ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA 1st ODI: ದ. ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋಲಿಗೆ 4 ಪ್ರಮುಖ ಕಾರಣಗಳು

Team india

ಲಕ್ನೋದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಸೋಲುವ ಮೂಲಕ ಹರಿಣಗಳ ವಿರುದ್ಧ ವಿಭಿನ್ನ ಫಾರ್ಮೆಟ್‌ನಲ್ಲಿ ಸತತ ಎರಡು ಪಂದ್ಯ ಸೋತಂತಾಗಿದೆ. ಟಿ20 ಸರಣಿಯ ಕೊನೆಯ ಪಂದ್ಯ ಸೋತಿದ್ದ ಭಾರತ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿಯೂ ಮುಗ್ಗರಿಸಿದೆ.

ಶಿಖರ್ ಧವನ್ ನಾಯಕತ್ವದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತಕ್ಕೆ ಎದುರಾಳಿ ಬ್ಯಾಟರ್‌ಗಳು ತಕ್ಕ ಉತ್ತರ ನೀಡಿದ್ರು. ಮಳೆಯಿಂದಾಗಿ ಪಂದ್ಯವು 40 ಓವರ್‌ಗಳಿಗೆ ಸೀಮಿತಗೊಂಡ ಬಳಿಕ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 40 ಓವರ್‌ಗಳಲ್ಲಿ 249 ರನ್ ಗಳಿಸಿತು. ಭಾರತ ಗೆಲ್ಲಲು 250 ರನ್‌ಗಳ ಗುರಿ ನೀಡಿತು.

ದಕ್ಷಿಣ ಆಫ್ರಿಕಾ ಪರ ಐದನೇ ವಿಕೆಟ್‌ಗೆ ಜೊತೆಯಾದ ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ದಕ್ಷಿಣ ಆಫ್ರಿಕಾ ತಂಡವನ್ನ ಉತ್ತಮ ಹಂತದತ್ತ ಕೊಂಡೊಯ್ದರು. ಐದನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ಟೀಂ ಇಂಡಿಯಾ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ್ರು. ಹೆನ್ರಿಕ್ ಕ್ಲಾಸೆನ್ 65 ಎಸೆತಗಳಲ್ಲಿ ಅಜೇಯ 74 ರನ್‌ ಕಲೆಹಾಕಿದರು. ಇನ್ನು ಟಿ20 ಸರಣಿಯಲ್ಲಿ ಅಮೋಘ ಶತಕ ಸಿಡಿಸಿದ್ದ ಡೇವಿಡ್ ಮಿಲ್ಲರ್ ಏಕದಿನ ಸರಣಿಯಲ್ಲೂ ಅಮೋಘ ಫಾರ್ಮ್ ಮುಂದುವರಿಸಿದ್ರು. 63 ಎಸೆತಗಳಲ್ಲಿ ಅಜೇಯ 75 ರನ್ ಕಲೆಹಾಕಿದ ಮಿಲ್ಲರ್ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌ ಒಳಗೊಂಡಿತ್ತು. ಇವರ ಆಟದಿಂದಾಗಿ ಭಾರತಕ್ಕೆ 250ರನ್ ಗುರಿ ನೀಡಿತು.

ಟಾಪ್ ಆರ್ಡರ್ ವೈಫಲ್ಯ, ಎಡವಿದ ಟೀಂ ಇಂಡಿಯಾ

ಟಾಪ್ ಆರ್ಡರ್ ವೈಫಲ್ಯ, ಎಡವಿದ ಟೀಂ ಇಂಡಿಯಾ

40 ಓವರ್‌ಗಳಲ್ಲಿ 250 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಶಿಖರ್ ಧವನ್, ಶುಭಮನ್ ಗಿಲ್ ಸಿಂಗಲ್ ಡಿಜಿಟ್‌ಗೆ ಔಟಾದ್ರೆ, ರುತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಉತ್ತಮ ಆಟವಾಡುವಲ್ಲಿ ಎಡವಿದ್ರು. ಆದ್ರೆ ಶ್ರೇಯಸ್ ಅಯ್ಯರ್ 37 ಎಸೆತಗಳಲ್ಲಿ 50ರನ್ ಕಲೆಹಾಕಿ ತಂಡಕ್ಕೆ ಆಧಾರವಾದ್ರು.

