ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ಮುರಳೀಧರನ್ ವಿಶ್ವದಾಖಲೆ ಮುರಿಯಬಲ್ಲ ಬೌಲರ್: ಭಾರತದ ಬೌಲರ್ ಬಗ್ಗೆ ಬಂಗಾರ್ ಮಾತು

Ind vs Nz: Sanjay Bangar Praises R Ashwin said He can challenge Muralitharans record

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ನಾಲ್ಕನೇ ದಿನ ಪಂದ್ಯ ಮುಕ್ತಾಯವಾಗಿದ್ದು ಟೀಮ್ ಇಂಡಿಯಾ 372 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಜಯಂತ್ ಯಾದವ್ ಬೌಲಿಂಗ್ ದಾಳಿಗೆ ನಲುಗಿರುವ ಕಿವೀಸ್ ಪಡೆ ಭಾರತಕ್ಕೆ ಸುಲಭ ತುತ್ತಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದ ಆರ್ ಅಶ್ವಿನ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ನಾಲ್ಕು ವಿಕೆಟ್ ಪಡೆದು ಪಂದ್ಯದಲ್ಲಿ 8 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಆರ್ ಅಶ್ವಿನ್ ಅವರ ಈ ಭರ್ಜರಿ ಪ್ರದರ್ಶನದ ನಂತರ ಮಾಜಿ ಕೋಚ್ ಸಂಜಯ್ ಬಂಗಾರ್ ಮಾತನಾಡಿದ್ದು ಭಾರತೀಯ ಅನುಭವಿ ಬೌಲರ್ ಬಗ್ಗೆ ಭಾರೀ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಆರ್ ಅಶ್ವಿನ್ ಫಿಟ್‌ನೆಸ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ಟೆಸ್ಟ್‌ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ವಿಶ್ವ ದಾಖಲೆ ಬರೆದಿರುವ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ದಾಖಲೆಯನ್ನು ಮುರಿಯುವ ಸಾಮರ್ಥ್ಯವಿದೆ ಎಂದಿದ್ದಾರೆ.

ಭಾರತ vs ನ್ಯೂಜಿಲೆಂಡ್: ಕಿವೀಸ್ ವಿರುದ್ಧ 372 ರನ್‌ಗಳ ಭಾರೀ ಅಂತರದಿಂದ ಗೆದ್ದು ಸರಣಿ ವಶಕ್ಕೆ ಪಡೆದ ಟೀಮ್ ಇಂಡಿಯಾಭಾರತ vs ನ್ಯೂಜಿಲೆಂಡ್: ಕಿವೀಸ್ ವಿರುದ್ಧ 372 ರನ್‌ಗಳ ಭಾರೀ ಅಂತರದಿಂದ ಗೆದ್ದು ಸರಣಿ ವಶಕ್ಕೆ ಪಡೆದ ಟೀಮ್ ಇಂಡಿಯಾ

ಆರ್ ಅಶ್ವಿನ್ ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಪರವಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು. ಹರ್ಭಜನ್ ಸಿಂಗ್ ಅವರನ್ನು ಆರ್ ಅಶ್ವಿನ್ ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟದ ಅಂತ್ಯದಲ್ಲಿ ಆರ್ ಅಶ್ವಿನ್ ಒಟ್ಟು 7 ವಿಕೆಟ್ ಪಡೆದುಕೊಂಡಿದ್ದು 2ನೇ ಸ್ಥಾನದಲ್ಲಿರುವ ಕಪಿಲ್ ದೇವ್ ಅವರ ಸಾಧನೆಗಿಂತ ಕೇವಲ 8 ವಿಕೆಟ್‌ಗಳಷ್ಟು ಹಿಂದಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ನ ಸಂವಾದದಲ್ಲಿ ಭಾಗಿಯಾಗಿದ್ದ ಸಂಜಯ್ ಬಂಗಾರ್ ಅನುಭವಿ ಬೌಲರ್ ಆರ್ ಅಶ್ವಿನ್ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ತವರಿನಲ್ಲಿ 300 ವಿಕೆಟ್ ಪಡೆಯಲು ಅಶ್ವಿನ್‌ಗೆ ಇನ್ನು ಕೇವಲ ಒಂದು ವಿಕೆಟ್ ಪಡೆಯುವ ಅಗತ್ಯವಿದೆ. ಈ ಬಗ್ಗೆ ಸಂಜಯ್ ಬಂಗಾರ್ ಬಳಿ ಕೇಳಿದಾಗ ಅದಕ್ಕೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಶತಕ ಯಾವಾಗಲೂ ನೆನಪಿನಲ್ಲಿರುತ್ತದೆ: ಮುಂಬೈ ಟೆಸ್ಟ್ ಶತಕದ ಬಗ್ಗೆ ಮಯಾಂಕ್ ಅಗರ್ವಾಲ್ ಮಾತುಈ ಶತಕ ಯಾವಾಗಲೂ ನೆನಪಿನಲ್ಲಿರುತ್ತದೆ: ಮುಂಬೈ ಟೆಸ್ಟ್ ಶತಕದ ಬಗ್ಗೆ ಮಯಾಂಕ್ ಅಗರ್ವಾಲ್ ಮಾತು

