ಇಂಡಿಯಾ ಆಟಗಾರರು ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡರಾದರೂ ನಾಲ್ಕನೇ ದಿನದಲ್ಲಿ ಮತ್ತೆ ಕಳಪೆ ಪ್ರದರ್ಶನವನ್ನು ಮುಂದುವರೆಸಿದರು, ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಸಾಲುಸಾಲಾಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.

ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಸಿಹಿ ಸುದ್ದಿ; ಇಂಗ್ಲೆಂಡ್‌ನ ಈ ಬಲಿಷ್ಠ ಆಟಗಾರ ಹೊರಬೀಳುವ ಸಾಧ್ಯತೆ!ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಸಿಹಿ ಸುದ್ದಿ; ಇಂಗ್ಲೆಂಡ್‌ನ ಈ ಬಲಿಷ್ಠ ಆಟಗಾರ ಹೊರಬೀಳುವ ಸಾಧ್ಯತೆ!

ಅದರಲ್ಲಿಯೂ ಕಳೆದ ಕೆಲ ಪಂದ್ಯಗಳಿಂದ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವುತ್ತಿರುವ ವಿರಾಟ್ ಕೊಹ್ಲಿ ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿಯೂ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಮತ್ತೆ ವಿಫಲರಾಗಿದ್ದಾರೆ. ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 55 ರನ್ ಬಾರಿಸಿದ್ದು ಬಿಟ್ಟರೆ ಪ್ರಸ್ತುತ ಸರಣಿಯಲ್ಲಿ ವಿರಾಟ್ ಕೊಹ್ಲಿ ಬೇರೆ ಯಾವುದೇ ಅರ್ಧಶತಕವನ್ನೂ ಕೂಡ ಬಾರಿಸಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಫಾರ್ಮ್ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪಂಡಿತರು ವಿರಾಟ್ ಕೊಹ್ಲಿ ಪ್ರದರ್ಶನದ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ಕುರಿತು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರತಿಕ್ರಿಯಿಸಿದ್ದು ಈ ಕೆಳಕಂಡಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಕೋಪವೇ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ

ಕೊಹ್ಲಿ ಕೋಪವೇ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ

ವಿರಾಟ್ ಕೊಹ್ಲಿ ಸದ್ಯ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಸತತವಾಗಿ ಎಡವುತ್ತಿದ್ದು ಸಮಸ್ಯೆಗೆ ಸಿಲುಕಿಹಾಕಿಕೊಂಡಿದ್ದಾರೆ. ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ವಿರಾಟ್ ಕೊಹ್ಲಿ ರೋಷಾವೇಶದ ಗುಣವೇ ಅವರನ್ನು ಸಮಸ್ಯೆಗೆ ಸಿಲುಕಿಸುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ವೇಳೆ ಇಂಗ್ಲೆಂಡ್ ತಂಡದ ಬೌಲರ್‌ಗಳ ವಿರುದ್ಧ ತಾಂತ್ರಿಕವಾಗಿ ಬ್ಯಾಟ್ ಬೀಸುವ ಬದಲಾಗಿ ಹಿಡಿತವನ್ನು ಸಾಧಿಸಲು ಮುಂದಾಗುತ್ತಿದ್ದಾರೆ. ಹೀಗಾಗಿಯೇ ವಿರಾಟ್ ಕೊಹ್ಲಿ ಒಳ್ಳೆಯ ಹೊಡೆತವನ್ನು ಬಾರಿಸದೆ ಕ್ಯಾಚ್ ನೀಡಿ ಔಟ್ ಆಗುತ್ತಿದ್ದಾರೆ ಎಂದು ಇರ್ಫಾನ್ ಪಠಾಣ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮಯಾಂಕ್ ಅಗರ್ವಾಲ್ ಗೆ ವಿಲನ್ ಆದ ವಿರಾಟ್ ಕೊಹ್ಲಿ! | Oneindia Kannada
ಕೊಹ್ಲಿ ತಾಳ್ಮೆಯ ಆಟವನ್ನು ಆಡಬೇಕು ಎಂದ ಸಂಜಯ್ ಬಂಗಾರ್

ಕೊಹ್ಲಿ ತಾಳ್ಮೆಯ ಆಟವನ್ನು ಆಡಬೇಕು ಎಂದ ಸಂಜಯ್ ಬಂಗಾರ್

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪ್ರಸ್ತುತ ಸರಣಿಯಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡುತ್ತಿರುವುದರ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ವೇಳೆ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳ ವಿರುದ್ಧ ವಿರಾಟ್ ಕೊಹ್ಲಿ ತಾಳ್ಮೆಯಿಂದ ಆಟವಾಡುವಲ್ಲಿ ಎಡವುತ್ತಿದ್ದಾರೆ ಆದರೆ, ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ತಂಡದ ಬೌಲರ್‌ಗಳು ವಿರಾಟ್ ಕೊಹ್ಲಿ ವಿರುದ್ಧ ತಾಳ್ಮೆಯ ಆಟವನ್ನು ಆಡುವುದರ ಮೂಲಕ ವಿಕೆಟ್ ಕಬಳಿಸುತ್ತಿದ್ದಾರೆ ಎಂದು ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.

ಸರಣಿಯಲ್ಲಿ ಇದುವರೆಗೂ ವಿರಾಟ್ ಕೊಹ್ಲಿಯ ಆಟ ಹೀಗಿದೆ

ಸರಣಿಯಲ್ಲಿ ಇದುವರೆಗೂ ವಿರಾಟ್ ಕೊಹ್ಲಿಯ ಆಟ ಹೀಗಿದೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಟ್ಟು 5 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ 5 ಇನ್ನಿಂಗ್ಸ್‌ನ ಪೈಕಿ ವಿರಾಟ್ ಕೊಹ್ಲಿ ಗಳಿಸಿರುವುದು ಒಟ್ಟು 124 ರನ್ ಮಾತ್ರ. ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 55 ರನ್ ಗಳಿಸಿದ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದರು, ಇದು ಸರಣಿಯಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ ಏಕೈಕ ಅರ್ಧಶತಕ ಕೂಡ ಹೌದು. ಹೀಗೆ ವಿರಾಟ್ ಕೊಹ್ಲಿ ಪ್ರಸ್ತುತ ಸರಣಿಯಲ್ಲಿ ಹೇಳಿಕೊಳ್ಳುವಂಥ ದೊಡ್ಡ ಪ್ರದರ್ಶನವನ್ನು ನೀಡದೇ ಕೆಟ್ಟ ಫಾರ್ಮ್‌ನಲ್ಲಿದ್ದಾರೆ.

Story first published: Tuesday, August 31, 2021, 19:22 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X