ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ ಪಂದ್ಯ: ಸಂಭಾವ್ಯ ಪ್ಲೇಯಿಂಗ್‌ 11, ಯಾರಿಗೆ ಕೊಕ್?

IND NZ 2nd Test

ಮುಂಬೈನ ವಾಂಖೆಡೆ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಸಾಕಷ್ಟು ಕುತೂಹಲದ ಜೊತೆಗೆ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಲಿದ್ದು, ಉಭಯ ತಂಡಗಳು ರಣತಂತ್ರದೊಂದಿಗೆ ಕಣಕ್ಕಿಳಿಯಲು ಸಿದ್ಧಗೊಂಡಿವೆ.

ಕಾನ್ಪುರ ಟೆಸ್ಟ್‌ನಲ್ಲಿ ಕೊನೆಯ ಎಸೆತದವರೆಗೂ ಗೆಲುವಿಗೆ ಹೋರಾಟ ನಡೆಸಿದ ಭಾರತ ಒಂದೆಡೆಯಾದ್ರೆ, ಸೋಲಿನಿಂದ ತಪ್ಪಿಸಿಕೊಳ್ಳಲು ನ್ಯೂಜಿಲೆಂಡ್‌ನ ಪ್ರಯತ್ನ ಸಾಕಷ್ಟು ಪ್ರಶಂಸೆಗೆ ಕಾರಣವಾಗಿತ್ತು. ಹೀಗಾಗಿಯೇ ಎರಡನೇ ಟೆಸ್ಟ್ ಪಂದ್ಯದತ್ತ ಇಡೀ ಕ್ರಿಕೆಟ್‌ ಲೋಕವು ಚಿತ್ತ ನೆಟ್ಟಿದೆ.

ಪ್ಲೇಯಿಂಗ್ 11ನಲ್ಲಿ ಕೆಲವು ಬದಲಾವಣೆ?

ಪ್ಲೇಯಿಂಗ್ 11ನಲ್ಲಿ ಕೆಲವು ಬದಲಾವಣೆ?

ಡಿಸೆಂಬರ್ 3 ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೆಲವು ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ. ವಿರಾಟ್ ಕೊಹ್ಲಿ ಅಗತ್ಯ ವಿಶ್ರಾಂತಿಯ ನಂತರ ಮತ್ತೆ ರೀ ಎಂಟ್ರಿಗೆ ಸಿದ್ಧಗೊಂಡಿದ್ದು, ಸ್ಟ್ಯಾಂಡ್ ಇನ್ ನಾಯಕ ಅಜಿಂಕ್ಯ ರಹಾನೆ ಪೂರ್ಣಾವಧಿ ನಾಯಕನಿಗೆ ದಾರಿ ಮಾಡಿಕೊಡಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ, ಅನುಭವಿ ವೇಗಿ ಇಶಾಂತ್ ಶರ್ಮಾ ಅವರನ್ನು ತಂಡದಿಂದ ಕೈಬಿಡಬಹುದು ಮತ್ತು ಅವರ ಬದಲಿಗೆ ಮೊಹಮ್ಮದ್ ಸಿರಾಜ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಇನ್ನು ಕಾನ್ಪುರದ ಶತಕ ವೀರ ಶ್ರೇಯಸ್ ಅಯ್ಯರ್‌ ತಂಡದಲ್ಲಿ ಸ್ಥಾನ ಪಡೆಯಬಲ್ಲರು. ಹೀಗೆ ವಾಂಖೆಡೆ ಅಂಗಳದಲ್ಲಿ ಯಾರೆಲ್ಲಾ ಅವಕಾಶ ಪಡೆಯಬಹುದು ಎಂಬ ಮಾಹಿತಿ ಈ ಕೆಳಗಿದೆ.

ಗರ್ಲ್‌ಫ್ರೆಂಡ್ ಅಥಿಯಾ ಶೆಟ್ಟಿ ಜೊತೆ ಮೊದಲ ಬಾರಿಗೆ, ಸಾರ್ವಜನಿಕವಾಗಿ ಕಾಣಿಸಿಕೊಂಡ ಕೆ.ಎಲ್ ರಾಹುಲ್

ರಹಾನೆಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಅನುಮಾನ!

ರಹಾನೆಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಅನುಮಾನ!

ಕಾನ್ಪುರ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನೆಡೆಸಿದ್ದ ಅಜಿಂಕ್ಯ ರಹಾನೆ, ಓರ್ವ ಬ್ಯಾಟ್ಸ್‌ಮನ್ ಆಗಿ ಪರ್ಫಾಮೆನ್ಸ್ ನೀಡುವಲ್ಲಿ ವಿಫಲರಾಗಿದ್ದಾರೆ. ಅದಾಗಲೇ ಸಾಕಷ್ಟು ಟೀಕೆಗೆ ಒಳಗಾಗಿದ್ದ ರಹಾನೆ ಕ್ಯಾಪ್ಟನ್ಸಿ ಕೋಟಾದಲ್ಲಿ ಸ್ಥಾನ ಪಡೆದಿದ್ದಾರೆಂಬ ಟೀಕೆಗೆ ಒಳಗಾಗಿದ್ದರು. ಅದ್ರಲ್ಲೂ ಶ್ರೇಯಸ್ ಅಯ್ಯರ್ ಶತಕ ಮತ್ತು ಅರ್ಧಶತಕ ಸಿಡಿಸಿದ ಮೇಲಂತೂ, ರಹಾನೆ ಸ್ಥಾನ ಅಲುಗಾಡತೊಡಗಿದೆ. ವಿರಾಟ್ ಕೊಹ್ಲಿ ಮುಂಬೈ ಟೆಸ್ಟ್‌ನಲ್ಲಿ ಆಡುತ್ತಿರುವುದರಿಂದ ರಹಾನೆ ಸ್ಥಾನವನ್ನ ಬಿಡುಕೊಡುವ ಸಾಧ್ಯತೆ ಇದೆ.

ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಬಹುದು?

ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಬಹುದು?

ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಪ್ಲೇಯಿಂಗ್‌ 11ನಲ್ಲಿ ಯಾರೆಲ್ಲಾ ಸ್ಥಾನ ಪಡೆಯಬಹುದು ಎಂಬ ಸಂಭಾವ್ಯ ಪಟ್ಟಿ ಈ ಕೆಳಗಿದೆ.

ನ್ಯೂಜಿಲೆಂಡ್‌ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಕೊಹ್ಲಿ ಆಗಮನ; ಈ ಮೂವರಲ್ಲಿ ಯಾರು ತಂಡದಿಂದ ಹೊರಕ್ಕೆ?


ಶುಭ್ಮನ್‌ ಗಿಲ್‌

ಮಯಾಂಕ್ ಅಗರ್ವಾಲ್

ಚೇತೇಶ್ವರ ಪೂಜಾರ

ವಿರಾಟ್ ಕೊಹ್ಲಿ

ಶ್ರೇಯಸ್ ಅಯ್ಯರ್

ರವೀಂದ್ರ ಜಡೇಜಾ

ವೃದ್ದಿಮಾನ್ ಸಾಹಾ

ರವಿಚಂದ್ರನ್ ಅಶ್ವಿನ್

ಅಕ್ಷರ್ ಪಟೇಲ್

ಉಮೇಶ್ ಯಾದವ್

ಮೊಹಮ್ಮದ್ ಸಿರಾಜ್

Virat Kohliಗೆ ಮೊದಲ ಬಾರಿಗೆ ಅಭ್ಯಾಸ ಮಾಡಿಸಿದ Rahul Dravid | Oneindia Kannada
ಕೊಹ್ಲಿ ಶತಕ ಬಾರಿಸಿ 741 ದಿನಗಳೇ ಕಳೆದಿದೆ!

ಕೊಹ್ಲಿ ಶತಕ ಬಾರಿಸಿ 741 ದಿನಗಳೇ ಕಳೆದಿದೆ!

ವಾಂಖೆಡೆ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧ ದ್ವಿಶತಕ ಸಿಡಿಸಿರುವ ದಾಖಲೆಯನ್ನ ಹೊಂದಿರುವ ವಿರಾಟ್‌ ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿದು ಎರಡು ವರ್ಷಗಳೇ ಕಳೆದು ಹೋಗಿವೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 70 ಶತಕ ಬಾರಿಸಿ ದಾಖಲೆ ಹೊಂದಿರುವ ಕೊಹ್ಲಿ ಕೊನೆಯ ಸಲ ಸೆಂಚುರಿ ಸಿಡಿಸಿದ್ದು ನವೆಂಬರ್ 23, 2019ರಲ್ಲಿ ಬಾಂಗ್ಲಾದೇಶದ ವಿರುದ್ಧ. ಆದ್ರೆ ಈ ಸೆಂಚುರಿ ಬಳಿಕ ಕೊಹ್ಲಿ ಒಂದು ಬಾರಿಯೂ ಮೂರಂಕಿ ಗಡಿ ಮುಟ್ಟಿಲ್ಲ.

ಹೌದು, ಕೊಹ್ಲಿ ಶತಕ ಬಾರಿಸಿ 741 ದಿನಗಳು ಕಳೆದಿದ್ದು ಭಾರತ-ನ್ಯೂಜಿಲೆಂಡ್​ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್​ನಿಂದ ಸೆಂಚುರಿಯನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಏಕೆಂದರೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೊಹ್ಲಿ ಅವರ ದಾಖಲೆ ಅತ್ಯುತ್ತಮವಾಗಿದೆ. ಈ ಮೈದಾನದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 72.17 ಸರಾಸರಿಯಲ್ಲಿ 433 ರನ್ ಕಲೆಹಾಕಿದ್ದಾರೆ. ಅಂದರೆ 6 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 3 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇನ್ನು 2016ರಲ್ಲಿ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ವಿರಾಟ್ 235 ರನ್‌ಗಳ ಇನಿಂಗ್ಸ್ ಗಳಿಸಿದ್ದರು. ಹೀಗಾಗಿ ಈ ಕಾರಣಗಳಿಂದಾಗಿ ವಾಂಖೆಡೆ ಸ್ಟೇಡಿಯಂನಲ್ಲಿ ಕೊಹ್ಲಿ ಬ್ಯಾಟ್​ನಿಂದ ಶತಕ ಸಿಡಿಯವಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

Story first published: Friday, December 3, 2021, 9:35 [IST]
Other articles published on Dec 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X