ಪಂದ್ಯದ ಅಂತ್ಯದವರೆಗೂ ಅಜೇಯರಾಗಿ ಉಳಿದ ಸಂಜು ಸ್ಯಾಮ್ಸನ್‌ ಅದ್ಭುತ ಆಟವಾಡಿದ್ರೂ ಸಹ ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ಎಡವಿದ್ರು. 63 ಎಸೆತಗಳಲ್ಲಿ ಅಜೇಯ 83ರನ್‌ ಕಲೆಹಾಕಿದ ಸಂಜುಗೆ ಶಾರ್ದೂಲ್ ಠಾಕೂರ್ 33ರನ್‌ ಕಲೆಹಾಕಿ ಸಾಥ್ ಕೊಟ್ಟರೂ ಭಾರತ ಗೆಲುವಿನ ಗೆರೆ ದಾಟಲಿಲ್ಲ. 9ರನ್‌ಗಳಿಂದ ಪಂದ್ಯ ಸೋತ ಭಾರತದ ಈ ಹಿನ್ನಡೆಗೆ ಪ್ರಮುಖ ನಾಲ್ಕು ಕಾರಣಗಳೇನು ಎಂಬುದನ್ನ ಈ ಕೆಳಗೆ ಕಾಣಬಹುದು.

ಕ್ಯಾಚ್‌ಗಳನ್ನ ಕೈ ಚೆಲ್ಲಿದ ಭಾರತ

ಕ್ಯಾಚ್‌ಗಳನ್ನ ಕೈ ಚೆಲ್ಲಿದ ಭಾರತ

ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ ಅವರು ಕ್ಯಾಚ್‌ಗಳನ್ನು ಕೈಬಿಟ್ಟಿರುವುದು. ಅವೇಶ್ ಖಾನ್ ಎಸೆದ ಏಕೈಕ ಓವರ್ ನಲ್ಲಿ ಮೊಹಮ್ಮದ್ ಶಮಿ ಮತ್ತು ರವಿ ಬಿಷ್ಣೋಯಿ ಸತತ 2 ಕ್ಯಾಚ್ ಕೈ ಚೆಲ್ಲಿದರು ಮತ್ತು ಅದೇ ಓವರ್‌ನಲ್ಲಿ ಇಶಾನ್ ಕಿಶನ್ ಫೀಲ್ಡಿಂಗ್ ಲೈನ್‌ನಿಂದ ಬೌಂಡರಿ ತಪ್ಪಿಸಿದರು. ಇದರಿಂದಾಗಿ ಆ ಓವರ್‌ನಲ್ಲಿ 16 ರನ್‌ಗಳು ಅನಗತ್ಯವಾಗಿ ಹೋಯಿತು. ಇದರಲ್ಲಿ ದಕ್ಷಿಣ ಆಫ್ರಿಕಾ 10 ಹೆಚ್ಚುವರಿ ರನ್ ಗಳಿಸಿದ್ದು ಭಾರತದ ಸೋಲಿಗೆ ಕಾರಣ ಎಂದು ಪರಿಗಣಿಸಲಾಗಿದೆ.

56-57 ಆಟಗಾರರನ್ನ ಆಡಿಸಿದ್ರಿ, ಆದ್ರೆ ನಿಮಗೆ 1 ಉತ್ತಮ ತಂಡ ರಚಿಸಲು ಸಾಧ್ಯವಾಗ್ಲಿಲ್ಲ: ಟೀಂ ಇಂಡಿಯಾ ವಿರುದ್ಧ ಲತೀಫ್ ವಾಗ್ದಾಳಿ!

ಆರಂಭಿಕರ ಕಳಪೆ ಬ್ಯಾಟಿಂಗ್, ಉತ್ತಮ ಆರಂಭ ಪಡೆಯಲಿಲ್ಲ!

ಆರಂಭಿಕರ ಕಳಪೆ ಬ್ಯಾಟಿಂಗ್, ಉತ್ತಮ ಆರಂಭ ಪಡೆಯಲಿಲ್ಲ!

