ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG 5ನೇ ಟೆಸ್ಟ್: ಶತಕ ಬಾರಿಸಿದರೂ 3 ರನ್‌ಗಳಿಂದ ಕೊಹ್ಲಿ ದಾಖಲೆ ಕೈತಪ್ಪಿಸಿಕೊಂಡ ಪಂತ್

IND vs ENG: Which Indian cricketer has scored highest test run in Edgbaston cricket ground?

ಕಳೆದ ವರ್ಷ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಆಯೋಜನೆಯಾಗಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಇದೀಗ ಮರು ಆಯೋಜನೆಯಾಗಿದೆ. ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ಜುಲೈ 1ರಿಂದ ಶುರುವಾಗಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಜಸ್ ಪ್ರೀತ್ ಬುಮ್ರಾ ನಾಯಕನಾಗಿ ಮುನ್ನಡೆಸುತ್ತಿದ್ದಾರೆ.

ಪಂತ್ vs ಧೋನಿ, ಸಂಗಕ್ಕಾರ, ಗಿಲ್‌ಕ್ರಿಸ್ಟ್: 31 ಟೆಸ್ಟ್ ನಂತರ ಹೆಚ್ಚು ರನ್ ಮತ್ತು ಶತಕ ಸಿಡಿಸಿದ ಕೀಪರ್ ಯಾರು?ಪಂತ್ vs ಧೋನಿ, ಸಂಗಕ್ಕಾರ, ಗಿಲ್‌ಕ್ರಿಸ್ಟ್: 31 ಟೆಸ್ಟ್ ನಂತರ ಹೆಚ್ಚು ರನ್ ಮತ್ತು ಶತಕ ಸಿಡಿಸಿದ ಕೀಪರ್ ಯಾರು?

ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಫೀಲ್ಡಿಂಗ್ ಆಯ್ದುಕೊಂಡ ಕಾರಣ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆರಂಭಿಸಿತು. ಎರಡನೇ ದಿನದಾಟದಂದು ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್‌ ಮುಕ್ತಾಯಗೊಳಿಸಿದ ಟೀಮ್ ಇಂಡಿಯಾ 416 ರನ್ ಕಲೆಹಾಕಿ ಆಲ್ ಔಟ್ ಆಗಿದೆ. ಇನ್ನು ಮೊದಲ ದಿನದಾಟದಂದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಈ ಸಂದರ್ಭದಲ್ಲಿ ಆರನೇ ವಿಕೆಟ್‍ಗೆ ಜತೆಯಾದ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ 222 ರನ್‌ಗಳ ಜತೆಯಾಟವಾಡಿದರು.

ಟೆಸ್ಟ್ ಕ್ರಿಕೆಟ್‍: ಒಂದು ಓವರ್‌ನಲ್ಲಿ ಹೆಚ್ಚು ರನ್ ಚಚ್ಚಿದ ಟಾಪ್ 10 ಬ್ಯಾಟ್ಸ್‌ಮನ್‌, ರನ್ ನೀಡಿದ ಬೌಲರ್ಸ್ ಪಟ್ಟಿಟೆಸ್ಟ್ ಕ್ರಿಕೆಟ್‍: ಒಂದು ಓವರ್‌ನಲ್ಲಿ ಹೆಚ್ಚು ರನ್ ಚಚ್ಚಿದ ಟಾಪ್ 10 ಬ್ಯಾಟ್ಸ್‌ಮನ್‌, ರನ್ ನೀಡಿದ ಬೌಲರ್ಸ್ ಪಟ್ಟಿ

ರವೀಂದ್ರ ಜಡೇಜಾ ಎರಡನೇ ದಿನದಾಟದಂದು ಶತಕ ಬಾರಿಸಿದರೆ, ರಿಷಭ್ ಪಂತ್ ಮೊದಲನೇ ದಿನದಾಟದಲ್ಲಿ 89 ಎಸೆತಗಳಲ್ಲಿ ಶತಕ ಪೂರೈಸಿ, 111 ಎಸೆತಗಳಲ್ಲಿ 146 ರನ್ ಚಚ್ಚಿ ವಿಕೆಟ್ ಒಪ್ಪಿಸಿದರು. ಹೀಗೆ ಟೀಮ್ ಇಂಡಿಯಾ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಅಬ್ಬರಿಸಿದ ರಿಷಭ್ ಪಂತ್ ಆಪತ್ಬಾಂಧವನಾದರು. ರಿಷಭ್ ಪಂತ್ ಬೃಹತ್ ಮೊತ್ತ ಕಲೆಹಾಕಿ ಅಬ್ಬರಿಸಿದ್ದರೂ ಇದೇ ಎಡ್ಜ್ ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಹಿಂದೆ ವಿರಾಟ್ ಕೊಹ್ಲಿ ನಿರ್ಮಿಸಿದ್ದ ರನ್ ದಾಖಲೆಯನ್ನು ಮುರಿಯುವಲ್ಲಿ ವಿಫಲರಾಗಿದ್ದಾರೆ. ಈ ಕುರಿತಾದ ವಿವರ ಮುಂದೆ ಇದೆ ಓದಿ.

