ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ 1st T20: ಪ್ಲೇಯಿಂಗ್‌ XI ನಲ್ಲಿ ಸ್ಥಾನ ಪಡೆಯಲು ಇವರ ಮಧ್ಯೆ ಪೈಪೋಟಿ

Ind vs Nz 1st T20 : Is Prithvi Shaw Get Chance In Team India Playing XI, Pitch Report, Match Timings

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ ಈಗ ಟಿ20 ಸರಣಿಯ ಮೇಲೆ ಕಣ್ಣಿಟ್ಟಿದೆ. ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯಲಿರುವ ಮೊದಲನೇ ಟಿ20 ಪಂದ್ಯಕ್ಕಾಗಿ ಭಾರತ ಯುವ ಪಡೆ ಸಜ್ಜಾಗುತ್ತಿದೆ.

ಶುಭ್ಮನ್ ಗಿಲ್‌ಗಿದೆ ಶಿಖರ್ ಧವನ್‌ರ ಈ 3 ದಾಖಲೆ ಮುರಿಯುವ ಅವಕಾಶಶುಭ್ಮನ್ ಗಿಲ್‌ಗಿದೆ ಶಿಖರ್ ಧವನ್‌ರ ಈ 3 ದಾಖಲೆ ಮುರಿಯುವ ಅವಕಾಶ

ಮೂರು ಪಂದ್ಯಗಳ ಏಕದಿನ ಸರಣಿಯನ್ನು ಗೆಲ್ಲುವ ಉತ್ಸಾಹದಲ್ಲಿ ರಾಂಚಿಯಲ್ಲಿ ಅಭ್ಯಾಸ ಆರಂಭಿಸಿದೆ ಟೀಂ ಇಂಡಿಯಾ. ಮೊದಲನೇ ಟಿ20 ಪಂದ್ಯಕ್ಕೆ ಆಡುವ ಬಳಗವನ್ನು ಆಯ್ಕೆ ಮಾಡುವುದೇ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕೋಚ್ ರಾಹುಲ್‌ ದ್ರಾವಿಡ್‌ಗೆ ಸವಾಲಾಗಿದೆ.

ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಮಣಿಕಟ್ಟಿನ ಗಾಯಕ್ಕೆ ಒಳಗಾಗಿದ್ದು ಸರಣಿಯಿಂದ ಹೊರಬಿದ್ದಿದ್ದಾರೆ. ಆರಂಭಿಕ ಆಟಗಾರನ ಸ್ಥಾನಕ್ಕೆ ಈಗ ಪೃಥ್ವಿ ಶಾ, ಶುಬಮನ್ ಗಿಲ್ ಮತ್ತು ಇಶಾನ್ ಕಿಶನ್ ಲಭ್ಯವಿದ್ದಾರೆ.

Ind Vs Aus Test : ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡೋದೆ ಅನುಮಾನ !Ind Vs Aus Test : ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡೋದೆ ಅನುಮಾನ !

ಬೌಲಿಂಗ್ ವಿಭಾಗದಲ್ಲೂ ಆಟಗಾರರನ್ನು ಆಯ್ಕೆ ಮಾಡುವುದು ಪಾಂಡ್ಯ ಮತ್ತು ದ್ರಾವಿಡ್‌ಗೆ ಸಮಸ್ಯೆಯಾಗಿದೆ. ರಾಂಚಿಯಲ್ಲಿ ಒಬ್ಬ ಸ್ಪಿನ್ನರ್ ಮಾತ್ರ ಆಡುವ ಸಾಧ್ಯತೆ ಇದ್ದು, ಯಾರು ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಏಕದಿನ ವಿಶ್ವಕಪ್ ಇರುವ ಕಾರಣ ಟಿ20 ಸರಣಿಯಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ.

ಪೃಥ್ವಿ ಶಾಗೆ ಅವಕಾಶ ಸಿಗುತ್ತಾ?

ಪೃಥ್ವಿ ಶಾಗೆ ಅವಕಾಶ ಸಿಗುತ್ತಾ?

