ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಐರ್ಲೆಂಡ್ 2ನೇ ಟಿ20: ಬೃಹತ್ ಮೊತ್ತ ಚೇಸ್ ಮಾಡಲು ಯತ್ನಿಸಿದ್ದ ಐರ್ಲೆಂಡ್; ಪರದಾಡಿ ಗೆದ್ದ ಭಾರತ

IND vs IRE: Team India beat Ireland in 2nd T20 and clinched the series

ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವೆ ಜೂನ್ 28ರ ಮಂಗಳವಾರದಂದು ಡಬ್ಲಿನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯ ಐರ್ಲೆಂಡ್ ವಿರುದ್ಧ 4 ರನ್‌ಗಳ ರೋಚಕ ಜಯವನ್ನು ಸಾಧಿಸಿದೆ.

ರೋಹಿತ್ ಆಡಿದ್ದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದವರಲ್ಲಿ ಈಗಲೂ ತಂಡದಲ್ಲಿರುವುದು ಓರ್ವ ಮಾತ್ರ!ರೋಹಿತ್ ಆಡಿದ್ದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದವರಲ್ಲಿ ಈಗಲೂ ತಂಡದಲ್ಲಿರುವುದು ಓರ್ವ ಮಾತ್ರ!

ಈ ಗೆಲುವಿನ ಮೂಲಕ ಸರಣಿಯನ್ನು ಕೈವಶಪಡಿಸಿಕೊಂಡ ಟೀಮ್ ಇಂಡಿಯಾ ಐರ್ಲೆಂಡ್ ತಂಡಕ್ಕೆ ತವರು ನೆಲದಲ್ಲಿಯೇ ವೈಟ್ ವಾಶ್ ಬಳಿದಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿ ಐರ್ಲೆಂಡ್ ತಂಡಕ್ಕೆ 226 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು.

ಭಾರತವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ನಾಯಕರಾಗಿ ಮುನ್ನಡೆಸಿದ ಬೌಲರ್‌ಗಳು ಈ ನಾಲ್ವರು ಮಾತ್ರ; ಗೆದ್ದದ್ದು ಎಷ್ಟರಲ್ಲಿ?ಭಾರತವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ನಾಯಕರಾಗಿ ಮುನ್ನಡೆಸಿದ ಬೌಲರ್‌ಗಳು ಈ ನಾಲ್ವರು ಮಾತ್ರ; ಗೆದ್ದದ್ದು ಎಷ್ಟರಲ್ಲಿ?

ಐರ್ಲೆಂಡ್ ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾಗುವುದಿರಲಿ, ಸನಿಹಕ್ಕೂ ಕೂಡಾ ಬರುವುದಿಲ್ಲ ಎಂಬ ಊಹೆ ಇತ್ತು. ಆದರೆ ಈ ಊಹೆಯನ್ನು ಹುಸಿ ಮಾಡಿದ ಐರ್ಲೆಂಡ್ ಇನ್ನೇನು ಟೀಮ್ ಇಂಡಿಯಾವನ್ನು ಮಣಿಸಿ ಹೊಸ ಇತಿಹಾಸ ಬರೆಯುವ ಸನಿಹಕ್ಕೆ ಬಂದು ಬಿಟ್ಟಿತ್ತು. ಪಂದ್ಯದ ಅಂತಿಮ ಎಸೆತದವರೆಗೂ ಹೋರಾಟ ನಡೆಸಿದ ಐರ್ಲೆಂಡ್ ಅಂತಿಮವಾಗಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 ರನ್‌ ಕಲೆಹಾಕಿ 4 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿತು.

