ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಆಡಿ ಮುಗಿಸಿರುವ ಟೀಮ್ ಇಂಡಿಯಾ ಇದೀಗ ಐರ್ಲೆಂಡ್ ತಲುಪಿದ್ದು, ಆತಿಥೇಯ ಐರ್ಲೆಂಡ್ ವಿರುದ್ಧ 2 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸಲಿದೆ.
ಭಾರತ vs ಐರ್ಲೆಂಡ್: ಪ್ರಥಮ ಟಿ20 ಪಂದ್ಯದ ಸಂಭಾವ್ಯ ಆಡುವ ಬಳಗ, ಪಿಚ್ ವರದಿ ಮತ್ತು ನೇರಪ್ರಸಾರದ ಮಾಹಿತಿ
ಹೌದು, ಒಂದೆಡೆ ರೋಹಿತ್ ಶರ್ಮ ನಾಯಕತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು ಮುಂದೂಡಲ್ಪಟ್ಟಿರುವ 1 ಟೆಸ್ಟ್ ಪಂದ್ಯ, 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದ್ದರೆ, ಇತ್ತ ಹಾರ್ದಿಕ್ ಪಾಂಡ್ಯ ನಾಯಕತ್ವದ ಮತ್ತೊಂದು ಟೀಮ್ ಇಂಡಿಯಾ ಐರ್ಲೆಂಡ್ ಪ್ರವಾಸವನ್ನು ಕೈಗೊಂಡಿದೆ.
ಈತ ಕಣಕ್ಕಿಳಿದರೆ ಹಾರ್ದಿಕ್, ದಿನೇಶ್ ಕಾರ್ತಿಕ್ ಮೇಲಿನ ಒತ್ತಡ ಕಡಿಮೆಯಾಗಲಿದೆ: ಸಂಜಯ್ ಮಂಜ್ರೇಕರ್
ಇನ್ನು ಇಂಗ್ಲೆಂಡ್ ಪ್ರವಾಸಕ್ಕೆ ಹಲವಾರು ಅನುಭವಿ ಆಟಗಾರರು ತೆರಳಿರುವುದರಿಂದ ಐರ್ಲೆಂಡ್ ವಿರುದ್ಧದ ಈ ಪಂದ್ಯಗಳಲ್ಲಿ ಕಣಕ್ಕಿಳಿಯುವ ಅವಕಾಶ ಹಲವು ಯುವ ಆಟಗಾರರಿಗೆ ದೊರೆತಿದ್ದು, ತಂಡಕ್ಕೆ ಮರಳಿರುವ ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ದಿನೇಶ್ ಕಾರ್ತಿಕ್ ಹಾಗೂ ಯುಜುವೇಂದ್ರ ಚಾಹಲ್ ರೀತಿಯ ಅನುಭವಿ ಆಟಗಾರರಿಗೆ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಪಡಿಸಿಕೊಳ್ಳಲು ಈ ಸರಣಿ ವೇದಿಕೆ ಕಲ್ಪಿಸಿದೆ ಎಂದೇ ಹೇಳಬಹುದು. ಇನ್ನು ಭಾರತ ಮತ್ತು ಐರ್ಲೆಂಡ್ ತಂಡಗಳು ಇಲ್ಲಿಯವರೆಗೂ ಒಟ್ಟು 3 ಟಿ ಟ್ವೆಂಟಿ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆ ಪಂದ್ಯಗಳ ಫಲಿತಾಂಶ ಹೇಗಿತ್ತು ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.
ಪ್ರಥಮ ಟಿ ಟ್ವೆಂಟಿ ಪಂದ್ಯ
ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವೆ ಮೊದಲ ಬಾರಿಗೆ ನಡೆದಿದ್ದ ಟಿ ಟ್ವೆಂಟಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ 8 ವಿಕೆಟ್ ನಷ್ಟಕ್ಕೆ 112 ರನ್ ಕಲೆಹಾಕಿ ಎದುರಾಳಿ ಭಾರತಕ್ಕೆ 113 ರನ್ಗಳ ಗುರಿಯನ್ನು ನೀಡಿತ್ತು. ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 112 ರನ್ ಕಲೆಹಾಕಿ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತ್ತು.
ಎರಡನೇ ಪಂದ್ಯ
ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವಿನ ಎರಡನೇ ಟಿ ಟ್ವೆಂಟಿ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತ್ತು. ರೋಹಿತ್ ಶರ್ಮಾ 97 ಹಾಗೂ ಶಿಖರ್ ಧವನ್ 74 ರನ್ ಕಲೆ ಹಾಕಿದ ಕಾರಣ 5 ವಿಕೆಟ್ ನಷ್ಟಕ್ಕೆ 208 ರನ್ ಬಾರಿಸಿ ಐರ್ಲೆಂಡ್ ತಂಡಕ್ಕೆ ಗೆಲ್ಲಲು 209 ರನ್ಗಳ ಬೃಹತ್ ಗುರಿಯನ್ನು ನೀಡಿತ್ತು. ಆದರೆ 9 ವಿಕೆಟ್ ನಷ್ಟಕ್ಕೆ 132 ರನ್ ಕಲೆಹಾಕಿದ ಐರ್ಲೆಂಡ್ 76 ರನ್ಗಳ ಹೀನಾಯ ಸೋಲನ್ನು ಕಂಡಿತು. ಈ ಪಂದ್ಯ ಐರ್ಲೆಂಡ್ನ ಮಲಾಹಿಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿತ್ತು.
ಮೂರನೇ ಪಂದ್ಯ
ಮೂರನೇ ಟಿ ಟ್ವೆಂಟಿ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಕೆಎಲ್ ರಾಹುಲ್ 70 ಹಾಗೂ ಸುರೇಶ್ ರೈನಾ 69 ರನ್ ಚಚ್ಚಿದ್ದ ಕಾರಣ 4 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿ ಎದುರಾಳಿ ಐರ್ಲೆಂಡ್ ತಂಡಕ್ಕೆ 214 ರನ್ಗಳ ಕಠಿಣ ಗುರಿಯನ್ನು ನೀಡಿತ್ತು. ಆದರೆ 70 ರನ್ಗಳಿಗೆ ಆಲ್ ಔಟ್ ಆದ ಐರ್ಲೆಂಡ್ 143 ರನ್ಗಳ ಬೃಹತ್ ಅಂತರದಲ್ಲಿ ಹೀನಾಯ ಸೋಲನ್ನು ಅನುಭವಿಸಿತು. ಈ ಪಂದ್ಯ ಕೂಡ ಐರ್ಲೆಂಡ್ನ ಮಲಾಹಿಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿತ್ತು.
ಹೀಗೆ ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವೆ ನಡೆದಿರುವ ಎಲ್ಲಾ 3 ಟಿ ಟ್ವೆಂಟಿ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಜಯ ಸಾಧಿಸಿದೆ.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed