ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಮೊದಲ ODI ಪಂದ್ಯ ಗೆದ್ದರೂ ಶೇ.60ರಷ್ಟು ದಂಡ ಕಟ್ಟಿದ ರೋಹಿತ್ ಶರ್ಮಾ ಪಡೆ

IND vs NZ: India Fined 60 Percent of Match Fee For Slow Over Rate in 1st ODI Against New Zealand

ಬುಧವಾರ, ಜನವರಿ 18ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ ತಂಡ 12 ರನ್‌ಗಳ ರೋಚಕ ಗೆಲುವು ದಾಖಲಿಸಿತು.

ಶುಭ್ಮನ್ ಗಿಲ್ ಅದ್ಭುತ ದ್ವಿಶತಕ ಮತ್ತು ಸ್ಥಳೀಯ ಬೌಲರ್ ಮೊಹಮ್ಮದ್ ಸಿರಾಜ್‌ನ ಬಿಗಿ ಬೌಲಿಂಗ್‌ ನೆರವಿನಿಂದ ಭಾರತ ತಂಡ ಹೋರಾಡಿ ಪಂದ್ಯ ಗೆದ್ದಿತು. ಈ ರೋಚಕ ಪಂದ್ಯದಲ್ಲಿ ಭಾರತ ತಂಡ ತನ್ನ ನಿಗದಿತ ಸಮಯ ಮುಗಿದಾಗಲೂ ಓವರ್‌ಗಳನ್ನು ಬಾಕಿ ಉಳಿಸಿಕೊಂಡಿತ್ತು.

Ranji Trophy: 43 ವರ್ಷಗಳ ನಂತರ ಮೊದಲ ಬಾರಿಗೆ ಮುಂಬೈ ಸೋಲಿಸಿ ಇತಿಹಾಸ ನಿರ್ಮಿಸಿದ ದೆಹಲಿ!Ranji Trophy: 43 ವರ್ಷಗಳ ನಂತರ ಮೊದಲ ಬಾರಿಗೆ ಮುಂಬೈ ಸೋಲಿಸಿ ಇತಿಹಾಸ ನಿರ್ಮಿಸಿದ ದೆಹಲಿ!

ಇದರಿಂದಾಗಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಉಳಿದ ಆಟಗಾರರಿಗೆ ಪಂದ್ಯ ಶುಲ್ಕದ ಶೇ.60ರಷ್ಟು ದಂಡವನ್ನು ವಿಧಿಸಲಾಗಿದೆ. ನಿಗದಿತ ಸಮಯ ಮುಗಿದಾಗಲೂ ಭಾರತ ತಂಡ ತಮ್ಮ ಅಂತಿಮ ಮೂರು ಓವರ್‌ಗಳನ್ನು ಉಳಿಸಿಕೊಂಡಿದ್ದರಿಂದ ಎಲ್ಲ ಆಟಗಾರರ ಪಂದ್ಯ ಶುಲ್ಕದ ಹೆಚ್ಚಿನ ಭಾಗವನ್ನು ಕಡಿತಗೊಳಿಸಲಾಗಿದೆ.

ಪಂದ್ಯದ ಶುಲ್ಕದ ಶೇಕಡಾ 60ರಷ್ಟು ದಂಡ

ಪಂದ್ಯದ ಶುಲ್ಕದ ಶೇಕಡಾ 60ರಷ್ಟು ದಂಡ

"ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ ಬುಧವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಭಾರತ ತಂಡಕ್ಕೆ ತಮ್ಮ ಪಂದ್ಯದ ಶುಲ್ಕದ ಶೇಕಡಾ 60ರಷ್ಟು ದಂಡ ವಿಧಿಸಲಾಗಿದೆ," ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

"ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ರೆಫರಿಯಾಗಿ ಕಾರ್ಯನಿರ್ವಹಿಸಿದ್ದ ಜಾವಗಲ್ ಶ್ರೀನಾಥ್ ಅವರು ನಿಗದಿತ ಸಮಯ ಮೀರಿದ್ದನ್ನು ಪರಿಗಣಿಸಿದ ನಂತರ, ಭಾರತ ತಂಡವು ನಿಗದಿತ ಗುರಿಗಿಂತ ಮೂರು ಓವರ್‌ಗಳ ಕೊರತೆಯಿದೆ ಎಂದು ತೀರ್ಪು ನೀಡಿದರು ಮತ್ತು ತಂಡಕ್ಕೆ ದಂಡದ ಅನುಮತಿಯನ್ನು ವಿಧಿಸಿದೆ," ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಭಾರತ ತಂಡಕ್ಕೆ ದಂಡ

ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಭಾರತ ತಂಡಕ್ಕೆ ದಂಡ

ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ನಾಯಕ ರೋಹಿತ್ ಶರ್ಮಾ ಅವರು ತಪ್ಪೊಪ್ಪಿಕೊಂಡಿದ್ದಾರೆ ಮತ್ತು ಆದ್ದರಿಂದ ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ಹೇಳಿದೆ.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವು ಶನಿವಾರ, ಜನವರಿ 21ರಂದು ರಾಯ್‌ಪುರದಲ್ಲಿ ನಡೆಯಲಿದ್ದು, ಈಗಾಗಲೇ ಭಾರತ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಭಾರತ ತಂಡ ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ಕಾಣುತ್ತಿದ್ದರೂ, ಬೌಲಿಂಗ್‌ನಲ್ಲಿ ಕಳಪೆಯಾಗಿದೆ ಎನ್ನುವುದು ಮೊದಲ ಪಂದ್ಯದಲ್ಲಿ ಸಾಭಿತಾಗಿದೆ. 350 ರನ್‌ಗಳನ್ನು ರಕ್ಷಿಸಿಕೊಳ್ಳಲು ಅಂತಿಮ ಓವರ್‌ಗಳವರೆಗೂ ಹೋರಾಡಬೇಕಾಯಿತು.

ಭಾರತ ತಂಡವು ತಮ್ಮ ಆಡುವ 11ರ ಬಳಗದಲ್ಲಿ ಬದಲಾವಣೆ?

ಭಾರತ ತಂಡವು ತಮ್ಮ ಆಡುವ 11ರ ಬಳಗದಲ್ಲಿ ಬದಲಾವಣೆ?

ಇನ್ನು ನ್ಯೂಜಿಲೆಂಡ್ ತಂಡ ಎರಡನೇ ಪಂದ್ಯದಲ್ಲಿ ಆಡುವಾಗ ತಮ್ಮ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಂದ ಉತ್ತಮ ಬೆಂಬಲವನ್ನು ನಿರೀಕ್ಷಿಸುತ್ತಿದೆ. ತಂಡದ ನಾಯಕ ಕೇನ್ ವಿಲಿಯಮ್ಸನ್ ಮತ್ತು ಅನುಭವಿ ವೇಗದ ಬೌಲರ್ ಟಿಮ್ ಸೌಥಿ ಅಲಭ್ಯರಾಗಿದ್ದು, ಕೆಲಸದ ಹೊರೆಯಿಂದ ವಿಶ್ರಾಂತಿ ತೆಗೆದುಕೊಂಡು ತವರಿಗೆ ಮರಳಿದ್ದಾರೆ.

ಕಳೆದ ಪಂದ್ಯದಲ್ಲಿ ಮೈಕೆಲ್ ಬ್ರೇಸ್‌ವೆಲ್‌ನಿಂದ ಅನಿರೀಕ್ಷಿತ ಶತಕ ಬಂದ ನಂತರ, ಭಾರತ ತಂಡವು ತಮ್ಮ ಆಡುವ 11ರ ಬಳಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು.

Story first published: Friday, January 20, 2023, 17:04 [IST]
Other articles published on Jan 20, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X