ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ದ್ವಿಶತಕ ಬಾರಿಸಿ ದಾಖಲೆ ಬರೆದ ಶುಭ್ಮನ್ ಗಿಲ್

IND vs NZ 1st ODI: Shubman Gill Created Record By Smashing Double Century Against New Zealand in 1st ODI

ಬುಧವಾರ, ಜನವರಿ 18ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಭರ್ಜರಿ ದ್ವಿಶತಕ ಬಾರಿಸಿದರು.

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ದ್ವಿಶತಕ ಗಳಿಸಿದ ವಿಶ್ವದ ಹಾಗೂ ಐದನೇ ಭಾರತೀಯ ಎಂಬ ಹೆಗ್ಗಳಿಕಗೆ ಶುಭ್ಮನ್ ಗಿಲ್ ಪಾತ್ರರಾದರು. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಇಶಾನ್ ಕಿಶನ್ ಈ ಸಾಧನೆ ಮಾಡಿದ್ದರು.

IND vs NZ: ಸತತ 2ನೇ ODI ಶತಕ ಸಿಡಿಸಿ, ಈ ಸಾಧನೆಗೈದ ಮೊದಲ ಭಾರತೀಯ ಎನಿಸಿಕೊಂಡ ಶುಭ್ಮನ್ ಗಿಲ್IND vs NZ: ಸತತ 2ನೇ ODI ಶತಕ ಸಿಡಿಸಿ, ಈ ಸಾಧನೆಗೈದ ಮೊದಲ ಭಾರತೀಯ ಎನಿಸಿಕೊಂಡ ಶುಭ್ಮನ್ ಗಿಲ್

ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ಶುಭಮನ್ ಗಿಲ್ 50 ಓವರ್‌ಗಳ ಸ್ವರೂಪದಲ್ಲಿ ಉತ್ತಮ ಫಾರ್ಮ್ ಅನ್ನು ಮುಂದುವರೆಸಿದರು. ಭಾರತದ ಅಗ್ರ ಕ್ರಮಾಂಕದ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡರು.

149 ಎಸೆತಗಳಲ್ಲಿ 208 ರನ್ ಬಾರಿಸಿದ ಶುಭ್ಮನ್ ಗಿಲ್

149 ಎಸೆತಗಳಲ್ಲಿ 208 ರನ್ ಬಾರಿಸಿದ ಶುಭ್ಮನ್ ಗಿಲ್

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾರೊಂದಿಗೆ ಭಾರತದ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ 149 ಎಸೆತಗಳಲ್ಲಿ 19 ಬೌಂಡರಿ ಮತ್ತು 9 ಸಿಕ್ಸರ್‌ಗಳ ನೆರವಿನಿಂದ 208 ರನ್ ಗಳಿಸಿ ಔಟಾದರು.

ಕಳೆದ ಡಿಸೆಂಬರ್ 10ರಂದು ದ್ವಿಶತಕ ಬಾರಿಸಿದ್ದ ಇಶಾನ್ ಕಿಶನ್ ಅತ್ಯಂತ ಕಿರಿಯ ಆಟಗಾರ ಎನಿಸಿದ್ದರೆ, 23 ವರ್ಷ ಮತ್ತು 132 ದಿನಗಳ ವಯಸ್ಸಿನ ಶುಭ್ಮನ್ ಗಿಲ್ ಅವರು ಕೇವಲ 1 ತಿಂಗಳು ಮತ್ತು 8 ದಿನಗಳ ಅಂತರದಲ್ಲಿ ದ್ವಿಶತಕ ಗಳಿಸಿದ ಎರಡನೇ ಅತ್ಯಂತ ಕಿರಿಯ ಆಟಗಾರರೆನಿಸಿದರು.

ಇನ್ನು 3 ಏಕದಿನ ದ್ವಿಶತಕಗಳನ್ನು ಬಾರಿಸಿದ ಏಕೈಕ ಆಟಗಾರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು 38 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು.

ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ಭಾರತೀಯ

ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ಭಾರತೀಯ

ಇದೇ ವೇಳೆ, ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶುಭ್ಮನ್ ಗಿಲ್ ತಮ್ಮ 19ನೇ ಏಕದಿನ ಇನ್ನಿಂಗ್ಸ್‌ನಲ್ಲಿ 106 ರನ್‌ಗಳನ್ನು ತಲುಪಿದಾಗ 1000 ರನ್‌ಗಳ ಗಡಿಯನ್ನು ದಾಟಿದರು.

ಇದರೊಂದಿಗೆ ಶುಭ್ಮನ್ ಗಿಲ್ ಅವರು 1000 ರನ್‌ ಗಳಿಸಲು 24 ಇನ್ನಿಂಗ್ಸ್ ತೆಗೆದುಕೊಂಡಿದ್ದ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರನ್ನು ಹಿಂದಿಕ್ಕಿ ಅತ್ಯಂತ ವೇಗದ ಭಾರತೀಯ ಮತ್ತು ವಿಶ್ವದ ಜಂಟಿ ಎರಡನೇ ವೇಗದ ಸಾಧನೆ ಮಾಡಿದರು.

ನ್ಯೂಜಿಲೆಂಡ್ ವಿರುದ್ಧ ಭಾರತದ ನಾಲ್ಕನೇ ಅತ್ಯಧಿಕ ಸ್ಕೋರ್

ನ್ಯೂಜಿಲೆಂಡ್ ವಿರುದ್ಧ ಭಾರತದ ನಾಲ್ಕನೇ ಅತ್ಯಧಿಕ ಸ್ಕೋರ್

ಶುಭ್ಮನ್ ಗಿಲ್ 19 ಇನ್ನಿಂಗ್ಸ್‌ಗಳಲ್ಲಿ 1000 ರನ್‌ಗಳ ಗಡಿಯನ್ನು ದಾಟಲು ಪಾಕಿಸ್ತಾನದ ಇಮಾನ್-ಉಲ್-ಹಕ್‌ ಅವರ ಸಾಧನೆಯನ್ನು ಸರಿಗಟ್ಟಿದರು. ಆದರೆ ಫಖರ್ ಜಮಾನ್ ಅವರ 18 ಇನ್ನಿಂಗ್ಸ್‌ಗಳಲ್ಲಿ ವೇಗವಾಗಿ 1000 ಏಕದಿನ ರನ್‌ಗಳ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

ಸರ್ ವಿವ್ ರಿಚರ್ಡ್ಸ್, ಕೆವಿನ್ ಪೀಟರ್ಸನ್, ಕ್ವಿಂಟನ್ ಡಿ ಕಾಕ್, ಬಾಬರ್ ಅಜಂ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರಂತಹ ಆಟಗಾರರು 21ನೇ ಪಂದ್ಯದಲ್ಲಿ 1000 ಏಕದಿನ ರನ್‌ಗಳನ್ನು ಗಳಿಸಿದ್ದವರನ್ನು ಶುಭ್ಮನ್ ಗಿಲ್ ಹಿಂದಿಕ್ಕಿದರು.

ಅಂತಿಮವಾಗಿ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 349 ರನ್ ಗಳಿಸಿತು. ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಅತ್ಯಧಿಕ ಸ್ಕೋರ್ ಆಗಿದೆ.

Story first published: Wednesday, January 18, 2023, 17:39 [IST]
Other articles published on Jan 18, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X