ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND Vs NZ 2nd ODI: ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಹಸಿರು ಪಿಚ್ ಸಿದ್ಧಪಡಿಸಿದ ರಾಯ್ಪುರ ಕ್ರೀಡಾಂಗಣ

IND Vs NZ 2nd ODI: Raipur Stadium Prepares Green Pitch For Its First ODI Match

ಹೈದರಾಬಾದ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯವನ್ನು ರೋಚಕವಾಗಿ 12 ರನ್‌ಗಳಿಂದ ಗೆದ್ದ ಭಾರತ ತಂಡ ಇಂದು (ಶನಿವಾರ, ಜನವರಿ 21) ಎರಡನೇ ಪಂದ್ಯವನ್ನಾಡಲು ಸಜ್ಜಾಗಿದೆ. ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇನ್ನು ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಇಲ್ಲಿ ಇದುವರೆಗೂ ಐಪಿಎಲ್, ಚಾಂಪಿಯನ್ ಲೀಗ್, ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಪಂದ್ಯಗಳು ಮಾತ್ರ ನಡೆದಿದ್ದವು.

ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಲ್ಲಿನ ಕ್ರೀಡಾಭಿಮಾನಿಗಳು ಕಾತರರಾಗಿದ್ದಾರೆ. ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದ್ದು, ಭಾರತ ತಂಡ ಶುಕ್ರವಾರ ಅಭ್ಯಾಸ ಮಾಡುವ ಮೂಲಕ ಕಿವೀಸ್ ಪಡೆಯನ್ನು ಎದುರಿಸಲು ಸಜ್ಜಾಗಿದೆ.

2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಗೆ ಇಲ್ಲ ಅವಕಾಶ: ವ್ಯರ್ಥವಾಯಿತು ಐಸಿಸಿ ಪ್ರಯತ್ನ

ಸರಣಿಯ ಮೊದಲನೇ ಪಂದ್ಯವನ್ನು ಗೆದ್ದಿರುವ ರೋಹಿತ್ ಶರ್ಮಾ ಪಡೆ ಈ ಪಂದ್ಯವನ್ನು ಗೆದ್ದರೆ ಸರಣಿಯನ್ನು ವಶ ಮಾಡಿಕೊಂಡಂತಾಗುತ್ತದೆ. ಮೊದಲನೇ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ರಾಯ್‌ಪುರದಲ್ಲಿ ನಡೆಯಲಿರುವ ಎರಡನೇ ಪಂದ್ಯವನ್ನು ಸುಲಭವಾಗಿ ಗೆಲ್ಲುವ ವಿಶ್ವಾಸದಲ್ಲಿದೆ ಟೀಂ ಇಂಡಿಯಾ.

ವೇಗಿಗಳಿಗೆ ಸಹಕಾರಿಯಾದ ಪಿಚ್‌

ವೇಗಿಗಳಿಗೆ ಸಹಕಾರಿಯಾದ ಪಿಚ್‌

ಭಾರತ-ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕಾಗಿ ರಾಯ್‌ಪುರದಲ್ಲಿ ಹಸಿರು ಪಿಚ್‌ ಅನ್ನು ಸಿದ್ಧಪಡಿಸಲಾಗಿದೆ. ಇದು ವೇಗಿಗಳಿಗೆ ಹೆಚ್ಚಿನ ಸಹಾಯ ಮಾಡುವ ಸಾಧ್ಯತೆ ಇದೆ. ಪಂದ್ಯ ಸಾಗುವ ವೇಳೆ ಪಿಚ್‌ ನಿಧಾನವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದ್ದು ಸ್ಪಿನ್ನರ್ ಗಳಿಗೂ ನೆರವು ನೀಡುವ ಸಾಧ್ಯತೆ ಇದೆ.

ಐಪಿಎಲ್‌ ಪಂದ್ಯಗಳ ವೇಳೆ ಈ ಅಂಗಳದಲ್ಲಿ ದಾಖಲಾಗಿರುವ 164 ರನ್‌ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ. 149.6 ಇಲ್ಲಿನ ಸರಾಸರಿ ಸ್ಕೋರ್ ಆಗಿದೆ. ಬ್ಯಾಟರ್‌ಗಳು ಇಲ್ಲಿ ಸುಲಭವಾಗಿ ರನ್ ಗಳಿಸಲು ಸಾಧ್ಯವಿಲ್ಲ. ತಾಳ್ಮೆಯಿಂದ ಕ್ರೀಸ್‌ಗೆ ಕಚ್ಚಿ ನಿಂತು, ಪಿಚ್ ಅರ್ಥ ಮಾಡಿಕೊಂಡರೆ ಮಾತ್ರ ರನ್ ಗಳಿಸಬಹುದಾಗಿದೆ.

ಈ ಕ್ರೀಡಾಂಗಣದಲ್ಲಿ ಬೌಂಡರಿಗಳು ಕೂಡ ಸಾಕಷ್ಟು ದೊಡ್ಡದಾಗಿರುವುದು ಬೌಲರ್ ಗಳಿಗೆ ಅನುಕೂಲಕರವಾಗಿದೆ. ಸರಿಯಾಗಿ ಟೈಮಿಂಗ್ ಮಾಡದ ಹೊರತು ಬ್ಯಾಟರ್ ಬೌಂಡರಿ ಗಳಿಸುವುದು ಕಷ್ಟವಾಗಲಿದೆ.

Ranji Trophy 2022-23: ಮಯಾಂಕ್ ಅಗರ್ವಾಲ್ ದ್ವಿಶತಕ; ಕರ್ನಾಟಕ vs ಕೇರಳ ಅಂತಿಮ ಫಲಿತಾಂಶ

ಉಮ್ರಾನ್‌ ಮಲಿಕ್‌ಗೆ ಅವಕಾಶ?

ಉಮ್ರಾನ್‌ ಮಲಿಕ್‌ಗೆ ಅವಕಾಶ?

ರಾಯ್‌ಪುರ ಅಂಗಳ ವೇಗಿಗಳಿಗೆ ನೆರವು ನೀಡುವುದರಿಂದ ಎಕ್ಸ್‌ಪ್ರೆಸ್ ವೇಗಿ ಉಮ್ರಾನ್ ಮಲಿಕ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. 156 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಭಾರತದ ಪರ ದಾಖಲೆ ಬರೆದಿರುವ ಉಮ್ರಾನ್ ತಮ್ಮ ವೇಗದಿಂದ ಬ್ಯಾಟರ್ ಗಳನ್ನು ಕಾಡಿರುವುದಂತೂ ಸತ್ಯ.

ಪವರ್ ಪ್ಲೇ ಮತ್ತು ಮಧ್ಯಮ ಕ್ರಮಾಂಕದ ಓವರ್ ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದು, ಅವರ ಎಕಾನಮಿ ಕೂಡ ಸಾಕಷ್ಟು ಸುಧಾರಣೆಯಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಯವಲ್ಲಿ ಅವರು ನೀಡಿದ ಪ್ರದರ್ಶನ ಇದಕ್ಕೆ ಸಾಕ್ಷಿಯಾಗಿದೆ. ಉಮ್ರಾನ್ ಮಲಿಕ್‌ಗೆ ಯಾರು ಜಾಗ ಬಿಟ್ಟುಕೊಡುತ್ತಾರೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ಭಾರತ, ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ XI

ಭಾರತ, ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ XI

ಭಾರತ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ /ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್

ನ್ಯೂಜಿಲೆಂಡ್ : ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.

Story first published: Saturday, January 21, 2023, 7:52 [IST]
Other articles published on Jan 21, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X