ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನಸು ನನಸಾಗಿಸಿಕೊಂಡ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್: ಟಿ20 ಕ್ರಿಕೆಟ್‌ಗೆ ಪದಾರ್ಪಣೆ

Venkatesh iyer

ಟೀಂ ಇಂಡಿಯಾ ಹೊಸ ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಳೆಯ ಮುಖಗಳಿಗೆ ಮತ್ತೆ ಅವಕಾಶ ನೀಡಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಬಹಳ ಸಮಯದ ಬಳಿಕ ಟೀಂ ಇಂಡಿಯಾ ಮುನ್ನಡೆಯುತ್ತಿದ್ದು, ಯುವ ಪ್ರತಿಭೆ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ.

2022ರ ಟಿ20 ವಿಶ್ವಕಪ್ ಗುರಿಯಾಗಿಸಿಕೊಂಡು ಭಾರತ ಪ್ರಯೋಗಗಳನ್ನು ನಡೆಸುತ್ತಿದೆ. ಬೌಲಿಂಗ್ ಆಲ್‌ರೌಂಡರ್ ಹುಡುಕಾಟದಲ್ಲಿದ್ದ ಭಾರತಕ್ಕೆ ವೆಂಕಟೇಶ್ ಅಯ್ಯರ್ ಅನ್ನು ಐಪಿಎಲ್ ಗಿಫ್ಟಿ ನೀಡಿದೆ. ವೆಂಕಟೇಶ್ ಅಯ್ಯರ್ ಚೊಚ್ಚಲ ಪಂದ್ಯವನ್ನಾಡುವ ಮೊದಲು ನಾಯಕ ರೋಹಿತ್ ಶರ್ಮಾರಿಂದ ಕ್ಯಾಪ್ ಪಡೆದು ಮೈದಾನಕ್ಕೆ ಕಾಲಿಟ್ಟರು.

''ಕ್ರಿಕೆಟ್ ಆಡುವ ಪ್ರತಿಯೊಬ್ಬರೂ ದೇಶಕ್ಕಾಗಿ ಆಡಲು ಹಾತೊರೆಯುತ್ತಾರೆ, ಆದ್ದರಿಂದ ನನಗೆ ಈ ಅವಕಾಶ ಸಿಕ್ಕಿರುವುದಕ್ಕೆ ಸಾಕಷ್ಟು ಖುಷಿಯಾಗದ್ದೇನೆ. ರಾಹುಲ್ (ದ್ರಾವಿಡ್) ಸರ್ ನಾಯಕತ್ವದಲ್ಲಿ ಆಡಲು ಸಂತೋಷವಾಗುತ್ತಿದೆ, ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ ಮತ್ತು ಅದಕ್ಕಾಗಿ ಎದುರು ನೋಡುತ್ತಿದ್ದೇನೆ. ಒಬ್ಬ ಕ್ರಿಕೆಟಿಗನಾಗಿ ನೀವು ಹೊಂದಿಕೊಳ್ಳುವವರಾಗಿರಬೇಕು ಮತ್ತು ನನಗೆ ನೀಡಿದ ಪಾತ್ರವನ್ನು ಲಾಭ ಮಾಡಿಕೊಳ್ಳಲು ನಾನು ನೋಡುತ್ತೇನೆ. ನಾನು ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧನಿದ್ದೇನೆ ಅಥವಾ ನನ್ನನ್ನು ಕೇಳಿದಾಗಲೆಲ್ಲಾ ಬೌಲಿಂಗ್ ಮಾಡಲು ಸಿದ್ಧನಿದ್ದೇನೆ. (ಭಾರತೀಯ) ಪ್ರೇಕ್ಷಕರ ಮುಂದೆ ಆಡುವುದು ಅದ್ಭುತವಾಗಿದೆ, ಅವರು ಮರಳಿ ಸ್ಟೇಡಿಯಂಗೆ ಬಂದಿರುವುದು ಅದ್ಭುತವಾಗಿದೆ " ಎಂದು ಚೊಚ್ಚಲ ಟಿ20 ಪಂದ್ಯವನ್ನಾಡುತ್ತಿರುವ ವೆಂಕಟೇಶ್ ಅಯ್ಯರ್ ಹೇಳಿದರು.

2021ರ ಐಪಿಎಲ್‌ನಲ್ಲಿ ಕೆಕೆಆರ್ ಪರ ಮಿಂಚಿದ ಅಯ್ಯರ್

2021ರ ಐಪಿಎಲ್‌ನಲ್ಲಿ ಕೆಕೆಆರ್ ಪರ ಮಿಂಚಿದ ಅಯ್ಯರ್

ವೆಂಕಟೇಶ್ ಅಯ್ಯರ್ 2021ರ ಐಪಿಎಲ್ ಸೀಸನ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್) ಪರ ಓಪನರ ಆಗಿ ಕಣಕ್ಕಿಳಿದು ಎದುರಾಳಿ ತಂಡವನ್ನ ಬೆಚ್ಚಿಬೀಳಿಸಿದಂತು ಸುಳ್ಳಲ್ಲ. ಸ್ವತಃ ಫ್ರಾಂಚೈಸಿ ನಿರೀಕ್ಷಿಸದಷ್ಟು ಬ್ಯಾಟಿಂಗ್ ಮಾಡಿದ ವೆಂಕಟೇಶ್ ಅಯ್ಯರ್ ಅಬ್ಬರಿಸಿದ ಪರಿ ಎಲ್ಲರಿಗೂ ತಿಳಿದಿದೆ.

