ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Nz 1st ODI : ಟಿ20 ಕ್ರಿಕೆಟ್‌ನಲ್ಲಿ ಮಾತ್ರ ನಿನ್ನ ಆಟ! ಸೂರ್ಯ ವಿರುದ್ಧ ಅಭಿಮಾನಿಗಳ ಟೀಕೆ

Ind vs Nz 1st ODI : Fans Disappointed After Suryakumar Yadav Falls Cheaply Against New Zealand

ಟಿ20 ಮಾದರಿಯಲ್ಲಿ ನಂಬರ್ 1 ಆಟಗಾರನಾಗಿರುವ ಸೂರ್ಯಕುಮಾರ್ ಯಾದವ್ ಅದ್ಯಾಕೋ ಏಕದಿನ ಮಾದರಿಯಲ್ಲಿ ಅದೇ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಟಿ20 ಮಾದರಿಯಲ್ಲಿ ರನ್ ಹೊಳೆ ಹರಿಸುವ ಮಿಸ್ಟರ್ 360 ಆಟಗಾರ ಏಕದಿನ ಕ್ರಿಕೆಟ್‌ಗೆ ಬಂದಾಗ ಮಾತ್ರ ಪರದಾಡುತ್ತಿದ್ದಾರೆ.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಅವಕಾಶ ಪಡೆದಿದ್ದರು. ಕಡಿಮೆ ಓವರ್ ಉಳಿದಿದ್ದ ಕಾರಣ, ಅವರು ವೇಗವಾಗಿ ರನ್ ಗಳಿಸಲು ಹೋಗಿ ಔಟಾಗಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಕೂಡ ಅವರು ರನ್ ಗಳಿಸಲು ವಿಫಲವಾಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

IND vs NZ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ದ್ವಿಶತಕ ಬಾರಿಸಿ ದಾಖಲೆ ಬರೆದ ಶುಭ್ಮನ್ ಗಿಲ್IND vs NZ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ದ್ವಿಶತಕ ಬಾರಿಸಿ ದಾಖಲೆ ಬರೆದ ಶುಭ್ಮನ್ ಗಿಲ್

ಜನವರಿ 18 ರಂದು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 31 ರನ್‌ ಗಳಿಸಿ ಔಟಾದರು. ಇಶಾನ್ ಕಿಶನ್ ಔಟಾದ ನಂತರ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಸೂರ್ಯಕುಮಾರ್ ಯಾದವ್, ವೇಗವಾಗಿ ರನ್ ಗಳಿಸಿದರು.

50 ರನ್‌ಗಳ ಜೊತೆಯಾಟ

50 ರನ್‌ಗಳ ಜೊತೆಯಾಟ

ಇನ್ನೂ 30 ಓವರ್ ಬಾಕಿ ಇದ್ದ ಕಾರಣ, ಸೂರ್ಯಕುಮಾರ್ ಯಾದವ್ ದೊಡ್ಡ ಮೊತ್ತ ಗಳಿಸುತ್ತಾರೆ ಎಂದುಕೊಳ್ಳುವಾಗಲೇ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಶುಭಮನ್ ಗಿಲ್ ಜೊತೆ 50 ರನ್‌ಗಳ ಜೊತೆಯಾಟ ಆಡಿದ ಸೂರ್ಯ ತಂಡಕ್ಕೆ ಉತ್ತಮ ಕೊಡುಗೆಯನ್ನೇ ನೀಡಿದರು. ಆದರೆ, ನಂಬರ್ 1 ಟಿ20 ಬ್ಯಾಟರ್ ಏಕದಿನ ಮಾದರಿಯಲ್ಲೂ ದೊಡ್ಡ ಮೊತ್ತ ಗಳಿಸಬೇಕು ಎನ್ನುವ ಅಪಾರ ನಿರೀಕ್ಷೆಯನ್ನ ಅಭಿಮಾನಿಗಳು ಹೊಂದಿದ್ದಾರೆ.

ಡ್ಯಾರಿಲ್ ಮಿಚೆಲ್ ಅವರ ನಿಧಾನಗತಿಯ, ಫುಲ್‌ಟಾಸ್ ಎಸೆತವನ್ನುನಿಧಾನವಾಗಿ ಆಡಿದ ಸೂರ್ಯಕುಮಾರ್ ಶಾರ್ಟ್ ಕವರ್‌ನಲ್ಲಿ ಮಿಚೆಲ್ ಸ್ಯಾಂಟ್ನರ್‌ಗೆ ಸುಲಭ ಕ್ಯಾಚ್ ನೀಡಿ ಔಟಾದರು.

