ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ವಿರಾಟ್ ಕೊಹ್ಲಿಯ ಈ ತಪ್ಪು ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್

IND vs ENG: VVS Laxman warns Virat Kohli against taking emotional reviews

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈಗಾಗಲೇ ಎರಡನೇ ಟೆಸ್ಟ್ ಪಂದ್ಯದ ಮೊದಲೆರಡು ದಿನಗಳ ಆಟ ಮುಗಿದಿದ್ದು ಮೂರನೇ ದಿನದಾಟ ಶನಿವಾರ (ಆಗಸ್ಟ್ 14) ನಡೆಯಲಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದುಕೊಂಡ ವಿರಾಟ್ ಕೊಹ್ಲಿ ಪಡೆ ಉತ್ತಮ ಆರಂಭವನ್ನು ಪಡೆದುಕೊಂಡಿತು. ಕೆಎಲ್ ರಾಹುಲ್ ಅಮೋಘ ಶತಕದ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 364 ರನ್‌ ಗಳಿಸಿ ಆಲ್ ಔಟ್ ಆಯಿತು.

ಅಜಿಂಕ್ಯಾ ರಹಾನೆ ಬದಲು ಭಾರತ ಟೆಸ್ಟ್ ತಂಡದ ಉಪನಾಯಕನಾಗುವ ಸಾಧ್ಯತೆಯಿರುವ 3 ಆಟಗಾರರು!ಅಜಿಂಕ್ಯಾ ರಹಾನೆ ಬದಲು ಭಾರತ ಟೆಸ್ಟ್ ತಂಡದ ಉಪನಾಯಕನಾಗುವ ಸಾಧ್ಯತೆಯಿರುವ 3 ಆಟಗಾರರು!

ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ 129, ರೋಹಿತ್ ಶರ್ಮಾ 83, ವಿರಾಟ್ ಕೊಹ್ಲಿ 42 ಮತ್ತು ರವೀಂದ್ರ ಜಡೇಜಾ 40 ರನ್ ಬಾರಿಸಿ ಗಮನಾರ್ಹ ಆಟವನ್ನಾಡಿದರು. ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮುಗಿಸಿದ ನಂತರ ಬೌಲಿಂಗ್ ಆರಂಭಿಸಿರುವ ಟೀಂ ಇಂಡಿಯಾ ಎರಡನೆ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡದ 3 ವಿಕೆಟ್‍ಗಳನ್ನು ಪಡೆದುಕೊಂಡಿದೆ. ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ರೊರಿ ಬರ್ನ್ಸ್ ಮತ್ತು ಜೋ ರೂಟ್ ಉತ್ತಮ ಆಟದ ನೆರವಿನಿಂದ 3 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದೆ. ಭಾರತ ತಂಡದ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದುಕೊಂಡು ಮಿಂಚಿದ್ದು ರಿವ್ಯೂ ವಿಚಾರವಾಗಿ ಈ ಬಾರಿ ಭಾರೀ ಸದ್ದು ಮಾಡಿದ್ದಾರೆ.

ಭಾರತೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರ ಹಿಂದಿನ ಕೆಟ್ಟ ಕಾರಣವನ್ನು ಬಿಚ್ಚಿಟ್ಟ ಉನ್ಮುಕ್ತ್ ಚಂದ್!ಭಾರತೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರ ಹಿಂದಿನ ಕೆಟ್ಟ ಕಾರಣವನ್ನು ಬಿಚ್ಚಿಟ್ಟ ಉನ್ಮುಕ್ತ್ ಚಂದ್!

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ತನ್ನ ಎರಡು ರಿವ್ಯೂಗಳನ್ನು ವ್ಯರ್ಥ ಮಾಡಿದೆ. ಈ ಎರಡೂ ರಿವ್ಯೂ ಕೂಡ ಮೊಹಮ್ಮದ್ ಸಿರಾಜ್ ಓವರ್‌ಗಳಲ್ಲಿ ಖರ್ಚಾಗಿದ್ದು ಔಟ್ ಅಲ್ಲದ ಎಸೆತಕ್ಕೆ ರಿವ್ಯೂಗಳನ್ನು ವ್ಯರ್ಥ ಮಾಡಿದ್ದಕ್ಕೆ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಔಟ್ ಆಗಿರದಿದ್ದರೂ ಸಹ ರಿವ್ಯೂ ಮನವಿ ಮಾಡಿ ವ್ಯರ್ಥ ಮಾಡುವುದನ್ನು ವಿರಾಟ್ ಕೊಹ್ಲಿಯವರನ್ನು ನೋಡಿ ಕಲಿಯಬೇಕೆಂದು ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಿವ್ಯೂ ಕುರಿತಾಗಿ ಇದೀಗ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮಾತನಾಡಿದ್ದು ಈ ಕೆಳಕಂಡಂತೆ ಪ್ರತಿಕ್ರಿಯೆ ನೀಡಿದ್ದಾರೆ..

