ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Ire 1st T20: ಮೊದಲ ಟಿ20ಗೆ ಟೀಂ ಇಂಡಿಯಾದ ಸಂಭಾವ್ಯ 11 ಆಟಗಾರರು

Team india

ಟಿ20 ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡಲು ಪ್ರಯತ್ನಿಸುತ್ತಿರುವ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ತಮ್ಮ ಬೆಂಚ್ ಸಾಮರ್ಥ್ಯವನ್ನು ಪರೀಕ್ಷಿಸಲಿದೆ. ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯ ಭಾಗವಾಗಿ ಇಂದು (ಜೂನ್ 26) ಮೊದಲ ಪಂದ್ಯ ನಡೆಯಲಿದೆ.

ಟೀಂ ಇಂಡಿಯಾದ ಸೂಪರ್‌ ಸ್ಟಾರ್ ಆಟಗಾರರು ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಸಿದ್ಧರಾಗುತ್ತಿದ್ದಾರೆ. ಹೀಗಾಗಿಯೇ ಐರ್ಲೆಂಡ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಯುವ ಪಡೆಯನ್ನ ಕಳುಹಿಸಿಕೊಡಲಾಗಿತ್ತು.

ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ತಂಡದ ಬಹುತೇಕ ಆಟಗಾರರು ಐರ್ಲೆಂಡ್‌ ಪ್ರವಾಸದಲ್ಲಿದ್ದಾರೆ. ನೂತನ ನಾಯಕ ಹಾರ್ದಿಕ್ ಪಾಂಡ್ಯ ಚೊಚ್ಚಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ರಾಹುಲ್ ದ್ರಾವಿಡ್ ತಂಡದ ಚುಕ್ಕಾಣಿ ಹಿಡಿದಿದ್ದು, ವಿವಿಎಸ್ ಲಕ್ಷ್ಮಣ್ ಈ ಸರಣಿಗೆ ಹಂಗಾಮಿ ಕೋಚ್ ಆಗಲಿದ್ದಾರೆ. ಹಿಂದಿನ ದಾಖಲೆ ಪ್ರಕಾರ ಭಾರತವು ಸ್ಪಷ್ಟವಾಗಿ ಐರ್ಲೆಂಡ್ ಮೇಲೆ ಮೇಲುಗೈ ಸಾಧಿಸಿದೆ, ಆದರೆ ಐರ್ಲೆಂಡ್ ತವರು ನೆಲದಲ್ಲಿ ಪ್ರಾಬಲ್ಯ ಸಾಧಿಸಲು ಆಶಿಸುತ್ತಿದೆ.

ಉಮ್ರಾನ್ ಮತ್ತು ಅರ್ಷ್‌ದೀಪ್‌ಗೆ ಅವಕಾಶ ಸಿಗುತ್ತಾ?

ಉಮ್ರಾನ್ ಮತ್ತು ಅರ್ಷ್‌ದೀಪ್‌ಗೆ ಅವಕಾಶ ಸಿಗುತ್ತಾ?

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೇವಲ 11 ಆಟಗಾರರು ಮೊದಲ ಪಂದ್ಯದಿಂದ ಕೊನೆಯವರೆಗೆ ಬದಲಾಗದೆ ಆಡಿದರು. ಆದರೆ ಈ ಬಾರಿ ತಂಡದ ಮ್ಯಾನೇಜ್‌ಮೆಂಟ್ ಹೊಸದನ್ನು ಪ್ರಯತ್ನಿಸಬಹುದು. ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸುವ ಸಾಧ್ಯತೆ ಇದೆ. ಐಪಿಎಲ್ ನಲ್ಲಿ ವಿಜೃಂಭಿಸಿರುವ ಈ ಇಬ್ಬರಲ್ಲಿ ಯಾರಿಗಾದರೂ ಅಂತಿಮ ತಂಡದಲ್ಲಿ ಅವಕಾಶ ಸಿಗಲಿದೆ.

ಪಂದ್ಯಕ್ಕೂ ಮೊದಲು ಹಾರ್ದಿಕ್ ಪಾಂಡ್ಯ ಮಾಡಿದ ಹೇಳಿಕೆಗಳನ್ನ ಗಮನಿಸಿದ್ರೆ, ಈ ಯುವ ಆಟಗಾರರು ಪಾದಾರ್ಪಣೆ ಮಾಡುತ್ತಿದ್ದಾರೆ ಎಂದು ಭಾವಿಸಲಾಗಿದೆ.

