ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Nz 1st ODI: ಆ ವೇಗಿಯನ್ನು ಪ್ಲೇಯಿಂಗ್ XI ನಿಂದ ಹೊರಗಿಟ್ಟು ತಪ್ಪು ಮಾಡಿತಾ ಟೀಂ ಇಂಡಿಯಾ?

Ind vs Nz 1st ODI : Is Team India Made a Mistake With Exclude Umran Malik In The Playing XI?

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 12 ರನ್‌ಗಳ ರೋಚಕ ಜಯ ಸಾಧಿಸಿ ನಿಟ್ಟುಸಿರು ಬಿಟ್ಟಿದೆ. ಕೊನೆಯ ಓವರ್ ನಲ್ಲಿ ಶತಕ ವೀರ ಮೈಕೆಲ್ ಬ್ರೇಸ್‌ವೆಲ್‌ರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡವುವ ಮೂಲಕ ಶಾರ್ದುಲ್ ಠಾಕೂರ್ ಭಾರತಕ್ಕೆ ಸರಣಿಯ ಮೊದಲ ಜಯ ತಂದುಕೊಟ್ಟರು.

ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 349 ರನ್ ಗಳಿಸಿತು. ಆರಂಭಿಕ ಆಟಗಾರ ಶುಭಮನ್ ಗಿಲ್‌ರ ಭರ್ಜರಿ ದ್ವಿಶತಕ ಸಿಡಿಸಿ ಭಾರತ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು.

U-19 Women's World Cup 2023: ಸ್ಕಾಟ್ಲೆಂಡ್ ಮಣಿಸಿ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶಿಸಿದ ಭಾರತU-19 Women's World Cup 2023: ಸ್ಕಾಟ್ಲೆಂಡ್ ಮಣಿಸಿ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶಿಸಿದ ಭಾರತ

ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ ಒಂದು ಹಂತದಲ್ಲಿ ಸುಲಭವಾಗಿ ಸೋಲುವಂತೆ ಕಂಡಿತು. ಆದರೆ, ಮೈಕೆಲ್ ಬ್ರೇಸ್‌ವೆಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಭಾರತದ ಸವಾಲನ್ನು ಎದುರಿಸಿ ನಿಂತರು ಈ ಜೋಡಿ ಒಂದು ಹಂತದಲ್ಲಿ ಪಂದ್ಯವನ್ನು ಗೆಲುವಿನ ಕಡೆಗೆ ಕೊಂಡೊಯ್ದಿತು.

ಮೊಹಮ್ಮದ್ ಸಿರಾಜ್ ಒಂದೇ ಓವರ್ ನಲ್ಲಿ ಅರ್ಧಶತಕ ಗಳಿಸಿದ್ದ ಮಿಚೆಲ್ ಸ್ಯಾಂಟ್ನರ್ ಮತ್ತು ಹೆನ್ರಿ ಶಿಪ್ಲಿ ಅವರನ್ನು ಔಟ್ ಮಾಡಿ ತಂಡಕ್ಕೆ ಆಸರೆಯಾದರು. ಆದರೆ ತಮ್ಮ ಸ್ಫೋಟಕ ಆಟ ಮುಂದುವರೆಸಿದ ಮೈಕೆಲ್ 78 ಎಸೆತಗಳಲ್ಲಿ 12 ಬೌಂಡರಿ 10 ಭರ್ಜರಿ ಸಿಕ್ಸರ್ ಸಹಿತ 140 ರನ್ ಗಳಿಸಿದರೂ, ದುರದೃಷ್ಟವಶಾತ್ ಕೊನೆಯ ಓವರ್ ನಲ್ಲಿ ಔಟಾಗುವ ಮೂಲಕ ಸೋಲೊಪ್ಪಿಕೊಂಡರು.

ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಎಷ್ಟು ಸುಧಾರಿಸಬೇಕಿದೆ ಎನ್ನುವದಂತೂ ಸ್ಪಷ್ಟವಾಗಿ ಗೊತ್ತಾಗಿದೆ.

