ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ 3rd ODI: ವಿರಾಟ್ ಕೊಹ್ಲಿಗಾಗಿ ತನ್ನ ವಿಕೆಟ್ ತ್ಯಾಗ ಮಾಡಿದ ಇಶಾನ್ ಕಿಶನ್; ವಿಡಿಯೋ

IND vs NZ 3rd ODI: Ishan Kishan Sacrifices His Wicket For Virat Kohli; Video Goes Viral

ಮಂಗಳವಾರ, ಜನವರಿ 24ರಂದು ಇಂದೋರ್‌ನಲ್ಲಿ ನಡೆದ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಭಾರತ ತಂಡ ರೋಹಿತ್ ಶರ್ಮಾ (101), ಶುಭ್ಮನ್ ಗಿಲ್ (112) ಅವರ ಶತಕಗಳು ಮತ್ತು ಹಾರ್ದಿಕ್ ಪಾಂಡ್ಯ (54) ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ರನ್ ಪೇರಿಸಿತು.

ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದ ಭಾರತದ ಬ್ಯಾಟಿಂಗ್ ಇನ್ನಿಂಗ್ಸ್‌ ವೇಳೆ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರು 17 ರನ್ ಗಳಿಸಿ ರನೌಟ್ ಆದರು. ಇದು ಮಾಜಿ ನಾಯಕ ವಿರಾಟ್ ಕೊಹ್ಲಿಗಾಗಿ ವಿಕೆಟ್ ಒಪ್ಪಿಸಿದಂತಿತ್ತು.

IND vs NZ: 3 ಪಂದ್ಯಗಳ ODI ಸರಣಿಯಲ್ಲಿ ಬಾಬರ್ ಅಜಂ ದಾಖಲೆ ಸರಿಗಟ್ಟಿದ ಶುಭ್ಮನ್ ಗಿಲ್IND vs NZ: 3 ಪಂದ್ಯಗಳ ODI ಸರಣಿಯಲ್ಲಿ ಬಾಬರ್ ಅಜಂ ದಾಖಲೆ ಸರಿಗಟ್ಟಿದ ಶುಭ್ಮನ್ ಗಿಲ್

35ನೇ ಓವರ್‌ನ ಮೂರನೇ ಎಸೆತದಲ್ಲಿ ಬಾಲ್ ಅನ್ನು ಎದುರಿಸಿದ ಕಿಶನ್ ತಕ್ಷಣ ಇಲ್ಲದ ರನ್ ಕದಿಯಲು ವಿರಾಟ್ ಕೊಹ್ಲಿಗೆ ಕರೆ ನೀಡಿದರು. ಆಗ ಕೊಹ್ಲಿ ನಾನ್‌ಸ್ಟ್ರೈಕ್‌ನಿಂದ ಓಡಿ ಬಂದರು. ಸ್ಟ್ರೈಕ್‌ನ ಅಂತ್ಯವನ್ನು ಸಮೀಪಿಸಿದರು.

ಬೇಗನೆ ಬಾಲ್ ಅನ್ನು ಹಿಡಿದುಕೊಂಡ ಕವರ್ ಫೀಲ್ಡರ್ ಹೆನ್ರಿ ನಿಕೋಲ್ಸ್ ಅವರು ಓಡಿ ಹೋಗಿ ಬೆಲ್ಸ್ ಹಾರಿಸಿದರು. ಆಗ ಕ್ರೀಸ್‌ನಿಂದ ಹೊರಗೆ ಇದ್ದ ಇಶಾನ್ ಕಿಶನ್ ರನೌಟ್ ಆಗಬೇಕಾಯಿತು.

