ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶತಕ ಬಾರಿಸಿದರೂ ಅಪ್ಪನಿಗೆ ಪೂರ್ತಿ ಖುಷಿಯಾಗಿಲ್ಲ: ಆಸಕ್ತಿಕರ ವಿಚಾರ ಹಂಚಿಕೊಂಡ ಶುಭಮನ್ ಗಿಲ್

 Ind vs Nz 3rd ODI: Know Why Shubman Gill Father Wouldnt Be Too Happy About Gill Century

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್‌ ಸ್ವೀಪ್ ಮಾಡುವ ಮೂಲಕ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

3 ಏಕದಿನ ಪಂದ್ಯಗಳ ಸರಣಿಯಲ್ಲಿ 360 ರನ್ ಕಲೆಹಾಕಿದ ಶುಭಮನ್ ಗಿಲ್, 3 ಪಂದ್ಯಗಳ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬಾಬರ್ ಅಜಮ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಸರಣಿಯ ಮೊದಲನೇ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಗಿಲ್, ದ್ವಿಶತಕ ಬಾರಿಸಿದ ಅತಿ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅವರ ಪ್ರದರ್ಶನಕ್ಕೆ ಸರಣಿಯ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

1
56731

ಶುಭಮನ್ ಗಿಲ್ ಪ್ರದರ್ಶನಕ್ಕೆ ಎಲ್ಲಾ ಕಡೆಯಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದ್ದರೂ, ಅವರ ತಂದೆಗೆ ಮಾತ್ರ ಪೂರ್ತಿ ಸಂತೋಷವಾಗಿಲ್ಲವಂತೆ. ಯಾಕೆ ಎನ್ನುವುದನ್ನು ಸ್ವತಃ ಶುಭಮನ್ ಗಿಲ್ ಅವರೇ ತಿಳಿಸಿದ್ದಾರೆ.

ಈ ರೋಹಿತ್ ಶರ್ಮಾನನ್ನು ನಾನು ಇಷ್ಟ ಪಡುತ್ತೇನೆ: ಟೀಮ್ ಇಂಡಿಯಾ ನಾಯಕನ ಬಗ್ಗೆ ಮಂಜ್ರೇಕರ್ ಪ್ರಶಂಸೆಈ ರೋಹಿತ್ ಶರ್ಮಾನನ್ನು ನಾನು ಇಷ್ಟ ಪಡುತ್ತೇನೆ: ಟೀಮ್ ಇಂಡಿಯಾ ನಾಯಕನ ಬಗ್ಗೆ ಮಂಜ್ರೇಕರ್ ಪ್ರಶಂಸೆ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ 3ನೇ ಪಂದ್ಯದ ನಂತರ ಟೀಂ ಇಂಡಿಯಾ ಮುಖ್ಯ ಕೋಚ್‌ ರಾಹುಲ್ ದ್ರಾವಿಡ್ ಶುಭಮನ್ ಗಿಲ್ ಜೊತೆ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಲವು ವಿಚಾರಗಳನ್ನು ಗಿಲ್ ಹಂಚಿಕೊಂಡಿದ್ದಾರೆ.

 ಯಾವಾಗಲೂ ದೊಡ್ಡ ಮೊತ್ತ ಗಳಿಸಬೇಕು ಎನ್ನುತ್ತಾರೆ

ಯಾವಾಗಲೂ ದೊಡ್ಡ ಮೊತ್ತ ಗಳಿಸಬೇಕು ಎನ್ನುತ್ತಾರೆ

ಸಂದರ್ಶನದ ವೇಳೆ ರಾಹುಲ್ ದ್ರಾವಿಡ್, "ಕಳೆದ ಎರಡು ತಿಂಗಳಿನಿಂದ ನೀವು ಅತ್ಯುತ್ತಮ ಫಾರ್ಮ್ ಹೊಂದಿದ್ದೀರಿ. ನಿಮ್ಮ ಪ್ರದರ್ಶನ ನೋಡಿ ನಿಮ್ಮ ತಂದೆ ಈಗ ನಿಮ್ಮ ಬಗ್ಗೆ ಹೆಮ್ಮೆ ಪಡಬೇಕು" ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ನಮ್ಮ ತಂದೆ ಸಂಪೂರ್ಣವಾಗಿ ಸಂತೋಷವಾಗಿರಲಿಲ್ಲ, ಏಕೆಂದರೆ ಪ್ರತಿ ಬಾರಿ ನಾನು ಉತ್ತಮ ಫಾರ್ಮ್‌ ಪ್ರದರ್ಶಿಸಿ, ದೊಡ್ಡ ಮೊತ್ತವನ್ನು ಗಳಿಸಬೇಕೆಂದು ಅವರು ಬಯಸುತ್ತಾರೆ. ಸರಣಿಯ ಕೊನೆಯ ಪಂದ್ಯದಲ್ಲಿ ಶತಕ ಗಳಿಸುತ್ತಿದ್ದಂತೆ ನಾನು ಔಟಾಗಿದ್ದರಿಂದ ನನ್ನ ತಂದೆ ಖುಷಿಯಾಗಿರುವುದಿಲ್ಲ." ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ದ್ರಾವಿಡ್, " ಹೆಚ್ಚಿನ ರನ್ ಗಳಿಸದಿದ್ದಾಗ ನಾವು ನಿಮ್ಮನ್ನು ಬಿಟ್ಟರೂ, ನಿಮ್ಮ ತಂದೆ ನಿಮ್ಮನ್ನು ಬಿಡುವುದಿಲ್ಲ. ಒಳ್ಳೆಯ ಅಪ್ಪನನ್ನು ಪಡೆದಿದ್ದೀರಾ" ಎಂದು ಹೇಳಿದರು.

