ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಕೊಹ್ಲಿ ಎಂಟ್ರಿಯಾದ್ರೆ, ಯಾರಿಗೆ ಗೇಟ್‌ಪಾಸ್‌?: ಆಕಾಶ್ ಚೋಪ್ರಾ ಉತ್ತರ ಇಲ್ಲಿದೆ

Aakash chopra

ವಾಂಖೆಡೆ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಭಾರತ-ನ್ಯೂಜಿಲೆಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ, ಯಾರು ಮಿಂಚಬಹುದು ಎಂಬೆಲ್ಲಾ ನಿರೀಕ್ಷೆಗಳು ಗರಿಗೆದರಿವೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿರುವುದು ತಂಡದ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ.

ಕೊಹ್ಲಿ ತಂಡಕ್ಕೆ ಮರಳಿರುವುದು ಟೀಮ್ ಇಂಡಿಯಾದ ಬಲ ಹೆಚ್ಚಿಸಿದ್ದು ಒಂದೆಡೆಯಾದ್ರೆ, ವಿರಾಟ್ ಕೊಹ್ಲಿ ಆಗಮನವು ಯಾವ ಆಟಗಾರನನ್ನ ತಂಡದಿಂದ ಆಚೆ ಇಡಲಿದೆ ಎಂಬ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮುಂಬೈ ಟೆಸ್ಟ್‌ಗೆ ಆಡುವ ಹನ್ನೊಂದರಲ್ಲಿ ಚೇತೇಶ್ವರ ಪೂಜಾರ ಅಥವಾ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ಕೈಬಿಡಬೇಕೆಂದು ಎಂದು ಹಲವಾರು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದಾರೆ. ಅದ್ರಲ್ಲೂ ರಹಾನೆ ವಿಶೇಷವಾಗಿ ಇತ್ತೀಚೆಗೆ ಬ್ಯಾಟ್‌ನೊಂದಿಗೆ ಕಳಪೆ ಸ್ಕೋರ್ ಮಾಡಿದ್ದು, ಟೀಕಾಕಾರರಿಗೆ ಆಹಾರವಾಗಿದ್ದಾರೆ.

ಕೊಹ್ಲಿ ಬದಲು ಯಾರು ಹೊರಗೆ? ಆಕಾಶ್ ಚೋಪ್ರ ಉತ್ತರ!

ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ವಿರಾಟ್ ಕೊಹ್ಲಿ ಆಗಮನದಿಂದಾಗಿ ತಂಡದಿಂದ ಯಾರಿಗೆ ಕೊಕ್‌ ನೀಡಲಾಗುವುದು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಚೇತೇಶ್ವರ ಪೂಜಾರವನ್ನ ಬೆಂಬಲಿಸಿರುವ ಚೋಪ್ರಾ ರಹಾನೆಯನ್ನ ಪ್ಲೇಯಿಂಗ್ 11ನಿಂದ ಆಚೆಗಿಡುವುದು ಉತ್ತಮ ಎನ್ನಲಾಗಿದೆ.

ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ ಪಂದ್ಯ: ಸಂಭಾವ್ಯ ಪ್ಲೇಯಿಂಗ್‌ 11, ಯಾರಿಗೆ ಕೊಕ್?ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ ಪಂದ್ಯ: ಸಂಭಾವ್ಯ ಪ್ಲೇಯಿಂಗ್‌ 11, ಯಾರಿಗೆ ಕೊಕ್?

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಚೋಪ್ರಾ, ಕೊಹ್ಲಿಗೆ ದಾರಿ ಮಾಡಿಕೊಡಲು ರಹಾನೆ ಅವರನ್ನು ತಂಡದಿಂದ ತೆಗೆದುಹಾಕಬಹುದು ಎಂದು ಹೇಳಿದರು.
ಆದಾಗ್ಯೂ, ಆಡುವ ಹನ್ನೊಂದರ ಬಳಗದಲ್ಲಿ ಕೊಹ್ಲಿ ಮತ್ತು ರಹಾನೆ ಇಬ್ಬರೊಂದಿಗೆ ತಂಡವು ವಿಭಿನ್ನ ಸಂಯೋಜನೆಯನ್ನು ನೋಡಬಹುದು ಎಂದು ಅವರು ಸಲಹೆ ನೀಡಿದರು.

"ನಾನು ಚೇತೇಶ್ವರ ಪೂಜಾರ ಅವರನ್ನು ಬದಲಾಯಿಸಲು ನೋಡುವುದಿಲ್ಲ. ಅವರು ಲೀಡ್ಸ್, ಓವಲ್ ಮತ್ತು ಲಾರ್ಡ್ಸ್‌ನಲ್ಲಿ ಉತ್ತಮ ಆಟವಾಡಿದ್ದಾರೆ. ಆದ್ದರಿಂದ ನಾನು ಅವರತ್ತ ನೋಡುವುದಿಲ್ಲ" ಎಂದು ಚೋಪ್ರಾ ಹೇಳಿದರು.

