ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs NZ 3rd ODI: ರೋಹಿತ್-ಗಿಲ್ ಶತಕದ ಆರ್ಭಟ: ನ್ಯೂಜಿಲೆಂಡ್‌ಗೆ ಗೆಲ್ಲಲು 386 ರನ್ ಗುರಿ

Ind vs NZ 3rd ODI: New Zealand need 386 runs to win last match of the series

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಟೀಮ್ ಇಂಡಿಯಾದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಸಿಡಿಸಿದ ಭರ್ಜರಿ ಶತಕಗಳು ಹಾಗೂ ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಅವರ ಸ್ಪೋಟಕ ಅರ್ಧ ಶತಕದ ನೆರವಿನಿಂದಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 385 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಎದುರಾಳಿಗೆ ಮತ್ತೊಮ್ಮೆ ಬೃಹತ್ ಗುರಿ ನಿಗದಿಪಡಿಸಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ ಟೀಮ್ ಇಂಡಿಯಾಗೆ ಅಮೋಘ ಆರಂಭ ದೊರೆಯಿತು. ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಜೋಡಿ ಮೊದಲ ವಿಕೆಟ್‌ಗೆ ಭರ್ಜರಿ ದ್ವಿಶತಕದ ಜೊತೆಯಾಟವನ್ನು ನೀಡಿದ್ದಾರೆ. ಇಬ್ಬರು ಆಟಗಾರರು ಕೂಡ ಶತಕ ಸಿಡಿಸಿ ಅಬ್ಬರಿಸುವ ಮೂಲಕ ಭಾರತ ಬೃಜತ್ ಮೊತ್ತವನ್ನು ಗಳಿಸುವ ಮುನ್ಸೂಚನೆಯ್ನನು ಆರಂಭದಲ್ಲಿಯೇ ನೀಡಿದ್ದರು.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೂರು ವರ್ಷಗಳ ಬಳಿಕ ಏಕದಿನ ಮಾದರಿಯಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. 85 ಎಸೆತ ಎದುರಿಸಿದ ರೋಹಿತ್ 6 ಸಿಕ್ಸರ್ ಹಾಗೂ 9 ಬೌಂಡರಿ ನೆರವಿನೊಂದಿಗೆ 101 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಶುಬ್ಮನ್ ಗಿಲ್ 78 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 13 ಬೌಂಡರಿ ನೆರವಿನೊಂದಿಗೆ 112 ರನ್‌ಗಳನ್ನು ಗಳಿಸಿ ಔಟಾದರು.

ಈ ಜೋಡಿ ಬೇರ್ಪಟ್ಟ ಬಳಿಕ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರರನ್ನು ಹೆಚ್ಚು ಹೊತ್ತು ಕ್ರೀನ್‌ನಲ್ಲಿ ನೆಲೆಯೂರದಂತೆ ಮಾಡುವಲ್ಲಿ ಕಿವೀಸ್ ಬೌಳರ್‌ಗಳು ಯಶಸ್ಸು ಸಾಧಿಸಿದರು. ಜೀಗಾಗಿ ಟೀಮ್ ಇಂಡಿಯಾ ನಿರೀಕ್ಷಿಸಿದ್ದ ಬೃಹತ್ ಮೊತ್ತವನ್ನು ಗಳಿಸಲು ಅಸಾಧ್ಯ ಎಂಬ ಪರಿಸ್ಥಿತಿಯಿತ್ತು. ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹೆಚ್ಚು ಹೊತ್ತು ಕ್ರೀಸ್‌ನಲ್ಇ ನೆಲೆಯೂರಲು ವಿಫಲವಾದರು. ಆದರೆ ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತ ಹೆಚ್ಚಲು ಕಾರಣವಾದರು. 38 ಎಸೆತಗಳಲ್ಲಿ 54 ರನ್‌ ಗಳಿಸಿ ಹಾರ್ದಿಕ್ ವಿಕೆಟ್ ಕಳೆದುಕೊಂಡರು. ಇವರಿಗೆ ಶಾರ್ದೂಲ್ ಠಾಕೂರ್ ಅದ್ಭುತವಾಗಿ ಸಾಥ್ ನೀಡಿದ್ದಾರೆ.

ಇತ್ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್/ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಜಾಕೋಬ್ ಡಫ್ಫಿ, ಬ್ಲೇರ್ ಟಿಕ್ನರ್

Story first published: Tuesday, January 24, 2023, 17:25 [IST]
Other articles published on Jan 24, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X