ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್‌: ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಭಾರತಕ್ಕೆ 539 ರನ್‌ಗಳ ಮುನ್ನಡೆ

Team india

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಡಿಕ್ಲೇರ್ ಮಾಡಿಕೊಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 276 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಭಾರತವು 539 ರನ್‌ಗಳ ಬೃಹತ್ ಮುನ್ನಡೆ ಪಡೆದಿದೆ.

ಭಾರತದ ಮೊದಲ ಇನ್ನಿಂಗ್ಸ್‌ 325 ರನ್‌ಗಳಿಗೆ ಉತ್ತರವಾಗಿ ಬೌಲಿಂಗ್ ಮಾಡಿದ ಕಿವೀಸ್ ಪಡೆ ಸಿರಾಜ್ ಮತ್ತು ಅಶ್ವಿನ್ ಸ್ಪಿನ್ ದಾಳಿಗೆ ತತ್ತರಿಸಿ 62 ರನ್‌ಗಳಿಗೆ ಆಲೌಟ್‌ ಆಗಿ ಹೀನಾಯವಾಗಿ ಹಿನ್ನಡೆ ಕಂಡಿತ್ತು. ಇದಕ್ಕೆ ಉತ್ತರವಾಗಿ ನಿನ್ನೆ(2ನೇ ದಿನದಾಟ) ಬ್ಯಾಟಿಂಗ್ ಮಾಡಿದ್ದ ಭಾರತ ವಿಕೆಟ್ ನಷ್ಟವಿಲ್ಲದೆ 69 ರನ್ ಕಲೆಹಾಕಿತು. ಜೊತೆಗೆ 332ರನ್ ಲೀಡ್ ಪಡೆದುಕೊಂಡಿತ್ತು.

ಮೂರನೇ ದಿನದಾಟ ಕೊಂಚ ನಿಧಾನವಾಗಿ ಆರಂಭಗೊಂಡರೂ, ಭಾರತದ ಬ್ಯಾಟ್ಸ್‌ಮನ್‌ಗಳು ತಮ್ಮ ಸೊಗಸಾದ ಬ್ಯಾಟಿಂಗ್ ಮುಂದುವರಿಸಿದ್ರು. ಮೊದಲ ಇನ್ನಿಂಗ್ಸ್‌ 150 ರನ್‌ಸಿಡಿಸಿದ್ದ ಓಪನರ್ ಮಯಾಂಕ್ ಅಗರ್ವಾಲ್ ಮತ್ತೊಂದು ಅರ್ಧಶತಕವನ್ನ ತಮ್ಮ ಹೆಸರಿಗೆ ದಾಖಲಿಸಿಕೊಂಡ್ರು.

ಮಯಾಂಕ್‌ಗೆ ಉತ್ತಮ ಸಾಥ್ ನೀಡಿದ್ದ ಚೇತೇಶ್ವರ ಪೂಜಾರ ಸ್ವಲ್ಪ ಅಗ್ರೆಸ್ಸಿವ್ ಆಗಿಯೇ ಬ್ಯಾಟ್‌ ಬೀಸಿದ್ರು. ಆದ್ರೆ ಅರ್ಧಶತಕಕ್ಕೆ ಮೂರು ರನ್‌ಗಳಿರುವಂತೆ ಅಜಾಜ್ ಪಟೇಲ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು. ಇದಕ್ಕೂ ಮೊದಲು ಮಯಾಂಕ್ ಅಗರ್ವಾಲ್ 62ರನ್‌ ದಾಖಲಿಸಿ ಅಜಾಜ್ ಪಟೇಲ್‌ಗೆ ಪಂದ್ಯದಲ್ಲಿ 12ನೇ ಬಲಿಯಾದ್ರು.

ಇನ್ನು ಮೊಣಕೈ ನೋವಿನಿಂದಾಗಿ ಓಪನಿಂಗ್ ಇಳಿಯದ ಶುಭ್ಮನ್ ಗಿಲ್ ಕೂಡ 75 ಎಸೆತಗಳಲ್ಲಿ 47ರನ್‌ ಸಿಡಿಸಿ ಅರ್ಧಶತಕಕ್ಕೆ ಮೂರು ರನ್‌ಗಳಿರುವಂತೆ ಅಜಾಜ್ ಪಟೇಲ್‌ಗೆ ಔಟಾಗಿ ಬೇಸರ ಮೂಡಿಸಿದ್ರು. ನಾಯಕ ವಿರಾಟ್ ಕೊಹ್ಲಿ ಆಟವೂ 36 ರನ್‌ಗೆ ಕೊನೆಗೊಂಡಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದ ವಿರಾಟ್‌, ರಚಿನ್ ರವೀಂದ್ರ ಬೌಲಿಂಗ್‌ನಲ್ಲಿ ಔಟ್‌ಸೈಡ್ ಹೋಗುತ್ತಿದ್ದ ಚೆಂಡನ್ನ ಕೆಣಕಲು ಹೋಗಿ ಇನ್‌ಸೈಡ್ ಎಡ್ಜ್‌ ಆಗಿ ಬೌಲ್ಡ್ ಆದ್ರು. ಕೊಹ್ಲಿ 36ರನ್‌ಗಳ ಕೊಡುಗೆ ನೀಡಿ ಪೆವಿಲಿಯನ್ ಸೇರಿಕೊಂಡ್ರು.

