ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್: ಮೊದಲ ಪಂದ್ಯದಲ್ಲಿ ದಾಖಲೆ ಮೇಲೆ ಕಣ್ಣಿಟ್ಟ 3 ಭಾರತೀಯ ಬೌಲರ್‌ಗಳು

Ind vs NZ: 3 Indian bowlers are on the verge of important milestones

ಭಾರತ ಹಾಗೂ ನ್ಯೂಜಿಲೆಂಡ್ ನಡಿವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ. ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನ ಆಟವನ್ನು ಮುಗಿಸಿದ್ದು 345 ರನ್‌ಗಳಿಸಿದೆ. ಟೀಮ್ ಇಂಡಿಯಾ ಪರವಾಗಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ ಶ್ರೇಯಸ್ ಐಯ್ಯರ್ ಭರ್ಜರಿ ಶತಕ ಸಿಡಿಸಿ ಮಿಂಚುಹರಿಸಿದ್ದಾರೆ. ಉಳಿದಂತೆ ಶುಬ್ಮನ್ ಗಿಲ್ ಹಾಗೂ ರವೀಂದ್ರ ಜಡೇಜಾ ಅರ್ಧ ಶತಕದ ಕೊಡುಗೆ ನೀಡಿದ್ದಾರೆ. ಇನ್ನು ಇದಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತವಾದ ಆರಂಭವನ್ನು ಪಡೆದುಕೊಂಡಿದೆ. ಹೀಗಾಗಿ ಭಾರತೀಯ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಾಗಿದೆ. ಈ ಸವಾಲನ್ನು ಟೀಮ್ ಇಂಡಿಯಾ ಬೌಲರ್‌ಗಳು ಯಾವ ರೀತಿ ಎದುರಿಸುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಈ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಪರವಾಗಿ ಟಿಮ್ ಸೌಥಿ 5 ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದ್ದಾರೆ. ಇದೀಗ ಟೀಮ್ ಇಂಡಿಯಾದ ಬೌಲರ್‌ಗಳು ಕೆಲ ಪ್ರಮುಖ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಟೀಮ್ ಇಂಡಿಯಾದ ಬೌಲರ್‌ಗಳ ಪೈಕಿ ಯಾರೆಲ್ಲಾ ಈ ಮಹತ್ವದ ದಾಖಲೆಯನ್ನು ಬರೆಯಲಿದ್ದಾರೆ? ಯಾವೆಲ್ಲಾ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ ಟೀಮ್ ಇಂಡಿಯಾ ಬೌಲರ್‌ಗಳು? ಮುಂದೆ ಓದಿ..

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್

ರವಿಚಂದ್ರನ್ ಅಶ್ವಿನ್ ಮಹತ್ವದ ದಾಖಲೆಗೆ 5 ವಿಕೆಟ್ ಅಗತ್ಯ

ರವಿಚಂದ್ರನ್ ಅಶ್ವಿನ್ ಮಹತ್ವದ ದಾಖಲೆಗೆ 5 ವಿಕೆಟ್ ಅಗತ್ಯ

ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇತ್ತೀಚೆಗೆ ಅಂತಾರಾಷ್ಟ್ರೀಯ ವೈಟ್‌ಬಾಲ್ ಕ್ರಿಕೆಟ್‌ಗೆ ಮರಳಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಮತ್ತೆ ಭಾರತದ ಪರವಾಗಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಈವರೆಗೆ ಟೀಮ್ ಇಂಡಿಯಾ ಪರವಾಗಿ 80 ಪಂದ್ಯಗಳನ್ನು ಆಡಿರುವ ಆರ್ ಅಶ್ವಿನ್ ಕೇವಲ 2.8ರ ಎಕಾನಮಿಯಲ್ಲಿ 418 ವಿಕೆಟ್ ಸಂಪಾದಿಸಿದ್ದಾರೆ.

ಈ ಪಂದ್ಯದಲ್ಲಿ ಆರ್ ಅಶ್ವಿನ್ ಐದು ವಿಕೆಟ್‌ಗಳನ್ನು ಪಡೆಯಲು ಯಶಸ್ವಿಯಾದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಹರ್ಭಜನ್ ಸಿಂಗ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಖ್ಯಾತಿಯನ್ನು ತಮ್ಮ ಹೆಸರಿಗೆ ಆರ್ ಅಶ್ವಿನ್ ಬರೆಯಲಿದ್ದಾರೆ. 417 ವಿಕೆಟ್ ಪಡೆದಿರುವ ಹರ್ಭಜನ್ ಸಿಂಗ್ ಈ ಪಟ್ಟಿಯಲ್ಲಿ ಈಗ ಮೂರನೇ ಸ್ಥಾನದಲ್ಲಿದ್ದಾರೆ. 619 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಈ ಪಟ್ಟಿಯಲ್ಲಿ ಮೊದಲ ಸ್ಥಾದಲ್ಲಿದ್ದರೆ 434 ವಿಕೆಟ್ ಪಡೆದಿರುವ ಕಪಿಲ್ ದೇವ್ ಎರಡನೇ ಸ್ಥಾನದಲ್ಲಿದ್ದಾರೆ.

