ಮೊದಲ ಮೀಟಿಂಗ್‌ನಲ್ಲಿ ರೋಹಿತ್ ಶರ್ಮಾ ಹೇಳಿದ ಆ ಸ್ಪೂರ್ತಿದಾಯಕ ಮಾತು ಬಹಿರಂಗ

ಟಿ20 ವಿಶ್ವಕಪ್‌ನ ಅಂತ್ಯದ ನಂತರ ಟೀಮ್ ಇಂಡಿಯಾದ ಟಿ20 ನಾಯಕತ್ವದ ಜವಾಬ್ಧಾರಿ ರೋಹಿತ್ ಶರ್ಮಾ ಹೆಗಲೇರಿದೆ. ಮೊದಲ ಸರಣಿಯಲ್ಲಿ ರೋಹಿತ್ ಶರ್ಮಾ ಅದ್ಭುತವಾದ ಪ್ರದರ್ಶನ ನೀಡಿದ್ದಲ್ಲದೆ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ರೋಹಿತ್ ಶರ್ಮಾ ಈ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ಸರಣಿ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ತಂಡದ ಮೀಟಿಂಗ್‌ನಲ್ಲಿ ಏನು ಹೇಳಿದ್ದರು ಎಂಬುದು ಅಭಿಮಾನಿಗಳಲ್ಲಿ ಕುತೂಹಲವಿದ್ದೇ ಇರುತ್ತದೆ. ಇದಕ್ಕೆ ಈಗ ಉತ್ತರ ದೊರೆತಿದೆ.

ಈ ಬಗ್ಗೆ ಸ್ವತಃ ರೋಹಿತ್ ಶರ್ಮಾ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ಮೊದಲ ತಂಡದ ಮೀಟಿಂಗ್‌ನಲ್ಲಿ ಆಟಗಾರರಲ್ಲಿ "ಒತ್ತಡವನ್ನು ಗ್ರಹಿಸಿಕೊಳ್ಳುವ ಅಥವಾ ತಂಡದ ಪರವಾಗಿ ಅಪಾಯಗಳನ್ನು ತೆಗೆದುಕೊಳ್ಳುವ ಆಟಗಾರರ ಪ್ರಯತ್ನಗಳು ಯಾವಾಗಲೂ ನಮ್ಮ ಗಮನಕ್ಕೆ ಬರುತ್ತದೆ. ಹೀಗಾಗಿ ನಿರಾಳವಾಗಿ ಆಡುವಂತೆ ಸಹ ಆಟಗಾರರಿಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದಾಗಿ ವಿವರಿಸಿದ್ದಾರೆ. ನಾಯಕನಾದವರು ತಂಡದಲ್ಲಿರುವ ಆಟಗಾರರಿಗೆ ಸಾಕಷ್ಟು ಬೆಂಬಲವನ್ನು ನೀಡಬೇಕು ಎಂದಿದ್ದಾರೆ ರೋಹಿತ್.

ಭಾರತ vs ನ್ಯೂಜಿಲೆಂಡ್‌: ಟಿ20 ಸರಣಿ ವೈಟ್‌ವಾಷ್ ಮಾಡಿ ಸೇಡು ತೀರಿಸಿಕೊಂಡ ಟೀಮ್ ಇಂಡಿಯಾಭಾರತ vs ನ್ಯೂಜಿಲೆಂಡ್‌: ಟಿ20 ಸರಣಿ ವೈಟ್‌ವಾಷ್ ಮಾಡಿ ಸೇಡು ತೀರಿಸಿಕೊಂಡ ಟೀಮ್ ಇಂಡಿಯಾ

"ನಾವು ತಣಡದ ಮೊದಲ ಮೀಟಿಂಗ್ ಮಾಡಿದಾಗ ಎಲ್ಲಾ ಆಟಗಾರರಿಗೆ ಒಂದು ಸ್ಪಷ್ಟವಾದ ಸಂದೇಶವನ್ನು ರವಾನಿಸಿದ್ದೆವು. ಅದೇನೆಂದರೆ ನೀವೇನಾದರೂ ತಂಡಕ್ಕಾಗಿ ವಿಶೇಷವಾದದ್ದು ಮಾಡಬೇಕೆಂದಯ ಪ್ರಯತ್ನ ಪಟ್ಟರೆ ಅದು ಖಂಡಿತವಾಗಿಯೂ ಪರಿಗಣನೆಗೆ ಬರುತ್ತದೆ. ಒತ್ತಡವನ್ನು ತಡೆದುಕೊಳ್ಳಲು ನೀವು ನಡೆಸುವ ಪ್ರಯತ್ನ ಹಾಗೂ ತಂಡಕ್ಕಾಗಿ ಏನಾದರೂ ಮಾಡಬೇಕೆಂಬ ನಿಮ್ಮ ಪ್ರಯತ್ನಗಳು ನಮ್ಮ ಗಮನಕ್ಕೆ ಬಂದೇ ಬರುತ್ತದೆ. ಇದು ನಾಯಕ ಹಾಗೂ ಕೋಚ್ ಆಗಿ ತಂಡಕ್ಕಾಗಿ ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂಬುದು ಅರಿತುಕೊಳ್ಳುವುದು ನಮ್ಮ ಜವಾಬ್ಧಾರಿಯಾಗಿರುತ್ತದೆ. ನೀವು ಮುನ್ನುಗ್ಗಿ ಹಾಗೂ ನಿಮ್ಮ ಅವಕಾಶವನ್ನು ಬಳಸಿಕೊಳ್ಳಿ" ಎಂದು ರೋಹಿತ್ ಶರ್ಮಾ ತ,ಡದ ಮೀಟಿಂಗ್‌ನಲ್ಲಿ ಹೇಳಿರುವುದನ್ನು ತಿಳಿಸಿದ್ದಾರೆ.