ಭಾರತಕ್ಕೆ ಪೈಪೋಟಿ ಒಡ್ಡಿದ ಐರ್ಲೆಂಡ್‌ನ ಪಂಚ ಬ್ಯಾಟ್ಸ್‌ಮನ್‌ಗಳು

ಭಾರತಕ್ಕೆ ಪೈಪೋಟಿ ಒಡ್ಡಿದ ಐರ್ಲೆಂಡ್‌ನ ಪಂಚ ಬ್ಯಾಟ್ಸ್‌ಮನ್‌ಗಳು

ಟೀಮ್ ಇಂಡಿಯಾ ನೀಡಿದ 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್ ಪರ ಆರಂಭಿಕರಾಗಿ ಪೌಲ್ ಸ್ಟರ್ಲಿಂಗ್ ಮತ್ತು ಆ್ಯಂಡ್ರ್ಯೂ ಬಾಲ್ಬಿರ್ನಿ ಕಣಕ್ಕಿಳಿದರು. ಉತ್ತಮ ಆರಂಭವನ್ನು ಕಟ್ಟಿಕೊಟ್ಟ ಈ ಜೋಡಿ 5.4 ಓವರ್‌ಗಳಲ್ಲಿ 74 ರನ್‌ಗಳ ಜತೆಯಾಟವಾಡಿತು. ಪೌಲ್ ಸ್ಟರ್ಲಿಂಗ್ 18 ಎಸೆತಗಳಲ್ಲಿ 40 ರನ್ ಬಾರಿಸಿದರೆ, ನಾಯಕ ಆ್ಯಂಡ್ರೂ ಬಾಲ್ಬಿರ್ನಿ 37 ಎಸೆತಗಳಲ್ಲಿ 60 ರನ್ ಕಲೆ ಹಾಕಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಯಾರೆಟ್ ಡೆಲಾನಿ ಡಕ್ ಔಟ್ ಆದರೆ, ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಲಾರ್ಕನ್ ಟಕರ್ 5 ರನ್ ಗಳಿಸಿ ಔಟ್ ಆದರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿ ಟೆಕ್ಟರ್ 28 ಎಸೆತಗಳಲ್ಲಿ 39 ರನ್ ಕಲೆಹಾಕಿದರೆ, ಕೊನೆಯಲ್ಲಿ ಅಜೇಯರಾಗಿ ಉಳಿದ ಜಾರ್ಜ್ ಡಾಕ್ರೆಲ್ ಮತ್ತು ಮಾರ್ಕ್ ಅಡೈರ್ ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸಿದರಾದರೂ ಕೊನೇ ಹಂತದಲ್ಲಿ ವಿಫಲರಾದರು. ಡಾಕ್ರೆಲ್ 16 ಎಸೆತಗಳಲ್ಲಿ 34 ರನ್ ಕಲೆಹಾಕಿದರೆ, ಅಡೈರ್ 12 ಎಸೆತಗಳಲ್ಲಿ 23 ರನ್ ಬಾರಿಸಿದರು.

ಟೀಮ್ ಇಂಡಿಯಾ ಇನ್ನಿಂಗ್ಸ್

ಟೀಮ್ ಇಂಡಿಯಾ ಇನ್ನಿಂಗ್ಸ್

ಟೀಮ್ ಇಂಡಿಯಾ ಪರ 9 ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 77 ರನ್ ಕಲೆಹಾಕಿದರೆ, ದೀಪಕ್ ಹೂಡಾ 57 ಎಸೆತಗಳಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್ ಸೇರಿದಂತೆ 104 ರನ್ ಬಾರಿಸಿ ಅಬ್ಬರಿಸಿದರು. ಸಂಜು ಸ್ಯಾಮ್ಸನ್ 77 ರನ್ ಕಲೆ ಹಾಕಿದ್ದಾಗ 17ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಟೀಮ್ ಇಂಡಿಯಾ ಆಟಗಾರರು ಸಾಲುಸಾಲಾಗಿ ವಿಕೆಟ್ ಒಪ್ಪಿಸುತ್ತಾ ಪೆವಿಲಿಯನ್ ಪರೇಡ್ ನಡೆಸಿದರು. ಸೂರ್ಯಕುಮಾರ್ ಯಾದವ್ 15 ರನ್ ಕಲೆಹಾಕಿ ಔಟ್ ಆದರೆ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್ ಹಾಗೂ ಅಕ್ಷರ್ ಪಟೇಲ್ ಮೂವರೂ ಸಹ ಗೋಲ್ಡನ್ ಡಕ್ ಔಟ್ ಆದರು. ಇನ್ನುಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 13 ಮತ್ತು ಭುವನೇಶ್ವರ್ ಕುಮಾರ್ ಅಜೇಯ 1 ರನ್ ಕಲೆ ಹಾಕಿದರು. ಐರ್ಲೆಂಡ್ ತಂಡದ ಪರ ಮಾರ್ಕ್ ಅಡೈರ್ 3 ವಿಕೆಟ್ ಮತ್ತು ಜೋಶ್ವಾ ಲಿಟಲ್ ಹಾಗೂ ಕ್ರೈಗ್ ಯಂಗ್ ತಲಾ 2 ವಿಕೆಟ್‍ಗಳನ್ನು ಪಡೆದರು.

