ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IRE vs IND 2ನೇ ಟಿ20: ಚೊಚ್ಚಲ ನಾಯಕತ್ವದಲ್ಲೇ ಕ್ಲೀನ್‌ಸ್ವೀಪ್ ಮೇಲೆ ಕಣ್ಣಿಟ್ಟ ಹಾರ್ದಿಕ್ ಪಾಂಡ್ಯ

IND vs IRE 2nd T20I: Hardik Pandya-led India Aim Clean Sweep Against Ireland

ಮಂಗಳವಾರ, ಜೂನ್ 28ರಂದು ಐರ್ಲೆಂಡ್‌ನ ಮಲಾಹೈಡ್ ಕ್ರಿಕೆಟ್ ಕ್ಲಬ್‌ನಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧ 2ನೇ ಮತ್ತು ಅಂತಿಮ ಟಿ20 ಪಂದ್ಯವನ್ನು ಆಡುತ್ತಿರುವಾಗ, ಹಾರ್ದಿಕ್ ಪಾಂಡ್ಯ ಅವರು ಭಾರತ ತಂಡದ ನಾಯಕರಾಗಿ ತಮ್ಮ ಚೊಚ್ಚಲ ಸರಣಿ ಗೆಲುವು ಸಾಧಿಸಲು ಎದುರು ನೋಡುತ್ತಿದ್ದಾರೆ. ಭಾರತವು ಈಗಾಗಲೇ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಆತಿಥೇಯರ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತು.

ಡಬ್ಲಿನ್‌ನಲ್ಲಿ ಮಳೆಯ ವಾತಾವರಣದಿಂದಾಗಿ ಮೊದಲ ಟಿ20 ಪಂದ್ಯದ ಓವರ್‌ಗಳನ್ನು ಕಡಿಮೆ ಮಾಡಿ ಆಡಿಸಲಾಗಿತ್ತು. ಆದರೆ ಇಂದು ಮಳೆಯು ದೂರ ಸರಿಯುತ್ತದೆ ಎಂದು ಭಾರತವು ಆಶಿಸುತ್ತಿದೆ. ಸಂಪೂರ್ಣ 20 ಓವರ್‌ಗಳ ಕೋಟಾವನ್ನು ಪಡೆಯಬಹುದು ಎಂದು ಆಶಿಸಲಾಗಿದೆ. ಪ್ರತಿ ತಂಡಕ್ಕೆ 12 ಓವರ್‌ಗಳ ಪೈಪೋಟಿಯಲ್ಲಿ ದೀಪಕ್ ಹೂಡಾ ಮತ್ತು ನಾಯಕ ಹಾರ್ದಿಕ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರಿಂದ ಭಾರತ ಕೇವಲ 9.2 ಓವರ್‌ಗಳಲ್ಲಿ 109 ರನ್‌ಗಳ ಗುರಿ ಬೆನ್ನಟ್ಟಿತು.

ರೋಹಿತ್ ಶರ್ಮಾರನ್ನು ಟಿ20 ನಾಯಕತ್ವದಿಂದ ಮುಕ್ತಗೊಳಿಸಿ ಎಂದ ಮಾಜಿ ಬ್ಯಾಟ್ಸ್‌ಮನ್ರೋಹಿತ್ ಶರ್ಮಾರನ್ನು ಟಿ20 ನಾಯಕತ್ವದಿಂದ ಮುಕ್ತಗೊಳಿಸಿ ಎಂದ ಮಾಜಿ ಬ್ಯಾಟ್ಸ್‌ಮನ್

ಭಾರತವು ತಮ್ಮ ಬೆಂಚ್ ಬಲವನ್ನು ಪರೀಕ್ಷಿಸಲು ಮತ್ತು ಯುವಕರಿಗೆ ಆಟದ ಸಮಯವನ್ನು ನೀಡುವತ್ತ ಗಮನಹರಿಸಲು ಯೋಚಿಸುತ್ತಿದೆ. ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಮಂಗಳವಾರ 20 ಓವರ್‌ಗಳ ಆಟವನ್ನು ನೋಡಲು ಇಷ್ಟಪಡುತ್ತಾರೆ.

ಅಜೇಯ ಗೆಲುವಿನ ದಾಖಲೆಯನ್ನು ವಿಸ್ತರಿಸಿದ ಭಾರತ

ಅಜೇಯ ಗೆಲುವಿನ ದಾಖಲೆಯನ್ನು ವಿಸ್ತರಿಸಿದ ಭಾರತ

ಐರ್ಲೆಂಡ್ ವಿರುದ್ಧ ತಮ್ಮ ಅಜೇಯ ಗೆಲುವಿನ ದಾಖಲೆಯನ್ನು ವಿಸ್ತರಿಸಿದ ಭಾರತ, ಆರಂಭಿಕ ಟಿ20 ಪಂದ್ಯದಲ್ಲಿ ಎಲ್ಲಾ ವಿಭಾಗಗಳ ಮೇಲೆ ಹಿಡಿತ ಸಾಧಿಸಿದೆ. ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಮತ್ತು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಚೆಂಡಿನಲ್ಲಿ ಮಿಂಚಿದರು. ಐರ್ಲೆಂಡ್ ಪರ 22 ವರ್ಷದ ಬ್ಯಾಟರ್ ಹ್ಯಾರಿ ಟೆಕ್ಟರ್ 33 ಎಸೆತಗಳಲ್ಲಿ 64 ರನ್ ಗಳಿಸಿ ಪ್ರವಾಸಿ ತಂಡಕ್ಕೆ 12 ಓವರ್‌ಗಳಲ್ಲಿ 108 ರನ್‌ಗಳ ಟಾರ್ಗೆಟ್ ನೀಡಿದರು.