"ಅವರು ಫಿಟ್ ಆಗಿ ಸುದೀರ್ಘ ಕಾಲ ಮುಂದುವರಿದರೆ ಅವರು ಮುರಳೀಧರನ್ ಅವರ ದಾಖಲೆಗೆ ಸವಾಲೊಡ್ಡಲಿದ್ದಾರೆ. ಯಾಕೆಂದರೆ ಸ್ವತಃ ಮುರಳೀಧರನ್ ಅವರೇ ಈ ಬಗ್ಗೆ ತನ್ನ ದಾಖಲೆಯನ್ನು ಯಾರಾದರೂ ಮುರಿಯುವವರು ಇದ್ದರೆ ಅದು ಆರ್ ಅಶ್ವಿನ್ ಎಂದು ಹೇಳಿದ್ದಾರೆ" ಎಂದು ಸಂಜಯ್ ಬಂಗಾರ್ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಆರ್ ಅಶ್ವಿನ್ ಅವರ ತಡವಾಗಿ ಏರುಗತಿಯನ್ನು ಕಂಡರು ಎಂದು ಹೇಳಿದ್ದಾರೆ.

ಆದರೆ ಸದ್ಯ 426 ವಿಕೆಟ್ ಹೊಂದಿರುವ ಆರ್ ಅಶ್ವಿನ್‌ಗೆ ಮುತ್ತಯ್ಯ ಮುರಳೀಧರನ್ ಅವರ 800 ವಿಕೆಟ್‌ಗಳ ದಾಖಲೆ ಇನ್ನೂ ಬಹಳ ಬಹಳ ದೂರವಿದೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದಿರುವ ದಾಖಲೆ ಹೊಂದಿರುವ ಅನಿಲ್ ಕುಂಬ್ಳೆ ಅವರ 619 ಟೆಸ್ಟ್ ವಿಕೆಟ್‌ಗಳ ದಾಖಲೆಯ ಮೇಲೆ ಆರ್ ಅಶ್ವಿನ್ ಕಣ್ಣಿಡಬಹುದು.

ಮುಂಬೈ ಟೆಸ್ಟ್ ನಂತರ ದ. ಆಪ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಅನುಭವಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತಮುಂಬೈ ಟೆಸ್ಟ್ ನಂತರ ದ. ಆಪ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಅನುಭವಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ

ಟೀಮ್ ಇಂಡಿಯಾ ಆಡುವ ಬಳಗ: ಮಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್

ಬೆಂಚ್: ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್

ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೇರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಕೈಲ್ ಜೇಮಿಸನ್, ರಚಿನ್ ರವೀಂದ್ರ, ಟಿಮ್ ಸೌಥಿ, ವಿಲಿಯಂ ಸೋಮರ್ವಿಲ್ಲೆ, ಅಜಾಜ್ ಪಟೇಲ್

ಬೆಂಚ್: ಕೇನ್ ವಿಲಿಯಮ್ಸನ್, ಮಿಚೆಲ್ ಸ್ಯಾಂಟ್ನರ್, ನೀಲ್ ವ್ಯಾಗ್ನರ್, ಗ್ಲೆನ್ ಫಿಲಿಪ್ಸ್

ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ನಂತರ ವೈರಲ್ ಆದ ವಿಶೇಷ ಫೋಟೋ | Oneindia Kannada

Story first published: Monday, December 6, 2021, 11:05 [IST]
Other articles published on Dec 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X