ಗೆಲ್ಲಲು ಪರದಾಡಿದ ಟೀಮ್ ಇಂಡಿಯಾ

ಗೆಲ್ಲಲು ಪರದಾಡಿದ ಟೀಮ್ ಇಂಡಿಯಾ

ಟೀಮ್ ಇಂಡಿಯಾ ಎಷ್ಟು ಅಚ್ಚುಕಟ್ಟಾಗಿ ಬೃಹತ್ ಮೊತ್ತ ಕಲೆಹಾಕಿತೋ ಅಷ್ಟೇ ಕೆಟ್ಟದಾಗಿ ರನ್ ಬಿಟ್ಟುಕೊಟ್ಟು ಇದೇ ಮೊದಲನೇ ಬಾರಿಗೆ ಐರ್ಲೆಂಡ್ ವಿರುದ್ಧ ಟಿ ಟ್ವೆಂಟಿ ಪಂದ್ಯವೊಂದರಲ್ಲಿ ಸೋಲುವ ಭೀತಿಯಲ್ಲಿತ್ತು. ಐರ್ಲೆಂಡ್ ತಂಡಕ್ಕೆ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ 17 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿಯೂ ಸಹ ಕ್ರಿಕೆಟ್ ಪ್ರೇಮಿಗಳು ಐರ್ಲೆಂಡ್ ಟೀಮ್ ಇಂಡಿಯಾವನ್ನು ಮಣಿಸಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವಷ್ಟು ಐರ್ಲೆಂಡ್ ನಂಬಿಕೆಯನ್ನು ಹುಟ್ಟು ಹಾಕಿತ್ತು ಹಾಗೂ ಟೀಮ್ ಇಂಡಿಯಾ ಬೌಲಿಂಗ್ ಪಡೆ ಅಷ್ಟರಮಟ್ಟಿಗೆ ಮಂಕಾಗಿತ್ತು. ಒಂದೆಡೆ ಟೀಮ್ ಇಂಡಿಯಾ ಬೌಲರ್‌ಗಳು ವಿಕೆಟ್ ಪಡೆಯಲು ಹರಸಾಹಸಪಟ್ಟರೆ ಮತ್ತೊಂದೆಡೆ ಐರ್ಲೆಂಡ್ ಬ್ಯಾಟ್ಸ್‌ಮನ್‌ಗಳು ಗೆಲುವಿಗಾಗಿ ಹೋರಾಟ ನಡೆಸಿ ರನ್ ಹೊಳೆಯನ್ನೇ ಹರಿಸಿದರು. ಒಟ್ಟಿನಲ್ಲಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವಿಗಾಗಿ ಪರದಾಡಿತು ಎಂದರೆ ತಪ್ಪಾಗಲಾರದು.


ಟೀಮ್ ಇಂಡಿಯಾ ಪರ ಉಮ್ರಾನ್ ಮಲಿಕ್, ಹರ್ಷಲ್ ಪಟೇಲ್, ರವಿ ಬಿಷ್ಣೋಯಿ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು. ವಿಪರ್ಯಾಸವೆಂದರೆ ಈ ಪಂದ್ಯದಲ್ಲಿ ಈ ಎಲ್ಲಾ ಬೌಲರ್‌ಗಳು 4 ಓವರ್ ಬೌಲಿಂಗ್ ಮಾಡಿ 40ಕ್ಕೂ ಅಧಿಕ ರನ್ ನೀಡಿ ದುಬಾರಿಯಾದರು.

Story first published: Wednesday, June 29, 2022, 10:05 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X