ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಆಟಗಾರ ಪ್ರಸ್ತುತ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್: ಇಂಗ್ಲೆಂಡ್ ಕ್ರಿಕೆಟಿಗನನ್ನು ಕೊಂಡಾಡಿದ ಸೆಹ್ವಾಗ್

Ind vs Eng: Virender Sehwag Praises England crickter said Best Test Batsman In World Right Now

ಭಾರತ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಮಾಜಿ ನಾಯಕ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಇಬ್ಬರು ಆಟಗಾರರು ಕೂಡ ಈ ವರ್ಷ ಅದ್ಭುತ ಫಾರ್ಮ್‌ನಲ್ಲಿದ್ದು ಇಂಗ್ಲೆಂಡ್ ತಂಡದ ಯಶಸ್ಸಿನಲ್ಲಿ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಇಂಗ್ಲೆಂಡ್‌ನ ಪ್ರಮುಖ ಆಟಗಾರನ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಮಾತ್ರವಲ್ಲದೆ ಪ್ರಸ್ತುತ ವಿಉಶ್ವ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಈತ ಎಂದಿದ್ದಾರೆ ವಿರೇಂದ್ರ ಸೆಹ್ವಾಗ್. ಹಾಗಾದರೆ ಭಾರತ ಮಾಜಿ ಕ್ರಿಕೆಟಿಗ ಪ್ರಶಂಸಿಸಿದ ಆ ಕ್ರಿಕೆಟಿಗ ಯಾರು? ಮುಂದೆ ಓದಿ..

ಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯ

ಜೋ ರೂಟ್ ಬಗ್ಗೆ ಸೆಹ್ವಾಗ್ ವಿಶೇಷ ಮಾತು

ಜೋ ರೂಟ್ ಬಗ್ಗೆ ಸೆಹ್ವಾಗ್ ವಿಶೇಷ ಮಾತು

ವೀರೇಂದ್ರ ಸೆಹ್ವಾಗ್ ಮುಕ್ತಕಂಠದಿಂದ ಹೊಗಳಿದ ಆ ಆಟಗಾರ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್. ಕಳೆದ ಎರಡು ವರ್ಷಗಳಿಂದ ಜೋ ರುಟ್ ಫಾರ್ಮ್ ಅಮೋಘವಾಗಿದೆ. ಭಾರತ ವಿರುದ್ಧಧ ಈ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಬರೊಬ್ಬರಿ ನಾಲ್ಕು ಶತಕ ಸಿಡಿಸಿದ್ದಾರೆ. ಈ ಮೂಲಕ ಈ ಸರಣಿಯಲ್ಲಿ ಭಾರತ ತಂಡಕ್ಕೆ ದೊಡ್ಡ ಸವಾಲಾಗಿ ಉಳಿದಿದ್ದಾರೆ. ಈ ಪ್ರದರ್ಶನದ ಕಾರಣದಿಂದಾಗಿಯೇ ಸೆಹ್ವಾಗ್ ರೂಟ್ ಬಗ್ಗೆ ಈ ಮಾತುಗಳನ್ನಾಡಿದ್ದಾರೆ.

ಟ್ವೀಟ್‌ನಲ್ಲಿ ಸೆಹ್ವಾಗ್ ಹೇಳಿದ್ದಿಷ್ಟು!

ಟ್ವೀಟ್‌ನಲ್ಲಿ ಸೆಹ್ವಾಗ್ ಹೇಳಿದ್ದಿಷ್ಟು!

ಸರಣಿಯ ಮುಕ್ತಾಯದ ಬಳಿಕ ಸೆಹ್ವಾಗ್ ಟ್ವಿಟ್ ಮಾಡಿದ್ದು ಜೋ ರುಟ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. "ಅದ್ಭುತವಾದ ರನ್ ಮಷಿನ್ ಜೋ ರುಟ್ ಅವರಿಂದ ಈ ಸರಣಿಯಲ್ಲಿ ನಾಲ್ಕನೇ ಶತಕ ದಾಖಲಾಗಿದೆ. ಪ್ರಸ್ತುತ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಇವರು" ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.

ಸೋಲು ಅನುಭವಿಸಿದ ಭಾರತ

ಸೋಲು ಅನುಭವಿಸಿದ ಭಾರತ

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಮೊದಲ ಮೂರು ದಿನಗಳ ಕಾಲ ಅಮೋಘ ಪ್ರದರ್ಶನ ನೀಡಿತ್ತು. ಈ ಮೂಲಕ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸುವುದರ ಜೊತೆಗೆ ಗೆಲುವು ಸಾಧಿಸುವ ಆತ್ಮವಿಶ್ವಾಸದಲ್ಲಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಸಂಪೂರ್ಣ ವೈಫಲ್ಯ ಅನುಭವಿಸಿತು. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಎಡವಿದ ಭಾರತ ನಿರೀಕ್ಷಿತ ಗುರಿ ನಿಗದಿಪಡಿಸುವಲ್ಲಿ ವಿಫಲವಾಯಿತು. ಬಳಿಕ ಬೌಲಿಂಗ್‌ನಲ್ಲಿಯೂ ಹಿನ್ನಡೆ ಅನುಭವಿಸುವುದರೊಂದಿಗೆ ಸೋಲು ಅನುಭವಿಸಿದೆ.

ಆಡುವ ಬಳಗ ಹೀಗಿದೆ

ಆಡುವ ಬಳಗ ಹೀಗಿದೆ

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಬೆನ್ ಫೋಕ್ಸ್, ಕ್ರೇಗ್ ಓವರ್ಟನ್, ಜೇಮೀ ಓವರ್ಟನ್, ಹ್ಯಾರಿ ಬ್ರೂಕ್
ಭಾರತ: ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ನಾಯಕ)
ಬೆಂಚ್: ಉಮೇಶ್ ಯಾದವ್, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್

Story first published: Wednesday, July 6, 2022, 10:22 [IST]
Other articles published on Jul 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X