ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಕಿವೀಸ್ ವಿರುದ್ಧ ರನ್ ಗಳಿಸಲು ಪರದಾಡಿ ಅಭಿಮಾನಿಗಳ ಕೋಪಕ್ಕೆ ತುತ್ತಾದ ರಿಷಭ್ ಪಂತ್

IND vs NZ: Fans Outraged Against Rishabh Pant After Failure In ODI Series Over New Zealand

ಬುಧವಾರ, ನವೆಂಬರ್ 30ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಹಂಗಾಮಿ ಉಪನಾಯಕ ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ವಿಫಲವಾಗಿದ್ದು, ಕೇವಲ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನ್ಯೂಜಿಲೆಂಡ್ ಪ್ರವಾಸದಲ್ಲಿ ಸೀಮಿತ ಓವರ್‌ಗಳ ಸರಣಿಯ ಎಲ್ಲ ಪಂದ್ಯದಲ್ಲೂ ರನ್ ಗಳಿಸಲು ವಿಫಲವಾದ ನಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ರಿಷಭ್ ಪಂತ್ ವಿರುದ್ಧ ಕಿಡಿಕಾರಿದರು. ಇದೇ ವೇಳೆ ರಿಷಭ್ ಪಂತ್ ಬದಲಿಗೆ ಸಂಜು ಸ್ಯಾಮ್ಸನ್ ಆಡಲು ಅರ್ಹರಾಗಿದ್ದಾರೆ ಎಂದು ಅಭಿಮಾನಿಗಳು ಆಕಾಂಕ್ಷೆ ವ್ಯಕ್ತಪಡಿಸಿದರು.

ಯುಎಇ ಲೀಗ್ ಟಿ20 ವೇಳಾಪಟ್ಟಿ ಪ್ರಕಟ; ಮೊದಲ ಪಂದ್ಯದಲ್ಲಿ ದುಬೈ vs ಅಬುಧಾಬಿ ಸೆಣಸಾಟಯುಎಇ ಲೀಗ್ ಟಿ20 ವೇಳಾಪಟ್ಟಿ ಪ್ರಕಟ; ಮೊದಲ ಪಂದ್ಯದಲ್ಲಿ ದುಬೈ vs ಅಬುಧಾಬಿ ಸೆಣಸಾಟ

ಭಾರೀ ಟೀಕೆಗಳ ನಡುವೆ ಭಾರತದ ವೈಟ್-ಬಾಲ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ರಿಷಭ್ ಪಂತ್, ಕಿವೀಸ್ ಪ್ರವಾಸದಲ್ಲಿ ಕಳಪೆ ಬ್ಯಾಟಿಂಗ್ ಮತ್ತು ಕಡಿಮೆ ರನ್ ಗಳಿಸಿ ಟೀಕೆಗಳಿಗೆ ಗುರಿಯಾಗಿದ್ದಾರೆ.

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ರಿಷಭ್ ಪಂತ್ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಆದರೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಆಡಿದ ಎರಡು ಪಂದ್ಯಗಳಲ್ಲಿ ಕೇವಲ 17 ರನ್ ಗಳಿಸಿದರು.

ರಿಷಭ್ ಪಂತ್ ಟೆಸ್ಟ್‌ ಕೋಟಾದಲ್ಲಿ ಆಡುತ್ತಿದ್ದಾರೆ

ರಿಷಭ್ ಪಂತ್ ಟೆಸ್ಟ್‌ ಕೋಟಾದಲ್ಲಿ ಆಡುತ್ತಿದ್ದಾರೆ

ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಪಂದ್ಯ ವಿಜೇತ ಶತಕವನ್ನು ಬಾರಿಸಿದ ನಂತರ ರಿಷಭ್ ಪಂತ್ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಮೊದಲ ಆಯ್ಕೆಯಾದರು. ಆದರೆ ಮೊದಲ ಪಂದ್ಯದಲ್ಲೇ 15 ರನ್‌ಗಳಿಗೆ ಔಟಾದರು ಮತ್ತು ಪಂದ್ಯವನ್ನು ನ್ಯೂಜಿಲೆಂಡ್ ಗೆದ್ದಿತು.