ಕಳೆದ ಐಪಿಎಲ್‌ನಲ್ಲಿ 10 ಪಂದ್ಯಗಳನ್ನಾಡಿದ ವೆಂಕಟೇಶ್ ಅಯ್ಯರ್ ನಾಲ್ಕು ಅರ್ಧಶತಕಗಳನ್ನ ಸಿಡಿಸುವ ಮೂಲಕ ಒಟ್ಟಾರ 370 ರನ್ ಕಲಹಾಕಿದ್ರು. ಬ್ಯಾಟಿಂಗ್ ಅಷ್ಟೇ ಅಲ್ಲದೆ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಪರ ಬೌಲಿಂಗ್ ಆಲ್‌ರೌಂಡರ್ ಸ್ಥಾನವನ್ನು ತುಂಬಬಲ್ಲ ಆಟಗಾರ ಎಂಬ ಕಾರಣಕ್ಕೆ ತಂಡದಲ್ಲಿ ಸ್ಥಾನ ಪಡೆದ್ರು.

ಬೌಲಿಂಗ್ ಆಲ್‌ರೌಂಡರ್‌ಗೆ ಬೇಡಿಕೆ, ಹಾರ್ದಿಕ್ ಔಟ್ ಆಫ್ ಫಾರ್ಮ್

ಬೌಲಿಂಗ್ ಆಲ್‌ರೌಂಡರ್‌ಗೆ ಬೇಡಿಕೆ, ಹಾರ್ದಿಕ್ ಔಟ್ ಆಫ್ ಫಾರ್ಮ್

ಟೀಂ ಇಂಡಿಯಾ ಖಾಯಂ ಬೌಲಿಂಗ್ ಆಲ್‌ರೌಂಡರ್ ಆಗಿದ್ದ ಹಾರ್ದಿಕ್ ಪಾಂಡ್ಯ ಫಾರ್ಮ್ ಕೊರತೆಯನ್ನು ಎದುರಿಸುತ್ತಿದ್ದು, ಅವರ ಸ್ಥಾನ ತುಂಬಬಲ್ಲ ಭರವಸೆಯ ಆಟಗಾರನಾಗಿ ವೆಂಕಟೇಶ್ ಅಯ್ಯರ್ ಕಾಣಿಸಿಕೊಂಡಿದ್ದಾರೆ. ಕೆಕೆಆರ್ ಪರ ಸ್ಫೋಟಕ ಆರಂಭದ ಜೊತೆಗೆ ಮನರಂಜಿಸಿದ ಮಧ್ಯಪ್ರದೇಶದ ಆಟಗಾರ ವೆಂಕಟೇಶ್ ಅಯ್ಯರ್ ಕೂಡ ಆಯ್ಕೆಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾದ್ರು. ಹೀಗಾಗಿಯೇ ನ್ಯೂಜಿಲೆಂಡ್ ಸರಣಿಗೆ ಆಯ್ಕೆಯಾಗಿದ್ದಲ್ಲದೆ ಮೊದಲ ಟಿ20 ಪಂದ್ಯದಲ್ಲೇ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದಾರೆ.

ಇದಲ್ಲದೆ ಈಗಾಗಲೇ ಟೀಂ ಇಂಡಿಯಾದಲ್ಲಿ ಸಾಕಷ್ಟು ಸ್ಪಿನ್ನಿಂಗ್ ಆಲ್‌ರೌಂಡರ್‌ಗಳಿದ್ದು, ವೆಂಕಟೇಶ್ ಅಯ್ಯರ್ ಬೌಲಿಂಗ್ ಆಲ್‌ರೌಂಡರ್ ಆಗಿರುವ ಕಾರಣ ಅವಕಾಶ ಬೇಗನೆ ಒಲಿದು ಬಂದಿದೆ.

