IND vs NZ: ಈತ ಭಾರತದ ಅತ್ಯುತ್ತಮ ವೈಟ್‌ಬಾಲ್ ವಿಕೆಟ್ ಕೀಪರ್ ಎಂದೆನಿಸಲ್ಲ; ಸೈಮನ್ ಡೌಲ್

ರಿಷಭ್ ಪಂತ್ ಅವರು ಭಾರತದ ಅತ್ಯುತ್ತಮ ವಿಕೆಟ್ ಕೀಪರ್ ವಿಕೆಟ್ ಕೀಪರ್-ಬ್ಯಾಟರ್ ಆಗಲು ಸಾಧ್ಯವಿಲ್ಲ ಎಂದು ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಸೈಮನ್ ಡೌಲ್ ಹೇಳಿದ್ದಾರೆ.

ಸಂಜು ಸ್ಯಾಮ್ಸನ್ ಭಾರತದ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಹೆಚ್ಚಿನ ಅವಕಾಶಗಳಿಗೆ ಅರ್ಹರಾಗಿದ್ದಾರೆ. ರಿಷಭ್ ಪಂತ್ ಟೆಸ್ಟ್‌ನಲ್ಲಿ ಇತರರಿಗಿಂತ ಮೈಲುಗಳಷ್ಟು ಮುಂದಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಏಕದಿನ ಮತ್ತು ಟಿ20 ಸ್ವರೂಪಗಳಲ್ಲಿ ಅವರ ಸಾಮರ್ಥ್ಯದ ಬಗ್ಗೆ ಅನುಮಾನಗಳಿವೆ ಎಂದು ಸೈಮನ್ ಡೌಲ್ ಸಂದೇಹ ವ್ಯಕ್ತಪಡಿಸಿದರು.

ಐಸಿಸಿ ಟೂರ್ನಿ ಬಹಿಷ್ಕರಿಸುವ ಧಮ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಿಲ್ಲ: ಪಾಕ್ ಮಾಜಿ ಕ್ರಿಕೆಟಿಗಐಸಿಸಿ ಟೂರ್ನಿ ಬಹಿಷ್ಕರಿಸುವ ಧಮ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಿಲ್ಲ: ಪಾಕ್ ಮಾಜಿ ಕ್ರಿಕೆಟಿಗ

ಸಂಜು ಸ್ಯಾಮ್ಸನ್ ಪದೇ ಪದೇ ಭಾರತ ತಂಡದ ಆಡುವ ಬಳಗದಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದು, ತಂಡಕ್ಕೆ ಆಯ್ಕೆಯಾಗಿದ್ದರೂ ಕೇರಳದ ವಿಕೆಟ್‌ಕೀಪರ್-ಬ್ಯಾಟರ್‌ನನ್ನು ಬೆಂಚ್ ಕಾಯಿಸುವಂತೆ ಮಾಡಲಾಗುತ್ತಿದೆ. ಭಾರತ ತಂಡದ ಮ್ಯಾನೇಜ್‌ಮೆಂಟ್‌ನ ನಿರ್ಧಾರವನ್ನು ಅವರ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಟಿ20 ಸರಣಿಯಲ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಪಂತ್

ಟಿ20 ಸರಣಿಯಲ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಪಂತ್

ನ್ಯೂಜಿಲೆಂಡ್‌ನ ಏಕದಿನ ಮತ್ತು ಟಿ20 ಪ್ರವಾಸ ಎರಡಕ್ಕೂ ಸಂಜು ಸ್ಯಾಮ್ಸನ್‌ರನ್ನು ಆಯ್ಕೆ ಮಾಡಲಾಯಿತು. ಆದರೆ ರಾಜಸ್ಥಾನ ರಾಯಲ್ಸ್ ನಾಯಕನನ್ನು ಟಿ20 ಸರಣಿಯಲ್ಲಿ ಆಡುವ ಬಳಗದಿಂದ ದೂರವಿಡಲಾಯಿತು. ಆ ಸರಣಿಯಲ್ಲಿ ಫಾರ್ಮ್‌ನಲ್ಲಿಲ್ಲದ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಅವಕಾಶಗಳನ್ನು ಪಡೆದರು.

3 ಪಂದ್ಯಗಳ ಟಿ20 ಸರಣಿಯಲ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಿಷಭ್ ಪಂತ್, ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದು, 2 ಇನ್ನಿಂಗ್ಸ್‌ಗಳಲ್ಲಿ ಕೇವಲ 17 ರನ್ ಗಳಿಸಿದರು.

