ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಭಾರತ ಪ್ರವಾಸಕ್ಕೆ ಬಲಿಷ್ಠ ನ್ಯೂಜಿಲೆಂಡ್‌ 'ಎ' ತಂಡ ಪ್ರಕಟ; ಭಾರತೀಯನಿಗೆ ಸ್ಥಾನ!

IND vs NZ: New Zealand announced strong A squad for India tour

ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ನ್ಯೂಜಿಲೆಂಡ್ ಎ ತಂಡ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು ಭಾರತ ಎ ತಂಡದ ವಿರುದ್ಧ ಮೂರು 4 ದಿನಗಳ ಟೆಸ್ಟ್ ಪಂದ್ಯ ಹಾಗೂ 3 ಏಕದಿನ ಪಂದ್ಯಗಳಲ್ಲಿ ಸೆಣಸಾಟವನ್ನು ನಡೆಸಲಿದೆ.

IND vs ZIM: ರಾಷ್ಟ್ರಗೀತೆ ಸಂದರ್ಭದಲ್ಲಿ ರಾಹುಲ್ ಮೈದಾನದಲ್ಲಿ ನಡೆದುಕೊಂಡ ರೀತಿ; ವಿಡಿಯೋ ವೈರಲ್IND vs ZIM: ರಾಷ್ಟ್ರಗೀತೆ ಸಂದರ್ಭದಲ್ಲಿ ರಾಹುಲ್ ಮೈದಾನದಲ್ಲಿ ನಡೆದುಕೊಂಡ ರೀತಿ; ವಿಡಿಯೋ ವೈರಲ್

2018ರ ನಂತರ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ಎ ತಂಡ ವಿದೇಶಿ ಪ್ರವಾಸವನ್ನು ಕೈಗೊಂಡು ಪಂದ್ಯವನ್ನಾಡಲಿದ್ದು, ಅಂತಿಮವಾಗಿ ಪಾಕಿಸ್ತಾನ ತಂಡದ ವಿರುದ್ಧ ಸೆಣಸಾಟ ನಡೆಸಲು ಈ ಹಿಂದೆ 2018ರಲ್ಲಿ ಯುಎಇ ಪ್ರಯಾಣವನ್ನು ಬೆಳೆಸಿತ್ತು. ಇನ್ನು ನ್ಯೂಜಿಲೆಂಡ್ ಎ ತಂಡ 2017ರಲ್ಲಿ ಭಾರತ ಪ್ರವಾಸವನ್ನು ಕೈಗೊಂಡಿದ್ದು ಬಿಟ್ಟರೆ ನಂತರ ಇಲ್ಲಿಯವರೆಗೂ ಒಮ್ಮೆಯೂ ಭಾರತ ಪ್ರವಾಸವನ್ನು ಕೈಗೊಂಡಿರಲಿಲ್ಲ.

ಯುಎಇ ಟಿ20 ಲೀಗ್: 14 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ದುಬೈ ಕ್ಯಾಪಿಟಲ್ಸ್ಯುಎಇ ಟಿ20 ಲೀಗ್: 14 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ದುಬೈ ಕ್ಯಾಪಿಟಲ್ಸ್

ಸೆಪ್ಟೆಂಬರ್ 1ರಂದು ನಡೆಯಲಿರುವ ಪ್ರಥಮ ಟೆಸ್ಟ್ ಪಂದ್ಯದ ಮೂಲಕ ಆರಂಭವಾಗಲಿರುವ ಉಭಯ ತಂಡಗಳ ನಡುವಿನ ಹಣಾಹಣಿಗಳು ಸೆಪ್ಟೆಂಬರ್ 27ರಂದು ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದ ಮೂಲಕ ಮುಕ್ತಾಯವಾಗಲಿದೆ. ಹಾಗೂ ಈ ಎಲ್ಲ ತಂಡಗಳು ಬೆಂಗಳೂರು ಹಾಗೂ ಚೆನ್ನೈನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹಣಾಹಣಿಗೆ ಪ್ರಕಟವಾಗಿರುವ ನ್ಯೂಜಿಲೆಂಡ್ ಎ ತಂಡದ ಸ್ಕ್ವಾಡ್ ಹಾಗೂ ವೇಳಾಪಟ್ಟಿಯ ಕುರಿತಾದ ಮಾಹಿತಿ ಕೆಳಕಂಡಂತಿದೆ.

