ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಭಾರತದ ಶುಭ್ಮನ್ ಗಿಲ್ ಬ್ಯಾಟಿಂಗ್‌ ಕುರಿತು ಪಿಸಿಬಿ ಮಾಜಿ ಅಧ್ಯಕ್ಷ ಹೇಳಿದ್ದೇನು?

IND vs NZ ODI Series: Shubman Gill Looks Llike A Mini-Rohit Sharma Says Former PCB Chairman Ramiz Raja

ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರು ನಾಯಕ ರೋಹಿತ್ ಶರ್ಮಾ ಅವರ ಮಿನಿ ಆವೃತ್ತಿಯಂತೆ ಕಾಣುತ್ತಿದ್ದಾರೆ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ರಮೀಜ್ ರಾಜಾ ಹೇಳಿದ್ದಾರೆ.

ಶನಿವಾರ, ಜನವರಿ 21ರಂದು ರಾಯ್‌ಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಜಯ ಸಾಧಿಸಲು ಶುಭ್ಮನ್ ಗಿಲ್ ಅಜೇಯ 40 ರನ್‌ಗಳ ಕೊಡುಗೆ ನೀಡಿದರು.

ICC ODI Ranking: ಸತತ ಸೋಲಿನ ಬಳಿಕ ಅಗ್ರಸ್ಥಾನದಿಂದ ಕೆಳಗಿಳಿದ ಕಿವೀಸ್; ನಂ.1 ಸ್ಥಾನದ ಮೇಲೆ ಕಣ್ಣಿಟ್ಟ ಭಾರತ!ICC ODI Ranking: ಸತತ ಸೋಲಿನ ಬಳಿಕ ಅಗ್ರಸ್ಥಾನದಿಂದ ಕೆಳಗಿಳಿದ ಕಿವೀಸ್; ನಂ.1 ಸ್ಥಾನದ ಮೇಲೆ ಕಣ್ಣಿಟ್ಟ ಭಾರತ!

ಎರಡನೇ ಏಕದಿನ ಪಂದ್ಯದ ನಂತರ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ರಮೀಜ್ ರಾಜಾ, "ಶುಭ್ಮನ್ ಗಿಲ್ ಮಿನಿ-ರೋಹಿತ್ ಶರ್ಮಾರಂತೆ ಕಾಣುತ್ತಾರೆ. ಅವರು ಆರಂಭಿಕರಾಗಿರುವುದರಿಂದ ಹೆಚ್ಚುವರಿ ಸಮಯವನ್ನು ಹೊಂದಿದ್ದಾರೆ. ಆತನಿಗೆ ಸಾಕಷ್ಟು ಸಾಮರ್ಥ್ಯವಿದ್ದು, ಆಕ್ರಮಣಕಾರಿ ಆಟವೂ ಸಹ ಸಮಯದೊಂದಿಗೆ ಬೆಳೆಯುತ್ತದೆ. ಶುಭ್ಮನ್ ಗಿಲ್ ತಮ್ಮ ಆಟದಲ್ಲಿ ಏನನ್ನೂ ಬದಲಾಯಿಸುವ ಅಗತ್ಯವಿಲ್ಲ," ಎಂದು ತಿಳಿಸಿದರು.

ರೋಹಿತ್‌ನಂತಹ ಅತ್ಯುತ್ತಮ ಬ್ಯಾಟರ್ ಇರುವುದರಿಂದ ಗೆಲ್ಲುವುದು ಸುಲಭ

ರೋಹಿತ್‌ನಂತಹ ಅತ್ಯುತ್ತಮ ಬ್ಯಾಟರ್ ಇರುವುದರಿಂದ ಗೆಲ್ಲುವುದು ಸುಲಭ

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಮಾಜಿ ಮುಖ್ಯಸ್ಥರೂ ಆಗಿರುವ ರಮೀಜ್ ರಾಜಾ, ಭಾರತ ತಂಡದ ನಾಯಕ ರೋಹಿತ್ ಶರ್ಮಾರನ್ನು ಹೊಗಳಿದರು. ರೋಹಿತ್ ಶರ್ಮಾ ಅವರು ಹುಕ್ ಮತ್ತು ಪುಲ್ ಶಾಟ್‌ಗಳ ಅದ್ಭುತ ಬ್ಯಾಟ್ಸ್‌ಮನ್ ಎಂದು ಹೇಳಿದರು. ರಾಯ್‌ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಹಿತ್ ಶರ್ಮಾ 50 ಎಸೆತಗಳಲ್ಲಿ 51 ರನ್ ಗಳಿಸಿದರು.

