ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಯ್‌ಪುರದಲ್ಲಿ ರಾರಾಜಿಸಿದ ರೋಹಿತ್ ಪಡೆ: 8 ವಿಕೆಟ್‌ಗಳ ಅಮೋಘ ಗೆಲುವಿನೊಂದಿಗೆ ಸರಣಿ ವಶಕ್ಕೆ

Ind vs NZ 2nd ODI, Team India won the 2nd match by 8 wicket and won the series

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಅಬ್ಬರಿಸಿದ್ದ ಟೀಮ್ ಇಂಡಿಯಾ ಆಟಗಾರರು ಬಳಿಕ ಬ್ಯಾಟಿಂಗ್‌ನಲ್ಲಿಯೂ ಸಂಪೂರ್ಣವಾಗಿ ಹಿಡಿತ ಸಾಧಿಸಿದ್ದು 8 ವಿಕೆಟ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿದೆ. ಈ ಮೂಲಕ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ ಸರಣಿ ತನ್ನ ವಶಕ್ಕೆ ಪಡೆದುಕೊಂಡಿದೆ.

ಮೊದಲಿಗೆ ಬೌಲಿಂಗ್ ಮಾಡಿ ನ್ಯೂಜಿಲೆಂಡ್ ತಂಡವನ್ನು ಕೇವಲ 108 ರನ್‌ಗಳಿಗೆ ಆಲೌಟ್ ಮಾಡಿದ್ದ ಟೀಮ್ ಇಂಡಿಯಾ ಬಳಿಕ ಬ್ಯಾಟಿಂಗ್‌ನಲ್ಲಿಯೂ ಮಿಂಚಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಭರ್ಜರಿ ಪ್ರದರ್ಶನದ ಕಾರಣದಿಂದಾಗಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನದೊಂದಿಗೆ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.

SA20: 25 ಎಸೆತಗಳಲ್ಲಿ 56 ರನ್: ಆರ್​ಸಿಬಿ ಆಟಗಾರನ ಮತ್ತೊಂದು ಸ್ಫೋಟಕ ಇನ್ನಿಂಗ್ಸ್SA20: 25 ಎಸೆತಗಳಲ್ಲಿ 56 ರನ್: ಆರ್​ಸಿಬಿ ಆಟಗಾರನ ಮತ್ತೊಂದು ಸ್ಫೋಟಕ ಇನ್ನಿಂಗ್ಸ್

ಭಾರತೀಯ ವೇಗಿಗಳ ಅಬ್ಬರ

ಭಾರತೀಯ ವೇಗಿಗಳ ಅಬ್ಬರ

ಇನ್ನು ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ಟೀಮ್ ಇಂಡಿಯಾ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಟೀಮ್ ಇಂಡಿಯಾ ವೇಗಿಗಳು ಪ್ರದರ್ಶನ ನೀಡಿದರು. ಅನುಭವಿ ಮೊಹಮ್ಮದ್ ಶಮಿ ಮೊದಲ ಓವರ್‌ನಿಂದಲೇ ಕಿವೀಸ್ ಪಡೆಗೆ ಆಘಾತ ನೀಡಲು ಆರಂಭಿಸಿದರು. ಟೀಮ್ ಇಂಡಿಯಾದ ಇತರ ವೇಗಿಗಳಾದ ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ ಶಾರ್ದೂಲ್ ಠಾಕೂರ್ ಕೂಡ ನ್ಯೂಜಿಲೆಂಡ್‌ನ ಅಗ್ರ ಕ್ರಮಾಂಕ್ಕೆ ಆಘಾತ ನೀಡಿದರು. ಇದರ ಪರಿಣಾಮವಾಗಿ ನ್ಯೂಜಿಲೆಂಡ್ ಕೇವಲ 15 ರನ್‌ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು.

