'ಪ್ರೌಡ್ ಆಫ್ ಯು': ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್ ಐಯ್ಯರ್ ಬೆನ್ನು ತಟ್ಟಿದ ಪಾಂಟಿಂಗ್

Shreyas Iyer ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ವಿಶೇಷ ಕ್ಷಣಗಳು | Oneindia Kannada

ಕಾನ್ಪುರ, ನವೆಂಬರ್ 25: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಶ್ರೇಯಸ್ ಐಯ್ಯರ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಸೀಮಿತ ಓವರ್‌ಗಳಲ್ಲಿ 2017ರಲ್ಲಿಯೇ ಐಯ್ಯರ್ ಭಾರತ ತಂಡವನ್ನು ಪ್ರತಿನಿಧಿಸಿದ್ದರೂ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಈಗ ಆ ಅವಕಾಶ ಪಡೆದಿದ್ದಾರೆ ಐಯ್ಯರ್. ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯದ ಸರಣಿಯ ಮೊದಲ ಪಂದ್ಯದಲ್ಲಿ ಐಯ್ಯರ್ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರಿಂದ ಟೆಸ್ಟ್ ಕ್ಯಾಪ್ ಪಡೆದಿದ್ದಾರೆ. ಯುವ ಆಟಗಾರನ ಈ ಪದಾರ್ಪಣೆಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಶುಭ ಹಾರೈಸಿದ್ದಾರೆ.

ಶ್ರೇಯಸ್ ಐಯ್ಯರ್ ಭಾರತದ ಪರವಾಗಿ ಟೆಸ್ಟ್ ಕ್ಯಾಪ್ ಧರಿಸಿದ 303ನೇ ಆಟಗಾರನಾಗಿದ್ದಾರೆ. ಮತ್ತೊಂದು ವಿಶೇಷವೆಂದರೆ ನ್ಯೂಜಿಲೆಂಡ್ ವಿರುದ್ಧ 18 ವರ್ಷಗಳ ನಂತರ ಭಾರತೀಯ ಆಟಗಾರನೋರ್ವ ಟೆಸ್ಟ್‌ಗೆ ಪದಾರ್ಪಣೆ ಮಾಡಿದಂತಾಗಿದೆ. 2003ರಲ್ಲಿ ಯುವರಾಜ್ ಸಿಂಗ್ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ ಯಾವ ಭಾರತೀಯ ಆಟಗಾರ ಕೂಡ ಕಿವೀಸ್ ಪಡೆಯ ವಿರುದ್ಧ ಟೆಸ್ಟ್ ಮಾದರಿಯನ್ನು ಆರಂಭಿಸಿರಲಿಲ್ಲ.

ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್: ಐಸಿಸಿಯಿಂದ ಅಭಿನಂದನೆಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್: ಐಸಿಸಿಯಿಂದ ಅಭಿನಂದನೆ

ಇನ್ನು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿರುವ ರಿಕಿ ಪಾಂಟಿಂಗ್ ಹಾಗೂ ನಾಯಕನಾಗಿದ್ದ ಶ್ರೇಯಸ್ ಐಯ್ಯರ್ ಮರ್ಧಯೆ ಅತ್ಯುತ್ತಮ ಬಾಂಧವ್ಯವಿದೆ. ಇದೇ ಕಾರಣಕ್ಕೆ ರಿಕಿ ಪಾಂಟಿಂಗ್ ಶ್ರೇಯಸ್ ಐಯ್ಯರ್‌ಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಶ್ರೇಯಸ್ ಸಾಧನೆಗೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್.