3 ರನ್‌ಗಳಿಂದ ಕೊಹ್ಲಿ ದಾಖಲೆ ಕೈತಪ್ಪಿಸಿಕೊಂಡ ಪಂತ್

3 ರನ್‌ಗಳಿಂದ ಕೊಹ್ಲಿ ದಾಖಲೆ ಕೈತಪ್ಪಿಸಿಕೊಂಡ ಪಂತ್

146 ರನ್ ಕಲೆಹಾಕಿದ ರಿಷಭ್ ಪಂತ್ ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದ ಭಾರತೀಯ ಆಟಗಾರ ಎಂಬ ದಾಖಲೆಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆ 2018ರಲ್ಲಿ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 149 ರನ್ ದಾಖಲಿಸಿದ್ದರು. ಈ ಮೂಲಕ ವಿರಾಟ್ ಕೊಹ್ಲಿ ಎಡ್ಜ್‌ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ದಾಖಲಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

ಎಡ್ಜ್ ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೆಸ್ಟ್ ಶತಕ ದಾಖಲಿಸಿರುವ ಭಾರತೀಯರು

ಎಡ್ಜ್ ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೆಸ್ಟ್ ಶತಕ ದಾಖಲಿಸಿರುವ ಭಾರತೀಯರು

ಇನ್ನು ಈ ಕ್ರೀಡಾಂಗಣದಲ್ಲಿ ಟೆಸ್ಟ್ ಶತಕ ಬಾರಿಸಿರುವ ಭಾರತೀಯ ಆಟಗಾರರ ಪಟ್ಟಿ ಕೆಳಕಂಡಂತಿದೆ

1. ಸಚಿನ್ ತೆಂಡೂಲ್ಕರ್ - 6 ಜೂನ್ 1996 - 122 ರನ್

2. ವಿರಾಟ್ ಕೊಹ್ಲಿ - 1 ‌ಆಗಸ್ಟ್ 2018 - 149 ರನ್

3. ರಿಷಭ್ ಪಂತ್ - 1 ಜುಲೈ 2022 - 146 ರನ್

4. ರವೀಂದ್ರ ಜಡೇಜಾ - 2 ಜುಲೈ 2022 - 104 ರನ್

Jasprit Bumrah ಮಾಡಿದ ವಿಶ್ವ ದಾಖಲೆಗೆ Sachin Tendulkar ಶಾಕ್!! | *Cricket | OneIndia Kannada
ಸ್ಟ್ರೈಕ್ ರೇಟ್ ವಿಷಯದಲ್ಲಿ ರಿಷಭ್ ಪಂತ್ ಟಾಪ್

ಸ್ಟ್ರೈಕ್ ರೇಟ್ ವಿಷಯದಲ್ಲಿ ರಿಷಭ್ ಪಂತ್ ಟಾಪ್

ಇನ್ನು ಈ ಕ್ರೀಡಾಂಗಣದಲ್ಲಿ ಟೆಸ್ಟ್ ಶತಕ ದಾಖಲಿಸಿರುವ ಭಾರತೀಯ ಆಟಗಾರರ ಸ್ಟ್ರೈಕ್ ರೇಟ್ ವಿಚಾರಕ್ಕೆ ಬಂದರೆ ರಿಷಭ್ ಪಂತ್ ಅಗ್ರಸ್ಥಾನದಲ್ಲಿದ್ದಾರೆ. ಕೇವಲ 111 ಎಸೆತಗಳಲ್ಲಿ 146 ರನ್ ಕಲೆಹಾಕಿರುವ ರಿಷಭ್ ಪಂತ್ 131.53 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

Story first published: Saturday, July 2, 2022, 23:49 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X