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿರುವ ಶುಭಮನ್ ಗಿಲ್ ಟಿ20 ಪಂದ್ಯದಲ್ಲಿ ಆಡಲು ಪೃಥ್ವಿ ಶಾ ಪೈಪೋಟಿ ನೀಡಲಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಪೃಥ್ವಿ ಶಾ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಶುಭಮನ್ ಗಿಲ್‌ಗೆ ಹೋಲಿಕೆ ಮಾಡಿದರೆ ಪೃಥ್ವಿ ಶಾ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಏಕದಿನ ಮಾದರಿಯಲ್ಲಿ ಗಿಲ್ ಉತ್ತಮವಾಗಿದ್ದರು, ಟಿ20 ಮಾದರಿಯಲ್ಲಿ ಅವರ ಸ್ಟ್ರೈಕ್‌ರೇಟ್ ಕಡಿಮೆ ಇದ್ದು, ಇದನ್ನು ಪರಿಗಣಿಸಿದರೆ ಪೃಥ್ವಿ ಶಾ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು.

ವಾಷಿಂಗ್ಟನ್ ಸುಂದರ್ ಅಥವಾ ದೀಪಕ್ ಹೂಡಾ

ವಾಷಿಂಗ್ಟನ್ ಸುಂದರ್ ಅಥವಾ ದೀಪಕ್ ಹೂಡಾ

ಆಲ್‌ರೌಂಡರ್ ಸ್ಥಾನದಲ್ಲಿ ದೀಪಕ್ ಹೂಡಾ ಮತ್ತು ವಾಷಿಂಗ್ಟನ್ ಸುಂದರ್ ನಡುವೆ ತಂಡಕ್ಕೆ ಸೇರ್ಪಡೆಯಾಗಲು ಪೈಪೋಟಿ ನಡೆಯಲಿದೆ. 2022ರಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ದೀಪಕ್ ಹೂಡಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು.

ವಾಷಿಂಗ್ಟನ್ ಸುಂದರ್ ಕೂಡ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡಿ ವಿಕೆಟ್‌ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ದ್ರಾವಿಡ್ ಮತ್ತು ಪಾಂಡ್ಯ ಇವರಿಬ್ಬರಲ್ಲಿ ಯಾರಿಗೆ ಮಣೆ ಹಾಕುತ್ತದೆ ಎಂದು ನೋಡಬೇಕಿದೆ.

 ಯಾದವ್, ಚಹಾಲ್ ನಡುವೆ ಪೈಪೋಟಿ

ಯಾದವ್, ಚಹಾಲ್ ನಡುವೆ ಪೈಪೋಟಿ

ದೀಪಕ್ ಹೂಡಾ ಅಥವಾ ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆಯುವ ಕಾರಣ, ಒಬ್ಬ ಸ್ಪಿನ್ನರ್ ಮಾತ್ರ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಕುಲದೀಪ್ ಯಾವದ್ ಮತ್ತು ಯುಜುವೇಂದ್ರ ಚಹಾಲ್ ನಡುವೆ ಪೈಪೋಟಿ ನಡೆಯಲಿದೆ. ಕುಲದೀಪ್ ಯಾದವ್ ಉತ್ತಮ ಪ್ರದರ್ಶನ ನೀಡಿರುವ ಕಾರಣ ಅವರಿಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

ಜೆಎಸ್‌ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲವಾಗಲಿದೆ. ಜನವರಿ 27 ರಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಭಾರತದ ಸಂಭಾವ್ಯ ಆಡುವ ಬಳಗ: ಶುಭಮನ್ ಗಿಲ್/ ಪೃಥ್ವಿ ಶಾ, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಯುಜುವೇಂದ್ರ ಚಾಹಲ್/ಕುಲದೀಪ್ ಯಾದವ್

Story first published: Thursday, January 26, 2023, 12:32 [IST]
Other articles published on Jan 26, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X