ಭಾರತದ ಪರ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 12 ಎಸೆತಗಳಲ್ಲಿ 24 ರನ್ ಗಳಿಸಿದ ನಂತರ ರುತುರಾಜ್ ಗಾಯಕ್ವಾಡ್ ಅವರಿಗೆ ಗಾಯದ ಕಾರಣ, ಓಪನಿಂಗ್ ಮಾಡಿದ ದೀಪಕ್ ಹೂಡಾ ಅಜೇಯ 47 ರನ್ ಗಳಿಸಿ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಸಮರ್ಥಿಸಿಕೊಂಡರು. ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅಗ್ರಸ್ಥಾನದಲ್ಲಿ ಉತ್ತಮ ಬ್ಯಾಟ್ ಬೀಸಿದರು.

ರಾಹುಲ್ ತ್ರಿಪಾಠಿಗೆ ಅವಕಾಶ ಸಿಗುತ್ತದೆಯೇ?

ರಾಹುಲ್ ತ್ರಿಪಾಠಿಗೆ ಅವಕಾಶ ಸಿಗುತ್ತದೆಯೇ?

ರುತುರಾಜ್ ಗಾಯಕ್ವಾಡ್ ಅವರ ಲಭ್ಯತೆಯ ಬಗ್ಗೆ ಭಾರತವು ಎಚ್ಚೆತಗತುಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಯುವಕರ ಸಮಸ್ಯೆಯನ್ನು ಉಲ್ಬಣಗೊಳಿಸುವ ಅಪಾಯವನ್ನು ಬಯಸುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ ಒತ್ತಿ ಹೇಳಿದರು. ರುತುರಾಜ್ ಪೂರ್ಣ ಫಿಟ್ನೆಸ್ ಮರಳಿ ಪಡೆಯದಿದ್ದರೆ, ಭಾರತವು ಸಂಜು ಸ್ಯಾಮ್ಸನ್ ಅವರನ್ನು ಕರೆತರಬಹುದು ಅಥವಾ ರಾಹುಲ್ ತ್ರಿಪಾಠಿ ಚೊಚ್ಚಲ ಬಾರಿಗೆ ಭಾರತದ ಕ್ಯಾಪ್ ಧರಿಸಬಹುದು.

ಸಂಜು ಸ್ಯಾಮ್ಸನ್ ಐಪಿಎಲ್ 2022ರಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಉತ್ತಮವಾಗಿ ಆಡಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಪರ ಲೀಡಿಂಗ್ ಸ್ಕೋರರ್ ಆಗಿದ್ದ ರಾಹುಲ್ ತ್ರಿಪಾಠಿಗೆ ಅದೇ ರೀತಿಯಾಗಿದೆ.

ಕೇವಲ ಒಂದು ಓವರ್ ಬೌಲ್ ಮಾಡಿದ ಉಮ್ರಾನ್ ಮಲಿಕ್

ಕೇವಲ ಒಂದು ಓವರ್ ಬೌಲ್ ಮಾಡಿದ ಉಮ್ರಾನ್ ಮಲಿಕ್

ಮೊದಲ ಟಿ20 ಪಂದ್ಯದಲ್ಲಿ ಗಾಯದಿಂದ ಹಿಂದಿರುಗಿದ ನಂತರ ಸೂರ್ಯಕುಮಾರ್ ಯಾದವ್ ಅವರು ಮೊದಲ ಎಸೆತದಲ್ಲಿ ಡಕ್‌ಗೆ ಔಟಾದರು. ಆದರೂ ಮತ್ತೊಂದು ಅವಕಾಶವನ್ನು ಪಡೆಯಬಹುದಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿಯುದ್ದಕ್ಕೂ ತನ್ನ ಬೆಂಚ್ ಕಾಯಿಸಿದ ನಂತರ ವೇಗಿ ಅರ್ಶ್‌ದೀಪ್ ಸಿಂಗ್ ಇಂದಿನ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ ಇದೆ. ಉಮ್ರಾನ್ ಮಲಿಕ್ ಭಾನುವಾರ ಚೊಚ್ಚಲ ಪಂದ್ಯವನ್ನಾಡಿದರು. ಆದರೆ ಯುವ ವೇಗಿ ತಮ್ಮ ಮೊದಲ ಟಿ20 ಪಂದ್ಯದಲ್ಲಿ ಕೇವಲ ಒಂದು ಓವರ್ ಬೌಲ್ ಮಾಡಿದ ನಂತರ ಪ್ರಭಾವ ಬೀರಲು ಉತ್ಸುಕನಾಗಿದ್ದಾನೆ.

Dinesh Karthik ಜೀವನದ ರಹಸ್ಯ:DK ಬದುಕಿಗೆ ಈತ ಎಂಟ್ರಿ ಕೊಟ್ಟಿಲ್ಲ ಅಂದಿದ್ರೆ DK ಕಥೆ??? | *Cricket | OneIndia
2ನೇ ಟಿ20 ಪಂದ್ಯದ ಭಾರತ ಮತ್ತು ಐರ್ಲೆಂಡ್‌ ಸಂಭಾವ್ಯ ತಂಡಗಳು

2ನೇ ಟಿ20 ಪಂದ್ಯದ ಭಾರತ ಮತ್ತು ಐರ್ಲೆಂಡ್‌ ಸಂಭಾವ್ಯ ತಂಡಗಳು

ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್ ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.

ಐರ್ಲೆಂಡ್: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕ್ರೇಗ್ ಯಂಗ್.

Story first published: Tuesday, June 28, 2022, 15:31 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X