IND vs NZ 3rd ODI: Ishan Kishan Sacrifices His Wicket For Virat Kohli; Video Goes Viral

ರಿಪ್ಲೇಗಳು ವಿರಾಟ್ ಕೊಹ್ಲಿಗೆ ಇಶಾನ್ ಕಿಶನ್ ವಿಕೆಟ್ ಬಿಟ್ಟುಕೊಟ್ಟಿದ್ದು ಸಾಬೀತಾಯಿತು. ಕಿಶನ್ ತಮ್ಮ ಕ್ರೀಸ್‌ಗೆ ಬೇಗನೆ ಮರಳಲು ಸ್ವಲ್ಪ ಹಿಂದೇಟು ಹಾಕಿದರು. ವಿರಾಟ್ ಕೊಹ್ಲಿ ಬೇಗನೆ ಓಡಿ ಕ್ರೀಸ್‌ನ ಮನ್ನೊಂದು ತುದಿ ತಲುಪಿದ್ದರು.

ವಿಕೆಟ್‌ಕೀಪರ್- ಬ್ಯಾಟ್ಸ್‌ಮನ್ ಇಶಾನ್ ಕಿಶನ್ 24 ಎಸೆತಗಳಲ್ಲಿ 17 ರನ್ ಗಳಿಸಿ ಪೆವಿಲಿಯನ್‌ಗೆ ಹಿಂತಿರುಗುವಾಗ ವಿರಾಟ್ ಕೊಹ್ಲಿಗೆ ತಮ್ಮ ನಿರಾಶೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದರು.

ಇಶಾನ್ ಕಿಶನ್ ನಿರ್ಗಮನದ ನಂತರ ವಿರಾಟ್ ಕೊಹ್ಲಿಗೆ ಹೆಚ್ಚಿನ ಜವಾಬ್ದಾರಿ ಇತ್ತು. ಆದರೆ ಕೊಹ್ಲಿ 27 ಎಸೆತಗಳಲ್ಲಿ 36 ರನ್‌ಗಳಿಗೆ ಔಟಾದರು.

ಇದಕ್ಕೂ ಮುನ್ನ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆರಂಭಿಕ ಜೋಡಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 212 ರನ್‌ಗಳ ಜೊತೆಯಾಟದ ಮೂಲಕ ಭಾರತ ತಂಡದ ಪರ ಅತ್ಯಧಿಕ ಆರಂಭಿಕ ಜೊತೆಯಾಟ ನೀಡಿದ್ದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಜೋಡಿಯ ದಾಖಲೆಯನ್ನು ಮುರಿದರು.

2009ರ ಮಾರ್ಚ್‌ನಲ್ಲಿ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಜೋಡಿಯು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ಮುರಿಯದ ಮೊದಲ ವಿಕೆಟ್‌ಗೆ 201 ರನ್ ಜೊತೆಯಾಟ ನಡೆಸಿದ್ದರು. ಆ ಪಂದ್ಯವನ್ನು ಭಾರತ ತಂಡ ಡಕ್ವರ್ಥ್ ಲೂಯಿಸ್ ನಿಯಮದನ್ವಯ 84 ರನ್‌ಗಳಿಂದ ಗೆದ್ದುಕೊಂಡಿತ್ತು.

IND vs NZ 3rd ODI: ಸೆಹ್ವಾಗ್-ಗಂಭೀರ್ ಜೋಡಿಯ 14 ವರ್ಷಗಳ ದಾಖಲೆ ಮುರಿದ ರೋಹಿತ್- ಗಿಲ್ ಜೋಡಿ

ಇನ್ನು ಶುಭ್ಮನ್ ಗಿಲ್ 78 ಎಸೆತಗಳಲ್ಲಿ 13 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 112 ರನ್ ಗಳಿಸಿದರು. ಈ ಏಕದಿನ ಸರಣಿಯಲ್ಲಿ ಶುಭ್ಮನ್ ಗಿಲ್‌ಗೆ ಎರಡನೇ ಶತಕವಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭ್ಮನ್ ಗಿಲ್ 180ರ ಸರಾಸರಿಯಲ್ಲಿ 360 ರನ್ ಗಳಿಸಿ, ಪಾಕಿಸ್ತಾನದ ಬಾಬರ್ ಅಜಂ ದಾಖಲೆ ಸರಿಗಟ್ಟಿದ್ದಾರೆ.

Story first published: Tuesday, January 24, 2023, 20:13 [IST]
Other articles published on Jan 24, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X