ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಪರಿಸ್ಥಿತಿ ತುಂಬಾ ಹದಗೆಟ್ಟಿದೆ': ನ್ಯೂಜಿಲೆಂಡ್ ಪ್ರದರ್ಶನಕ್ಕೆ ದಿಗ್ಗಜ ಆಟಗಾರನಿಂದ ಅಸಮಾಧಾನ

Ind vs NZ: Kiwis great disappointed about team set-up said stop hiding in the grass

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಿವೀಸ್ ಪಡೆ ಸಾಕಷ್ಟು ತೀವ್ರ ಪ್ರತಿರೋಧ ಒಡ್ಡಿ ಪಂದ್ಯದಲ್ಲಿ ಸೋಲಿನಿಂದ ತಪ್ಪಿಸಿಕೊಂಡಿದೆ. ಈ ಮೂಲಕ ಪಂದ್ಯ ಡ್ರಾ ಫಲಿತಾಂಶ ಪಡೆದುಕೊಂಡಿದೆ. ಐದು ದಿನಗಳ ಆಟದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯನ್ನು ನಡೆಸಿತು. ಆದರೆ ಅಂತಿಮವಾಗಿ ಎರಡು ತಂಡಗಳು ಕೂಡ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.

ಆದರೆ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ ನಡೆಸ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನೀಡಿದ ಪ್ರದರ್ಶನ ನೋಡಿದ ಬಳಿಕ ಕಿವೀಸ್ ಪಡೆಯ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಇಯಾನ್ ಸ್ಮಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ತಂಡ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲಿಂಗನ್ನೇ ಅತಿಯಾಗಿ ನೆಚ್ಚಿಕೊಂಡಿರುವುದಕ್ಕೆ ತೀವ್ರ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ.

5ನೇ ದಿನವೂ ವಿಕೆಟ್ ಕೀಪಿಂಗ್‌ಗೆ ಕಣಕ್ಕಿಳಿಯದ ವೃದ್ದಿಮಾನ್ ಸಾಹ: ಕೆ.ಎಸ್‌ ಭರತ್‌ ಕಣಕ್ಕೆ5ನೇ ದಿನವೂ ವಿಕೆಟ್ ಕೀಪಿಂಗ್‌ಗೆ ಕಣಕ್ಕಿಳಿಯದ ವೃದ್ದಿಮಾನ್ ಸಾಹ: ಕೆ.ಎಸ್‌ ಭರತ್‌ ಕಣಕ್ಕೆ

ಟೀಮ್ ಇಂಡಿಯಾ ಸ್ಪಿನ್ನರ್‌ಗಳ ಉತ್ತಮ ಪ್ರದರ್ಶನ

ಟೀಮ್ ಇಂಡಿಯಾ ಸ್ಪಿನ್ನರ್‌ಗಳ ಉತ್ತಮ ಪ್ರದರ್ಶನ

ಕಾನ್ಪುರದ ನಿಧಾನಗತಿಯ ಪಿಚ್‌ನಲ್ಲಿ ಭಾರತದ ಸ್ಪಿನ್ನರ್‌ಗಳು ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಆದರೆ ನ್ಯೂಜಿಲೆಂಡ್ ಪರವಾಗಿ ಸ್ಪಿನ್ನರ್‌ಗಳು ನೀರಸ ಪ್ರದರ್ಶನ ನೀಡಿದ್ದರು. ಆದರೆ ಕಿವಿಸ್ ತಂಡದ ವೇಗಿಗಳು ಮಾತ್ರ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಆಘಾತ ನೀಡಿದ್ದಾರೆ. ಭಾರತ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 17 ವಿಕೆಟ್ ಕಳೆದುಕೊಂಡಿದೆ. ಆದರೆ ನ್ಯೂಜಿಲೆಂಡ್ ತಂಡದ ಸ್ಪಿನ್ನರ್‌ಗಳು ಪಡೆದುಕೊಂಡಿದ್ದು ಕೇವಲ 3 ವಿಕೆಟ್ ಮಾತ್ರ. ಉಳಿದ 14 ವಿಕೆಟ್‌ಗಳು ಕಿವೀಸ್ ವೇಗಿಗಳ ಪಾಲಾಗಿದೆ. ಸ್ಪಿನ್ನರ್‌ಗಳು ಪಡೆದ ಮೂರು ವಿಕೆಟ್ ಕೂಡ ಅಜಾಜ್ ಪಟೇಲ್ ಪಾಲಾಗಿದ್ದು ಉಳಿದಿಬ್ಬರು ಸ್ಪಿನ್ನರ್‌ಗಳಾದ ರಚಿನ್ ರವೀಂದ್ರ ಹಾಗೂ ವಿಲ್ ಸೋಮರ್‌ವಿಲ್ಲೆ ಒಂದೂ ವಿಕೆಟ್ ಪಡೆಯದ ನಿರಾಸೆ ಅನುಭವಿಸಿದ್ದಾರೆ.