"(ಅಜಿಂಕ್ಯ) ರಹಾನೆ, ಸದ್ಯ ಹೊರಹೋಗುವ ಪ್ರಮುಖ ಆಟಗಾರನಾಗಿದ್ದಾನೆ. ಅದರಲ್ಲಿ ಯಾವುದೇ ಸಂದೇಹವಿಲ್ಲ ಹಾಗೂ ನೀವು ಎಲ್ಲರನ್ನು ಆಡಿಸಲು ಸಾಧ್ಯವಿಲ್ಲ. ಅವರನ್ನು ಈ ತಂಡದ ನಾಯಕನನ್ನಾಗಿ ಮಾಡಿದ್ದೀರಿ (ಮೊದಲ ಟೆಸ್ಟ್‌ಗೆ) ಆದರೆ ಅವರು ರನ್ ಗಳಿಸಲು ವಿಫಲರಾದರು. ಅದ್ರಲ್ಲೂ ಎರಡೂ ಇನ್ನಿಂಗ್ಸ್ನಲ್ಲಿ ರನ್‌ಗಳಿಸಲು ವಿಫಲರಾಗಿದ್ದಾರೆ. ಹೀಗಾಗಿ ಯಾರನ್ನಾದರೂ ಆಚೆ ಹಾಕಬಹುದು ಎಂಬುದು ನನ್ನ ಮನಸ್ಸಿಗೆ ಬರುವ ಮೊದಲ ಆಟಗಾರ ರಹಾನೆ'' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

"ಆದಾಗ್ಯೂ, ತಂಡವು ನಾಲ್ಕು ಬೌಲರ್‌ಗಳೊಂದಿಗೆ ಆಡಲು ನಿರ್ಧರಿಸಿದರೆ, ನೀವು ಹೆಚ್ಚುವರಿ ಬ್ಯಾಟ್ಸ್‌ಮನ್‌ಗೆ ಹೋಗಬಹುದು. ಆದರೆ ಕೊಹ್ಲಿ ಯಾವಾಗಲೂ ಐದು ಬೌಲರ್‌ಗಳೊಂದಿಗೆ ಹೋಗುವ ವ್ಯಕ್ತಿ" ಎಂದು ಅವರು ಸೇರಿಸಿದರು.

ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಡ್ರಾ ಸಾಧಿಸಿದ ನಂತರ ಭಾರತ ಎರಡನೇ ಟೆಸ್ಟ್‌ನಲ್ಲಿ ಗೆಲುವಿನೊಂದಿಗೆ ಸರಣಿಯನ್ನು ಗೆಲ್ಲಲು ಹವಣಿಸುತ್ತಿದೆ. ಎರಡನೇ ಟೆಸ್ಟ್ ಡಿಸೆಂಬರ್ 3 ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

ಮುಂಬೈ ಟೆಸ್ಟ್: ಮೊದಲ ದಿನವೇ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ವಾಂಖೆಡೆ ಸ್ಟೇಡಿಯಂ ಪಿಚ್ ರಿಪೋರ್ಟ್, ಟೆಸ್ಟ್ ದಾಖಲೆಮುಂಬೈ ಟೆಸ್ಟ್: ಮೊದಲ ದಿನವೇ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ವಾಂಖೆಡೆ ಸ್ಟೇಡಿಯಂ ಪಿಚ್ ರಿಪೋರ್ಟ್, ಟೆಸ್ಟ್ ದಾಖಲೆ

Virat Kohliಗೆ ಮೊದಲ ಬಾರಿಗೆ ಅಭ್ಯಾಸ ಮಾಡಿಸಿದ Rahul Dravid | Oneindia Kannada

ವಾಂಖೆಡೆ ಮೈದಾನದಲ್ಲಿ ಕೊಹ್ಲಿಯ ಉತ್ತಮ ರೆಕಾರ್ಡ್
ಈ ಮೈದಾನದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 72.17 ಸರಾಸರಿಯಲ್ಲಿ 433 ರನ್ ಕಲೆಹಾಕಿದ್ದಾರೆ. ಅಂದರೆ 6 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 3 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇನ್ನು 2016ರಲ್ಲಿ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ವಿರಾಟ್ 235 ರನ್‌ಗಳ ಇನಿಂಗ್ಸ್ ಗಳಿಸಿದ್ದರು. ಹೀಗಾಗಿ ಈ ಕಾರಣಗಳಿಂದಾಗಿ ವಾಂಖೆಡೆ ಸ್ಟೇಡಿಯಂನಲ್ಲಿ ಕೊಹ್ಲಿ ಬ್ಯಾಟ್​ನಿಂದ ಶತಕ ಸಿಡಿಯವಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

Story first published: Thursday, December 2, 2021, 21:16 [IST]
Other articles published on Dec 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X