IPLನಲ್ಲಿ ಕಡಿಮೆ ಬೆಲೆಗೆ ಹರಾಜಾಗಿ, ಭರ್ಜರಿ ಪರ್ಫಾಮೆನ್ಸ್ ನೀಡಿದ 6 ಆಟಗಾರರು

ಮಧ್ಯಪ್ರದೇಶ ಮೂಲದ ಆಲ್‌ರೌಂಡರ್

ಮಧ್ಯಪ್ರದೇಶ ಮೂಲದ ಆಲ್‌ರೌಂಡರ್

26 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್ ವೆಂಕಟೇಶ್ ರಾಜಶೇಖರನ್ ಅಯ್ಯರ್ ಡಿಸೆಂಬರ್ 25, 1994ರಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ್ರು. ಚಿಕ್ಕಂದಿನಿಂದಲೇ ಕ್ರಿಕೆಟ್‌ ಅಂದ್ರೆ ಅವರಿಗೆ ಅಚ್ಚುಮೆಚ್ಚು. ಪೋಷಕರ ಪ್ರೋತ್ಸಾಹದಿಂದಾಗಿ ಓದಿನ ಜೊತೆಗೆ ಕ್ರಿಕೆಟ್‌ ಅನ್ನು ಕಠಿಣ ಪರಿಶ್ರಮದಿಂದ ಆಡಿದ ವೆಂಕಿ ಮಧ್ಯಪ್ರದೇಶ ಅಂಡರ್-16 ತಂಡದಲ್ಲಿ ಸ್ಥಾನ ಪಡೆದ್ರು. ಆನಂತರ ಇಂದೋರ್ ಆಲ್‌ರೌಂಡರ್ ತಿರುಗಿ ನೋಡಿದ್ದೇ ಇಲ್ಲ.

ತಮ್ಮ ಪವರ್‌ಫುಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ಕೌಶಲ್ಯದಿಂದಾಗಿ ಐಪಿಎಲ್‌ನಲ್ಲಿ ಕೆಕೆಆರ್‌ ಫ್ರಾಂಚೈಸಿ ತಂಡಕ್ಕೆ ಸೇರಿಕೊಂಡ್ರು. ಸಿಕ್ಕ ಅವಕಾಶವನ್ನ ಎರಡೂ ಕೈನಲ್ಲಿ ಬಾಚಿಕೊಂಡ ಅಯ್ಯರ್ ಓಪನರ್ ಆಗಿ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದ್ರು.

2018, ಡಿಸೆಂಬರ್ 06ರಂದು ರಲ್ಲಿ ಹೈದ್ರಾಬಾದ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟ ಅಯ್ಯರ್, ಸೌರಾಷ್ಟ್ರ ವಿರುದ್ಧ 2015ರಲ್ಲೇ ಲಿಸ್ಟ್ ಎ ಕ್ರಿಕೆಟ್ ಆಡಿದ್ದಾರೆ. ಅದೇ ವರ್ಷದಲ್ಲಿ ರೈಲ್ವೇಸ್ ವಿರುದ್ಧ ಟಿ20 ಪಂದ್ಯಕ್ಕೆ ಕಾಲಿಟ್ಟರು.

Guptill ಔಟ್ ಆದಾಗ Chahar ಹೀಗೆ ಮಾಡಿದ್ದೇಕೆ | Oneindia Kannada
ವೆಂಕಟೇಶ್ ಅಯ್ಯರ್ ರೆಕಾರ್ಡ್ಸ್‌

ವೆಂಕಟೇಶ್ ಅಯ್ಯರ್ ರೆಕಾರ್ಡ್ಸ್‌

ಮಧ್ಯಪ್ರದೇಶದ ಆಲ್‌ರೌಂಡರ್ ಇದುವರೆಗೂ 10 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿದ್ದು, 36.33 ಬ್ಯಾಟಿಂಗ್ ಸರಾಸರಿಯಲ್ಲಿ 545 ರನ್ ಕಲೆಹಾಕಿದ್ದಾರೆ. ಇದರಲ್ಲಿ ಆರು ಅರ್ಧಶತಕಗಳು ಒಳಗೊಂಡಿದ್ದು, ಏಳು ವಿಕೆಟ್‌ಗಳನ್ನು ಸಹ ಕಬಳಿಸಿದ್ದಾರೆ.

ಇನ್ನು ಟಿಸ್ಟ್ ಎ ನಲ್ಲಿ 24 ಪಂದ್ಯಗಳಲ್ಲಿ 849 ರನ್ ಸಿಡಿಸಿದ್ದು, ಎರಡು ಶತಕ ಮತ್ತು ಮೂರು ಅರ್ಧಶತಕಗಳಿಸಿದ್ದಾರೆ. ಜೊತೆಗೆ ಬೌಲಿಂಗ್‌ನಲ್ಲಿ 10 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

ಇದಲ್ಲದೆ ಚುಟುಕು ಕ್ರಿಕೆಟ್‌ನಲ್ಲೂ ಚಾಪು ಮೂಡಿಸಿರುವ ವೆಂಕಟೇಶ್ 39.03 ಬ್ಯಾಟಿಂಗ್ ಸರಾಸರಿಯಲ್ಲಿ 1249 ರನ್ ಕಲೆಹಾಕಿದ್ದು, 135.17 ಸ್ಟ್ರೈಕ್‌ರೇಟ್‌ನಲ್ಲಿ ಏಳು ಅರ್ಧಶತಕ ದಾಖಲಿಸಿದ್ದಾರೆ. ಇನ್ನು 6.90 ಎಕಾನಮಿಯಲ್ಲಿ 29 ವಿಕೆಟ್ ಉರುಳಿಸಿದ್ದಾರೆ.

Story first published: Thursday, November 18, 2021, 9:48 [IST]
Other articles published on Nov 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X