ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೇಯಸ್ ಐಯ್ಯರ್ ಚೊಚ್ಚಲ ಟೆಸ್ಟ್ ಶತಕಕ್ಕೆ ಕೊಹ್ಲಿ, ತೆಂಡೂಲ್ಕರ್ ಪ್ರಶಂಸೆ

Ind vs NZ: Virat Kohli and Sachin Tendulkar lauds Shreyas Iyers maiden Test hundred
Shreyas Iyer ತಂದ ಈ ದಿನಕ್ಕಾಗಿ ಕಾದು ಕುಳಿತಿದ್ದರು | Oneindia Kannada

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಶ್ರೇಯಸ್ ಐಯ್ಯರ್ ಸಾಧನೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಟೆಸ್ಟ್ ಕ್ಯಾಪ್ ಧರಿಸಿದ ಶ್ರೇಯಸ್ ಐಯ್ಯರ್ ಚೊಚ್ಚಲ ಪಂದ್ಯದಲ್ಲಿಯೇ ಭರ್ಜರಿ ಶತಕ ಸಿಡಿಸುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಈ ಸಾಧನೆ ಮಾಡಿ ಮಿಂಚಿದ್ದಾರೆ.

ಈ ಸಾಧನೆಯ ಮೂಲಕ ಶ್ರೇಯಸ್ ಐಯ್ಯರ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಶತಕ ಸಿಡಿಸಿದ 16ನೇ ಭಾರತೀಯ ಆಟಗಾರ ಎನಿಸಿದ್ದಾರೆ. ಕಾನ್ಪುರದ ಗ್ರೀನ್‌ಪಾರ್ಕ್ ಸ್ಟೇಡಿಯಂನಲ್ಲಿ 157 ಎಸೆತಗಳಲ್ಲಿ ಐಯ್ಯರ್ ಮೂರಂಕಿಯ ಗಡಿ ದಾಟಿದರು. ಎರಡನೇ ದಿನದಾಟದ ಮೊಸಲ ಸೆಶನ್‌ನಲ್ಲಿಯೇ ಶ್ರೇಯಸ್ ಐಯ್ಯರ್ ಶತಕ ಪೂರ್ಣಗೊಳಿಸಿದರು.

ಶ್ರೇಯಸ್ ಅಯ್ಯರ್ ತಂದೆ ವಾಟ್ಸಾಪ್ DPಯಲ್ಲಿ ಆ ಫೋಟೋವನ್ನ 4 ವರ್ಷ ಬದಲಿಸಿಲ್ಲವಂತೆ! ಏಕೆ?ಶ್ರೇಯಸ್ ಅಯ್ಯರ್ ತಂದೆ ವಾಟ್ಸಾಪ್ DPಯಲ್ಲಿ ಆ ಫೋಟೋವನ್ನ 4 ವರ್ಷ ಬದಲಿಸಿಲ್ಲವಂತೆ! ಏಕೆ?

ಈ ಮೂಲಕ ಶ್ರೇಯಸ್ ಐಯ್ಯರ್ ಭಾರತ ಕ್ರಿಕೆಟ್ ತಂಡದ ಪರವಾಗಿ ಈ ಸಾಧನೆ ಮಾಡಿದ ಲಾಲಾ ಅಮರನಾಥ್, ದೀಪಕ್ ಶೋಧನ್, ಎಜಿ ಕೃಪಾಲ್ ಸಿಂಗ್, ಅಬ್ಬಾಸ್ ಅಲಿ ಬೇಗ್, ಹನುಮಂತ್ ಸಿಂಗ್, ಗುಂಡಪ್ಪ ವಿಶ್ವನಾಥ್, ಸುರೇಂದರ್ ಅಮರನಾಥ್, ಮೊಹಮ್ಮದ್ ಅಜರುದ್ದೀನ್, ಪ್ರವೀಣ್ ಆಮ್ರೆ, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ, ಶಿಖರ್ ಧವನ್, ರೋಹಿತ್ ಶರ್ಮಾ ಮತ್ತು ಪೃಥ್ವಿ ಶಾ ಅವರೊಂದಿಗೆ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಶತಕ ಸಿಡಿಸಿದ ಭಾರತೀಯ ಆಟಗಾರರ ವಿಶೇಷ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಕಾನ್ಪುರ ಕ್ರೀಡಾಂಗಣದಲ್ಲಿಯೇ ಟೆಸ್ಟ್‌ಗೆ ಪದಾರ್ಪಣೆ ಮಾಡಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎನಿಸಿದ್ದಾರೆ ಐಯ್ಯರ್. ಇದಕ್ಕೂ ಮುನ್ನ ಗುಂಡಪ್ಪ ವಿಶ್ವನಾಥ್ ಇದೇ ಕ್ರೀಡಾಂಗಣದಲ್ಲಿ ಪದಾರ್ಪಣೆ ಮಾಡಿ ಶತಕ ಸಿಡಿಸಿದ್ದರು. ಅಲ್ಲದೆ ನ್ಯೂಜಿಲೆಂಡ್ ತಂಡದ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಮೂರನೇ ಭಾರತೀಯ ಆಟಗಾರ ಎನಿಸಿದ್ದಾರೆ ಐಯ್ಯರ್.