ಅದೇ ರೀತಿ ಭಾರತ ತಂಡದ ಆರಂಭಿಕರು ಕಳಪೆ ಆಟವಾಡಿದರು. ಶಿಖರ್ ಧವನ್ 4 ರನ್ ಮತ್ತು ಶುಭಮನ್ ಗಿಲ್ 3 ರನ್ ಗಳಿಸಿ ಔಟಾದರು. ಇನ್ನು ರುತುರಾಜ್ ಗಾಯಕ್ವಾಡ್ ಟೆಸ್ಟ್ ಇನ್ನಿಂಗ್ಸ್ ನಂತೆ ಆಡಿದರು. 42 ಎಸೆತಗಳಲ್ಲಿ 19 ರನ್ ಕಲೆಹಾಕಿದ ಗಾಯಕ್ವಾಡ್ ಆಟದಲ್ಲಿ ಯಾವುದೇ ತಪ್ಪಿಲ್ಲವಾದ್ರೂ, ಅವರ ಹೋರಾಟ 19 ರನ್ ಗೆ ಮುಕ್ತಾಯಗೊಂಡಿದ್ದು, ಭಾರತಕ್ಕೆ ಭಾರೀ ಹಿನ್ನಡೆಯಾಯಿತು. ಇನ್ನು ಇಶಾನ್ ಕಿಶನ್ ಕೂಡ 37 ಎಸೆತಗಳಲ್ಲಿ 20 ರನ್‌ಗಳನ್ನ ಕಲೆಹಾಕಿ ವಿಕೆಟ್ ಒಪ್ಪಿಸಿದ್ರು. ಆದ್ರೆ ಇವರಿಬ್ಬರಿಗೆ ಹೋಲಿಸಿದ್ರೆ, ಶಾರ್ದೂಲ್ ಠಾಕೂರ್ ಕೊಂಚ ವೇಗವಾಗಿ 33 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ದನ್ನ ಕಾಣಬಹುದು.

ಭಾರತ vs ದ. ಆಫ್ರಿಕಾ: ಸಂಜು ಸ್ಯಾಮ್ಸನ್ ಹೋರಾಟ ವ್ಯರ್ಥ: ಧವನ್ ಪಡೆಗೆ ಸೋಲಿನ ಕಹಿ

39ನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಟ್ರೈಕ್ ಸಿಗಲಿಲ್ಲ

39ನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಟ್ರೈಕ್ ಸಿಗಲಿಲ್ಲ

ಪಂದ್ಯದ 38.3ನೇ ಓವರ್‌ನಲ್ಲಿ ಅವೇಶ್ ಖಾನ್ ನಾಲ್ಕು ಎಸೆತದಲ್ಲಿ 2 ರನ್ ಗಳಿಸಿದರು. ಆ ಓವರ್‌ನಲ್ಲಿ ಕೇವಲ 7 ರನ್‌ಗಳು ಬಂದವು. ಅವೇಶ್ ಖಾನ್ 4 ಎಸೆತಗಳನ್ನು ಎದುರಿಸಿ ವ್ಯರ್ಥವಾದರು. ಒಂದು ವೇಳೆ ಸಿಂಗಲ್‌ ತೆಗೆದುಕೊಂಡು ಸಂಜು ಸ್ಯಾಮ್ಸನ್‌ಗೆ ನೀಡಿದ್ದರೂ ಸುಲಭವಾಗಿ ಸಂಜು ಹೆಚ್ಚುವರಿಯಾಗಿ 10 ರನ್ ಗಳಿಸುತ್ತಿದ್ದರು. ಈ ಮೂಲಕ ಟೀಂ ಇಂಡಿಯಾ ಅತ್ಯಂತ ಸುಲಭವಾಗಿಯೇ ಪಂದ್ಯವನ್ನ ಗೆದ್ದು ಬಿಡುತ್ತಿತ್ತು.

ತಂಡದ ಆಯ್ಕೆಯಲ್ಲಿಯೇ ಎಡವಟ್ಟು

ತಂಡದ ಆಯ್ಕೆಯಲ್ಲಿಯೇ ಎಡವಟ್ಟು

ಅದೇ ರೀತಿ ಇಂದಿನ ಪಂದ್ಯದಲ್ಲಿ ಭಾರತ ತಂಡ ಬ್ಯಾಟ್ಸ್‌ಮನ್‌ಗಳಿಲ್ಲದೆ ಕೇವಲ 6 ಬ್ಯಾಟ್ಸ್‌ಮನ್‌ಗಳು ಮತ್ತು 5 ಬೌಲರ್‌ಗಳನ್ನು ಹೊಂದಿತ್ತು. ಇದು ಕೂಡ ಭಾರತದ ಸೋಲಿಗೆ ಒಂದು ಕಾರಣವಾಗಿದೆ. ಆಲ್‌ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ ಮತ್ತು ರವಿ ಬಿಷ್ನೋಯಿ ಅವರನ್ನ ಸೇರಿಸಿಕೊಂಡು ಇಬ್ಬರು ಸ್ಪಿನ್ನರ್‌ಗಳನ್ನ ಭಾರತ ಆಡಿಸಿದ್ದು ಹೆಚ್ಚುವರಿ ಬ್ಯಾಟರ್‌ ಇಲ್ಲದಂತಾಗಿ ಹಿನ್ನಡೆಯಾಗಿದೆ.

Story first published: Friday, October 7, 2022, 12:02 [IST]
Other articles published on Oct 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X