ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ‌ vs ಪಾಕಿಸ್ತಾನ: ಸ್ಕ್ವಾನಿಂಗ್‌ಗೆ ಒಳಗಾದ ರಿಜ್ವಾನ್: ಗಾಯದ ಮೇಲೆ ಪಾಕ್‌ಗೆ ಬೀಳುತ್ತಾ ಬರೆ!

Ind vs Pak: Pakistan wicket keeper batter Mohammad Rizwan to undergo MRI scan

ಭಾರತ ಹಾಗೂ ಪಾಕಿಸ್ತಾನ‌ ನಡುವಿನ ಸೂಪರ್ 4 ಹಂತದ ಸೆಣೆಸಾಟ ಮುಕ್ತಾಯವಾಗಿದೆ. ಈ ಮುಖಾಮುಖಿಯಲ್ಲಿ ಭಾರತ ತಂಡ‌ ರೋಚಕ‌ ಸೆಣೆಸಾಟ ನಡೆಸಿಯೂ ಸೋಲು ಅನುಭವಿಸಿದೆ. ಭಾರತ ತಂಡದ‌ ಬೌಲಿಂಗ್ ವಿಭಾಗದ ನೀರಸ‌ ಪ್ರದರ್ಶನದಿಂದಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಭಾರತ ಕಳೆದುಕೊಂಡಿದೆ. ಆದರೆ ಈ ಪಂದ್ಯದಲ್ಲಿ ಪಾಕಿಸ್ತಾನದ ಪರವಾಗಿ ಪ್ರಮುಖ ಪಾತ್ರವಹಿಸಿದ್ದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಪಂದ್ಯದ ಬಳಿಕ ಎಂಆರ್‌ಐ ಸ್ಕ್ಯಾನಿಂಗ್ ಗೆ ಒಳಗಾಗಿದ್ದಾರೆ.

ಮೊಹಮ್ಮದ್ ರಿಜ್ವಾನ್ ಈ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಗಾಯಗೊಂಡಿದ್ದರು. ಬೌನ್ಸರ್ ಎಸೆತವನ್ನು ತಡೆಯುವ ನಿಟ್ಟಿನಲ್ಲಿ ಮೇಲಕ್ಕೆ ಜಿಗಿದ ರಿಜ್ವಾನ್ ನೆಲಕ್ಕೆ ಕಾಲೂರುವ ಸಂದರ್ಭದಲ್ಲಿ ಕಾಲು ತಿರುಚಿತು. ಹೀಗಾಗಿ ಭಾರೀ ನೋವು ಅನುಭವಿಸಿದ್ದರು. ತಕ್ಷಣವೇ ಫಿಸಿಯೋ ಅಂಗಳಕ್ಕಾಗಮಿಸಿ ಚಿಕಿತ್ಸೆ ನೀಡಿದ್ದು ಬಳಿಕ ರಿಜ್ವಾನ್ ವಿಕೆಟ್ ಕೀಪಿಂಗ್ ಮುಂದುವರಿಸಿದ್ದರು.

IND vs PAK: ಸೂಪರ್ 4 ಸೋಲಿಗೆ ಅರ್ಷ್‌ದೀಪ್ ಕ್ಯಾಚ್ ಬಿಟ್ಟದ್ದೇ ಕಾರಣ; ಕೊಹ್ಲಿ ಹೇಳಿದ್ದಿಷ್ಟು!IND vs PAK: ಸೂಪರ್ 4 ಸೋಲಿಗೆ ಅರ್ಷ್‌ದೀಪ್ ಕ್ಯಾಚ್ ಬಿಟ್ಟದ್ದೇ ಕಾರಣ; ಕೊಹ್ಲಿ ಹೇಳಿದ್ದಿಷ್ಟು!