ಆರಂಭಿಕ ಸ್ಥಾನಕ್ಕಾಗಿ ಪಟ್ಟು ಹಿಡಿಯಲು ಸಾಧ್ಯವಿಲ್ಲ: ಇಶಾನ್ ಕಿಶನ್ ಪ್ರತಿಕ್ರಿಯೆ

ಸೂರ್ಯನ ಆಟದಿಂದ ಅಭಿಮಾನಿಗಳಿಗೆ ನಿರಾಸೆ

ಸೂರ್ಯನ ಆಟದಿಂದ ಅಭಿಮಾನಿಗಳಿಗೆ ನಿರಾಸೆ

ಸೂರ್ಯಕುಮಾರ್ ಯಾದವ್ ಕಡಿಮೆ ರನ್‌ಗಳಿಗೆ ಔಟಾಗಿದ್ದಕ್ಕೆ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವು ಅಭಿಮಾನಿಗಳು ಅವರ ವೈಫಲ್ಯದ ವಿರುದ್ಧ ಅಸಮಾಧಾನಗೊಂಂಡಿದ್ದು ಟೀಕೆ ಮಾಡಿದ್ದಾರೆ. ಬರೀ ಟಿ20 ಮಾದರಿಯಲ್ಲಿ ಮಾತ್ರವೇ ನಿಮ್ಮ ಆಟ ಎಂದು ಕಾಲೆಳೆದಿದ್ದಾರೆ.

ಕೊನೆಯ ಒಂಬತ್ತು ಏಕದಿನ ಇನ್ನಿಂಗ್ಸ್‌ನಲ್ಲಿ ಸೂರ್ಯಕುಮಾರ್ ಯಾದವ್ ಕ್ರಮವಾಗಿ, 6, 27, 16, 13, 8, 8, 4, 4, 31 ರನ್ ಗಳಿಸಿದ್ದಾರೆ.

ಮುಂದಿನ ಸರಣಿಗೆ ಅವಕಾಶ ಸಿಗೋದು ಕಷ್ಟ

ಮುಂದಿನ ಸರಣಿಗೆ ಅವಕಾಶ ಸಿಗೋದು ಕಷ್ಟ

ಭಾರತ ಟಿ20 ತಂಡದಲ್ಲಿ ಸೂರ್ಯಕುಮಾರ್ ಯಾದವ್ ಸ್ಥಾನ ಖಾಯಂ ಆಗಿದೆ. ಆದರೆ, ಏಕದಿನ ಮಾದರಿರಲ್ಲಿ ಕೂಡ ಅವರು ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ರನ್ ಗಳಿಸಲೇಬೇಕಾಗಿದೆ.

ಶ್ರೇಯಸ್ ಅಯ್ಯರ್ ಬೆನ್ನುನೋವಿನ ಸಮಸ್ಯೆಯಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದ ಕಾರಣ ಸೂರ್ಯಕುಮಾರ್ ಯಾದವ್ ಆಡುವ ಬಳಗದಲ್ಲಿ ಅವಕಾಶ ಪಡೆದರು.

ಟಿ20 ಮಾದರಿಯಲ್ಲಿ ಅಬ್ಬರಿಸುವ ಸೂರ್ಯಕುಮಾರ್ ಯಾದವ್ ಏಕದಿನ ಮಾದರಿಯಲ್ಲೂ ಅದೇ ಆಟವನ್ನು ಆಡಿದರೆ, ಭಾರತ ತಂಡಕ್ಕೆ ಬೃಹತ್ ಮೊತ್ತ ಕಲೆ ಹಾಕುವುದು ಸುಲಭವಾಗಲಿದೆ. ಮುಂದಿನ ಪಂದ್ಯದಲ್ಲಾದರೂ, ಸೂರ್ಯ ತನ್ನ ನೈಜ ಆಟ ಪ್ರದರ್ಶಿಸಲಿ ಎನ್ನುವುದು ಅಭಿಮಾನಿಗಳ ಆಶಯ.

Story first published: Wednesday, January 18, 2023, 17:54 [IST]
Other articles published on Jan 18, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X