ಸುಖಾಸುಮ್ಮನೆ ರಿವ್ಯೂ ಬಳಸುವುದು ಅನಗತ್ಯ

ಸುಖಾಸುಮ್ಮನೆ ರಿವ್ಯೂ ಬಳಸುವುದು ಅನಗತ್ಯ

ಸರಿಯಾಗಿ ಔಟ್ ಅಥವಾ ನಾಟೌಟ್ ಎಂಬ ಖಚಿತತೆಯಿಲ್ಲದೆ ಸುಖಾಸುಮ್ಮನೆ ರಿವ್ಯೂಗಳನ್ನು ಬಳಸುವುದು ಅನಗತ್ಯ ಎಂದು ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾದ ರಿವ್ಯೂ ಬಳಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಔಟ್ ಆಗಿದೆ ಎಂಬುದು ಖಚಿತವಾಗಿ ಗೊತ್ತಿದ್ದರೆ ಮಾತ್ರ ರಿವ್ಯೂ ಬಳಸಲಿ, ಅದನ್ನು ಬಿಟ್ಟು ಸರಿಯಾದ ಮಾಹಿತಿಯಿಲ್ಲದೆ ಸುಖಾಸುಮ್ಮನೆ ರಿವ್ಯೂಗಳನ್ನು ಬಳಸಿ ವ್ಯರ್ಥ ಮಾಡಬಾರದು ಎಂದು ವಿವಿಎಸ್ ಲಕ್ಷ್ಮಣ್ ಕಿಡಿಕಾರಿದ್ದಾರೆ.

ಈ ರೀತಿ ರಿವ್ಯೂಗಳಿಲ್ಲದೆ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ ಆ್ಯಶಸ್ ಸೋತಿತ್ತು!

ಈ ರೀತಿ ರಿವ್ಯೂಗಳಿಲ್ಲದೆ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ ಆ್ಯಶಸ್ ಸೋತಿತ್ತು!

2019ರಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಕೊನೆಯ ಪಂದ್ಯದಲ್ಲಿಯೂ ಸಹ ಆಸ್ಟ್ರೇಲಿಯಾ ರಿವ್ಯೂಗಳಿಲ್ಲದೆ ಇಂಗ್ಲೆಂಡ್ ವಿರುದ್ಧ ಸೋತಿದ್ದನ್ನು ಹೇಗೆ ತಾನೆ ಮರೆಯಲು ಸಾಧ್ಯ ಹೇಳಿ ಎಂದು ವಿವಿಎಸ್ ಲಕ್ಷ್ಮಣ್ ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಕೂಡ ವ್ಯರ್ಥವಾಗಿ ರಿವ್ಯೂಗಳನ್ನು ಕಳೆದುಕೊಂಡಿತ್ತು. ಕೊನೆಯದಾಗಿ ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದ ಬೆನ್ ಸ್ಟೋಕ್ಸ್ ಔಟ್ ಆದಾಗ ಆಸ್ಟ್ರೇಲಿಯಾ ತನ್ನ ಬಳಿ ಯಾವುದೇ ರೀತಿಯ ಇಲ್ಲದ ಕಾರಣ ರಿವ್ಯೂ ಬಳಸಲಾಗದೆ ಕೊನೆಗೆ ಪಂದ್ಯವನ್ನು ಸೋಲಬೇಕಾಯಿತು, ಇದೇ ರೀತಿ ಟೀಮ್ ಇಂಡಿಯಾ ಕೂಡ ರಿವ್ಯೂಗಳನ್ನು ವ್ಯರ್ಥವಾಗಿ ಬಳಸುತ್ತಿದ್ದರೆ ಮುಂದೆ ಸಮಸ್ಯೆಗಳಾಗಬಹುದು ಎಂದು ವಿವಿಎಸ್ ಲಕ್ಷ್ಮಣ್ ಎಚ್ಚರಿಸಿದ್ದಾರೆ.