"ನಾಯಕ ರೋಹಿತ್ ಶರ್ಮಾ ಅವರಂತಹ ಅತ್ಯುತ್ತಮ ಬ್ಯಾಟರ್ ಇರುವುದರಿಂದ ಭಾರತ ತಂಡಕ್ಕೆ ಬ್ಯಾಟಿಂಗ್ ಸುಲಭವಾಗಿದೆ. ಅವನು ತುಂಬಾ ಬ್ಯಾಟಿಂಗ್ ಮಾಡುತ್ತಾನೆ. ಹುಕ್ ಮತ್ತು ಪುಲ್ ಶಾಟ್‌ಗಳ ಅದ್ಭುತ ಸ್ಟ್ರೈಕರ್ ಆಗಿದ್ದರಿಂದ 108 ರನ್ ಚೇಸ್ ಸುಲಭವಾಗುತ್ತದೆ," ರಾಜಾ ಸೇರಿಸಿದರು.

ಭಾರತದ ಏಳಿಗೆಯು ಅವರ ಬೌಲಿಂಗ್‌ ಪ್ರದರ್ಶನದ ಮೇಲೆ ನಿಂತಿದೆ

ಭಾರತದ ಏಳಿಗೆಯು ಅವರ ಬೌಲಿಂಗ್‌ ಪ್ರದರ್ಶನದ ಮೇಲೆ ನಿಂತಿದೆ

ಭಾರತದ ಫ್ರಂಟ್ ಫೂಟ್ ಬ್ಯಾಟಿಂಗ್ ದುರ್ಬಲವಾಗಿ ಕಾಣುತ್ತಿದೆ ಎಂದು ಹೇಳಿದ ರಮೀಜ್ ರಾಜಾ, ಭಾರತ ಬ್ಯಾಟರ್‌ಗಳು ಫ್ರಂಟ್ ಫೂಟ್‌ನಲ್ಲಿ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಬ್ಯಾಕ್ ಫೂಟ್‌ನಿಂದ ಹೊಡೆಯುವುದು ಸುಲಭ. ಆದರೆ, ಫ್ರಂಟ್ ಫೂಟ್‌ನಲ್ಲಿ ಕೆಲ ದೋಷಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.

ಏಕದಿನ ಮತ್ತು ಟೆಸ್ಟ್‌ ಪಂದ್ಯಗಳಲ್ಲಿ ಭಾರತದ ಏಳಿಗೆಯು ಅವರ ಬೌಲಿಂಗ್‌ ಪ್ರದರ್ಶನದ ಮೇಲೆ ನಿಂತಿದೆ. ಏಕೆಂದರೆ, ಭಾರತದ ಬ್ಯಾಟಿಂಗ್ ಕ್ರಮಾಂಕ ಐತಿಹಾಸಿಕವಾಗಿ ಪ್ರಬಲವಾಗಿದೆ ಎಂದು ರಮೀಜ್ ರಾಜಾ ಅಭಿಪ್ರಾಯಪಟ್ಟರು.

ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶ

ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶ

ಸದ್ಯ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ರಾಯ್‌ಪುರದಲ್ಲಿ ಸೋಲಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ. ಸರಣಿ ಕ್ಲೀನ್‌ಸ್ವೀಪ್ ಮಾಡಬೇಕೆಂದರೆ, ಜನವರಿ 24ರಂದು ಇಂದೋರ್‌ನಲ್ಲಿ ನಡೆಯುವ ಅಂತಿಮ ಪಂದ್ಯವನ್ನು ಗೆಲ್ಲಲು ಎದುರು ನೋಡುತ್ತಿದೆ.

Story first published: Sunday, January 22, 2023, 15:38 [IST]
Other articles published on Jan 22, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X