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್

ಇನ್ನು ಶ್ರೇಯಸ್ ಐಯ್ಯರ್ ಅವರ ಈ ಸಾಧನೆಗೆ ಸಚಿನ್ ತೆಂಡೂಲ್ಕರ್ ಟ್ವಿಟ್ಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ . "ನಿಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ಶ್ರೇಷ್ಠವಾದ ಆರಂಭ ಶ್ರೇಯಸ್ ಐಯ್ಯರ್. ಟೀಮ್ ಇಂಡಿಯಾ ಪರವಾಗಿ ಬಿಳಿ ಜರ್ಸಿಯಲ್ಲಿ ನಿಮ್ಮನ್ನು ನೋಡಲು ಹರ್ಷವಾಗುತ್ತದೆ. ಒಳ್ಳೆಯದಾಗಲಿ" ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಇನ್ನು ಸಚಿನ್ ತೆಂಡೂಲ್ಕರ್ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಶ್ರೇಯಸ್ ಐಯ್ಯರ್‌ಗೆ ಶುಭ ಹಾರೈಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿರಾಟ್ ಕೊಹ್ಲಿ "ಅದ್ಭುತವಾಗಿ ಆಡಿದಿರಿ, ಪದಾರ್ಪಣಾ ಪಂದ್ಯದಲ್ಲಿಯೇ ಶತಕ ಸಿಡಿಸಿರುವುದಕ್ಕೆ ಅಭಿನಂದನೆಗಳು ಶ್ರೇಯಸ್ ಐಯ್ಯರ್" ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಪ್ಯಾಟ್ ಕಮಿನ್ಸ್ ಆಯ್ಕೆ, ಸ್ಮಿತ್‌ ಉಪನಾಯಕಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಪ್ಯಾಟ್ ಕಮಿನ್ಸ್ ಆಯ್ಕೆ, ಸ್ಮಿತ್‌ ಉಪನಾಯಕ

ಇನ್ನು ಶ್ರೇಯಸ್ ಐಯ್ಯರ್ ಶತಕ ಸಿಡಿಸಿದ ಕೆಲವೇ ಸಮಯದ ನಂತರ ವಿಕೆಟ್ ಕಳೆದುಕೊಂಡಿದ್ದಾರೆ. 171 ಎಸೆತ ಎದುರಿಸಿದ 105 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಈ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿತ್ತು. ಕಾನ್ಪುರ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 345 ರನ್‌ಗಳಿಗೆ ಆಲೌಟ್ ಆಗಿದೆ. ಟೀಮ್ ಇಂಡಿಯಾ ಪರವಾಗಿ ಐಯ್ಯರ್ ಟಾಪ್ ಸ್ಕೋರರ್ ಆಗಿದ್ದರೆ ಶುಬ್ಮನ್ ಗಿಲ್ 52 ರನ್ ಹಾಗೂ ರವೀಂದ್ರ ಜಡೇಜಾ 50 ರನ್ ಸಿಡಿಸಿ ಉತ್ತಮ ಕೊಡುಗೆ ನೀಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಅದ್ಭುತವಾದ ಆರಂಭ ಪಡೆದುಕೊಂಡಿದೆ. ಎರಡನೇ ದಿನ ಕಿವೀಸ್ ಪಡೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 129 ರನ್‌ಗಳಿಸಿದೆ. ಕಿವೀಸ್ ಪರವಾಗಿ ವಿಲ್ ಯಂಗ್ 75 ರನ್ ಹಾಗೂ ಟಾಮ್ ಲಾಥಮ್ 50 ರನ್‌ಗಳಿಸಿ ಅಜೇಯವಾಗುಳಿದಿದ್ದಾರೆ.

ಟೀಮ್ ಇಂಡಿಯಾ ಪ್ಲೇಯಿಂಗ್ XI: ಶುಬ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಇಶಾಂತ್ ಶರ್ಮಾ,
ಬೆಂಚ್: ಪ್ರಸಿದ್ ಕೃಷ್ಣ, ಸೂರ್ಯಕುಮಾರ್ ಯಾದವ್, ಶ್ರೀಕರ್ ಭರತ್, ಜಯಂತ್ ಯಾದವ್, ಮೊಹಮ್ಮದ್ ಸಿರಾಜ್

ನ್ಯೂಜಿಲೆಂಡ್ ಪ್ಲೇಯಿಂಗ್ XI: ಟಾಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೊಮರ್ವಿಲ್ಲೆ, ಅಜಾಜ್ ಪಟೇಲ್
ಬೆಂಚ್: ಮಿಚೆಲ್ ಸ್ಯಾಂಟ್ನರ್, ನೀಲ್ ವ್ಯಾಗ್ನರ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್

Story first published: Friday, November 26, 2021, 21:12 [IST]
Other articles published on Nov 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X