ಟೀಮ್ ಇಂಡಿಯಾ ಮದ್ಯಮ ಕ್ರಮಾಂಕದಿಂದ ತೀರಾ ನಿರಾಸೆ | Oneindia Kannada
ರಿವ್ಯೂಗಳಲ್ಲಿ ಗೊಂದಲಗಳಿರಬಾರದು

ರಿವ್ಯೂಗಳಲ್ಲಿ ಗೊಂದಲಗಳಿರಬಾರದು

ಇನ್ನೂ ಮುಂದುವರೆದು ಕೊಹ್ಲಿ ರಿವ್ಯೂ ತೆಗೆದುಕೊಂಡಿದ್ದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್ ವಿರಾಟ್ ಕೊಹ್ಲಿ ರಿವ್ಯೂ ತೆಗೆದುಕೊಳ್ಳುವಾಗ ಯಾವುದೇ ಗೊಂದಲಕ್ಕೆ ಒಳಗಾಗಬಾರದು, ಅದರಲ್ಲಿಯೂ ಬೌಲರ್ ಮೇಲಿನ ಕನಿಕರದಿಂದ ಯಾವುದೇ ಕಾರಣಕ್ಕೂ ರಿವ್ಯೂ ಬಳಸಬಾರದು ಎಂದು ಹೇಳಿಕೆ ನೀಡಿದ್ದಾರೆ. ಬೌಲರ್ ಪ್ರಕಾರ ಆತ ಮಾಡುವ ಎಸೆತ ಸರಿಯಾಗಿಯೇ ಇರುತ್ತದೆ ಹೀಗಾಗಿ ಆತ ರಿವ್ಯೂ ತೆಗೆದುಕೊಳ್ಳಲು ಪ್ರೇರೇಪಿಸುತ್ತಾನೆ, ಅದೇ ಸಮಯದಲ್ಲಿ ಮತ್ತಿತರ ಆಟಗಾರರು ಬಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಶುರು ಮಾಡುತ್ತಾರೆ ಹೀಗಾಗಿಯೇ ರಿವ್ಯೂಗಳ ಬಗ್ಗೆ ಗೊಂದಲ ಉಂಟಾಗಿ ಸರಿಯಾದ ನಿರ್ಣಯ ತೆಗೆದುಕೊಳ್ಳಲಾಗುವುದಿಲ್ಲ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ತೆಗೆದುಕೊಂಡಿರುವ ಈ ರಿವ್ಯೂ ಕುರಿತು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ವಿರಾಟ್ ಕೊಹ್ಲಿ ಸತತವಾಗಿ ಪಂದ್ಯಗಳಲ್ಲಿ ಟಾಸ್ ಸೋಲುವುದು ಮಾತ್ರವಲ್ಲದೇ ರಿವ್ಯೂಗಳನ್ನು ದುರುಪಯೋಗಪಡಿಸಿಕೊಳ್ಳುವುದರಲ್ಲೂ ಸಹ ಅಗ್ರಸ್ಥಾನಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ವಿರಾಟ್ ಕೊಹ್ಲಿ ತೆಗೆದುಕೊಂಡ ಈ ತಪ್ಪಾದ ರಿವ್ಯೂ ಕುರಿತು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ಕೂಡ ಮಾತನಾಡಿದ್ದು ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರು ಕೆಟ್ಟ ರಿವ್ಯೂಗಳನ್ನು ಮನವಿ ಮಾಡುವುದನ್ನು ನೋಡಿದರೆ ತಡೆಯಲಾರದಷ್ಟು ನಗು ಬರುತ್ತದೆ ಎಂದು ಕಾಲೆಳೆದಿದ್ದಾರೆ. ಯಾವುದೋ ದೊಡ್ಡ ಸರ್ಕಾರವನ್ನು ರಾಜಕಾರಣಿಗಳು ಕಟ್ಟುವ ಹಾಗೆ ಗುಂಪು ಕಟ್ಟಿ ನಿರ್ಣಯವನ್ನು ತೆಗೆದುಕೊಂಡು ರಿವ್ಯೂವನ್ನು ಭಾರತೀಯರು ಸೋತರು ಎಂದು ಮೈಕಲ್ ವಾನ್ ಟೀಮ್ ಇಂಡಿಯಾದ ಕೆಟ್ಟ ರಿವ್ಯೂ ಮನವಿಯನ್ನು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ ರಿವ್ಯೂಗಳನ್ನು ಸರಿಯಾಗಿ ಬಳಸಿಕೊಂಡ ತಂಡವನ್ನು ಸರಣಿಯಲ್ಲಿ ವಿಜೇತರನ್ನಾಗಿ ಘೋಷಿಸಿದರೆ ಖಂಡಿತವಾಗಿಯೂ ಇಂಗ್ಲೆಂಡ್ ತಂಡ ಟ್ರೋಫಿಯನ್ನು ಗೆಲ್ಲಲಿದೆ ಮತ್ತು ಭಾರತ ತಂಡ ಹೀನಾಯವಾಗಿ ಸೋಲಲಿದೆ ಎಂದು ಕೂಡ ಮೈಕಲ್ ವಾನ್ ಟೀಕಿಸಿದ್ದಾರೆ.

Story first published: Saturday, August 14, 2021, 20:06 [IST]
Other articles published on Aug 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X