ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ದ್ವಿತೀಯ ಟೆಸ್ಟ್‌ನಲ್ಲೂ ಅಶ್ವಿನ್‌ಗೆ ಸ್ಥಾನ ನೀಡದೇ ತಪ್ಪು ಮಾಡಿದ್ರಾ ಕೊಹ್ಲಿ?

IND vs ENG: Why no Ashwin? Twitter raises voice over India’s playing XI for Lord’s Test

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಇಂದಿನಿಂದ ( ಆಗಸ್ಟ್ 12 ) ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಈ ಹಿಂದೆ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯ ಮಳೆಯ ಕಾರಣದಿಂದಾಗಿ ನೀರಸ ಡ್ರಾನಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ ಪ್ರಸ್ತುತ ನಡೆಯುತ್ತಿರುವ ಲಾರ್ಡ್ಸ್ ಟೆಸ್ಟ್ ಮೇಲೆ ಹೆಚ್ಚಿನ ನಿರೀಕ್ಷೆ ಮತ್ತು ಕುತೂಹಲವಿದೆ.

ಭಾರತ vs ಇಂಗ್ಲೆಂಡ್: ಸಿರಾಜ್ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬುದ್ಧಿ ಹೇಳಿದ ದಿನೇಶ್ ಕಾರ್ತಿಕ್ಭಾರತ vs ಇಂಗ್ಲೆಂಡ್: ಸಿರಾಜ್ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬುದ್ಧಿ ಹೇಳಿದ ದಿನೇಶ್ ಕಾರ್ತಿಕ್

ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಅಶ್ವಿನ್ ಸ್ಥಾನ ಪಡೆದುಕೊಳ್ಳದೆ ಇದ್ದದ್ದು ಸಾಮಾಜಿಕ ಜಾಲತಾಣದ ತುಂಬಾ ಟೀಕೆಗೆ ಕಾರಣವಾಗಿತ್ತು. ರವಿಚಂದ್ರನ್ ಅಶ್ವಿನ್ ರೀತಿಯ ಅತ್ಯುತ್ತಮ ಬೌಲರ್‌ಗೆ ತಂಡದಲ್ಲಿ ಸ್ಥಾನ ನೀಡದೆ ತಪ್ಪು ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದರು. ಆದರೆ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಅನುಪಸ್ಥಿತಿಯಲ್ಲಿಯೂ ಟೀಮ್ ಇಂಡಿಯಾ ಬೌಲರ್‌ಗಳು ಉತ್ತಮ ಪ್ರದರ್ಶನವನ್ನೇ ನೀಡಿದ್ದರು.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಈ ಆಟಗಾರ ಇನ್ನೂ ಚೆನ್ನಾಗಿ ಆಟವಾಡಬೇಕಿದೆ ಎಂದ ಕೊಹ್ಲಿಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಈ ಆಟಗಾರ ಇನ್ನೂ ಚೆನ್ನಾಗಿ ಆಟವಾಡಬೇಕಿದೆ ಎಂದ ಕೊಹ್ಲಿ

ಇದೀಗ ಮೊದಲ ಟೆಸ್ಟ್ ಪಂದ್ಯದ ರೀತಿಯಲ್ಲಿಯೇ ದ್ವಿತೀಯ ಟೆಸ್ಟ್ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ರವಿಚಂದ್ರನ್ ಅಶ್ವಿನ್‌ಗೆ ಸ್ಥಾನ ಸಿಕ್ಕಿಲ್ಲ. ಪಂದ್ಯ ಆರಂಭಕ್ಕೂ ಮುನ್ನ ಆಡುವ ಬಳಗವನ್ನು ಘೋಷಿಸಿದ ಕೂಡಲೇ ನೆಟ್ಟಿಗರು ಟೀಮ್ ಇಂಡಿಯಾ ನಿರ್ಧಾರವನ್ನು ಟೀಕಿಸಲಾರಂಭಿಸಿದರು. ಮೊದಲನೇ ಟೆಸ್ಟ್ ಪಂದ್ಯದಲ್ಲಿಯೂ ರವಿಚಂದ್ರನ್ ಅಶ್ವಿನ್‌ಗೆ ಸ್ಥಾನ ನೀಡಿರಲಿಲ್ಲ, ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಸ್ಥಾನ ನೀಡದೆ ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ನೆಟ್ಟಿಗರು ಈ ಕೆಳಕಂಡಂತೆ ಕಿಡಿಕಾರಿದ್ದಾರೆ.