ಮೊದಲ ಟೆಸ್ಟ್‌ನ ಸೆಂಚುರಿ ಸರದಾರ ಶ್ರೇಯಸ್ ಅಯ್ಯರ್ 14ರನ್, ವೃದ್ದಿಮಾನ್ ಸಾಹಾ 13ರನ್‌ಗೆ ತಮ್ಮ ಇನ್ನಿಂಗ್ಸ್‌ ಮುಗಿಸಿದ್ರು. ಆದ್ರೆ ಒಂದೆಡೆ ಸ್ಫೋಟಕ ಆಟವಾಡಿದ ಆಲ್‌ರೌಂಡರ್ ಅಕ್ಷರ್ ಪಟೇಲ್ ಕೇವಲ 26 ಎಸೆತಗಳಲ್ಲಿ ಅಜೇಯ 41ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಭರ್ಜರಿ ಸಿಕ್ಸರ್‌ಗಳಿದ್ದವು.

ಒಂದು ಸಿಕ್ಸರ್ ಸಿಡಿಸಿದ್ದ ಜಯಂತ್ ಯಾದವ್ ಅಜಾಜ್ ಪಟೇಲ್‌ಗೆ ವಿಕೆಟ್ ಒಪ್ಪಿಸುತ್ತಿದ್ದಂತೆ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಕ್ಲೇರ್ ಘೋಷಣೆ ಮಾಡಿಕೊಂಡ್ರು. ಭಾರತವು ಎರಡನೇ ಇನ್ನಿಂಗ್ಸ್ ಏಳು ವಿಕೆಟ್ ನಷ್ಟಕ್ಕೆ 276ರನ್ ಕಲೆಹಾಕಿತು. ಅದಾಗಲೇ 539ರನ್‌ಗಳ ಲೀಡ್‌ನಲ್ಲಿದ್ದ ಭಾರತ ಸುಸ್ಥಿತಿಯಲ್ಲಿದೆ.

ಅಜಾಜ್ ಪಟೇಲ್ ದಾಖಲೆ
ನ್ಯೂಜಿಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ಸ್ಪಿನ್ನರ್ ಅಜಾಜ್ ಪಟೇಲ್ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳ ಜೊತೆಗೆ ಒಟ್ಟಾರೆ ಮ್ಯಾಚ್‌ನಲ್ಲಿ 14 ವಿಕೆಟ್‌ ತಮ್ಮದಾಗಿಸಿಕೊಂಡಿದ್ದಾರೆ. ಇದು ನ್ಯೂಜಿಲೆಂಡ್ ಪರ ಎರಡನೇ ಬೆಸ್ಟ್ ಬೌಲಿಂಗ್ ಫಿಗರ್ ಆಗಿದೆ. ಭಾರತದ ನೆಲದಲ್ಲಿ ವಿದೇಶಿ ಬೌಲರ್‌ನ ಬೆಸ್ಟ್ ಬೌಲಿಂಗ್ ಫಿಗರ್ ಕೂಡ ಇದಾಗಿದೆ.

ಈ ಮೊದಲು 1980ರಲ್ಲಿ ಇಯಾನ್ ಬಾಥಮ್ 13 ವಿಕೆಟ್ ಕಬಳಿಸಿದ್ರು. ಆದ್ರೆ ಅಜಾಜ್ ಪಟೇಲ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ ಸೂಪರ್ ಬೌಲಿಂಗ್ ಮಾಡಿದ್ದಾರೆ. ಇದರ ಜೊತೆಗೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಯಾವುದೇ ಬೌಲರ್‌ ಗಳಿಸಿದ ಬೆಸ್ಟ್ ವಿಕೆಟ್ಸ್ ಇದಾಗಿದೆ.

ಆಟ ನಿಲ್ಲಲು ಕಾರಣವಾದ ಕ್ಯಾಮೆರಾ ಎದುರು ಟೀಮ್ ಇಂಡಿಯಾ ಮಸ್ತಿ | Oneindia Kannada

ಅಜಾಜ್ ಪಟೇಲ್ 225 ರನ್‌ಗಳನ್ನ ನೀಡಿ 14 ವಿಕೆಟ್ ಕಬಳಿಸಿದ್ರು. ಮೊದಲ ಇನ್ನಿಂಗ್ಸ್‌ನಲ್ಲಿ ಸಂಪೂರ್ಣ 10 ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ರು. ಈ ಸಾಧನೆ ಮಾಡಿದ ಜಗತ್ತಿನ ಮೂರನೇ ಆಟಗಾರ ಎಂಬ ದಾಖಲೆಯನ್ನು ಬರೆದರು. ಟೆಸ್ಟ್ ಕ್ರಿಕೆಟ್‍ನಲ್ಲಿ 10 ವಿಕೆಟ್ ಗೊಂಚಲು ಪಡೆದ ಸಾಧನೆಯನ್ನು ಮೊದಲಿಗೆ ಇಂಗ್ಲೆಂಡ್ ತಂಡದ ಬೌಲರ್ ಜಿಮ್ ಲಾಕೆರ್ 1956ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಮಾಡಿದ್ರು. ಇದಾದ ಬಳಿಕ 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದಿದ್ದ ಟೆಸ್ಟ್ ಪಂದ್ಯವೊಂದರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅನಿಲ್ ಕುಂಬ್ಳೆ 10 ವಿಕೆಟ್ ಗೊಂಚಲನ್ನು ಪಡೆಯುವುದರ ಮೂಲಕ ಎರಡನೇ ಬಾರಿಗೆ ಈ ದಾಖಲೆ ಬರೆದಿದ್ದರು.

Story first published: Sunday, December 5, 2021, 14:17 [IST]
Other articles published on Dec 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X