ಇಶಾಂತ್ ಶರ್ಮಾ ಮೈಲಿಗಲ್ಲು ನಿರ್ಮಾಣಕ್ಕೆ ಬೇಕು 1 ವಿಕೆಟ್

ಇಶಾಂತ್ ಶರ್ಮಾ ಮೈಲಿಗಲ್ಲು ನಿರ್ಮಾಣಕ್ಕೆ ಬೇಕು 1 ವಿಕೆಟ್

ಟೀಮ್ ಇಂಡಿಯಾದ ಟೆಸ್ಟ್ ತಂಡದ ಪ್ರಮುಖ ಅಸ್ತ್ರವಾಗಿರುವ ಇಶಾಂತ್ ಶರ್ಮಾ ಕಳೆದ ಹಲವು ವರ್ಷಗಳಿಂದ ಸತತವಾಗಿ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. 105 ಪಂದ್ಯಗಳ ಸುದೀರ್ಘ ವೃತ್ತಿ ಜೀವನದಲ್ಲಿ ಇಶಾಂತ್ ಶರ್ಮಾ 311 ವಿಕೆಟ್ ಸಂಪಾದಿಸಿದ್ದಾರೆ. ಇದರಲ್ಲಿ 11 ಐದು ವಿಕೆಟ್‌ಗಳ ಗೊಂಚಲು ಸೇರಿದೆ. ಇನ್ನು ನ್ಯೂಜಿಲೆಂಡ್ ವಿರುದ್ಧಧ ಈ ಪಂದ್ಯದಲ್ಲಿ ಇಶಾಂತ್ ಶರ್ಮಾ 1 ವಿಕೆಟ್ ಸಂಪಾದಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಐದನೇ ಬೌಲರ್ ಎನಿಸಲಿದ್ದಾರೆ. ಸದ್ಯ ಜಹೀರ್ ಖಾನ್ ಅವರೊಂದಿಗೆ ಈ ಸ್ಥಾನವನ್ನು ಹಂಚಿಕೊಂಡಿದ್ದಾರೆ.

50ನೇ ಪಂದ್ಯದಲ್ಲಿ ಕಣಕ್ಕಿಳಿದ ಉಮೇಶ್ ಯಾದವ್

50ನೇ ಪಂದ್ಯದಲ್ಲಿ ಕಣಕ್ಕಿಳಿದ ಉಮೇಶ್ ಯಾದವ್

ಇನ್ನು ಟೀಮ್ ಇಂಡಿಯಾದ ಟೆಸ್ಟ್ ಸ್ಕ್ವಾಡ್‌ನ ಖಾಯಂ ಸದಸ್ಯ ಉಮೇಶ್ ಯಾದವ್ ಟೆಸ್ಟ್ ಮಾದರಿಯಲ್ಲಿ ಅದ್ಭುತವಾದ ಸಾಧನೆ ಮಾಡಿದ್ದಾರೆ. ಈವರೆಗೆ 49 ಪಂದ್ಯಗಳನ್ನಾಡಿರುವ ಉಮೇಶ್ ಯಾದವ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 50ನೇ ಪಂದ್ಯವನ್ನಾಡುತ್ತಿದ್ದಾರೆ. ಈ ಮೂಲಕ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲು ನೆಟ್ಟಿದ್ದಾರೆ ಉಮೇಶ್ ಯಾದವ್. ಈವರೆಗೆ ಆಡಿರುವ ಪಂದ್ಯಗಳಲ್ಲಿ ಉಮೇಶ್ ಯಾದವ್ 154 ವಿಕೆಟ್ ಸಂಪಾದಿಸಿದ್ದಾರೆ.

ಫೀಲ್ಡರ್ ಆಗಿ ವಿಶೇಷ ಮೈಲಿಗಲ್ಲಿನ ಸನಿಹ ರಹಾನೆ

ಫೀಲ್ಡರ್ ಆಗಿ ವಿಶೇಷ ಮೈಲಿಗಲ್ಲಿನ ಸನಿಹ ರಹಾನೆ

ಇನ್ನು ಇವೆಲ್ಲವನ್ನು ಹೊರತುಪಡಿಸಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡಿರುವ ಅಜಿಂಕ್ಯಾ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ 100ನೇ ಕ್ಯಾಚ್ ಪಡೆಯುವ ಸನಿಹದಲ್ಲಿದ್ದಾರೆ. ಈ ಮೈಲಿಗಲ್ಲು ಸ್ಥಾಪಿಸಲು ರಹಾನೆ ಈ ಪಂದ್ಯದಲ್ಲಿ ಮೂರು ಕ್ಯಾಚ್‌ಗಳನ್ನು ಪಡೆಯಬೇಕಿದೆ.

ಈ 4 ಆಟಗಾರರು ಮಾತ್ರ RCBಯಲ್ಲಿ ಸೇಫ್ | Oneindia Kannada

Story first published: Friday, November 26, 2021, 16:24 [IST]
Other articles published on Nov 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X