IND Vs NZ: ಆತನನ್ನು ಬೇಗನೆ ಔಟ್ ಮಾಡದಿದ್ದರೆ ಭಾರತ ತಂಡ ಗೆಲ್ಲುವುದು ಅಸಾಧ್ಯ ಎಂದ ಮಾಜಿ ಕ್ರಿಕೆಟಿಗ

ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವನ್ನಾಡಲು ಸಿದ್ಧವಾಗಿದೆ. ನವೆಂಬರ್ 30ರಂದು ಕ್ರಿಸ್ಟ್‌ಚರ್ಚ್‌ನ ಹೇಗ್ಲೆಓವಲ್‌ನಲ್ಲಿ ಸರಣಿಯ ಕೊನೆಯ ಪಂದ್ಯ ನಡೆಯಲಿದೆ.

ಮೂರನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸುವ ವಿಶ್ವಾಸದಲ್ಲಿದೆ ಟೀಂ ಇಂಡಿಯಾ. ಆದರೆ, ಭಾರತಕ್ಕೆ ದೊಡ್ಡ ತಲೆನೋವಾಗಿರುವುದು ನ್ಯೂಜಿಲೆಂಡ್ ಬ್ಯಾಟರ್ ಟಾಮ್ ಲ್ಯಾಥಮ್. ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಈ ಬಗ್ಗೆ ಟೀಂ ಇಂಡಿಯಾಕ್ಕೆ ಎಚ್ಚರಿಕೆ ನೀಡಿದ್ದಾರೆ.

ಟಾಮ್ ಲ್ಯಾಥಮ್‌ರನ್ನು ಬೇಗನೆ ಔಟ್ ಮಾಡಲು ಟೀಂ ಇಂಡಿಯಾ ಉತ್ತಮವಾದ ಬೌಲಿಂಗ್ ಯೋಜನೆಯನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಸರಣಿಯ ಮೊದಲನೇ ಏಕದಿನ ಪಂದ್ಯದಲ್ಲೇ ಅಜೇಯ 145 ರನ್‌ ಗಳಿಸುವ ಮೂಲಕ ನ್ಯೂಜಿಲೆಂಡ್‌ಗೆ ಸುಲಭ ಜಯ ತಂದುಕೊಟ್ಟಿದ್ದರು.

Women IPL : ಫ್ರಾಂಚೈಸಿಗಳಿಗೆ 400 ಕೋಟಿ ರುಪಾಯಿ ಮೂಲ ಬೆಲೆ ನಿಗದಿ, ಮೂಲಗಳ ವರದಿWomen IPL : ಫ್ರಾಂಚೈಸಿಗಳಿಗೆ 400 ಕೋಟಿ ರುಪಾಯಿ ಮೂಲ ಬೆಲೆ ನಿಗದಿ, ಮೂಲಗಳ ವರದಿ

ಟಾಮ್ ಲ್ಯಾಥಮ್‌ರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ 3 ವಿಕೆಟ್‌ ಕಳೆದುಕೊಂಡ 307 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ, ನ್ಯೂಜಿಲೆಂಡ್ 7 ವಿಕೆಟ್‌ಗಳ ಜಯ ಸಾಧಿಸಿ. ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಈ ಎಡಗೈ ಬ್ಯಾಟರ್ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಕೂಡ ಭಾರತದ ಗೆಲುವಿಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.

ಭಾರತದ ಬೌಲಿಂಗ್ ಬಗ್ಗೆ ಗಮನಹರಿಸಲಿ

ಭಾರತದ ಬೌಲಿಂಗ್ ಬಗ್ಗೆ ಗಮನಹರಿಸಲಿ

"ಭಾರತ ತಂಡವು ಮೂರನೇ ಏಕದಿನ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುವ ಬಗ್ಗೆ ಯೋಚನೆ ಮಾಡಬೇಕು. ಅದರಲ್ಲೂ ಟಾಮ್ ಲ್ಯಾಥಮ್ ವಿರುದ್ಧ ಉತ್ತಮ ಯೋಜನೆಯನ್ನು ರೂಪಿಸಬೇಕು, ಆದಷ್ಟು ಬೇಗ ಅವರನ್ನು ಔಟ್ ಮಾಡಲು ಯತ್ನಿಸಬೇಕು. ಫಲಿತಾಂಶದ ಬಗ್ಗೆ ಲೆಕ್ಕಿಸದೆ, ಉತ್ತಮವಾದ ಕ್ರಿಕೆಟ್ ಆಡಲು ಪ್ರಯತ್ನಿಸಬೇಕು" ಎಂದು ವಾಸಿಂ ಜಾಫರ್ ಸಲಹೆ ನೀಡಿದ್ದಾರೆ.

