ಐರ್ಲೆಂಡ್‌ನ ಹ್ಯಾರಿ ಟೆಕ್ಟರ್‌ಗೆ ಬ್ಯಾಟ್ ಗಿಫ್ಟ್‌ ನೀಡಿದ ಹಾರ್ದಿಕ್ ಪಾಂಡ್ಯ

ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್‌ನ 22 ವರ್ಷದ ಹ್ಯಾರಿ ಟೆಕ್ಟರ್ ತಮ್ಮ ಬ್ಯಾಟಿಂಗ್‌ನಿಂದ ಬಲಿಷ್ಠ ಟೀಂ ಇಂಡಿಯಾಗೆ ಶಾಕ್ ನೀಡಿದ್ರು. ಟೀಂ ಇಂಡಿಯಾ ಬೌಲರ್‌ಗಳನ್ನ ಮನಬಂದಂತೆ ದಂಡಿಸಿದ ಹ್ಯಾರಿ ಮಿಂಚಿನ ಆಟವಾಡಿದ್ರು.

ಡಬ್ಲಿನ್‌ನ ದಿ ವಿಲೇಜ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯಕ್ಕೆ ಮಳೆ ಸಾಕಷ್ಟು ಅಡ್ಡಿಪಡಿಸಿತು. ಹೀಗಾಗಿ ಪಂದ್ಯವನ್ನು 12 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಇಬ್ಬರು ಬೌಲರ್‌ಗಳಿಗೆ ಮಾತ್ರ ಮೂರು ಓವರ್ ಬೌಲಿಂಗ್ ಮಾಡುವ ಅವಕಾಶವಿತ್ತು. ಅದಾಗಲೇ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಭಾರತ ಆತಿಥೇಯ ಐರ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿದರು.

ಆರಂಭದಲ್ಲಿ ಮುಗ್ಗರಿಸಿದ್ದ ಐರ್ಲೆಂಡ್

ಆರಂಭದಲ್ಲಿ ಮುಗ್ಗರಿಸಿದ್ದ ಐರ್ಲೆಂಡ್

ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ತಂಡವು ಆರಂಭಿಕ ಆಘಾತ ಅನುಭವಿಸಿತು. ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮೊದಲ ವಿಕೆಟ್ ಉರುಳಿಸಿದ್ರೆ, ನಾಯಕ ಹಾರ್ದಿಕ್ ಪಾಂಡ್ಯ ತನ್ನ ಮೊದಲ ಓವರ್‌ನಲ್ಲಿ ವಿಕೆಟ್ ಪಡೆದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ಪಡೆದ ಭಾರತದ ಮೊದಲ ನಾಯಕ ಎಂಬ ಬಿರುದು ಸಹ ಪಡೆದರು.

ಇದಾದ ಬಳಿಕ ಒಂದು ಹಂತದಲ್ಲಿ ಐರ್ಲೆಂಡ್ ತಂಡ 22ಕ್ಕೆ 3 ವಿಕೆಟ್ ಕಳೆದುಕೊಂಡು ಮುಗ್ಗರಿಸಿದ್ದು, ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳು ಬೇಸರಗೊಂಡಿದ್ದರು.

