ಭಾರತ vs ನ್ಯೂಜಿಲೆಂಡ್ ದ್ವಿತೀಯ ಟೆಸ್ಟ್ ಪಂದ್ಯದಿಂದ ಕೇನ್ ವಿಲಿಯಮ್ಸನ್ ಔಟ್, ಬದಲಿ ನಾಯಕನ ನೇಮಕ

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಿದೆ. ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳ ಆಟಗಾರರಿಗೂ ಕೂಡ ಗಾಯದ ಸಮಸ್ಯೆ ಕಾಡುತ್ತಿದ್ದು ಟೀಮ್ ಇಂಡಿಯಾದಿಂದ ಪ್ರಮುಖ ಮೂವರು ಆಟಗಾರರು ಹೊರಬಿದ್ದಿದ್ದರೆ ನ್ಯೂಜಿಲೆಂಡ್ ತಂಡದಿಂದ ನಾಯಕ ಕೇನ್ ವಿಲಿಯಮ್ಸನ್ ಅವರೇ ಹೊರಗುಳಿದಿದ್ದಾರೆ.

ಕೊಹ್ಲಿ ಏಕದಿನ ನಾಯಕತ್ವದ ಭವಿಷ್ಯ ಈ ವಾರವೇ ನಿರ್ಧಾರ; ಈ ಇಬ್ಬರು ಕೊಹ್ಲಿ ಬೇಡ ಎಂದರೆ ಹೊಸ ನಾಯಕ ಫಿಕ್ಸ್!ಕೊಹ್ಲಿ ಏಕದಿನ ನಾಯಕತ್ವದ ಭವಿಷ್ಯ ಈ ವಾರವೇ ನಿರ್ಧಾರ; ಈ ಇಬ್ಬರು ಕೊಹ್ಲಿ ಬೇಡ ಎಂದರೆ ಹೊಸ ನಾಯಕ ಫಿಕ್ಸ್!

ಹೌದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಇಂದು ( ಡಿಸೆಂಬರ್ 3 ) ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಿದ್ದು ಮುಂಬೈ ನಗರದಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಪಂದ್ಯದ ಆರಂಭದಲ್ಲಿಯೂ ಕೂಡ ವಿಳಂಬವುಂಟಾಗಿದೆ. ಹೌದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಟಾಸ್ ನಡೆಯಬೇಕಿದ್ದ ಸಮಯಕ್ಕೆ ನಡೆದಿಲ್ಲ.

ಕಳೆದೆರಡು ದಿನಗಳಿಂದ ಸುರಿದಿರುವ ಮಳೆಗೆ ಪಿಚ್ ಇನ್ನೂ ಸಹ ಒಣಗದೇ ಇರುವುದರಿಂದ ಟಾಸ್ ವಿಳಂಬವಾಗಿದೆ ಎನ್ನಲಾಗುತ್ತಿದೆ. ಹೀಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಟಾಸ್ ವಿಳಂಭವಾಗುತ್ತಿರುವ ಸುದ್ದಿ ಹೊರಬೀಳುತ್ತಿದ್ದಂತೆಯೇ ನ್ಯೂಜಿಲೆಂಡ್ ಪಾಳಯದಿಂದ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ನ್ಯೂಜಿಲೆಂಡ್ ಕ್ರಿಕೆಟ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಎಡ ಮೊಣಕೈ ಗಾಯದಿಂದ ಬಳಲುತ್ತಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೀಮ್ ಇಂಡಿಯಾ ವಿರುದ್ಧದ ಮುಂಬೈ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದು, ಟಾಮ್ ಲಾಥಮ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಬರೆದುಕೊಂಡಿದೆ.

Virat Kohliಗೆ ಮೊದಲ ಬಾರಿಗೆ ಅಭ್ಯಾಸ ಮಾಡಿಸಿದ Rahul Dravid | Oneindia Kannada

For Quick Alerts
ALLOW NOTIFICATIONS
For Daily Alerts
Story first published: Friday, December 3, 2021, 10:56 [IST]
Other articles published on Dec 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X