ಮೊದಲನೇ ಪಂದ್ಯದಲ್ಲಿ ಲ್ಯಾಥಮ್ ಭಾರತೀಯ ಸ್ಪಿನ್ನರ್ ಗಳ ವಿರುದ್ಧ ಯಶಸ್ವಿಯಾಗಿ ಆಡಿದರು. ನಾಯಕ ಕೇನ್ ವಿಲಿಯಮ್ಸ್ ಕೂಡ ತಮ್ಮ ಕ್ಲಾಸ್ ಬ್ಯಾಟಿಂಗ್ ಪ್ರದರ್ಶಿಸಿದರು. 98 ಎಸೆತಗಳಲ್ಲಿ ಅಜೇಯ 94 ರನ್ ಗಳಿಸುವ ಮೂಲಕ ಲ್ಯಾಥಮ್‌ಗೆ ಉತ್ತಮವಾಗಿ ಸಾಥ್ ನೀಡಿದರು.

ಶೇ.49ರಷ್ಟು ಕ್ರಿಕೆಟಿಗರು ಟಿ20 ಲೀಗ್‌ಗಳಿಗಾಗಿ ರಾಷ್ಟ್ರೀಯ ಒಪ್ಪಂದ ತಿರಸ್ಕರಿಸಲು ಸಿದ್ಧರಾಗಿದ್ದಾರೆ; ಸಮೀಕ್ಷೆ

ಮಳೆ ಅಡ್ಡಿಯಾಗುವ ಆತಂಕ

ಮಳೆ ಅಡ್ಡಿಯಾಗುವ ಆತಂಕ

"ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಲು ಸಾಕಷ್ಟು ತೊಂದರೆ ಅನುಭವಿಸಬೇಕಾಗಿದೆ. ಮೂರನೇ ಏಕದಿನ ಪಂದ್ಯದ ವೇಳೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಆದರೂ, ಈ ಪಂದ್ಯ ನಡೆಯುತ್ತದೆ ಎನ್ನುವ ವಿಶ್ವಾಸ ನನಗಿದೆ" ಎಂದು ವಾಸಿಂ ಜಾಫರ್ ಭರವಸೆ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್ ತವರಿನಲ್ಲಿ ಸತತವಾಗಿ 13 ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದೆ. 14ನೇ ಜಯಕ್ಕಾಗಿ ಕಾಯುತ್ತಿದ್ದು, ಮೂರನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳಲು ನೋಡುತ್ತಿದೆ.

ಆತ ಕ್ರೀಸ್‌ನಲ್ಲಿರುವಷ್ಟು ಸಮಯ ಭಾರತಕ್ಕೆ ಅಪಾಯ

ಆತ ಕ್ರೀಸ್‌ನಲ್ಲಿರುವಷ್ಟು ಸಮಯ ಭಾರತಕ್ಕೆ ಅಪಾಯ

ಟಾಮ್ ಲ್ಯಾಥಮ್ ಭಾರತದ ವಿರುದ್ಧ ಆಡಿರುವ ರೀತಿಯನ್ನು ಅರಿತಿರುವ ವಾಸಿಂ ಜಾಫರ್ ಸಹಜವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಟಾಮ್ ಲ್ಯಾಥಮ್ ಭಾರತದ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಎಡಗೈ ಬ್ಯಾಟರ್ ಭಾರತದ ವಿರುದ್ಧ 17 ಏಕದಿನ ಪಂದ್ಯಗಳನ್ನಾಡಿದ್ದು, 65.08 ಸರಾಸರಿಯಲ್ಲಿ 846 ರನ್ ಗಳಿಸಿದ್ದಾರೆ. ಮಧ್ಯಮ ಓವರ್ ಗಳಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಕಾರಣ ಲ್ಯಾಥಮ್ ಭಾರತಕ್ಕೆ ದೊಡ್ಡ ಅಡ್ಡಿಯಾಗಲಿದ್ದಾರೆ.

"ಟಾಮ್ ಲ್ಯಾಥಮ್ ಸ್ಪಿನ್ ವಿರುದ್ಧ ಉತ್ತಮವಾಗಿ ಆಡುವ ಮೂಲಕ ಇನ್ನಿಂಗ್ಸ್‌ನ ಮಧ್ಯಮ ಓವರ್ ಗಳಲ್ಲಿ ಸುಲಭವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿರುವುದು, ಭಾರತ ತಂಡಕ್ಕೆ ಅಪಾಯಕಾರಿಯಾಗಿದ್ದಾರೆ. ಅವರ ವಿಕೆಟ್ ಪಡೆಯುವುದು ಭಾರತ ತಂಡಕ್ಕೆ ಪ್ರಮುಖ ಆಯ್ಕೆಯಾಗಬೇಕು, ವಿಲಿಯಮ್ಸನ್ ಕೂಡ ಕ್ಲಾಸ್ ಆಟಗಾರ, ಆತನ ವಿರುದ್ಧವೂ ಭಾರತ ತಂಡ ಗಮನ ಹರಿಸಬೇಕು" ಎಂದು ಹೇಳಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, November 29, 2022, 20:36 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X