ಸೂರ್ಯಕುಮಾರ್ ಯಾದವ್ ಟಿ20 ಕೋಟಾದಲ್ಲಿ ಮತ್ತು ರಿಷಭ್ ಪಂತ್ ಟೆಸ್ಟ್‌ ಕೋಟಾದಲ್ಲಿ ಆಡುತ್ತಿದ್ದಾರೆ. ಇದು ನಾಯಕ ರೋಹಿತ್ ಶರ್ಮಾಗೆ ಅವಮಾನ ಎಂದು ವಿಶಾಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ತೆರೆಯಲು ಬಯಸುತ್ತೇನೆ

ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ತೆರೆಯಲು ಬಯಸುತ್ತೇನೆ

"ನಾನು ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ತೆರೆಯಲು ಬಯಸುತ್ತೇನೆ ಮತ್ತು ಏಕದಿನ ಪಂದ್ಯಗಳಲ್ಲಿ 4 ಅಥವಾ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಯಸುತ್ತೇನೆ. ಟೆಸ್ಟ್‌ ಪಂದ್ಯಗಳಲ್ಲಿ ನಾನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ಖಂಡಿತವಾಗಿಯೂ, ಬ್ಯಾಟಿಂಗ್ ಮಾಡುವಾಗ ಆಟದ ಯೋಜನೆ ಬದಲಾಗುತ್ತದೆ," ಎಂದು ರಿಷಭ್ ಪಂತ್ ಪ್ರತಿಕ್ರಿಯಿಸಿದರ.

"ಕೋಚ್ ಮತ್ತು ನಾಯಕನು ತಂಡಕ್ಕೆ ಯಾವುದು ಉತ್ತಮ ಮತ್ತು ಬ್ಯಾಟ್ಸ್‌ಮನ್ ಯಾವ ಕ್ರಮಾಂಕದಲ್ಲಿ ಹೆಚ್ಚು ಕೊಡುಗೆ ನೀಡಬಹುದು ಎಂಬುದರ ಕುರಿತು ಯೋಚಿಸುತ್ತಾರೆ. ನನಗೆ ಎಲ್ಲಿ ಅವಕಾಶ ಸಿಕ್ಕರೂ, ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ," ಎಂದು ರಿಷಭ್ ಪಂತ್ ಪ್ರೈಮ್ ವಿಡಿಯೋದಲ್ಲಿ ಹೇಳಿದ್ದಾರೆ.

ಯಾರ ಜೊತೆ ಹೋಲಿಕೆಗೆ ಈಗ ಅರ್ಥವಿಲ್ಲ

ಯಾರ ಜೊತೆ ಹೋಲಿಕೆಗೆ ಈಗ ಅರ್ಥವಿಲ್ಲ

"ಏಕದಿನ ಪಂದ್ಯಗಳಲ್ಲಿ ಆಡಬೇಕಾದರೆ ನೀವು ಹೆಚ್ಚು ಪೂರ್ವಭಾವಿಯಾಗಿ ಅಭ್ಯಾಸ ಮಾಡಬೇಕಾಗಿಲ್ಲ, ಆದರೆ ಟಿ20 ಪಂದ್ಯಗಳಲ್ಲಿ ಮಾಡಬೇಕು," ಎಂದು ರಿಷಭ್ ಪಂತ್ ತಿಳಿಸಿದರು.

"ಯಾರ ಜೊತೆ ಹೋಲಿಕೆಗೆ ಈಗ ಅರ್ಥವಿಲ್ಲ, ನನ್ನ ವಯಸ್ಸು ಕೇವಲ 24-25 ವರ್ಷ. ನೀವು ಹೋಲಿಕೆ ಮಾಡಲು ಬಯಸಿದರೆ, ನನ್ನ ವಯಸ್ಸು 30-32 ಆಗಿದ್ದಾಗ ನೀವು ಅದನ್ನು ಮಾಡಬಹುದು. ಅದಕ್ಕಿಂತ ಮೊದಲು ಹೋಲಿಕೆಗೆ ಅರ್ಥವಿರುವುದಿಲ್ಲ," ಎಂದು ಹರ್ಷ ಭೋಗ್ಲೆಗೆ ಅವರಿಗೆ ಸ್ಪಷ್ಟೀಕರಣ ನೀಡಿದರು.

Story first published: Wednesday, November 30, 2022, 17:56 [IST]
Other articles published on Nov 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X