ಎರಡು ಸ್ಥಾನಕ್ಕೆ ನಾಲ್ವರ ಪೈಪೋಟಿ

ಎರಡು ಸ್ಥಾನಕ್ಕೆ ನಾಲ್ವರ ಪೈಪೋಟಿ

ಎರಡು ಸ್ಥಾನ.. ನಾಲ್ಕು ಸ್ಪರ್ಧೆ.. ಬ್ಯಾಟಿಂಗ್ ವಿಷಯದಲ್ಲಿ ಕಳೆದ ಪಂದ್ಯ ಆಡಿದ ಅಂತಿಮ ತಂಡವನ್ನು ನೋಡಿದಾಗ ಪಂತ್ ಮತ್ತು ಅಯ್ಯರ್ ಗೈರುಹಾಜರಾಗಿರುವುದರಿಂದ ಎರಡು ಸ್ಪಷ್ಟ ಅಂತರವಿದೆ. ಪ್ರಸ್ತುತ ತಂಡದಿಂದ ರಾಹುಲ್ ತ್ರಿಪಾಠಿ ಇನ್ನೂ ಪದಾರ್ಪಣೆ ಮಾಡದಿದ್ದರೂ, ಸ್ಯಾಮ್ಸನ್ ಮತ್ತೊಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ಮತ್ತು ರಾಹುಲ್ ತ್ರಿಪಾಠಿ ಇಬ್ಬರೂ ಈ ಎರಡು ಸ್ಥಾನಗಳಲ್ಲಿ ಆಡುವ ಸಾಧ್ಯತೆಯಿದೆ.

ಸೂರ್ಯಕುಮಾರ್ , ಹೂಡಾಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಹೆಚ್ಚು ಅವಕಾಶಗಳಿವೆ. ಮತ್ತೊಂದೆಡೆ, ನಾಯಕನಾಗಿ ಐಪಿಎಲ್‌ನಲ್ಲಿ ಮೊದಲ ಸೀಸನ್‌ನಲ್ಲಿ ಸೂಪರ್ ಹಿಟ್ ಆಗಿದ್ದ ಹಾರ್ದಿಕ್ ಪಾಂಡ್ಯ ರಾಷ್ಟ್ರೀಯ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದು ಕೂಡ ಕುತೂಹಲಕಾರಿಯಾಗಿದೆ. ಐಪಿಎಲ್‌ನಂತೆ ಇಲ್ಲಿಯೂ ಯಶಸ್ವಿಯಾದರೆ ಭವಿಷ್ಯದ ನಾಯಕನಾಗಿ ಮುಂಚೂಣಿಯಲ್ಲಿರುತ್ತಾನೆ.

ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಈ ಯುವ ಬೌಲರ್ ಇರಲೇಬೇಕು; ದಿಲೀಪ್ ವೆಂಗ್‌ಸರ್ಕರ್

ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ಡಬ್ಲಿಲ್, ದಿ ವಿಲೇಜ್ ಸ್ಟೇಡಿಯಂ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಕಳೆದ ಐದು ಟಿ20ಗಳಲ್ಲಿ ಮೂರು ಬಾರಿ 180 ಪ್ಲಸ್ ಸ್ಕೋರ್‌ಗಳನ್ನು ದಾಖಲಿಸಿದೆ. ಟಾಸ್ ಗೆದ್ದ ತಂಡಕ್ಕೆ ಬ್ಯಾಟಿಂಗ್ ಮಾಡುವ ಅವಕಾಶವಿದೆ. ಈ ಪಂದ್ಯಕ್ಕೆ ಮಳೆಯ ಅಡ್ಡಿ ಇರುವುದಿಲ್ಲ.

Ind vs Eng: ರೋಹಿತ್ ಶರ್ಮಾಗೆ ಕೋವಿಡ್; ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೆ ನಾಯಕ ಯಾರು?

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್

ಭಾರತ: ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ / ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ (ನಾಯಕ), ದಿನೇಶ್ ಕಾರ್ತಿಕ್ (ಕೀಪರ್), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್ / ಅರ್ಷದೀಪ್ ಸಿಂಗ್ / ಉಮ್ರಾನ್ ಮಲ್ಹಿಕ್, ಯುಜವೇಂದ್ರ ಚಹಾಲ್


ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ನಿರ್ನೆ (ನಾಯಕ), ಗರೆಥ್ ಡೆಲಾನಿ, ಹ್ಯಾರಿ ಟೆಕ್ಟರ್, ಲ್ಯಾಕ್ರಾನ್ ಟಕರ್ (ಕೀಪರ್), ಕರ್ಟಿಸ್ ಕ್ಯಾಂಪರ್, ಆಂಡಿ ಮೆಕ್‌ಬೈನ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್

Story first published: Sunday, June 26, 2022, 14:03 [IST]
Other articles published on Jun 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X