ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್‌ ವರದಿ ನೋಡಿ ತಂಡದಲ್ಲಿ ಬದಲಾವಣೆ

IND vs NZ 3rd T20I: Prithvi Shaw Get Chance At Series Decider, Ahmedabad Pitch Report

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಸಮಬಲಗೊಳಿಸಿದೆ. ಸರಣಿಯ ಅಂತಿಮ ಮತ್ತು ನಿರ್ಣಾಯಕ ಪಂದ್ಯವನ್ನು ಗೆಲ್ಲುವತ್ತ ಹಾರ್ದಿಕ್ ಪಾಂಡ್ಯ ಪಡೆ ಗಮನ ಹರಿಸಿದೆ.

ಟಿ20 ಸರಣಿಯ ಕೊನೆಯ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಎರಡು ಪಂದ್ಯಗಳಿಗೆ ಪಿಚ್‌ಗಳು ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡಿದ್ದವು. ಅದರಲ್ಲೂ, ಲಕ್ನೋ ಪಿಚ್‌ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಸರಣಿಯ ಕೊನೆಯ ಪಂದ್ಯಕ್ಕೆ ಎಂತಹ ಪಿಚ್‌ ಸಿದ್ಧಪಡಿಸುತ್ತಾರೆ ಎಂದು ನೋಡಬೇಕಿದೆ.

BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?

ಲಕ್ನೋದಲ್ಲಿ ನಡೆದ ಟಿ20 ಪಂದ್ಯದಲ್ಲಿ ಬ್ಯಾಟರ್ ಗಳು ಪ್ರತಿ ರನ್ ಗಳಿಸಲು ಸಾಕಷ್ಟು ಕಷ್ಟಪಟ್ಟಿದ್ದರು. ಬಾಲ್‌ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ತಿರುವು ಪಡೆದ ಕಾರಣ ಬೌಲರ್ ಗಳು ಮೇಲುಗೈ ಸಾಧಿಸಿದರು. ನ್ಯೂಜಿಲೆಂಡ್ 20 ಓವರ್ ಬ್ಯಾಟಿಂಗ್ ಮಾಡಿದರೂ 100 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.

ಟೀಂ ಇಂಡಿಯಾ 19.5 ಓವರ್ ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 101 ರನ್ ಗಳಿಸುವ ಮೂಲಕ ಪ್ರಯಾಸದ 6 ವಿಕೆಟ್‌ಗಳ ಜಯ ಸಾಧಿಸಿತು. ಪಂದ್ಯದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಪಿಚ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್‌ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್‌ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ

 ಪಿಚ್‌ ನೋಡಿಕೊಂಡು ತಂಡದಲ್ಲಿ ಬದಲಾವಣೆ

ಪಿಚ್‌ ನೋಡಿಕೊಂಡು ತಂಡದಲ್ಲಿ ಬದಲಾವಣೆ

ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ಆದರೆ, ತಂಡದಲ್ಲಿ ಬದಲಾವಣೆ ಮಾಡುವುದು ಪಿಚ್ ವರದಿಯನ್ನು ಆಧರಿಸಿರುತ್ತದೆ ಎಂದು ಹೇಳಲಾಗಿದೆ.

ಒಂದು ವೇಳೆ ಅಹಮದಾಬಾದ್ ಪಿಚ್‌ ಕೂಡ ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡಿದರೆ, ಇದೇ ತಂಡವನ್ನು ಮುಂದುವರೆಸುವ ಲೆಕ್ಕಾಚಾರ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕೋಚ್‌ ರಾಹುಲ್ ದ್ರಾವಿಡ್‌ ಅವರದ್ದಾಗಿದೆ.

 ಪೃಥ್ವಿ ಶಾ, ಜಿತೇಶ್ ಶರ್ಮಾಗೆ ಅವಕಾಶ?

ಪೃಥ್ವಿ ಶಾ, ಜಿತೇಶ್ ಶರ್ಮಾಗೆ ಅವಕಾಶ?

ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಮತ್ತು ಇಶಾನ್‌ ಕಿಶನ್‌ರನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಇಶಾನ್ ಕಿಶನ್ ಬದಲಿಗೆ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ತಂಡದಲ್ಲಿ ಸ್ಥಾನ ಪಡೆಯುವು ಸಾಧ್ಯತೆ ಇದೆ. ಇನ್ನು ಅವಕಾಶಕ್ಕಾಗಿ ಕಾಯುತ್ತಿರುವ ಸ್ಫೋಟಕ ಬ್ಯಾಟರ್ ಪೃಥ್ವಿ ಶಾ ಕೂಡ ಅಹಮದಾಬಾದ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಬೌಲಿಂಗ್‌ನಲ್ಲಿ ಬದಲಾವಣೆ ಮಾಡುವುದು ಪಿಚ್‌ನ ವರ್ತನೆಯನ್ನು ಆಧರಿಸಿರುತ್ತದೆ.

 11 ಪಿಚ್‌ಗಳಿರುವ ಕ್ರೀಡಾಂಗಣ!

11 ಪಿಚ್‌ಗಳಿರುವ ಕ್ರೀಡಾಂಗಣ!

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಟ್ಟು 11 ಪಿಚ್‌ಗಳಿದ್ದು, 6 ಕೆಂಪು ಮಣ್ಣಿನ ಪಿಚ್‌ಗಳಿವೆ ಮತ್ತು ಐದು ಕಪ್ಪು ಮಣ್ಣಿನ ಪಿಚ್‌ಗಳಿವೆ. ಕೆಂಪು ಮಣ್ಣಿನ ಪಿಚ್‌ಗಳು ಸ್ಪಿನ್ನರ್ ಮತ್ತು ನಿಧಾನಗತಿಯ ಬೌಲರ್ ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಕಪ್ಪು ಮಣ್ಣಿನ ಪಿಚ್‌ಗಳು ಬೌನ್ಸ್‌ ಹೊಂದಿದ್ದು, ಬ್ಯಾಟಿಂಗ್‌ಗೆ ನೆರವಾಗುತ್ತದೆ. ಭಾರತ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಯಾವ ರೀತಿಯ ಪಿಚ್‌ ಬಳಸುತ್ತಾರೆ ಎನ್ನುವುದು ಇನ್ನೂ ತಿಳಿದಿಲ್ಲ.

ಅಹಮದಾಬಾದ್‌ ಟಿ20 ಮಾದರಿಯಲ್ಲಿ ಉತ್ತಮ ಸ್ಕೋರ್ ಮಾಡುವ ಸ್ಥಳವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ 174 ಆಗಿದ್ದು, ಎರಡನೇ ಇನ್ನಿಂಗ್ಸ್‌ ಸ್ಕೋರ್ 166 ಆಗಿದೆ.

Story first published: Monday, January 30, 2023, 14:21 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X