ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್ ಆರಂಭಿಕನಾಗಿ ಕಣಕ್ಕಿಳಿಯಲಿ ಎಂದ ವಾಸಿಮ್ ಜಾಫರ್

Ind vs Eng: Wasim Jaffer said Rishabh Pant can succeed as the opener in T20I

ಟಿ20 ವಿಶ್ವಕಪ್‌ಗೆ ಇನ್ನು ಕೆಲವೇ ತಿಂಗಳುಗಳ ಮಾತ್ರವೇ ಬಾಕಿಯಿರುವ ಕಾರಣ ಪ್ರತಿಯೊಂದು ಸರಣಿ ಕೂಡ ಭಾರತ ತಂಡಕ್ಕೆ ಪ್ರಮುಖವಾಗಿದೆ. ಮಹತ್ವದ ಟೂರ್ನಿಯಲ್ಲಿ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ಆಯ್ಕೆ ಸಮಿತಿ ತಯಾರಿ ನಡೆಸುತ್ತಿದ್ದು ಪ್ರತಿಯೊಬ್ಬ ಆಟಗಾರರ ಪ್ರದರ್ಶನದ ಮೇಲೆಯೂ ಕಣ್ಣಿಟ್ಟಿದೆ. ಯಾವ ಕ್ರಮಾಂಕಕ್ಕೆ ಯಾವ ಆಟಗಾರ ಹೆಚ್ಚು ಸೂಕ್ತ ಎನ್ನುವ ನಿಟ್ಟಿನಲ್ಲಿ ವಿಶ್ಲೇಷಣೆಗಳು ಜೋರಾಗಿ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಆರಂಭಿಕ ಸ್ಥಾನಕ್ಕೆ ರಿಷಭ್ ಪಂತ್ ಹೆಸರು ಸೂಚಿಸಿದ್ದಾರೆ. ಈಗಾಗಲೇ ಅಗ್ರ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಆಟಗಾರರರು ಪೈಪೋಟಿ ನಡೆಸುತ್ತಿದ್ದು ಯಾರಿಗೆ ಅವಕಾಶ ದೊರೆಯಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ರಿಷಭ್ ಪಂತ್ ಹೆಸರು ಸೂಚಿಸಿದ್ದು ಆಯ್ಕೆಗಾರರು ಈ ನಿಟ್ಟಿನಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಟೆಸ್ಟ್ ಕ್ರಿಕೆಟ್‍ನಲ್ಲಿ ದಾಖಲಾಗಿರುವ ದೊಡ್ಡ ರನ್ ಚೇಸ್‌ಗಳ ಪಟ್ಟಿ; ದೊಡ್ಡ ಚೇಸ್ ಮಾಡಿದ ತಂಡ ಯಾವುದು?ಟೆಸ್ಟ್ ಕ್ರಿಕೆಟ್‍ನಲ್ಲಿ ದಾಖಲಾಗಿರುವ ದೊಡ್ಡ ರನ್ ಚೇಸ್‌ಗಳ ಪಟ್ಟಿ; ದೊಡ್ಡ ಚೇಸ್ ಮಾಡಿದ ತಂಡ ಯಾವುದು?

ಇಂಗ್ಲೆಂಡ್ ವಿರುದ್ಧ ಪಂತ್ ಆರಂಭಿಕನಾಗಿ ಕಣಕ್ಕಿಳಿಯಲಿ

ಇಂಗ್ಲೆಂಡ್ ವಿರುದ್ಧ ಪಂತ್ ಆರಂಭಿಕನಾಗಿ ಕಣಕ್ಕಿಳಿಯಲಿ

ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ರಿಷಬ್ ಪಂತ್ ಅವರನ್ನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಬೇಕು ಎಂದಿದ್ದಾರೆ ವಾಸಿಮ್ ಜಾಫರ್. ಭಾರತ ತಂಡದ ಮ್ಯಾನೇಜ್‌ಮೆಂಟ್ ಈ ಅವಕಾಶವನ್ನು ಯುವ ವಿಕೆಟ್ ಕೀಪರ್‌ಗೆ ನೀಡಬೇಕು ಎಂದಿರುವ ಜಾಫರ್ ಈ ಮೂಲಕ ಚುಟಕು ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಿಲ್ಲ ಪಂತ್

ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಿಲ್ಲ ಪಂತ್

ರಿಷಭ್ ಪಂತ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೆಸ್ಟ್ ತಂಡದ ಪ್ರಮುಖ ಅಸ್ತ್ರವಾಗು ಗುರುತಿಸಿಕೊಂಡಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೀಮಿತ ಓವರ್‌ಗಳ ಪಂದ್ಯದಲ್ಲಿ ಪಂತ್ ಬ್ಯಾಟ್‌ನಿಂದ ಇನ್ನೂ ಹೇಳಿಕೊಳ್ಳುವಂತಾ ಪ್ರದರ್ಶನ ಬಂದಿಲ್ಲ. ಅದರಲ್ಲೂ ಇತ್ತೀಚೆಗೆ ಪಂತ್ ವೈಟ್‌ಬಾಲ್ ಸರಣಿಗಳಲ್ಲಿ ಮತ್ತಷ್ಟು ಕಳೆಗುಂದಿದಂತೆ ಕಂಡು ಬಂದಿದ್ದಾರೆ. ಕಳೆದ ಐಪಿಎಲ್ ಟೂರ್ನಿ, ನಂತರ ದಕ್ಷಿಣ ಆಪ್ರಿಕಾ ವಿರುದ್ಧದ ಸರಣಿಯಲ್ಲಿಯೂ ಪಂತ್ ಸಂಪೂರ್ನ ವೈಫಲ್ಯ ಅನುಭವಿಸಿದ್ದರು.

ಆರಂಭಿಕನಾಗಿ ಪಂತ್ ಮಿಂಚಬಲ್ಲರು

ಆರಂಭಿಕನಾಗಿ ಪಂತ್ ಮಿಂಚಬಲ್ಲರು

"ಭಾರತದ ಮ್ಯಾನೇಜ್‌ಮೆಂಟ್ ಟಿ20 ಪಂದ್ಯದಲ್ಲಿ ರಿಷಭ್ ಪಂತ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಬಗ್ಗೆ ಯೋಚನೆ ನಡೆಸಬೇಕಿದೆ. ಆರಂಭಿಕ ಸ್ಥಾನದಲ್ಲಿ ರಿಷಬ್ ಪಂತ್ ಅವರಿಂದ ಅದ್ಭುತ ಪ್ರದರ್ಶನ ಬರಬಹುದು" ಎಂದು ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ಸಿ ಹೈಡ್ರಾಮಾ!! ವಿರಾಟ್ ಬಿಟ್ರೆ ಸಮರ್ಥ ನಾಯಕ ಯಾರು ಇಲ್ಲ | OneIndia Kannada
ಇಂಗ್ಲೆಂಡ್ ವಿರುದ್ಧದ ಸರಣಿ ಪಂತ್‌ಗೆ ಮತ್ತೊಂದು ಅವಕಾಶ

ಇಂಗ್ಲೆಂಡ್ ವಿರುದ್ಧದ ಸರಣಿ ಪಂತ್‌ಗೆ ಮತ್ತೊಂದು ಅವಕಾಶ

ಇನ್ನು ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ರಿಷಭ್ ಪಂತ್ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿ ಹಿಂದುಳಿದಂತೆ ಭಾಸವಾಗುತ್ತಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಸಾಕಷ್ಟು ಸ್ಪರ್ಧೆಯಿದ್ದು ಇಶಾನ್ ಕಿಶನ್, ಕೆಎಲ್ ರಾಹುಲ್‌ರಂತಾ ಆಟಗಾರರ ಜೊತೆಗೆ ದಿನೇಶ್ ಕಾರ್ತಿಕ್ ಕೂಡ ಇತ್ತೀಚೆಗೆ ಅಮೋಘ ಪ್ರದರ್ಶನ ನೀಡುತ್ತಾ ಮಿಂಚುತ್ತಿದ್ದಾರೆ. ಹೀಗಾಗಿ ಪಂತ್ ವಿಶ್ವಕಪ್ ತಂಡದಲ್ಲಿ ಸ್ಥಾನ ಗಳಿಸುವ ನಿಟ್ಟಿನಲ್ಲಿ ಸ್ಪರ್ಧೆಯಲ್ಲಿ ಮುಂದುವರಿಯಬೇಕಾದರೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮಿಂಚಲೇಬೇಕಿದೆ.

Story first published: Thursday, July 7, 2022, 8:25 [IST]
Other articles published on Jul 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X