ಮುನ್ನೆಚ್ಚರಿಕಾ ಕ್ರಮವಾಗಿ ಸ್ಕ್ಯಾನಿಂಗ್

ಮುನ್ನೆಚ್ಚರಿಕಾ ಕ್ರಮವಾಗಿ ಸ್ಕ್ಯಾನಿಂಗ್

ಮೊಹಮ್ಮದ್ ರಿಜ್ವಾನ್ ವಿಕೆಟ್ ಕೀಪಿಂಗ್‌ನಲ್ಲಿ ಗಾಯಗೊಂಡ ಬಳಿಕ ಚಿಕಿತ್ಸೆ ಪಡೆದುಕೊಂಡು ಕೀಪಿಂಗ್ ಮುಂದುವರಿಸಿದ್ದರು. ನಂತರ ಬ್ಯಾಟಿಂಗ್‌ನಲ್ಲಿಯೂ‌‌ ಆರಂಭಿಕನಾಗಿ ಕಣಕ್ಕಿಳಿದ ರಿಜ್ವಾನ್‌ ಪಂದ್ಯದ ಅಂತಿಮ ಹಂತದವರೆಗೂ ಬ್ಯಾಟಿಂಗ್ ನಡೆಸಿದರು. ಪಾಕಿಸ್ತಾನದ ಪರವಾಗಿ ಬ್ಯಾಟಿಂಗ್‌ನಲ್ಲಿ ಹೀರೋ ಆಗಿ ಮಿಂಚಿದ ಮೊಹಮ್ಮದ್ ರಿಜ್ವಾನ್ 51 ಎಸೆತಗಳಲ್ಲಿ 71 ರನ್‌ಗಳನ್ನು ಸಿಡಿಸಿ ಮಿಂಚಿದ್ದಾರೆ. ಈ ಪ್ರದರ್ಶನದಿಂದಾಗಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಗಿದೆ. ಈ ಪಂದ್ಯದ ಮುಕ್ತಾಯದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ರಿಜ್ವಾನ್‌ಗೆ ಸ್ಕ್ವಾನಿಂಗ್ ಮಾಡಿಸಲಾಗಿದೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪಾಕಿಸ್ತಾನ

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪಾಕಿಸ್ತಾನ

ಏಷ್ಯಾ ಕಪ್ ಸರಣಿಯಲ್ಲಿ ಭಾಗಿಯಾಗಿರುವ ಪಾಕಿಸ್ತಾನ ತಂಡದ ಆಟಗಾರರು ಒಬ್ಬರಾದ ಬಳಿಕ ಒಬ್ಬರಂತೆ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಏಷ್ಯಾ ಕಪ್ ಟೂರ್ನಿಗೂ ಮುನ್ನ ಶಾಹೀನ್ ಅಫ್ರದಿ ಗಾಯದ ಕಾರಣದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದರು. ಬಳಿಕ ಮೊಹಮ್ಮದ್ ವಾಸಿಮ್, ಶಹ್ನವಾಜ್ ದಹಾನಿ ಕುಡ ಫಿಟ್‌ನೆಸ್ ಕಾರಣದಿಂದಾಗಿಯೇ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದೀಗ ರಿಜ್ವಾನ್ ಕೂಡ ಗಾಯದಗೊಂಡಿರುವುದು ಆತಂಕ ಮೂಡಿಸಿದೆ. ಆದರೆ ಗಾಯದಿಂದ ಚೇತರಿಸಿಕೊಂಡು ಪೂರ್ಣವಾಗಿ ಬ್ಯಾಟಿಂಗ್ ಮಾಡಿರುವುದು ಗಾಯದ ಪ್ರಮಾಣ ತೀವ್ರಮಟ್ಟದಲ್ಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ದುಬೈ ಸ್ಟೇಡಿಯಂನಲ್ಲಿ ಪಂತ್ ಆಟ ನೋಡೋಕೆ ಬಂದ ಊರ್ವಶಿ ರೌಟೇಲ! | Oneindia Kannada
ಅದ್ಭುತ ಪ್ರದರ್ಶನ ನೀಡುತ್ತಿರುವ ರಿಜ್ವಾನ್

ಅದ್ಭುತ ಪ್ರದರ್ಶನ ನೀಡುತ್ತಿರುವ ರಿಜ್ವಾನ್

ಇನ್ನು ಮೊಹಮ್ಮದ್ ರಿಜ್ವಾನ್ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು ಪಾಕಿಸ್ತಾನ ತಂಡಕ್ಕೆ ಆಸರೆಯಾಗಿದ್ದಾರೆ. ಏಷ್ಯಾಕಪ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿಯೂ ರಿಜ್ವಾನ್ ಅಮೋಘ ಆಟ ಪ್ರದರ್ಶಿಸಿದ್ದು ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಭಾರತದ ವಿರುದ್ಧ ಲೀಗ್ ಹಂತದ ಮೊದಲ ಪಂದ್ಯದಲ್ಲಿ ರಿಜ್ವಾನ್ 43 ರನ್‌ಗಳನ್ನು ಗಳಿಸಿದರೆ ಬಳಿಕ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ 78 ರನ್‌ಗಳನ್ನು ಸಿಡಿಸಿದ್ದರು. ನಂತರ ಸೂಪರ್ 4 ಹಂತದ ಮಹತ್ವದ ಪಂದ್ಯದಲ್ಲಿ ರಿಜ್ವಾನ್ ಬ್ಯಾಟ್‌ನಿಂದ 71 ರನ್‌ಗಳು ಸಿಡಿದಿದೆ.

Story first published: Monday, September 5, 2022, 15:49 [IST]
Other articles published on Sep 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X