ಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

ಡಬ್ಲಿನ್‌ನಲ್ಲಿ ನಡೆಯುತ್ತಿರುವ 2 ಪಂದ್ಯಗಳ ಸರಣಿಯಲ್ಲಿ ಮಳೆ-ಬಾಧಿತ 1ನೇ ಟಿ20 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಪ್ರವಾಸಿ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಹಾರ್ದಿಕ್ ಪಾಂಡ್ಯ ಅವರು ಮೊದಲ ಬಾರಿ ಭಾರತ ತಂಡದ ನಾಯಕರಾಗಿ ಸ್ಮರಣೀಯ ಆರಂಭವನ್ನು ಪಡೆದರು.

ಮಳೆಯಿಂದಾಗಿ ಪ್ರತಿ ತಂಡಕ್ಕೆ 12 ಓವರ್‌ಗಳ ಆಟದಲ್ಲಿ ಐರ್ಲೆಂಡ್ ನೀಡಿದ 109 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ, ಕೇವಲ 9.2 ಓವರ್‌ಗಳಲ್ಲಿ ನಿಗದಿತ ಗುರಿಯನ್ನು ತಲುಪಿತು. ಈ ಮೂಲಕ ಐರ್ಲೆಂಡ್ ವಿರುದ್ಧ 2 ಪಂದ್ಯಗಳ ಸರಣಿಯಲ್ಲಿ 1-0 ಅಜೇಯ ಮುನ್ನಡೆ ಸಾಧಿಸಿತು.

IND vs IRE: ಮೊದಲ ಟಿ20 ಪಂದ್ಯ ಗೆದ್ದ ನಂತರ ಕ್ಯಾಪ್ಟನ್ ಪಾಂಡ್ಯ ಖುಷಿ ಹಂಚಿಕೊಂಡಿದ್ದು ಹೀಗೆIND vs IRE: ಮೊದಲ ಟಿ20 ಪಂದ್ಯ ಗೆದ್ದ ನಂತರ ಕ್ಯಾಪ್ಟನ್ ಪಾಂಡ್ಯ ಖುಷಿ ಹಂಚಿಕೊಂಡಿದ್ದು ಹೀಗೆ

ಹಾರ್ದಿಕ್ ಪಾಂಡ್ಯ ಭಾರತದ ಟಿ20 ಅಂತಾರಾಷ್ಟ್ರೀಯ ಪಂದ್ಯದ ನಾಯಕನಾದ ಮೊದಲ ಪಂದ್ಯದಲ್ಲೇ ತಂಡವನ್ನು ಗೆಲ್ಲಿಸಿದರು. ಸ್ವತಃ ಆಲ್‌ರೌಂಡರ್ ಆಟದಿಂದ ಮುನ್ನಡೆಸಿದ ಹಾರ್ದಿಕ್ ಪಾಂಡ್ಯ, ಬಾಲ್ ಮತ್ತು ಬ್ಯಾಟ್ ಎರಡರಲ್ಲೂ ಮಿಂಚಿದರು. ಭಾನುವಾರ ಮಲಾಹೈಡೆಯಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಒಂದು ವಿಕೆಟ್ ಪಡೆದರು ಮತ್ತು ಬ್ಯಾಟಿಂಗ್‌ನಲ್ಲಿ 12 ಎಸೆತಗಳಲ್ಲಿ 24 ರನ್ ಗಳಿಸಿ ಭಾರತ ಆರಾಮವಾಗಿ ಐರ್ಲೆಂಡ್ ತಂಡದ ವಿರುದ್ಧ ಗೆಲ್ಲಲು ಸಹಕಾರಿಯಾಯಿತು.

ಭಾರತವನ್ನು ಮುನ್ನಡೆಸಿದ 8ನೇ ಆಟಗಾರ

ಭಾರತವನ್ನು ಮುನ್ನಡೆಸಿದ 8ನೇ ಆಟಗಾರ

ಹಾರ್ದಿಕ್ ಪಾಂಡ್ಯ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಮುನ್ನಡೆಸಿದ 8ನೇ ಆಟಗಾರರಾದರು. ಅಲ್ಲದೇ ಬರೋಡಾದ ಆಲ್‌ರೌಂಡರ್ ಆಗಿ ಹೊಸ ದಾಖಲೆಯನ್ನು ಸಾಧಿಸಿದ್ದು, ಕ್ರಿಕೆಟ್‌ನ ಕಡಿಮೆ (ಟಿ20) ಸ್ವರೂಪದಲ್ಲಿ ವಿಕೆಟ್ ಪಡೆದ ಮೊದಲ ಭಾರತದ ಪುರುಷರ ಟಿ20 ನಾಯಕರಾದರು. ಪಂದ್ಯದ 2ನೇ ಓವರ್‌ನಲ್ಲಿ ಐರ್ಲೆಂಡ್‌ನ ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್ ಅವರನ್ನು ಔಟ್ ಮಾಡುತ್ತಿದ್ದಂತಯೇ ಹಾರ್ದಿಕ್ ಪಾಂಡ್ಯ ಈ ಸಾಧನೆ ಮಾಡಿದರು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹಾರ್ದಿಕ್ ಪಾಂಡ್ಯ