ನ್ಯೂಜಿಲೆಂಡ್‌ ಎ ಸ್ಕ್ವಾಡ್

ನ್ಯೂಜಿಲೆಂಡ್‌ ಎ ಸ್ಕ್ವಾಡ್

ರಾಬಿ ಓ'ಡೊನೆಲ್, ಟಾಮ್ ಬ್ರೂಸ್, ಜೋ ಕಾರ್ಟರ್, ಚಾಡ್ ಬೋವ್ಸ್, ಮಾರ್ಕ್ ಚಾಪ್ಮನ್, ಜಾಕೋಬ್ ಡಫಿ, ಡೇನ್ ಕ್ಲೀವರ್, ಮ್ಯಾಟ್ ಫಿಶರ್, ಕ್ಯಾಮೆರಾನ್ ಫ್ಲೆಚರ್, ಬೆನ್ ಲಿಸ್ಟರ್, ಮೈಕೆಲ್ ರಿಪ್ಪನ್, ರಚಿನ್ ರವೀಂದ್ರ, ಸೀನ್ ಸೋಲಿಯಾ, ಜೋ ವಾಕರ್, ಲೋಗನ್ ವ್ಯಾನ್ ಬೀಕ್

ನ್ಯೂಜಿಲೆಂಡ್‌ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡ ಭಾರತೀಯ

ನ್ಯೂಜಿಲೆಂಡ್‌ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡ ಭಾರತೀಯ

ಭಾರತ ಪ್ರವಾಸಕ್ಕೆ ಪ್ರಕಟವಾಗಿರುವ ನ್ಯೂಜಿಲೆಂಡ್ ಎ ತಂಡದಲ್ಲಿ ರಚಿನ್ ರವೀಂದ್ರ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆರಂಭದಿಂದಲೂ ನ್ಯೂಜಿಲೆಂಡ್ ತಂಡದ ಪರ ಆಡುತ್ತಿರುವ ರಚಿನ್ ರವೀಂದ್ರ ಅವರ ತಂದೆ ರವಿ ಕೃಷ್ಣಮೂರ್ತಿ ಮೂಲತಃ ಭಾರತದ ಬೆಂಗಳೂರಿನವರು. ಇನ್ನು ರಚಿನ್ ರವೀಂದ್ರ ನ್ಯೂಜಿಲೆಂಡ್ ಪುರುಷರ ಅಂತರ ರಾಷ್ಟ್ರೀಯ ತಂಡದ ಪರವೂ ಕಣಕ್ಕಿಳಿದಿದ್ದು, 2021ರಲ್ಲಿ ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು.

KL Rahul ಮಾಡಿದ ತ್ಯಾಗದಿಂದ ಟೀಂ‌ ಇಂಡಿಯಾ ಗೆದ್ದಿದ್ದು ಹೇಗೆ ಗೊತ್ತಾ? | *Cricket | OneIndia Kannada
ವೇಳಾಪಟ್ಟಿ

ವೇಳಾಪಟ್ಟಿ

ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳು:

ನಾಲ್ಕು ದಿನಗಳ ಪಂದ್ಯ 1: ಸೆಪ್ಟೆಂಬರ್ 1-4, ಬೆಂಗಳೂರು

ನಾಲ್ಕು ದಿನಗಳ ಪಂದ್ಯ 2: ಸೆಪ್ಟೆಂಬರ್ 8-11, ಬೆಂಗಳೂರು

ನಾಲ್ಕು ದಿನಗಳ ಪಂದ್ಯ 3: ಸೆಪ್ಟೆಂಬರ್ 15-18, ಬೆಂಗಳೂರು


ಏಕದಿನ ಪಂದ್ಯಗಳು:

ಏಕದಿನ ಪಂದ್ಯ 1: ಸೆಪ್ಟೆಂಬರ್ 22, ಚೆನ್ನೈ

ಏಕದಿನ ಪಂದ್ಯ 2: ಸೆಪ್ಟೆಂಬರ್ 25, ಚೆನ್ನೈ

ಏಕದಿನ ಪಂದ್ಯ 3: ಸೆಪ್ಟೆಂಬರ್ 27, ಚೆನ್ನೈ

Story first published: Friday, August 19, 2022, 16:08 [IST]
Other articles published on Aug 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X