ಇಂಡಿಯಾ ತಪ್ಪಾದ ತಂಡವನ್ನು ಆರಿಸಿದೆ ಎಂದ ಮೈಕಲ್ ವಾನ್

ಇಂಡಿಯಾ ತಪ್ಪಾದ ತಂಡವನ್ನು ಆರಿಸಿದೆ ಎಂದ ಮೈಕಲ್ ವಾನ್

ರವಿಚಂದ್ರನ್ ಅಶ್ವಿನ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳದೆ ಇರುವುದನ್ನು ಕಂಡ ಕೂಡಲೇ ಮೈಕಲ್ ವಾನ್ ಇಂಗ್ಲೆಂಡ್ ತಂಡ ಸರಿಯಾದ ತಂಡವನ್ನು ಆಯ್ಕೆ ಮಾಡಿದೆ, ಆದರೆ ಭಾರತ ತಂಡ ತಪ್ಪಾದ ತಂಡವನ್ನು ಆಯ್ಕೆ ಮಾಡಿದೆ ಎನಿಸುತ್ತಿದೆ, ಇಂತಹ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ತಂಡದಲ್ಲಿರಬೇಕಿತ್ತು, ಕೇವಲ ಬೌಲಿಂಗ್ ಮಾತ್ರವಲ್ಲ ಬ್ಯಾಟಿಂಗ್ ವಿಭಾಗ ಕೂಡ ಬಲಿಷ್ಟವಾಗಿರುತ್ತಿತ್ತು ಎಂದು ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ.

ಕೊಹ್ಲಿ ಶೀಘ್ರದಲ್ಲೇ ನಾಯಕತ್ವ ಕಳೆದುಕೊಳ್ಳುತ್ತಾರೆ

ಕೊಹ್ಲಿ ಶೀಘ್ರದಲ್ಲೇ ನಾಯಕತ್ವ ಕಳೆದುಕೊಳ್ಳುತ್ತಾರೆ

ಇನ್ನು ಕ್ರೀಡಾ ಅಭಿಮಾನಿಯೊಬ್ಬ ರವಿಚಂದ್ರನ್ ಅಶ್ವಿನ್‌ಗೆ ಆಡುವ ಬಳಗದಲ್ಲಿ ಸ್ಥಾನ ನೀಡದೆ ಇರುವ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ. ವಿರಾಟ್ ಕೊಹ್ಲಿ ರವಿಚಂದ್ರನ್ ಅಶ್ವಿನ್‌ರನ್ನು ಸತತ 2 ಪಂದ್ಯಗಳಲ್ಲಿ ತಂಡದಿಂದ ಹೊರಗಿಟ್ಟಿದ್ದಾರೆ, ವಿಶ್ವದ ಎರಡನೇ ಅತ್ಯುತ್ತಮ ಬೌಲರ್‌ನ್ನು ತಂಡದಿಂದ ಹೊರಗಿಡುವುದರ ಮೂಲಕ ತಪ್ಪು ಮಾಡಿದ್ದಾರೆ. ಹೀಗೆ ಮಾಡಿದರೆ ವಿರಾಟ್ ಕೊಹ್ಲಿ ಹೆಚ್ಚು ದಿನಗಳ ಕಾಲ ಟೀಮ್ ಇಂಡಿಯಾ ಟೆಸ್ಟ್ ನಾಯಕನಾಗಿರಲು ಸಾಧ್ಯವಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

ಕ್ರಿಕೆಟ್ ಕಾಶಿ ಎಂದು ಕರೆಸಿಕೊಳ್ಳುವ Lord's ಸ್ಟೇಡಿಯಂ | The Home of Cricket | Oneindia Kannada
ಅಶ್ವಿನ್ ತಂಡದಲ್ಲಿಲ್ಲ, ಭಾರತಕ್ಕೆ ಇನ್ನಿಂಗ್ಸ್ ಸೋಲು!

ಅಶ್ವಿನ್ ತಂಡದಲ್ಲಿಲ್ಲ, ಭಾರತಕ್ಕೆ ಇನ್ನಿಂಗ್ಸ್ ಸೋಲು!

ಇನ್ನೋರ್ವ ಕ್ರಿಕೆಟ್ ಅಭಿಮಾನಿ ರವಿಚಂದ್ರನ್ ಅಶ್ವಿನ್‌ಗೆ ತಂಡದಲ್ಲಿ ಸ್ಥಾನ ನೀಡದೆ ಇರುವುದರ ಕುರಿತು ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ. ರವಿಚಂದ್ರನ್ ಅಶ್ವಿನ್‌ಗೆ ಸತತವಾಗಿ ಸ್ಥಾನ ನೀಡದೆ ತಂಡದಿಂದ ಹೊರಲಾಗುತ್ತಿದ್ದು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಸೋಲನ್ನು ಅನುಭವಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾ

Story first published: Friday, August 13, 2021, 0:40 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X