ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐತಿಹಾಸಿಕ ಸಾಧನೆ ಮಾಡಿದ ಅಜಾಜ್ ಪಟೇಲ್‌ಗೆ ಟೀಮ್ ಇಂಡಿಯಾದ ಸ್ಮರಣೀಯ ಉಡುಗೊರೆ

Ind vs Nz: Indian team gives Ajaz Patel a signed jersey for record haul in Mumbai Test

ಮುಂಬೈ ಟೆಸ್ಟ್‌ನಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದರೂ ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಸಾಧನೆಗೆ ಕ್ರಿಕೆಟ್ ಪ್ರೇಮಿಗಳು ಭಾರೀ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನಿಂಗ್ಸ್‌ವೊಂದರ ಎಲ್ಲಾ 10 ವಿಕೆಟ್‌ಗಳನ್ನು ಪಡೆಯುವ ಮೂಲಕ ಅಜಾಜ್ ಪಟೇಲ್ ದಾಖಲೆ ಬರೆದಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಕೇವಲ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಅಜಾಜ್ ಪಟೇಲ್ ಪಾತ್ರವಾಗಿದ್ದಾರೆ. ಇದಕ್ಕೂ ಮುನ್ನ ಜಿಮ್ ಲೇಖರ್ ಹಾಗೂ ಅನಿಲ್ ಕುಂಬ್ಳೆ ಮಾತ್ರವೇ ಈ ಸಾಧನೆ ಮಾಡಿದ್ದರು.

ಈ ಸಾಧನೆ ಮಾಡಿದ ಅಜಾಜ್ ಪಟೇಲ್‌ಗೆ ಟೀಮ್ ಇಂಡಿಯಾ ಕಡೆಯಿಂದ ವಿಶೇಷ ಉಡುಗೊರೆಯೊಂದು ದೊರೆತಿದೆ. ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಕೂಡ ಸಹಿ ಹಾಕಿದ ಜರ್ಸಿಯನ್ನು ಕಿವೀಸ್ ತಂಡದ ಆಟಗಾರನಿಗೆ ನೀಡಿದ್ದಾರೆ. ಅಲ್ಲದೆ ಮುಂಬೈ ಮುಂಬೈ ಕ್ರಿಕೆಟ್ ಅಸೋಸಿಯೇಶನ್(ಎಂಸಿಎ) ಕೂಡ ಅಜಾಜ್ ಪಟೇಲದ ಅವರ ಈ ಸಾಧನೆಗೆ ವಿಶೇಷ ಸನ್ಮಾನವನ್ನು ಮಾಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದಿದ್ದ ಪಟೇಲ್ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಸಂಪಾದಿಸಿದ್ದು ಒಟ್ಟು 14 ವಿಕೆಟ್ ಗಳಿಸಿದ್ದಾರೆ.

ಭಾರತ vs ನ್ಯೂಜಿಲೆಂಡ್: ಕಿವೀಸ್ ವಿರುದ್ಧ 372 ರನ್‌ಗಳ ಭಾರೀ ಅಂತರದಿಂದ ಗೆದ್ದು ಸರಣಿ ವಶಕ್ಕೆ ಪಡೆದ ಟೀಮ್ ಇಂಡಿಯಾಭಾರತ vs ನ್ಯೂಜಿಲೆಂಡ್: ಕಿವೀಸ್ ವಿರುದ್ಧ 372 ರನ್‌ಗಳ ಭಾರೀ ಅಂತರದಿಂದ ಗೆದ್ದು ಸರಣಿ ವಶಕ್ಕೆ ಪಡೆದ ಟೀಮ್ ಇಂಡಿಯಾ

ಈ ಸಾಧನೆ ಮಾಡಿದ ಸಂದರ್ಭದಲ್ಲಿ ಪಟೇಲ್‌ಗೆ ಕ್ರೀಡಾಂಗಣದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ಹಾಗೂ ಭಾರತೀಯ ತಂಡದ ಆಟಗಾರರು ಎದ್ದು ನಿಂತು ಅಭಿನಂದಿಸಿದ್ದರು. ಆದರೆ ದುರಾದೃಷ್ಟವಶಾತ್ ಈ ಕಿವೀಸ್ ಬೌಲರ್‌ನ ಈ ಸಾಧನೆಯ ಹೊರತಾಗಿಯೂ ತಂಡ ಭಾರೀ ಅಂತರದಿಂದ ಸೋಲು ಕಂಡಿದೆ. ಈ ಮೂಲಕ ನ್ಯೂಜಿಲೆಂಡ್ ತಂಡ ಸರಣಿಯನ್ನು 1-0 ಅಂತರದಿಂದ ಭಾರತಕ್ಕೆ ಒಪ್ಪಿಸಿದೆ.

ಪ್ರವಾಸಿ ನ್ಯೂಜಿಲೆಂಡ್ ಪಾಲಿಗೆ ಈ ಪಂದ್ಯದಲ್ಲಿ ಅಜಾಜ್ ಪಟೇಲ್ ಅವರ ಪ್ರದರ್ಶನ ಮಾತ್ರವೇ ಸಕಾರಾತ್ಮಕ ಸಂಗತಿಯಾಗಿತ್ತು. ಉಳಿದಂತೆ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 62 ರನ್‌ಗಳಿಗೆ ತಂಡ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗವನ್ನು ಅನುಭವಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿಯೂ ಕಿವೀಸ್ ಪಡೆ ಗಳಿಸಿದ್ದು ಕೇವಲ 167 ರನ್ ಮಾತ್ರ. ಈ ಮೂಲಕ ಟೀಮ್ ಇಂಡಿಯಾ ದಾಖಲೆಯ 372 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ.

ಮುಂಬೈ ಟೆಸ್ಟ್ ನಂತರ ದ. ಆಪ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಅನುಭವಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತಮುಂಬೈ ಟೆಸ್ಟ್ ನಂತರ ದ. ಆಪ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಅನುಭವಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ

ಇನ್ನು ಟೀಮ್ ಇಂಡಿಯಾ ಎದುರಾಳಿ ತಂಡದ ಆಟಗಾರರನ್ನು ಸಹಿ ಹಾಕಿದ ಜರ್ಸಿ ನೀಡಿ ಗೌರವಿಸುವುದು ಇದೇನೂ ಮೊದಲಲ್ಲ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ನಾಥನ್ ಲಿಯೋನ್ 100ನೇ ಟೆಸ್ಟ್ ಪಂದ್ಯದಲ್ಲಿ ಆಡಿದ ಸಂದರ್ಭದಲ್ಲಿಯೂ ನಾಯಕ ಅಜಿಂಕ್ಯಾ ರಹಾನೆ ಆಸಿಸ್ ತಂಡದ ಈ ಆಟಗಾರನಿಗೆ ಜರ್ಸಿ ನೀಡಿ ಗೌರವಿಸಿದ್ದರು.

ಮುಂಬೈ ಟೆಸ್ಟ್ ನಂತರ ದ. ಆಪ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಅನುಭವಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತಮುಂಬೈ ಟೆಸ್ಟ್ ನಂತರ ದ. ಆಪ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಅನುಭವಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ

ವಾಂಖೆಡೆ ಕ್ರೀಡಾಂಗಣದಲ್ಲಿ ಅಜಾಜ್ ಪಟೇಲ್ 14 ವಿಕೆಟ್‌ಗಳ ಗೊಂಚಲು ಪಡೆದು ಈ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಗಾಗಿ ಎಂಸಿಎ ಕೂಡ ಗೌರವಿಸಿದೆ. ಅಧಿಕೃತ ಸ್ಕೋರ್‌ ಪಟ್ಟಿಯನ್ನು ಫ್ರೇಮ್ ಹಾಕಿ ನೀಡುವ ಮೂಲಕ ಎಂಸಿಎ ಗೌರವಿಸಿದೆ. ಇದಕ್ಕೆ ಪ್ರತಿಯಾಗಿ ಅಜಾಜ್ ಪಟೇಲ್ ಸಹಿ ಹಾಕಿದ ಜರ್ಸಿ ಹಾಗೂ ಪಂದ್ಯದ ಚೆಂಡನ್ನು ಎಂಸಿಎನ ಮ್ಯೂಜಿಯಂಗೆ ನೀಡಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ನಂತರ ವೈರಲ್ ಆದ ವಿಶೇಷ ಫೋಟೋ | Oneindia Kannada

Story first published: Monday, December 6, 2021, 16:20 [IST]
Other articles published on Dec 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X