Ind vs Nz 1st ODI : Is Team India Made a Mistake With Exclude Umran Malik In The Playing XI?

ಉಮ್ರಾನ್ ಮಲಿಕ್‌ರನ್ನು ಹೊರಗಿಟ್ಟದ್ದು ತಪ್ಪಾಯಿತಾ?

156 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಅತ್ಯಂತ ವೇಗದ ಎಸೆತದ ದಾಖಲೆ ಹೊಂದಿರುವ ಉಮ್ರಾನ್‌ ಮಲಿಕ್‌ರನ್ನು ಆಡುವ ಬಳಗದಿಂದ ಹೊರಗಿಡಲಾಯಿತು. ಉಮ್ರಾನ್ ಮಲಿಕ್‌ರ ಬದಲಿಗೆ ಶಾರ್ದುಲ್ ಠಾಕೂರ್ ಅವರಿಗೆ ಸ್ಥಾನ ನೀಡಲಾಯಿತು.

ಉಮ್ರಾನ್‌ ಮಲಿಕರ್‍‌ನಲ್ಲಿ ತಂಡದಿಂದ ಕೈಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ತಂಡದ ಆಡಳಿತ ಮಂಡಳಿ, ನಾಯಕ ಮತ್ತು ಕೋಚ್‌ ವಿರುದ್ಧ ಕಿಡಿ ಕಾರಿದ್ದಾರೆ. ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಹೊರತು ಪಡಿಸಿದರೆ ಉಳಿದ ಎಲ್ಲಾ ಬೌಲರ್ ಗಳು ಹೆಚ್ಚಿನ ರನ್ ಬಿಟ್ಟುಕೊಟ್ಟರು. ಹಾರ್ದಿಕ್ ಪಾಂಡ್ಯ 7 ಓವರ್ ಗಳಲ್ಲಿ 70 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಉಮ್ರಾನ್ ಮಲಿಕ್ ಇದ್ದಿದ್ದರೆ ಮಧ್ಯಮ ಓವರ್ ಗಳಲ್ಲಿ ವಿಕೆಟ್ ಪಡೆಯುತ್ತಿದ್ದರು ಎನ್ನುವ ವಾದವೂ ಕೇಳಿಬಂದಿದೆ.

ನ್ಯೂಜಿಲೆಂಡ್ ಬ್ಯಾಟರ್ ಗಳು ವೇಗದ ಬೌಲಿಂಗ್‌ಗೆ ಉತ್ತಮವಾಗಿ ಆಡುತ್ತಾರೆ ಎಂದು ಮಲಿಕ್‌ರನ್ನು ಕೈಬಿಟ್ಟಿರುವ ಸಾಧ್ಯತೆ ಇದೆಯಾದರು, ಅದು ಎಷ್ಟು ತಪ್ಪೆಂದು ಮೊದಲ ಪಂದ್ಯದಲ್ಲಿ ಸಾಬೀತಾಗಿದೆ. ಅಲ್ಲದೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಎಕಾನಮಿ ಜೊತೆ ವಿಕೆಟ್‌ಗಳನ್ನು ಪಡೆದುಕೊಂಡಿದ್ದ ಅವರನ್ನು ಕೈ ಬಿಟ್ಟು ಟೀಂ ಇಂಡಿಯಾ ತಪ್ಪು ಮಾಡಿತಾ ಎನ್ನುವ ಪ್ರಶ್ನೆ ಮೂಡುತ್ತದೆ.

ಸರಣಿಯ ಎರಡನೇ ಪಂದ್ಯದಲ್ಲಿಯಾದರೂ ಎಕ್ಸ್‌ಪ್ರೆಸ್ ವೇಗಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.

Story first published: Thursday, January 19, 2023, 2:30 [IST]
Other articles published on Jan 19, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X