ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ನಿರಾಸೆ ಮೂಡಿಸಿದ ಚೇತೇಶ್ವರ್ ಪೂಜಾರ: ಕಳಪೆ ಸಾಧನೆಗೆ ಕಾರಣ ವಿವರಿಸಿದ ಮಾಜಿ ಕೋಚ್

Ind vs Nz: Sanjay Bangar explains what is the 2 reasons behind Pujara failure in Mumbai Test

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಮತ್ತೊಮ್ಮೆ ಭಾರೀ ನಿರಾಸೆ ಅನುಭವಿಸಿದ್ದಾರೆ. ಚೇತೇಶ್ವರ್ ಪೂಜಾರ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ತಂಡಕ್ಕೆ ನೆರವಾಗುವಲ್ಲಿ ವಿಫಲವಾಗಿದ್ದಾರೆ. ಉದಯ ಎಸೆತಗಳನ್ನು ಎದುರಿಸಿದ ಚೇತೇಶ್ವರ್ ಪೂಜಾರ ಶೂನ್ಯ ಸುತ್ತಿ ಫೆವಿಲಿಯನ್ ಸೇರಿಕೊಂಡಿದ್ದಾರೆ. ಕಿವಿಸ್ ಸ್ಪಿನ್ನರ್ ಅಜಜ್ ಪಟೇಲ್ ಎಸೆತವನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ ಪೂಜಾರ ಫೆವಿಲಿಯನ್‌ಗೆ ಸೇರಿದ್ದಾರೆ.

ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರಾಗೆ ಅಜಾಜ್ ಲೂಪಿ ಎಸೆತವೊಂದನ್ನು ಹಾಕಿದರು. ಇದಕ್ಕೆ ಪೂಜಾರ ಸಾಮಾನ್ಯವಾಗಿ ಸ್ಪಿನ್ನರ್‌ಗಳ ಎಸೆತಕ್ಕೆ ಆಡುವಂತೆಯೇ ಆಡುವ ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ಅವರು ಮುನ್ನುಗ್ಗಿ ಹೋಗಿ ಫ್ಲಿಕ್ ಮಾಡುವ ಯೋಜನೆ ಹಾಕಿಕೊಂಡಿದ್ದರು. ಆದರೆ ಆ ಎಸೆತ ಅವರನ್ನು ವಂಚಿಸಿ ಆಪ್ ಸ್ಟಂಪ್‌ಗೆ ಬಡಿದಿತ್ತು. ಈ ಮೂಲಕ ಚೇತೇಶ್ವರ್ ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ 10ನೇ ಶೂನ್ಯ ಸುತ್ತಿದರು. ಇದು ಭಾರತದಲ್ಲಿ ಪೂಜಾರ ಅವರ ನಾಲ್ಕನೇ ಶೂನ್ಯ ಸಂಪಾದನೆಯಾಗಿದ್ದರೆ ಈ ವರ್ಷದ ಎರಡನೆಯದ್ದಾಗಿದೆ. ನ್ಯೂಜೊಲೆಂಡ್ ವಿರುದ್ಧ ಮೊದಲ ಬಾರಿಗೆ ಸೊನ್ನೆಗೆ ವಿಕೆಟ್ ಕಳೆದುಕೊಂಡಿದ್ದಾರೆ ಪೂಜಾರ.

ಜಡೇಜಾ ಸೇರಿ ಮೂವರು ಪ್ರಮುಖರು ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಿಂದ ಹೊರಕ್ಕೆ!ಜಡೇಜಾ ಸೇರಿ ಮೂವರು ಪ್ರಮುಖರು ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಿಂದ ಹೊರಕ್ಕೆ!

ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಮಾಜಿ ಕೋಚ್ ಸಂಜಯ್ ಬಂಗಾರ್ ಪುಜಾರ ವಿಕೆಟ್ ಕಳೆದುಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದರು. ಪೂಜಾರ ಅಜಾಜ್ ಅವರ ಎಸೆತ ಪೂರ್ಣಗೊಳ್ಳುವ ಮುನ್ನವೇ ಎಡವಿದರು. ಅವರು ಸರದಿಯ ವಿರುದ್ಧ ಆಡಲು ನೋಡುತ್ತಿದ್ದರು ಎಂದು ಬಂಗಾರ್ ಹೇಳಿದ್ದಾರೆ.

"ಇಲ್ಲಿ ಅವರು ಪಿಚ್‌ನಲ್ಲಿ ಚೆಂಡು ತಿರುವು ಹಾಗೂ ಫುಲ್ಲರ್ ಲೆಂತ್‌ಗೆ ಮುನ್ನವೇ ಮುನ್ನುಗ್ಗಲು ಪ್ರಯತ್ನಿಸಿದ್ದರು. ನಮ್ಮ ಅವಧಿಯಲ್ಲಿ ಕೂಡ ಅಜಾಜ್ ಪಟೇಲ್ ಅವರದ್ದು ಫುಲ್ಲರ್ ಎಸೆತಗಳು. ಅವಯಗಳು ಡ್ರೈವ್ ಮಾಡಿಕೊಂಡು ಬರುತ್ತವೆ ಎಂಬುದನ್ನು ಉಲ್ಲೇಖಿಸಿದ್ದೆವು. ಆದರೆ ಅದಕ್ಕೆ ಅವರು ಮುನ್ನುಗ್ಗುವ ಪ್ರಯತ್ನ ಮಾಡುವ ಮೂಲಕ ಎಡವಟ್ಟು ಮಾಡಿಕೊಂಡರು. ಇದರಿಂದಾಗಿ ಅವರು ವಿಕೆಟ್ ಕಲೆದುಕೊಳ್ಳಬೇಕಾಯಿತು" ಎಂದಿದ್ದಾರೆ ಸಂಜಯ್ ಬಂಗಾರ್.

ಭಾರತ vs ನ್ಯೂಜಿಲೆಂಡ್‌: ದ್ರಾವಿಡ್ ಬೌಲಿಂಗ್‌ಗೆ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರೋ ವಿಡಿಯೋ ವೈರಲ್ಭಾರತ vs ನ್ಯೂಜಿಲೆಂಡ್‌: ದ್ರಾವಿಡ್ ಬೌಲಿಂಗ್‌ಗೆ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರೋ ವಿಡಿಯೋ ವೈರಲ್

ಈ ಪಮದ್ಯದ ಮೂಲಕ ಚೇತೇಶ್ವರ್ ಪೂಜಾರ ಅವರು 41ನೇ ಇನ್ನಿಂಗ್ಸ್‌ನಲ್ಲಿಯೂ ಶತಕ ಗಳಿಸಲು ವಿಫಲವಾದರು. ಪೂಜಾರ ತಮ್ಮ ಕೊನೆಯ ಶತಕವನ್ನು 2019ರ ಜನವರಿಯಲ್ಲಿ ಸಿಡ್ನಿಯಲ್ಲಿ ಬಾರಿಸಿದ್ದರು. ಈ ಅವಧಿಯಲ್ಲಿ ಅವರ ಸರಾಸರಿ ಸ್ಕೋರ್ ಕೂಡ ವೃತ್ತಿ ಜೀವನದ ಕನಿಷ್ಠಕ್ಕೆ ಬಂದಿದೆ. 44.26ರರಷ್ಟು ಸರಾಸರಿ ಹೊಂದಿದ್ದಾರೆ ಈ ಅನುಭವಿ ಆಟಗಾರ.

ಟೀಮ್ ಇಂಡಿಯಾ: ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಜಯಂತ್ ಯಾದವ್, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್

ನ್ಯೂಜಿಲೆಂಡ್‌: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೇರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೋಮರ್ವಿಲ್ಲೆ, ಅಜಾಜ್ ಪಟೇಲ್

Story first published: Friday, December 3, 2021, 22:32 [IST]
Other articles published on Dec 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X