ಬೌಲಿಂಗ್ ವಿಭಾಗದ ಸರ್ವಾಂಗೀಣ ಪ್ರದರ್ಶನ

ಬೌಲಿಂಗ್ ವಿಭಾಗದ ಸರ್ವಾಂಗೀಣ ಪ್ರದರ್ಶನ

ಆದರೆ ನ್ಯೂಜಿಲೆಂಡ್‌ಗೆ ಮಧ್ಯಮ ಕ್ರಮಾಂಕದ ಆಟಗಾರರಾದ ಗ್ಲೆನ್ ಫಿಲಿಪ್ಸ್, ಮಿಚೆಲ್ ಬ್ರೇಸ್‌ವೆಲ್, ಹಾಗೂ ಸ್ಯಾಂಟ್ನರ್ ಚೇತರಿಕೆಯ ಪ್ರಯತ್ನ ನಡೆಸಿದರೂ ಅದರಿಂದ ಹೆಚ್ಚಿನ ಉಪಯೋಗವಾಗಲಿಲ್ಲ. ಆದರೆ ಈ ಮೂವರ ಬ್ಯಾಟಿಂಗ್‌ನ ಕಾರಣದಿಂದಾಗಿ ನ್ಯೂಜಿಲೆಂಡ್ 100ರ ಗಡಿದಾಟುವಲ್ಲಿ ಯಶಸ್ವಿಯಾಯಿತು. ಅಂತಿವಾಗಿ 108 ರನ್‌ಗಳಿಗೆ ನ್ಯೂಜಿಲೆಂಡ್ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಸುಲಭ ಗುರಿ ನಿಗದಿಪಡಿಸಿತು. ಇನ್ನು ಟೀಮ್ ಇಂಡಿಯಾ ಪರವಾಗಿ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತು ಮಿಂಚಿದರೆ ಹಾರ್ದಿಕ್ ಪಾಂಡ್ಯ, ಹಾಗೂ ವಾಶಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಪಡೆದರು. ಸಿರಾಜ್, ಠಾಕೂರ್, ಹಾಗೂ ಕುಲ್ದೀಪ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಬ್ಯಾಟಿಂಗ್‌ನಲ್ಲಿಯೂ ಸುಲಭ ಸವಾಲಾದ ನ್ಯೂಜಿಲೆಂಡ್

ಬ್ಯಾಟಿಂಗ್‌ನಲ್ಲಿಯೂ ಸುಲಭ ಸವಾಲಾದ ನ್ಯೂಜಿಲೆಂಡ್

ಇನ್ನು 109 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಅದ್ಭುತ ಜೊತೆಯಾಟ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 72 ರನ್‌ಗಳ ಜೊತೆಯಾಟ ನೀಡುವ ಮೂಲಕ ಕಿವೀಸ್ ಪಡೆಗೆ ಸಣ್ಣ ಅವಕಾಶವೂ ಇಲ್ಲದಂತೆ ಮಾರುವಲ್ಲಿ ಯಶಸ್ವಿಯಾದರು. ನಾಯಕ ರೋಹಿತ್ ಅರ್ಧ ಶತಕ ಸಿಡಿಸಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ವಿರಾಟ್ ಕೊಹ್ಲಿ 11 ರನ್‌ಗಳಿಗೆ ಔಟಾಗಿ ಫೆವಿಲಿಯನ್‌ಗೆ ಸೇರಿಕೊಂಡರು. ಶುಬ್ಮನ್ ಗಿಲ್ ಅಜೇಯ 40 ರನ್ ಸಿಡಿಸಿದರೆ ಇಶಾನ್ ಕಿಶನ್ ಅಜೇಯ 8 ರನ್‌ಗಳಿಸಿದರು. ಈ ಮೂಲಕ ಟೀಮ್ ಇಂಡಿಯಾ ಎರಡನೇ ಗೆಲುವು ಸಾಧಿಸಿದ್ದು ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಯುಜ್ವೇಂದ್ರ ಚಹಾಲ್, ಶ್ರೀಕರ್ ಭರತ್, ರಜತ್ ಪಾಟಿದಾರ್, ಶಹಬಾಜ್ ಅಹ್ಮದ್, ಉಮ್ರಾನ್ ಮಲಿಕ್

ನ್ಯೂಜಿಲೆಂಡ್ ಆಡುವ ಬಳಗ: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್
ಬೆಂಚ್: ಮಾರ್ಕ್ ಚಾಪ್ಮನ್, ಡೌಗ್ ಬ್ರೇಸ್ವೆಲ್, ಜಾಕೋಬ್ ಡಫಿ, ಇಶ್ ಸೋಧಿ

Story first published: Saturday, January 21, 2023, 18:31 [IST]
Other articles published on Jan 21, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X