IND vs IRE: ಮೊದಲ ಟಿ20 ಪಂದ್ಯ ಗೆದ್ದ ನಂತರ ಕ್ಯಾಪ್ಟನ್ ಪಾಂಡ್ಯ ಖುಷಿ ಹಂಚಿಕೊಂಡಿದ್ದು ಹೀಗೆ

ಅಬ್ಬರಿಸಿದ ಹ್ಯಾರಿ, ಬೌಂಡರಿ ಹಾಗೂ ಸಿಕ್ಸರ್ ಬೇಟೆ

ಅಬ್ಬರಿಸಿದ ಹ್ಯಾರಿ, ಬೌಂಡರಿ ಹಾಗೂ ಸಿಕ್ಸರ್ ಬೇಟೆ

22 ವರ್ಷದ ಹ್ಯಾರಿ ಟೆಕ್ಟರ್ ಕ್ರೀಸ್‌ಗೆ ಕಾಲಿಡುತ್ತಿದ್ದಂತೆ, ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಅವರು ಭಾರತದ ಬೌಲಿಂಗ್‌ಗೆ ಪ್ರತಿದಾಳಿ ನಡೆಸಿದರು. ಅದರಲ್ಲೂ ಉಮ್ರಾನ್ ಮಲಿಕ್ ಮಿಡ್ ವಿಕೆಟ್ ಏರಿಯಾದಲ್ಲಿ ಸಿಕ್ಸರ್ ಹಾಗೂ ಭುವನೇಶ್ವರ್ ಕುಮಾರ್ ಓವರ್ನಲ್ಲಿ ಕವರ್ ಏರಿಯಾದಲ್ಲಿ ಸಿಕ್ಸರ್ ಬಾರಿಸಿದರು.

29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಡಿಕ್ಟರ್ ಕೊನೆಯವರೆಗೂ ಅಜೇಯರಾಗಿ ಉಳಿದು 33 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗುಳಿದರು. ಇದರಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿವೆ. ಈ ಮೂಲಕ ಇಂಗ್ಲೆಂಡ್ 12 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತು. ಈ ಹಂತದಲ್ಲಿ, ಹಾರ್ದಿಕ್ ಪಾಂಡ್ಯ ಪಂದ್ಯದ ಕೊನೆಯಲ್ಲಿ ಹ್ಯಾರಿಯನ್ನ ಕರೆದು ತಮ್ಮ ಕ್ಯಾಪ್ ಅನ್ನು ಉಡುಗೊರೆಯಾಗಿ ನೀಡಿದರು.

ಕಿವೀಸ್ ವಿರುದ್ಧ ಸರಣಿ ಗೆದ್ದು ಭಾರತಕ್ಕೆ ಎಚ್ಚರಿಕೆ ಸಂದೇಶ ನೀಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್

ನಾನೇ ಅಂತಿದ್ದ ಗಾಯಕ್ವಾಡ್ ಗೆ ಪಾಠ ಕಲಿಸಿದ ಪಾಂಡ್ಯ | *Cricket | OneIndia Kannada
ಬ್ಯಾಟ್ ಗಿಫ್ಟ್‌ ನೀಡಿದ ಹಾರ್ದಿಕ್ ಪಾಂಡ್ಯ

ಬ್ಯಾಟ್ ಗಿಫ್ಟ್‌ ನೀಡಿದ ಹಾರ್ದಿಕ್ ಪಾಂಡ್ಯ

ಪಂದ್ಯವನ್ನ 9.2 ಓವರ್‌ಗಳಲ್ಲಿಯೇ ಗುರಿ ಮುಟ್ಟಿ ಗೆಲುವು ಸಾಧಿಸಿದ ಹಾರ್ದಿಕ್ ಪಾಂಡ್ಯ ಸುದ್ದಿಗಾರರೊಂದಿಗೆ ಮಾತನಾಡುವಾಗ ಗಿಫ್ಟಿ ನೀಡಿದ್ದರ ಕುರಿತು ಬಹಿರಂಗಪಡಿಸಿದರು. ಹ್ಯಾರಿ ಬ್ಯಾಟಿಂಗ್ ವೇಳೆ ಕೆಲವು ಸೂಪರ್ ಶಾಟ್ ಗಳನ್ನು ಆಡಿ ರನ್ ಕಲೆಹಾಕಿದರು. ಅವರಿಗೆ ಕೇವಲ 22 ವರ್ಷ. ಹಾಗಾಗಿ ನಾನು ಆತನಿಗೆ ಬ್ಯಾಟ್ ಗಿಫ್ಟ್ ನೀಡಿದೆ. ಆತ ಇನ್ನಷ್ಟು ಸಿಕ್ಸರ್ ಬಾರಿಸಿ ಐಪಿಎಲ್ ಕಾಂಟ್ರಾಕ್ಟ್ ಪಡೆಯಲಿ ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, June 27, 2022, 23:20 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X