ಟೀಕಿಸಿದ ಇಯಾನ್ ಸ್ಮಿತ್

ಟೀಕಿಸಿದ ಇಯಾನ್ ಸ್ಮಿತ್

ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಇಯಾನ್ ಸ್ಪಿನ್ ಕಿವಿಸ್ ಪಡೆಯ ಸ್ಪಿನ್ನರ್‌ಗಳ ವಿರುದ್ಧ ತೀವ್ರ ಟೀಕೆಯನ್ನು ಮಾಡಿದ್ದಾರೆ. "ನಾವು ಸ್ಪಿನ್ ಬೌಲಿಂಗ್‌ನಲ್ಲಿ ಸಾಕಷ್ಟು ಒ್ರಗತಿಯನ್ನು ಸಾಧಿಸಬೇಕಿದೆ ಹಾಗೂ ಹುಲ್ಲಿನಿಂದ ರಕ್ಷಣೆ ಪಡೆಯುವುದನ್ನು ನಿಲ್ಲಿಸಬೇಕು. ತಂಡದ ಸ್ಪಿನ್ ಬೌಲಿಂಗ್‌ನ ಪ್ರದರ್ಶನ ತುಂಬಾ ಅಸ್ತವ್ಯಸ್ಥವಾಗಿದೆ. ಇದು ತಮಾಷೆಯಲ್ಲ. ನಾವು ತವರಿನಲ್ಲಿ ಆಡಿದಾಗ ವೇಗಿಗಳಿಗೆ ನೆರವಾಗುವಂತೆ ಉಪಖಂಡದಲ್ಲಿ ಸ್ಪಿನ್ನರ್‌ಗಳಿಗೆ ನೆರವಾಗುತ್ತದೆ. ನಾವು ಅಲ್ಲಿ ಉತ್ತಮವಾಗಿ ಆಡದ ಹೊರತು ಬೇರೇನೂ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ ಇಯಾನ್ ಸ್ಮಿತ್.

ಬಹುಕಾಲದ ಗೆಳತಿ ಜೊತೆಗೆ, ಟೀಂ ಇಂಡಿಯಾ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

ಸೌಥಿ ಹಾಗೂ ಜೇಮಿಸನ್‌ಗೆ ವಿಲಿಯಮ್ಸನ್ ಪಡೆ ಧನ್ಯವಾದ ಹೇಳಬೇಕು

ಸೌಥಿ ಹಾಗೂ ಜೇಮಿಸನ್‌ಗೆ ವಿಲಿಯಮ್ಸನ್ ಪಡೆ ಧನ್ಯವಾದ ಹೇಳಬೇಕು

ಇನ್ನು ಈ ಪಂದ್ಯದಲ್ಲು ನ್ಯೂಜಿಲೆಂಡ್ ತಂಡದ ಪ್ರದರ್ಶನಕ್ಕೆ ಇಡೀ ತಂಡ ವೇಗಿಗಳಾದ ಕೈಲ್ ಜೇಮಿಸನ್ ಹಾಗೂ ಟಿಮ್ ಸೌಥಿಗೆ ಧನ್ಯವಾದ ಸಲ್ಲಿಸಬೇಕು ಎಂದಿದ್ದಾರೆ. ಇಡೀ ಪಂದ್ಯದಲ್ಲಿ ಅವರು ನೀಡಿದ ಪ್ರದರ್ಶನದಿಂದಾಗಿ ಅಂತಿಮ ದಿನದವರೆಗೂ ನ್ಯೂಜಿಲೆಂಡ್ ಆಡಲು ಸಾಧ್ಯವಾಗಿದೆ ಎಂದಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ಕೂಡ ವೇಗಿಗಳೇ ಕಾರಣ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ಕೂಡ ವೇಗಿಗಳೇ ಕಾರಣ

ಇನ್ನು ಇದೇ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಗೆಲ್ಲಲು ಕೂಡ ವೇಗಿಗಳೇ ಕಾರಣ ಎಂದಿದ್ದಾರೆ. ತಂಡ ಎಲ್ಲಾ ವೇಗದ ಬೌಲಿಂಗ್ ಆಟಗಾರರನ್ನೇ ಕಣಕ್ಕಿಳಿಸಿದ್ದು ಗೆಲುವಿಗೆ ಕಾರಣವಾಗಿದೆ ಎಂದಿದ್ದಾರೆ. "ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಸ್ಪಿನ್ ಬೌಲರ್‌ಗಳನ್ನು ಬಳಸದೆಯೇ ಪಂದ್ಯವನ್ನು ಗೆಲ್ಲು ಸಾಧ್ಯವಾಗಿದ್ದಕ್ಕೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು ಬಹಳಷ್ಟು ನಿರಾಶಾದಾಯಕ ಹಾಗೂ ಕಳಪೆ ಸಂಗತಿ ಎಂದು ಕೂಡ ಅವರು ಹೇಳಿದ್ದರು. ಅವರು ಸ್ಪಿನ್ ಬೌಲಿಂಗ್‌ನ ಪಕ್ಷಪಾತಿಯಾಗಿ ಮಾತನಾಡಿದ್ದಾರೆ ನಿಜ. ಆದರೆ ನಾವು ಆ ವಿಚಾರವಾಗಿ ಗಮನಹರಿಸಬೇಕಿದೆ" ಎಂದಿದ್ದಾರೆ ಇಯಾನ್ ಸ್ಪಿನ್.

Story first published: Monday, November 29, 2021, 20:12 [IST]
Other articles published on Nov 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X