 ರೋಹಿತ್‌ ಶರ್ಮಾರಿಂದ ಸಾಕಷ್ಟು ಕಲಿಯುತ್ತಿದ್ದೇನೆ

ರೋಹಿತ್‌ ಶರ್ಮಾರಿಂದ ಸಾಕಷ್ಟು ಕಲಿಯುತ್ತಿದ್ದೇನೆ

ರೋಹಿತ್ ಶರ್ಮಾ ಜೊತೆ ಬ್ಯಾಟಿಂಗ್ ಮಾಡುವ ಬಗ್ಗೆ ಮಾತನಾಡಿರುವ ಶುಭಮನ್ ಗಿಲ್, "ರೋಹಿತ್ ಅವರೊಂದಿಗೆ ಬ್ಯಾಟಿಂಗ್ ಮಾಡಲು ಸಂತಸವಾಗುತ್ತದೆ. ಅವರು ನನ್ನ ನೆಚ್ಚಿನ ಬ್ಯಾಟರ್ ಗಳಲ್ಲಿ ಒಬ್ಬರು. 3ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 70 ರನ್ ಗಳಿಸಿದ್ದಾಗ ಮಿಚೆಲ್ ಬೌಲಿಂಗ್ ಮಾಡಲು ಬಂದರು. ಆಗ ನನ್ನ ಬಳಿ ಬಂದ ರೋಹಿತ್ ಈತ ನನ್ನನ್ನು ಔಟ್ ಮಾಡುವಂತ ಬೌಲರ್ ಆಗಿದ್ದಾನೆ, ಆದರೂ ನಾನು ಅವನ ಬೌಲಿಂಗ್‌ನಲ್ಲಿ ಬೌಂಡರಿ ಹೊಡೆಯುತ್ತೇನೆ ಎಂದರು. ಈ ರೀತಿಯ ಹೋರಾಟ ಮನೋಭಾವ ಅವರಿಗಿದೆ, ನಾನು ಅವರಿಂದ ಸಾಕಷ್ಟು ಕಲಿಯುತ್ತಿದ್ದೇನೆ" ಎಂದು ಹೇಳಿದರು.

 ಹಲವು ದಾಖಲೆ ಮಾಡಿದ ಶುಭಮನ್ ಗಿಲ್‌

ಹಲವು ದಾಖಲೆ ಮಾಡಿದ ಶುಭಮನ್ ಗಿಲ್‌

23 ವರ್ಷದ ಬ್ಯಾಟರ್ ಶುಭಮನ್ ಗಿಲ್ ಈಗಾಗಲೇ 3 ಬಾರಿ ಸರಣಿ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ. 21 ಇನ್ನಿಂಗ್ಸ್ ಆಡಿರುವ ಶುಭಮನ್ ಗಿಲ್‌ ಈಗಾಗಲೇ 4 ಶತಕಗಳನ್ನು ಬಾರಿಸಿದ್ದಾರೆ. ಭಾರತದ ಪರವಾಗಿ ಕಡಿಮೆ ಇನ್ನಿಂಗ್ಸ್‌ನಲ್ಲಿ ಸಾವಿರ ರನ್ ಗಡಿ ದಾಟಿದ ಆಟಗಾರ ಎನಿಸಿಕೊಂಡಿದ್ದಾರೆ.

ಇದುವರೆಗೂ ಆಡಿರುವ 21 ಇನ್ನಿಂಗ್ಸ್‌ಗಳಲ್ಲಿ 73.76 ಸರಾಸರಿ ಮತ್ತು 109.81 ಸ್ಟ್ರೈಕ್‌ರೇಟ್‌ನಲ್ಲಿ 1254 ರನ್ ಗಳಿಸಿದ್ದಾರೆ. ಏಕದಿನ ವಿಶ್ವಕಪ್‌ ಇರುವುದರಿಂದ 2023ರಲ್ಲಿ ಭಾರತ ಹೆಚ್ಚಿನ ಏಕದಿನ ಪಂದ್ಯಗಳನ್ನಾಡಲಿದ್ದು, ಮತ್ತಷ್ಟು ದಾಖಲೆಗಳನ್ನು ಸೃಷ್ಟಿಸುವ ಉತ್ಸಾಹದಲ್ಲಿದ್ದಾರೆ ಯುವ ಆಟಗಾರ.

Story first published: Wednesday, January 25, 2023, 12:00 [IST]
Other articles published on Jan 25, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X