2022ರಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತಕ್ಕೆ ಸ್ಥಿರವಾದ ರನ್ ಗಳಿಸಿದ್ದಾರೆ

2022ರಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತಕ್ಕೆ ಸ್ಥಿರವಾದ ರನ್ ಗಳಿಸಿದ್ದಾರೆ

ಇನ್ನು ರಿಷಭ್ ಪಂತ್ 2022ರಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತಕ್ಕೆ ಸ್ಥಿರವಾದ ರನ್ ಗಳಿಸುವವರಾಗಿದ್ದರು. ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ವಿಜೇತ ಶತಕ ಬಾರಿಸಿದ ನಂತರ, ನ್ಯೂಜಿಲೆಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೆ ಆಯ್ಕೆ ಮಾಡಲಾಯಿತಾದರೂ, ಕೇವಲ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಇದೇ ವೇಳೆ ಮೊದಲ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಯಿತು ಮತ್ತು ಅವರು ನಿರ್ಣಾಯಕ 36 ರನ್ ಗಳಿಸಿದರು. ಆದರೆ, ಆಲ್‌ರೌಂಡರ್ ದೀಪಕ್ ಹೂಡಾ ಅವರಲ್ಲಿ ಹೆಚ್ಚುವರಿ ಬೌಲಿಂಗ್ ಆಯ್ಕೆ ಬಯಸಿದ್ದರಿಂದ, ಭಾರತ ತಂಡ ಸಂಜು ಸ್ಯಾಮ್ಸನ್ ಅವರನ್ನು 2ನೇ ಏಕದಿನ ಪಂದ್ಯಕ್ಕಾಗಿ ಆಡುವ 11ರ ಬಳಗದಿಂದ ಕೈಬಿಡಲಾಯಿತು.

ರಿಷಭ್ ಪಂತ್ ಕೇವಲ 30 ಏಕದಿನ ಪಂದ್ಯಗಳನ್ನು ಆಡಿದ್ದಾರೆ

ರಿಷಭ್ ಪಂತ್ ಕೇವಲ 30 ಏಕದಿನ ಪಂದ್ಯಗಳನ್ನು ಆಡಿದ್ದಾರೆ

"ರಿಷಭ್ ಪಂತ್ ಅವರು ಕೇವಲ 30 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 35 ಸರಾಸರಿ ಹೊಂದಿದ್ದಾರೆ. ಆದರೆ ಕಳೆದ 11 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ 60ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅದು ಕಡಿಮೆ ಎಂದು ನಾನು ಭಾವಿಸುವುದಿಲ್ಲ. ಒಬ್ಬ ವಿಕೆಟ್ ಕೀಪರ್ ಆಗಿ ಅವಕಾಶಕ್ಕೆ ಅರ್ಹರು ಎಂದು ನಾನು ಭಾವಿಸುತ್ತೇನೆ," ಎಂದು ಸೈಮನ್ ಡೌಲ್ ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.

ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಚರ್ಚೆಯು ತನಗೆ ಆಸಕ್ತಿಯನ್ನು ಹೊಂದಿದೆ ಎಂದು ಹೇಳಿದ ಸೈಮನ್ ಡೌಲ್, ಪಂತ್ ಅತ್ಯುತ್ತಮ ಟೆಸ್ಟ್ ಆಟಗಾರ ಮತ್ತು ಅವರು ವಿಕೆಟ್‌ಕೀಪರ್-ಬ್ಯಾಟರ್ ಆಗಿ ಟೆಸ್ಟ್‌ನಲ್ಲಿ ಫಾರ್ಮ್‌ನಲ್ಲಿದ್ದಾರೆ. ಆದರೆ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅವರ ಸಾಮರ್ಥ್ಯದ ಬಗ್ಗೆ ತನಗೆ ಮನವರಿಕೆಯಾಗಿಲ್ಲ ಎಂದರು.

ರಿಷಭ್ ಪಂತ್ 2022ರಲ್ಲಿ ಏಕದಿನ ಪಂದ್ಯಗಳಲ್ಲಿ ಉತ್ತಮ ವರ್ಷವನ್ನು ಹೊಂದಿದ್ದು, 11 ಪಂದ್ಯಗಳಲ್ಲಿ ಒಂದು ಶತಕ ಮತ್ತು 2 ಅರ್ಧ ಶತಕ ಸೇರಿದಂತೆ 322 ರನ್ ಗಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, November 29, 2022, 18:30 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X