SMAT 2021 ಫೈನಲ್: ಇಂದು ಕರ್ನಾಟಕ-ತಮಿಳುನಾಡು ಮುಖಾಮುಖಿSMAT 2021 ಫೈನಲ್: ಇಂದು ಕರ್ನಾಟಕ-ತಮಿಳುನಾಡು ಮುಖಾಮುಖಿ

"ನಿಮ್ಮ ಪ್ರಯತ್ನಗಳು ಸಫಲವಾದರೆ ಒಳ್ಳೆಯದು. ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ. ಯಾಕೆಂದರೆ ನೀವು ಅದನ್ನು ತಂಡಕ್ಕಾಗಿ ಮಾಡಿದ್ದೀರಿ. ತಂಡಕ್ಕಾಗಿ ಯಾರು ಏನು ಮಾಡಿದರೂ ಅದು ಯಾವಾಗಲೂ ಉತ್ತಮ ಸಂಕೇತವಾಗಿದೆ. ನೀವು ಅಂತಾ ಆಲೋಚನೆಯನ್ನು ಯಾವಾಗಲೂ ಹೊಂದಿರಬೇಕು. ಆಮೂಲಕವೇ ನಾವು ಸ್ಥಿರವಾದ ಪ್ರದರ್ಶನ ನೀಡುತ್ತಾ ಸಾಗಬೇಕಿದೆ" ಎಂದು ರೋಹಿತ್ ಶರ್ಮಾ ಆಟಗಾರರಿಗೆ ಸ್ಪೂರ್ತಿ ನೀಡುವಂತಾ ಮಾಡುಗಳನ್ನು ಆಡಿದ್ದರು.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡ ನಂತರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಮಾತನ್ನು ಹೇಳಿದ್ದಾರೆ. ಭಾನುವಾರ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 73 ರನ್‌ಗಳ ಅಂತರದಿಂದ ಬೃಹತ್ ಗೆಲುವು ದಾಖಲಿಸಿತು. ಟಿ20 ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಸಿದ ನಂತರ ಟೀಮ್ ಇಂಡಿಯಾದ ಸತತ ಆರನೇ ಗೆಲುವು ಇದಾಗಿದೆ.

Video: ದೀಪಕ್ ಚಹಾರ್‌ ಸಿಡಿಸಿದ ಸಿಕ್ಸರ್‌ಗೆ, ಸೆಲ್ಯೂಟ್ ಹೊಡೆದ ರೋಹಿತ್ ಶರ್ಮಾ!Video: ದೀಪಕ್ ಚಹಾರ್‌ ಸಿಡಿಸಿದ ಸಿಕ್ಸರ್‌ಗೆ, ಸೆಲ್ಯೂಟ್ ಹೊಡೆದ ರೋಹಿತ್ ಶರ್ಮಾ!

ಇನ್ನು ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ತಂಡದಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರಿರುವಾಗ ಆಡುವ ಬಳಗಕ್ಕೆ XI ಆಟಗಾರರನ್ನು ಅಂತಿಮಗೊಳಿಸುವುದು ಬಹಳ ಕಠಿಣವಾದ ಸಂಗತಿ ಎಂದಿದ್ದಾರೆ. "ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ತಂಡದಲ್ಲಿ ಆಡುವ ಬಳಗದಿಂದ ಹೊರಗಿರುವ ಹೆಚ್ಚಿನ ಆಟಗಾರರು ನಿಜಕ್ಕೂ ಅತ್ಯುತ್ತಮ ಸಾಧನೆಗಳನ್ನು ಮಾಡಿದವರೇ ಆಗಿರುತ್ತಾರೆ. ಹೆಚ್ಚಿನ ಆಟಗಾರರಿಗೆ ಆಡುವ ಬಳಗದಲ್ಲಿ ಅವಕಾಶ ನೀಡಬೇಕೆಂದಿದ್ದರೂ XI ಆಟಗಾರರಿಗಷ್ಟೇ ಆ ಅವಕಾಶ ದೊರೆಯುತ್ತದೆ. ಇದು ಬಹಳ ಕಠಿಣವಾದ ಸಂಗತಿದೆ. ಆದರೆ ಯಾವಾಗಲೂ ಆಡುವವ ಬಳಗದಲ್ಲಿರುವ 11 ಆಟಗಾರರು ಯಾವುದೇ ಹೊರೆಯಿಲ್ಲದೆ ಆಡುವುದನ್ನು ನಾವು ಬಯಸುತ್ತೇವೆ" ಎಂದಿದ್ದಾರೆ ರೋಹಿತ್ ಶರ್ಮಾ.

ಕಡೇ ಓವರ್ನಲ್ಲಿ Deepak chahar ಸಿಡಿಸಿದ್ದು ಎಷ್ಟು ಗೊತ್ತಾ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Monday, November 22, 2021, 13:19 [IST]
Other articles published on Nov 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X