"ಕಳೆದ ಕೆಲ ವರ್ಷಗಳಿಂದ ನಿಮ್ಮ ಅವಿರತ ಪರಿಶ್ರಮವನ್ನು ನಾನು ಗಮನಿಸುತ್ತಿದ್ದೇನೆ. ನೀವು ತುಂಬಾ ಅರ್ಹ ಮತ್ತು ಇದು ಕೇವಲ ಆರಂಭ ಮಾತ್ರವೇ ಆಗಿದೆ. ನಿಮ್ಮ ಬಗ್ಗೆ ಹೆಮ್ಮೆಯೆನಿಸುತ್ತಿದೆ ಶ್ರೇಯಸ್ ಐಯ್ಯರ್" ಎಂದು ರಿಕಿ ಪಾಂಟಿಂಗ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದು ಶ್ರೇಯಸ್ ಐಯ್ಯರ್‌ಗೆ ಶುಭ ಹಾರೈಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ ಐಪಿಎಲ್‌ನಲ್ಲಿ ಪ್ರತಿ ಆವೃತ್ತಿಯಲ್ಲಿಯೂ ನೀರಸ ಪ್ರದರ್ಶನ ನೀಡುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಕಿ ಪಾಂಟಿಂಗ್ ಹಾಗೂ ಶ್ರೇಯಸ್ ಐಯ್ಯರ್ ಜೋಡಿ ಅಕ್ಷರಶಃ ಮೋಡಿ ಮಾಡಿತ್ತು. 2020ರ ಐಪಿಎಲ್‌ನಲ್ಲಿ ರಿಕಿ ಪಾಂಟಿಂಗ್ ಕೋಚ್ ಆಗಿ ಹಾಗೂ ಶ್ರೇಯಸ್ ಐಯ್ಯರ್ ನಾಯಕನಾಗಿ ಡೆಲ್ಲಿ ಮೂಲದ ಫ್ರಾಂಚೈಸಿ ಚೊಚ್ಚಲ ಬಾರಿಗೆ ಐಪಿಎಲ್‌ನಲ್ಲಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು. ಆದರೆ 2021ರ ಆವೃತ್ತಿಯ ಮೊದಲಾರ್ಧದ ಆರಂಭಕ್ಕೂ ಮುನ್ನ ಐಯ್ಯರ್ ಗಾಯಗೊಂಡಿದ್ದ ಕಾರಣ ರಿಷಭ್ ಪಂತ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಮುಂದಿನ ಐಪಿಎಲ್‌ನಲ್ಲಿ ಶ್ರೇಯಸ್ ಐಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡುವುದು ಬಹುತೇಕ ಅನುಮಾನ.

IPL 2022: ಪಂಜಾಬ್‌ ತಂಡದಿಂದ ಹೊರಕ್ಕೆ, ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಕೆ.ಎಲ್ ರಾಹುಲ್?IPL 2022: ಪಂಜಾಬ್‌ ತಂಡದಿಂದ ಹೊರಕ್ಕೆ, ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಕೆ.ಎಲ್ ರಾಹುಲ್?

ಶ್ರೇಯಸ್ ಐಯ್ಯರ್ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಮುಂಬೈ ತಂಡವನ್ನು ಪ್ರತಿನಿಧಿಸುವ ಐಯ್ಯರ್ 54 ಪಂದ್ಯಗಳನ್ನು ಆಡಿದ್ದು 52.18ರ ಸರಾಸರಿಯಲ್ಲಿ 4592 ರನ್‌ಗಳಿಸಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 12 ಶತಕಗಳಿಸಿರುವ ಶ್ರೇಯಸ್ ಐಯ್ಯರ್ ಅಜೇಯ 202 ರನ್‌ಗಳಿಸಿರುವುದು ಹೈಯೆಸ್ಟ್ ಸ್ಕೋರ್ ಆಗಿದೆ.

ಟೀಮ್ ಇಂಡಿಯಾ ಆಡುವ ಬಳಗ: ಶುಬ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್
ಬೆಂಚ್: ಪ್ರಸಿದ್ ಕೃಷ್ಣ, ಸೂರ್ಯಕುಮಾರ್ ಯಾದವ್, ಶ್ರೀಕರ್ ಭರತ್, ಜಯಂತ್ ಯಾದವ್, ಮೊಹಮ್ಮದ್ ಸಿರಾಜ್

For Quick Alerts
ALLOW NOTIFICATIONS
For Daily Alerts
Story first published: Thursday, November 25, 2021, 13:13 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X