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹಾರ್ದಿಕ್ ಪಾಂಡ್ಯ

ಭಾನುವಾರ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹಾರ್ದಿಕ್ ಪಾಂಡ್ಯ ಅವರ ಪರವಾಗಿ ಎಲ್ಲವೂ ಕೆಲಸ ಮಾಡಿತು. ಗುಜರಾತ್ ಟೈಟನ್ಸ್ ನಾಯಕ 2ನೇ ಓವರ್‌ನಲ್ಲಿ ತಾವೇ ಬೌಲಿಂಗ್ ಮಾಡಿದರು ಮತ್ತು ಪಾಲ್ ಸ್ಟಿರ್ಲಿಂಗ್ ವಿಕೆಟ್ ಕಿತ್ತು ಯಶಸ್ಸು ಸಾಧಿಸಿದರು. ಅವರು ಮಿಡ್-ಆಫ್ ಫೀಲ್ಡರ್ ದೀಪಕ್ ಹೂಡಾ ಅವರ ಕೈಗೆ ನೇರವಾಗಿ ಕ್ಯಾಚ್ ನೀಡಿ ಪೆವಿಲಿಯನ್‌ಗೆ ತೆರಳಿದರು.

ನಮ್ಮ ತಂಡವು ಗೆಲುವಿನೊಂದಿಗೆ ಪ್ರಾರಂಭಿಸುವುದು ಮುಖ್ಯ

ನಮ್ಮ ತಂಡವು ಗೆಲುವಿನೊಂದಿಗೆ ಪ್ರಾರಂಭಿಸುವುದು ಮುಖ್ಯ

"ಸರಣಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಿದ್ದು ಅದ್ಭುತವಾಗಿದೆ. ಅದೃಷ್ಟವಶಾತ್ ನಾವು ಪಂದ್ಯವನ್ನು ಉಳಿಸಿಕೊಂಡಿದ್ದೇವೆ. ನಮ್ಮ ತಂಡವು ಗೆಲುವಿನೊಂದಿಗೆ ಪ್ರಾರಂಭಿಸುವುದು ಮುಖ್ಯವಾಗಿದೆ. ನಾನು ಅವರೊಂದಿಗೆ ಮಾತನಾಡಿದ ನಂತರ ಉಮ್ರಾನ್ ಮಲಿಕ್‌ರನ್ನು ಅವರ ಉಳಿದ ಓವರ್‌ಗಳನ್ನು ನೀಡಲಿಲ್ಲ. ಏಕೆಂದರೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ಹಳೆಯ ಚೆಂಡಿನೊಂದಿಗೆ ಹೆಚ್ಚು ಆರಾಮದಾಯಕವಾಗಿ ಮತ್ತು ಅದ್ಭುತವಾಗಿ ಬ್ಯಾಟ್ ಮಾಡಿದರು," ಎಂದು ಹಾರ್ದಿಕ್ ಪಾಂಡ್ಯ ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು.

Umran Malik ಮೊದಲನೇ ಪಂದ್ಯದಲ್ಲಿ ಹೀಗಾ ಆಡೋದು | *Cricket | OneIndia Kannada
ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ ಅವರ ಜೊತೆಯಾಟ

ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ ಅವರ ಜೊತೆಯಾಟ

ಗಮನಾರ್ಹವಾದ ಅಂಶವೆಂದರೆ ಹಾರ್ದಿಕ್ ಪಾಂಡ್ಯ ಮತ್ತು ದೀಪಕ್ ಹೂಡಾ ಅವರ ಜೊತೆಯಾಟವು ಇಶಾನ್ ಕಿಶನ್ ಅವರ ಬಲವಾದ ಆರಂಭದ ನಂತರ ಭಾರತಕ್ಕೆ ಗೆಲುವು ತಂದುಕೊಟ್ಟಿತು. ಹಾರ್ದಿಕ್ ಮತ್ತು ದೀಪಕ್ ಹೂಡಾ ಕೇವಲ 31 ಎಸೆತಗಳಲ್ಲಿ 64 ರನ್‌ಗಳ ಜೊತೆಯಾಟವನ್ನು ನೀಡಿದ್ದು, ಅವರು ಐರ್ಲೆಂಡ್‌ನಿಂದ ಪಂದ್ಯವನ್ನು ಕಸಿದುಕೊಂಡರು.

ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಬೆಂಚ್ ಬೆಚ್ಚಗಾಗಿಸುತ್ತಿದ್ದ ದೀಪಕ್ ಹೂಡಾ, ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆದರು ಮತ್ತು ಆಲ್‌ರೌಂಡರ್ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು 29 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿದರು.

For Quick Alerts
ALLOW NOTIFICATIONS
For Daily Alerts
Story first published: Monday, June 27, 2022, 12:03 [IST]
Other articles published on Jun 27, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X